ಕಥೆಗಳಿಗೆ ಮುನ್ನುಡಿ -(1)

ಕಥೆಗಳನ್ನು ಬರೆಯುವಾಗಿನ ಸನ್ನಿವೇಶ, ಬರೆದಿರುವ ಉದ್ದೇಶ ದಿನ ಕಳೆದಂತೆ ನೆನಪಿನಲ್ಲಿ ಇಡುವುದು ಕಷ್ಟ. ಆದುದರಿಂದ ಆ ಒಂದು ದಿನಗಳ ನೆನಪಿನ ಹೊತ್ತಿಗೆ ಕಳೆದು ಹೋಗಬಾರದು, ನನ್ನ ನಂತರ ನಶಿಸಿ ಹೋಗಬಾರದು. ಅದಕ್ಕಾಗಿ ಈ ಪ್ರಯತ್ನ;

(ಕಥೆ-1 ) “ಅವಳು”
5-2-2016 ಸುಮಾರು ಮೂರು ಗಂಟೆ ಮಧ್ಯಾಹ್ನ ಹಾಗೆ ಮಲಗಿರುವಾಗ ಎಷ್ಟೋ ವಷ೯ಗಳ ಹಿಂದೆ ಧಾರಾಕಾರ ಮಳೆಯಲ್ಲಿ ನೆನೆದುಕೊಂಡು ಬಂದ ಆ ಒಂದು ದಿನದ ನೆನಪು ಈ ಕಥೆ ಬರೆಯಲು ಕಾರಣವಾಯಿತು.

ಹೌದು ನಾನು ಬರೀ ಕವನ ಮಾತ್ರ ಬರೆಯುತ್ತೇನೆ. ಕಥೆ ಯಾಕೆ ಬರೆಯುವ ಪ್ರಯತ್ನ ಮಾಡುತ್ತಿಲ್ಲ. ಈ ವಿಚಾರ ಕಥೆ ಬರೆಯಲು ಪ್ರೇರೇಪಿಸಿತು. ಆದರೆ ಹೀಗೇ ಬರೆಯಬೇಕು ಅನ್ನುವ ಯೋಜನೆ ಇರಲಿಲ್ಲ. ಬರಿತಾ ಬರಿತಾ ಅದು ಹಾಗೆ ಸಾಗಿಕೊಂಡು ಹೋಯಿತು. ಕೊನೆಯಲ್ಲಿ ಒಂದು ಸಂದೇಶ ಓದುಗರಿಗೆ ಕೊಡುವ ಉದ್ದೇಶ ನನ್ನದು.

ಪ್ರತಿಯೊಬ್ಬರಿಗೂ ಒಂದು ಕನಸಿರುತ್ತದೆ. ಅದು ಸಾಕಾರವಾಗಲಿ, ಬಿಡಲಿ ಇರೋದರಲ್ಲೆ ಸಂತೃಪ್ತಿ ಪಡಬೇಕು ಈ ಕಥೆಯ ಸಾರಾಂಶ.

“ಸಂಪದ” ಕನ್ನಡ ಬ್ಲಾಗ್ ಗೆ ಕಳಿಸಿದೆ. ಒಳ್ಳೆ ಪ್ರತಿಕ್ರಿಯೆ ಬಂದಿತು. ಇನ್ನೊಂದು ಕಥೆ ಬರೆಯಲು ಧೈರ್ಯ ಬಂದಿತು.
Thanks ‘ SAMPADA’

(ಕಥೆ -2) ” ಸಂಬಂಧಗಳು”
6-2-2016ರ ಬೆಳಗಿನ ಹತ್ತು ಗಂಟೆ ಹಾಗೆ ಮನಸಿಗೆ ಬಂದ ವಿಚಾರಗಳ ಸರಪಣಿ ಹೆಣೆಯುತ್ತ ಹೋದಂತೆ ಕಥೆಯ ರೂಪ ತಾಳಿತು.

ಈಗಿನ ದಿನಗಳಲ್ಲಿ ಮನೆಯಲ್ಲಿ ಉಪಯೋಗಿಸದೆ ಇರುವ ವಸ್ತುಗಳನ್ನು ಮಾರೋದು ಇಲ್ಲ ಗುಜರಿಗೆ ಹಾಕೋದು. ಮಕ್ಕಳು ಮತ್ತು ಹೆತ್ತವರ ಮಧ್ಯೆ ಆಗುತ್ತಿರುವ ಗ್ಯಾಪ. ಪ್ರೀತಿಯ ಸಂಬಂಧಗಳ ಕೊರತೆ ಇವುಗಳ ಚಿತ್ರಣ.

ಹೆತ್ತವರ ಒಂದಾದರೂ ವಸ್ತು ಮನೆಯಲ್ಲಿ ನೆನಪಿಗೆ ಇಡುತ್ತೇನೆಂಬ ಭಾವನೆ,ಪ್ರೀತಿ ಮಕ್ಕಳಲ್ಲಿ ಬರಬೇಕು.ಈ ಕಥೆಯ ಉದ್ದೇಶ.

ಸಂಪದದಲ್ಲಿ ಪ್ರಕಟವಾಯಿತು. ಈ ಕಥೆಗೂ ಕೂಡ ಉತ್ತಮ ಪ್ರತಿಕ್ರಿಯೆ ದೊರೆಯಿತು.

Thanks Sampada.

(ಕಥೆ-3) “ಸಂತೃಪ್ತಿ”
ದಿನಾಂಕ 10-2-2016 ಪೇಪರ್ ಓದುತ್ತಿರುವಾಗ ಗಮನಕ್ಕೆ ಬಂದ ವಿಷಯ. ರಸ್ತೆ ಅಗಲೀಕರಣದಲ್ಲಿ ಆಸ್ತಿ ಕಳೆದುಕೊಂಡ ಸಂಸಾರದ ಚಿತ್ರಣ. ಹಾಗೆ ಜಾತಕ, ಗೋತ್ರ, ನಕ್ಷತ್ರ ಎಂದು ಮದುವೆ ವಿಳಂಬ. ಇವೆರಡು ವಿಚಾರ ಹೊಂದಾಣಿಕೆಯಲ್ಲಿ ತನ್ನಷ್ಟಕ್ಕೆ ಕಥೆ ಸಾಗಿತು. ಆದರೆ ಮುಕ್ತಾಯದಲ್ಲಿ ಸ್ವಲ್ಪ ಗೊಂದಲ ನನ್ನಲ್ಲಿ. ಎರಡು ದಿನ ಬೇಕಾಯಿತು ಕಥೆ ಪೂತಿ೯ ಮಾಡಲು.

ಜನರಿಂದ ಮೋಸ, ಮಾತು ಹಾಗೂ ಜಾತಕ ನಂಬಿ ಮದುವೆಯ ವಿಳಂಬ ಬದುಕು ಹೇಗೆ ಸಾಗುತ್ತದೆ ಎಂಬ ಸಣ್ಣ ಚಿತ್ರಣ, ಸಂದೇಶ.
3.44pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s