ಮಹಿಳಾ ದಿನಾಚರಣೆ

ಚುಮು ಚಮು ಬೆಳಗು. ಆಗಷ್ಟೇ ಸೂರ್ಯ ತನ್ನ ಕಣ್ಣು ಬಿಡುತ್ತಿದ್ದಾನೆ. ಜಗದ ಜಂಜಡದೊಳಗೆ ಸಿಲುಕಿಕೊಂಡ ಮನುಜ ಒಂದೊಂದೆ ಹೆಜ್ಜೆಯಿಟ್ಟು ದಿನದ ಕಾಯ೯ಕ್ಕೆ ಅಣಿಗೊಳ್ಳುತ್ತಿದ್ದಾನೆ‌. ಎಚ್ಚರವಾದ ಮನಸ್ಸು ಮೊಬೈಲ್ ತಡಕಾಡಿ ನೋಡಿದಾಗ “ನಿಲುಮೆ” ಕನ್ನಡ ಬ್ಲಾಗ್ ನಿಂದ ಬಂದ ಮೇಲ್ ತೆರೆದು ನೋಡಿದಾಗ ಶ್ರೀ ರಾಜಕುಮಾರ್ ವಿ.ಕುಲಕಣಿ೯,ಬಾಗಲಕೋಟೆ ಇವರು ಮಹಿಳಾ ದಿನಾಚರಣೆ ಅಂಗವಾಗಿ “ಮಹಿಳಾ ಅಸ್ತಿತ್ವದ ವಿವಿಧ ನೆಲೆಗಳು” ಕುರಿತು ಬರೆದ ಲೇಖನ ಓದಿ ಖುಷಿ ಯಾಯಿತು.

ಕಾರಣ ಇದರಲ್ಲಿ ಅನಾದಿ ಕಾಲದಿಂದ ಹಂತ ಹಂತವಾಗಿ ಮಹಿಳೆಯರು ಯಾವ ರೀತಿ ತಮ್ಮ ಅಸ್ತಿತ್ವವನ್ನು ಬೆಳಕಿಗೆ ತರುತ್ತಾ ಬಂದರು, ಆದರೂ ಇಂದಿಗೂ ಮಹಿಳೆಯರಿಂದಲೆ ಮಹಿಳೆ ಶೋಷಣೆಗೆ ಒಳಗಾಗಿ ಕೊನೆಗೆ ಗಂಡಿನ ಸಹಾಯ ಪಡೆಯಬೇಕಾಗುತ್ತದೆ ಅನ್ನುವುದನ್ನು ಸವಿಸ್ತಾರವಾಗಿ ಬರೆದಿದ್ದಾರೆ.

ನನ್ನ ಅಭಿನಂದನೆಗಳು, ಅಭಿಪ್ರಾಯ ಬರೆದೆ.

ಮಹಿಳಾ ದಿನಾಚರಣೆಯ ಶುಭಾಶಯಗಳು ದಿನವೆಲ್ಲ ಓದುತ್ತ, ಕೇಳುತ್ತ ಸಮಯ ಸರಿದಿದ್ದು ಗೊತ್ತಾಗಲೆ ಇಲ್ಲ‌. ರಾತ್ರಿ ಸುಮಾರು ಎಂಟೂ ಮೂವತ್ತರ ಸಮಯ ಒಬ್ಬ ಹಿತೈಷಿಯಿಂದ ಅಪರೂಪದ, ಊಹಿಸಲಾಗದ ಸಂದೇಶ. “ನೀವೊಬ್ಬ ಅಪರೂಪದ ಮಹಿಳೆ, ನಿಮ್ಮ ಸಾಧನೆ ಪ್ರಶಂಸನೀಯ”.

ತುಂಬಾ ಸಂತೋಷವಾಯಿತು. ಬದುಕಿನಲ್ಲಿ ಮರೆಯಲಾಗದ ಸಂದೇಶ.

Thanks a lot.
9-3-2016 12.43am

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s