ಮೊದಲ ಹೆಜ್ಜೆ

ಆ ದಿನಗಳು ತುಂಬಾ ಸುಂದರವಾಗಿ ಇದ್ದವು.ಮಲ್ಪೆಯ ಕಡಲ ತೀರದಲ್ಲಿ ಮುಸ್ಸಂಜೆಯ ಸೂಯ೯ ಮುಳುಗುವ ಹೊತ್ತು‌. ಬಾನಿಗೆ ಹಣತೆಯ ದೀಪ ಹಚ್ಚಿಟ್ಟಂತೆ ಬಾನಂಗಳ ಸುಂದರಲೋಕ. ಮನದಲ್ಲಿ ‘ ಸಂದ್ಯಾದೀಪ’ ಈ ಹೆಸರು ಅಚ್ಚಳಿಯದೇ ಊಳಿದು ಜೋರಾಗಿ ಕೂಗಿ ಹೇಳಬೇಕು ಅನ್ನುವ ಹಂಬಲ. ಅದಕ್ಕೆ ಬ್ಲಾಗ್ಗೆ ಈ ಹೆಸರಿಟ್ಟೆ‌.

ಇಂದೂ ಕೂಡ ಮುಸ್ಸಂಜೆ ಹೊತ್ತಲ್ಲಿ ಸಂದ್ಯಾದೀಪ ಹಚ್ಚಿ ಬ್ಲಾಗ ಬರೆಯಲು ಶುರು ಮಾಡಿದೆ‌.

ಇದು ನಾ ಬರೆದ ಮೊದಲ ಕವನ 1977ರಲ್ಲಿ ಬರೆದೆ‌. ಮಲ್ಪೆಯ(ಉಡುಪಿ ) ಹತ್ತಿರ ತೊಟ್ಟಂ ಊರಲ್ಲಿ ಕೆಲವು ತಿಂಗಳ ವಾಸ ಸೋದರ ಮಾವನ ಮನೇಯಲ್ಲಿ ಟೈಪಿಂಗ ಕಲಿಯಲು. ದಿನವೂ ಬತ್ತದ ಗದ್ದೆಯಲ್ಲಿ ಸ್ವಲ್ಪ ದೂರ ನಡುಗೆ. ಭತ್ತದ ತೆನೆಗಳ ಸೌಂದರ್ಯ ಈ ಸಂದಭ೯ದಲ್ಲಿ ನನ್ನೊಳಗಿನ ಭಾವನೆ ಕವನದಲ್ಲಿ ಬರೆದೆ‌‌. ಏನೊ ಸಂಕೋಚ‌. ಯಾರಿಗೂ ತೋರಿಸದೇ ಹಲವಾರು ಕವನ ಬರೆದೆ‌.ಊರಿಗೆ ಬಂದಾಗ ನನ್ನ ಗರುಗಳು ಓದಿ ಕಳಿಸಿದ ‘ತೆನೆ’ ನನ್ನ ಮೊದಲ ಕವನ “ತುಷಾರ” ಪತ್ರಿಕೆ ಜನವರಿ 1981 ಪ್ರಕಟವಾಯಿತು. ಹೇಳಲಾರದ ಸಂತೋಷ! ಬರವಣಿಗೆ ಮುಂದುವರೆಯಿತು.

ತೆನೆ
ಈ ಅನಂತ ಘೋಂಡಾರಣ್ಯದಲ್ಲಿ
ತನ್ನೊಡಲ ಬಸಿರ ಬಗೆದು
ಚಿಗುರೊಡೆದು
ನಿಶ್ಶಬ್ಧವಾದ ಮೇಘ ಸ್ಪರ್ಶಕ್ಕೆ
ಮೋಹನ ಮುರುಳಿಯಾಗಿ
ತನ್ನ ತನದ ಅಲೆ ಅಲೆಯ
ಮೃದುಗಾನದ ರಾಗರತಿಗೆ
ಪುಲಕಿತಗೊಂಡು
ಹಸಿರೊಡೆದು,ಟಿಸಿಲ್ಗೊಂಡು
ಇಳೆಯನ್ನು ಗಟ್ಟಿಯಾಗಿ ಅಪ್ಪಿ
ಮುತ್ತಿಕ್ಕಿ, ಉತ್ತುಂಗದ
ಹಷ್೯ಲಾಘವಕ್ಕೆ ಬಾಗುತ್ತ ಬಳುಕುತ್ತ
ತನ್ನಿನಿಯನ ಬರುವಿಕೆಗೆ
ನಸುನಗುತ್ತ ತಲೆ
ಬಾಗಿ ನಾಚಿ ನಿಂತ
ಚಲುವಾದ ಹದಿಹರೆಯದ
ಶೋಡಷ ಕನ್ಯೆ.

