ಕೆಲಸಕ್ಕೆ ವಿದಾಯ

ಕೆಲವೊಮ್ಮೆ ನಮಗೆ ತಿಳಿಯದಂತೆ ಯಾವುದೊ ಕೆಲಸ ಶುರುಮಾಡಿರುತ್ತೇವೆ. ಆಮೇಲೆ ಯಾವಾಗಲೊ ನೆನಪಿಗೆ ಬರುತ್ತದೆ, ಓ! ಈ ದಿನ ಹಾಗಾಗಿತ್ತು,ಹೀಗಾಗಿತ್ತು. ಅದೇ ರೀತಿ ನಾನು ಬ್ಲಾಗ್ ಬರೆದ ಮೊದಲ ದಿನ 31-1-2016. ಈ ದಿನ ನಾನು 27 ವಷ೯ ಕೆಲಸ ಮಾಡಿದ ಕೋ-ಆಪರೇಟಿವ್ ಬ್ಯಾಂಕಿಗೆ ವಿದಾಯ (31-1-2007) ಹೇಳಿದ ದಿನ‌. ರಾತ್ರಿ ಯಾಕೊ ಜ್ಞಾಪಕಕ್ಕೆ ಬಂದಿತು‌. ಈ ಮೂಲಕ ನಾನು ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಟ್ಟ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದಂತಾಯಿತು. ಮನದಲ್ಲಿ ಒಂದು ರೀತಿಯ ಖುಷಿಯ ನಗು. ಇವತ್ತೆಲ್ಲ ಅದೇನೊ ಉತ್ಸಾಹ.

Thanks God.

1-2-2016

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮ ಟಿಪ್ಪಣಿ ಬರೆಯಿರಿ