ನಾನೇಕೆ ಬ್ಲಾಗ್ ಬರೆಯುತ್ತೇನೆ!

ನನ್ನೊಳಗಿನ ನೆನಪು ಭಾವನೆಗಳನ್ನು ಆದಷ್ಟು ಉತ್ತಮವಾದ ಸಾಹಿತ್ಯದಲ್ಲಿ ರಚಿಸಿ ಜನರ ಮುಂದೆ ಇಡುವ ಹಂಬಲ. ಅವರಿಂದ ಬಂದ ಪ್ರತಿಕ್ರಿಯೆ ಈ ಬರೆಯುವ ಉತ್ಸಾಹ ಜಾಸ್ತಿ ಮಾಡುತ್ತದೆ. ಹಾಗೆ ನನ್ನ ಬರಹ ಇಷ್ಟು ದಿನ ಮೂಲೆ ಸೇರಿತ್ತು. ಅದು ಬೇಳಕಿಗೆ ಬರಬೇಕು ಅಂದರೆ ಅದಕ್ಕೊಂದು ನೆಲೆ ಬೇಕು. ಈ Worldpress. Com ಒಂದು ಉತ್ತಮ ಅವಕಾಶ ಮಾಡಿಕೊಟ್ಟಿದೆ. ನಮ್ಮಿಂದ ಯಾವುದೇ ಪ್ರತಿಫಲದ ನೀರೀಕ್ಷೆಯಿಲ್ಲದೆ ಒಂದು ತಾಣ ಕಲ್ಪಿಸಿಕೊಟ್ಟಿದೆ. ಯಾವತ್ತೂ ಚಿರಋಣಿ.

ಬರೆಯುತ್ತ ಬರೆಯುತ್ತ ಇದೊಂದು ಗೆಳೆತನದ ಭಾವನೆ ಮೂಡಿಸಿ ಒಂಟಿತನವನ್ನು ದೂರ ಮಾಡುವ ಉತ್ತಮ ಗೆಳತಿಯೂ ಕೂಡ!

ಬರೆಯುವ ಕೈ ಕಟ್ಟಿ ಹಾಕಲು ಆಗೋದಿಲ್ಲ. ಹಾಗೆ ಈ ಜನರಿಂದ ದೂರ ಇರಲು ಸಾಧ್ಯ ಇಲ್ಲ. ಇಬ್ಬರ ಮಧ್ಯೆ ಒಡನಾಟ ಬೆಳೆಯಲು ಇದು ಉತ್ತಮ ತಾಣ.

ಬರವಣಿಗೆಯಲ್ಲಿ ಹೇಳಲಾರದಷ್ಟು ಸಂತೋಷ ಸಿಕ್ಕಿದೆ. ಬರೆಯಲು ಬೇಕಾದಷ್ಟು ಅವಕಾಶಗಳು ಇವೆ. ಪ್ರತಿ ದಿನ ಕಥೆ, ಕವನ, ಹಾಸ್ಯ ಮುಂತಾದವುಗಳನ್ನು ಬರೆಯುತ್ತಿದ್ದೇನೆ. ಬರೆಯುತ್ತಲೇ ಇರುತ್ತೇನೆ.‌ ಉಸುರಿರುವವರೆಗೆ!

25-2-2016 3.13pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

3 thoughts on “ನಾನೇಕೆ ಬ್ಲಾಗ್ ಬರೆಯುತ್ತೇನೆ!”

 1. ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ,,,,
  ಬರೆಯುವುದು ಅನಿವಾರ್ಯ, ಇಷ್ಟ ಎನಗೆ,,,,, ಆಲ್ವಾ ಅಕ್ಕಾ,,,

  ಹೃದಯವನ್ನು ಹಗುರಗೊಳಿಸಲು ಬರೆಯುವ ನಿಮ್ಮ ಬರಹಗಳು ಸದಾ ಮುಂದುವರೆಯಲಿ,,,,

  ಉಸಿರಿನ ಚಿಂತೆ ಬೇಡ ಅಕ್ಕಯ್ಯ,,,,,,,

  ಅದು ತನ್ನ ಪಾಡಿಗೆ ತಾನಿರಲಿ ( 🙂 )

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s