ಸಂಗೀತಾ ಕಲ್ಮನೆ 1977.

31-1-2016. 5.50pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

2 thoughts on “ಮೊದಲ ಹೆಜ್ಜೆ”

 1. ಎಲ್ಲದರಾಚೆ ಕಾಡುವ ಈ ಕ್ಷಣಿಕ(ಹಾಗನ್ನುತ್ತಾರೆ)ಬದುಕಿನ ಕೆಲವು ಕ್ಷಣಗಳು, ಮತ್ತಿಡೀ ಜೀವನದ ನಾಗಲೋಟಕ್ಕೆ ಜೀವದ್ರವ್ಯವಾಗುವ ಬಗೆ ನಿಜಕ್ಕೂ ಸೋಜಿಗ, ಅಂಥಹ ಕ್ಷಣಗಳಲ್ಲಿ ನಾವು ಜೀವನದಲ್ಲಿ ಮೊತ್ತ ಮೊದಲಾಗಿ ಮಾಡಿದ, ಮೊತ್ತ ಮೊದಲಾಗಿ ಅನುಭವಿಸಿದ ಘಟನೆಗಳೇ ಹೆಚ್ಚಿರುತ್ತದೆ. ಮೊದಲ ಬಾರಿಗೆ ಶಾಲೆಗೆ ಕಾಲಿಟ್ಟ ದಿನ, ಮೊದಲ ಟೂರು, ಮೊದಲ ಭಾಷಣ, ಮೊದಲ ಪ್ರೇಮ, ಮೊದಲ ಮುತ್ತು, ಮೊದಲ ಕವನ ಇತ್ಯಾದಿ ಇತ್ಯಾದಿ… ಅಂಥಹ ಮೊದಲ ಅನುಭವಗಳು ಮತ್ತೆ ಸ್ಮೃತಿಪಟಲದಲ್ಲಿ ಸುಳಿದಾಗ ಆಗುವ ಅನುಭಾವ ಅನೂರ, ಅನನ್ಯ..
  ಅದೇನೇ ಇರಲಿ ಇವತ್ತು ಕನ್ನಡದ ಮತ್ತೊಂದು ಸುಂದರ ಬ್ಲಾಗಿನ ಪರಿಚಯವಾಯ್ತು.. ವರ್ಷಾನು ವರ್ಷಗಳ ಹಿಂದೆ ನನ್ನೂರಿನ ಹತ್ತಿರದ ಮಲ್ಪೆಯ ಪ್ರಶಾಂತತೆಯಲ್ಲಿ ಮೂಡಿದ ಭಾವ, ಶರಧಿಯಾಗಿ, ಸಂಧ್ಯಾದೀಪವಾಗಿ ಇಲ್ಲಿ ಮೂಡಿದೆ… ಈ ಅನುಭಾವ ಶರಧಿ ಮತ್ತಷ್ಟು ಆಳವಾಗಿ, ವಿಶಾಲವಾಗಿ ಹರಿಯಲೆಂದು ಹಾರೈಸುತ್ತೇನೆ …

  ಸದಾ ನಿಮ್ಮವನೇ,
  ಹುಸೇನಿ
  http://www.nenapinasanchi.wordpress.com

  Like

  1. ಸುಂದರವಾದ ಭಾವ ಲಹರಿ. ಖುಷಿ ಆಯಿತು. ಮತ್ತೊಮ್ಮೆ ಮಲ್ಪೆಯ ಕಡಲ ತೀರದ ದಶ೯ನ ಮಾಡಿಸಿದಿರಿ. ಸಾಗೋಣ ಒಂದಾಗಿ ಮುಗಿಯದ ಕಡಲ ಗುಂಟ. ನಿಮ್ಮ ಅಭಿಮಾನಕ್ಕೆ ಅನಂತ ಧನ್ಯವಾದಗಳು.

   Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s