ಏಕಾಂತ ಮತ್ತು ಮೌನದ ಸುಃಖ

ಪ್ರತಿಯೊಬ್ಬರ ಜೀವನದಲ್ಲೂ ಒಮ್ಮೊಮ್ಮೆ ಊಹೆಗೂ ಮೀರಿದ ಘಟನೆಗಳು, ಸಂದಭ೯ಗಳು ಎದುರಾಗುವುದು ಸಹಜ. ಇಂಥ ವೇಳೆಯಲ್ಲಿ ಮನುಷ್ಯ ಅಧೀರರಾಗದೇ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ, ಜಾಣ್ಮೆ,willpower ಕಳೆದುಕೊಳ್ಳಬಾರದು. ಪ್ರತಿಯೊಬ್ಬರಲ್ಲೂ ಅಂತರ್ ಶಕ್ತಿ ಇದ್ದೇ ಇರುತ್ತದೆ. ಅದನ್ನು ಹೊರಗೆಳೆದು ಉಪಯೋಗಿಸಿಕೊಳ್ಳುವ ಪ್ರಯತ್ನ ಸಾಮಾನ್ಯವಾಗಿ ಮನುಷ್ಯ ಮಾಡೋದಿಲ್ಲ.

ಅಯ್ಯೋ ನನಗೆ ಹೀಗಾಯ್ತಲ್ಲ ದೇವರೆ, ನಾ ಏನ ಮಾಡ್ಲಿ, ನನಗ್ಯಾರು ದಿಕ್ಕು ಅಥವಾ ಇದಕ್ಕೆ ಬೇರೆಯವರನ್ನು ಹೊಣೆ ಮಾಡಿ ಕೊರಗೋದು, ಇಲ್ಲಾ .ಕಾಣದ ದೇವರನ್ನೇ ಶಪಿಸೋದು. ಆದರೆ ಇದರಿಂದ ಯಾವ ಪ್ರಯೋಜನ ಇಲ್ಲ. “ನಗೋವರ ಮುಂದೆ ಎಡವಿದ ಹಾಗೆ” ಆಗುತ್ತದೆ.

ಇದರ ಬದಲು ಇಂಥ ಸಂದಭ೯ದಲ್ಲಿ ಒಮ್ಮೆ ಮೌನಕ್ಕೆ ಶರಣಾಗಿ. ಮನಸ್ಸು ಶಾಂತತೆಯಲ್ಲಿ ಒಂದು ನಿದಾ೯ರಕ್ಕೆ ಬಂದು ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಬೇಕು ಅನ್ನುವ ದಾರಿ ತೋರಿಸುತ್ತದೆ. ಜೀವನದಲ್ಲಿ ಯಾರ ಹಂಗೂ ಇಲ್ಲದೆ ಬದುಕುವಂಥ ಕಲೆ ರೂಢಿಸಿಕೊಂಡಲ್ಲಿ, ಹೆಚ್ಚು ಮೌನಿಯಾದಲ್ಲಿ ಹೆಚ್ಚಿನ ಸಂತೋಷ ಕಾಣಬಹುದು.

ಹಾಗೆ ಪ್ರತಿಯೊಬ್ಬರಲ್ಲೂ ಏನಾದರೂ ಒಂದು ಪ್ರತಿಭೆ ಅಡಗಿರುತ್ತದೆ. ಅದನ್ನು ನಮಗೆ ನಾವೇ ಗುರುತಿಸಿಕೊಳ್ಳಬೇಕು. ನಮಗೆ ನಾವೇ ಶತ್ರು, ನಮಗೆ ನಾವೇ ಮಿತ್ರ. ಯಾರೂ ಯಾರ ಜೀವನಕ್ಕೂ ಹೊಣೆ ಅಲ್ಲ. ನಮ್ಮಲ್ಲಿರುವ ಪ್ರತಿಭೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಸಮಾಜಕ್ಕೆ ಭಾರವಾಗಿರದೆ ಉತ್ತಮ ಜೀವನ, ಆರೋಗ್ಯಕರ ಜೀವನ ನಡೆಸುವ ಪ್ರಯತ್ನ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು.

ನಿಜವಾದ ಮನುಷ್ಯನಾಗೋದು ಕಷ್ಟಗಳನ್ನು ಎದುರಿಸಿದಾಗಲೆ!

“ನಿಜವಾಗಿ ಏಕಾಂಗಿಯ ಬದುಕಲ್ಲಿ ಸಂಪೂರ್ಣ ಸ್ವತಂತ್ರ ಇದೆ. ನಮ್ಮನ್ನು ನಾವು ತಿಳಿದುಕೊಳ್ಳಲು ಮುಕ್ತ ವಾತಾವರಣದ ಸೃಷ್ಟಿ, ಯೋಚನೆಗೆ ಬೇಕಾದಷ್ಟು ಸಮಯಾವಕಾಶ, ಖುಷಿಯಲ್ಲಿ ಕುಣಿದು ಕುಪ್ಪಳಿಸುವ, ದುಃಖದಲ್ಲಿ ಜೋರಾಗಿ ಅತ್ತುಬಿಡುವಷ್ಟು ಸ್ವತಂತ್ರವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದು. ”

8-3-2016 11.44am

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s