ಮುಂದುವರಿದ ಬರವಣಿಗೆ

ಚಿತ್ತದಲ್ಲಿ ಬರುವ ವಿಚಾರಗಳನ್ನು ಕಥೆಯಲ್ಲೊ ಅಥವಾ ಕವನದಲ್ಲೊ ಅಥವಾ ಬರಹದ ರೂಪದಲ್ಲಿ ಬರೆಯುವ ರೂಢಿ ಮುಂದುವರಿಸಿಕೊಂಡು ಹೋದಲ್ಲಿ ಕತ್ತಿ ಉಜ್ಜಿದಷ್ಟು sharp ಆಗುವ ಹಾಗೆ ಈ ಬರವಣಿಗೆ.  ಆದರೆ ನಾನು ಈ ವಿಷಯದಲ್ಲಿ ತಪ್ಪು ಮಾಡಿದೆ.  1981ರ ನಂತರ ಬರೆಯೋದನ್ನು ನಿಲ್ಲಿಸಿದೆ.  ಯಾರೊ ಹೇಳಿದ ಒಂದು ಮಾತು ಇದಕ್ಕೆ ಕಾರಣವಾಯಿತು.  ಮನಸ್ಸು ಈಗಿನಷ್ಟು ಗಟ್ಟಿಯಾಗಿ ಇರಲಿಲ್ಲ.  But ಯಾವಾಗಲೊ ತೀವ್ರವಾಗಿ ಕಾಡಿದಾಗ ಕವನ ಬರೆಯುತ್ತಿದ್ದೆ.  ಸ್ವಲ್ಪ ದಿನ ಇಟ್ಟು ಆಮೇಲೆ ಹರಿದು ಹಾಕುತ್ತಿದ್ದೆ.  ಅದೆಷ್ಟು ಲೆಕ್ಕ ಇಲ್ಲ‌.  ಸುಮಾರು ಐವತ್ತು ಕವನ ದಾಟಿರಬಹುದು.  ಆದರೆ ನೆನಪಿಸಿಕೊಂಡಾಗ ದುಃಖವಾಗುತ್ತದೆ.

ಎಲ್ಲಿ ಹೋದಿರಿ
ಕಳೆದು ಹೋದ
ನನ್ನ ಕವನಗಳೆ
ಒಮ್ಮೆ ಓಡಿ ಬನ್ನಿ.

ಮಿಡಿಯುತಿದೆ
ಹೃದಯವೀಗ
ಕಂಬನಿಯ
ಒರೆಸ ಬನ್ನಿ‌.

ಎಷ್ಟು ಕೂಗಿದರೂ
ಬರಲಾಗದೆಂದು
ಮಾತ್ರ ಹೇಳಬೇಡಿ
ಮನೆಯಿಹುದೀಗ
ಮರುಹುಟ್ಟು ಪಡೆದು ಬನ್ನಿ.

ಹೌದು ಈ ಬ್ಲಾಗ್ ಗಳು ನನ್ನ ಬರಹದ ಮನೆಯಾಗಿದೆ.   ಬರಿತಿನಿ, ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಆಮೇಲೆ ಸುಮಾರು 2003-2004ರಿಂದ ಬರೆದ ಕವನಗಳನ್ನು ಸಂಗ್ರಹ ಮಾಡುತ್ತ ಬಂದೆ.  ಈಗ 3-4 ತಿಂಗಳುಗಳಿಂದ ತುಂಬಾ ಬರೆಯುತ್ತಿದ್ದೇನೆ.
ವಿಸ್ಮಯ ನಗರಿ, ಅವಧಿ, ಸಂಪದದಲ್ಲಿ ನನ್ನ ಬರಹ(ಕವನ, ಹಾಸ್ಯ, ಕಥೆ, ಪಿಸುಮಾತು, ಹಿತ ನುಡಿ ಹಲವಾರು)ಗಳು ಪ್ರಕಟವಾಗಿವೆ.

ಆದರೆ ಯಾವ ಪತ್ರಿಕೆಗಳಿಗೂ ಕಳಿಸುತ್ತಿಲ್ಲ ಸದ್ಯಕ್ಕೆ.
ಹೀಗೆ ಬರೆಯೋದರಲ್ಲಿ ತುಂಬಾ ತೃಪ್ತಿ ಇದೆ.
1.59pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s