ಅನಿಶ್ಚಿತತೆ

ಯಾವುದಾದರೂ ವಿಷಯದಲ್ಲಿ ಈ ತರ ಬರೆಯಬೇಕು ಅನ್ನುವ ಹುಮ್ಮನಸ್ಸು ಬಂದಾಗ ಆ ಕ್ಷಣದಲ್ಲಿ ಕುಳಿತು ಬರೆದಲ್ಲಿ ಅತ್ಯಂತ ಸ್ಪಷ್ಟವಾಗಿ, ಅತೀ ಕಡಿಮೆ ಅವಧಿಯಲ್ಲಿ ಬರೆಯಬಹುದು. ಆಗ ಶಬ್ದಗಳ ಹುಡುಕಾಟದ ಕಷ್ಟ ಇರುವುದಿಲ್ಲ. ಭಾವನೆಗಳ ಮಹಾಪೂರವೆ ಹರಿದುಬರುತ್ತದೆ.

ಅಂತ ಒಂದು ಕ್ಷಣದಲ್ಲಿ ಬರೆದ ಕವನವಿದು. ಗೊಂದಲದ ಮನಸ್ಥಿತಿ, ಅಸಹಾಯಕತೆ, ನಿರಾಸೆಗಳ ಚಿತ್ರಣ.

“ಅದ೯ ನೀರು ತುಂಬಿದ ಪಾತ್ರೆ ಆಶಾವಾದಿಗೆ ತೋರಿಸಿದರೆ, ಅದ೯ತುಂಬಿದೆ ಎನ್ನುತ್ತಾನೆ. ಅದೇ ನಿರಾಶಾವಾದಿಗೆ ತೋರಿಸಿದರೆ ಅದ೯ ಖಾಲಿ ಇದೆ ಎನ್ನುತ್ತಾನೆ”

ನಿರಾಶಾವಾದಿಗೆ ಏನಿದ್ದರೂ ಎಲ್ಲಾ ಖಾಲಿಯಾಗೇ ಕಾಣಿಸುತ್ತದೆ. ಏಕೆಂದರೆ ಅವನ ಮನಸ್ಸು ಖಾಲಿ ಖಾಲ

****************

ಇಂದೇಕೊ ಒಂಟಿಯಾಗಿ
ದಟ್ಟಿರುಳ ರಾತ್ರಿಯ
ನಿಷ್ಯಬ್ಧದತೆಯಲ್ಲಿ ತಲೆಯೆತ್ತಿ
ದೃಷ್ಟಿಸಿ ನೋಡಿದೆ.

ಆಕಾಶವೆಲ್ಲ ಖಾಲಿ ಖಾಲಿ
ಹೊಳೆವ ನಕ್ಷತ್ರಗಳೆಲ್ಲ
ಮಂಕಾಗಿ ತನ್ನತನವ
ಕಳೆದುಕೊಂಡು ಬಿಟ್ಟಿದೆ.

ಹುಣ್ಣಿಮೆ ಚಂದ್ರಮ
ಕರಿಮೋಡಗಳ ದೆಸೆಯಿಂದ
ಮರೆಯಲ್ಲಿ ಮಾಯವಾಗಿ
ಬೆಳಕು ನಶಿಸಿ ಹೋಗಿದೆ.

ಆಕಾಶವೆಲ್ಲ ಕಗ್ಗತ್ತಲು
ನಿರವ ಮೌನ
ಅಷ್ಟ ದಿಕ್ಕುಗಳಲ್ಲೂ
ಸೂತಕದ ಛಾಯೆ!

ಅನಿಸಿತೊಮ್ಮೆ
ಆಂತಯ೯ದಲ್ಲಿ
ಬಾನಂಗಳದ ತುಂಬ
ಬಿಳಿ ಮೊಂಬತ್ತಿಯ
ಚಿತ್ತಾರ ಬರೆದು
ಬೆಳಕು ಮೂಡಿಸಲೆ?

ಅಥವಾ
ಸೋತು ಶರಣಾಗಿ
ಕರಿಮೋಡದ ಮಳೆಯ
ಆಭ೯ಟದಲ್ಲಿ ಕೊಚ್ಚಿ
ಕಣಿವೆಯ ಆಳದಲ್ಲಿ
ಯಾರಿಗೂ ಕಾಣದಂತೆ
ಮರೆಯಾಗಿ ಬಿಡಲೆ?

ಅಥವಾ
ಕಲ್ಲೊಡನೆ ಕಲ್ಲಾಗಿ
ಬಿಸಿಲು, ಮಳೆ,ಚಳಿ,
ಗಾಳಿಗೆ ಮೈಯ್ಯೊಡ್ಡಿ
ಪಳೆಯುಳಿಕೆಯಾಗಿ
ಇತಿಹಾಸದ ಪುಟದಲ್ಲಿ
ಸೇರಿ ಬಿಡಲೆ?

ಅಥವಾ
ಕಾಲನ ಪರಿವೆಯೇ ಇಲ್ಲದೆ
ಮುಂಬರುವ ದಿನಗಳ
ಗಂಟು ಹೊಸೆಯುತ್ತ
ಬೋಳು ನೆಲದಲ್ಲಿ ತೆವಳುತ್ತ
ಕಗ್ಗತ್ತಲೆಯ ಬಾನಂಗಳದ
ಆಹ್ವಾನಕ್ಕಾಗಿ ಕಾಯಲೆ?

11-1-2016 11.31 am

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s