ತೀಥ೯ಕ್ಷೇತ್ರಗಳ ದಶ೯ನ(ಭಾಗ-1)

ರಾತ್ರಿ ಹತ್ತು ಗಂಟೆಗೆ ಇನ್ನೂ ಹತ್ತು ನಿಮಿಷ ಇದೆ ಮನೆಯಿಂದ ಹೊರಟಾಗ. 300km ದೂರದಲ್ಲಿರುವ ಧಮ೯ಸ್ಥಳಕ್ಕೆ ಹೊರಟಿತ್ತು ನನ್ನ ಪಯಣ ಬೆಂಗಳೂರಿನಿಂದ ಮಗಳೊಂದಿಗೆ. ಇದು ನನಗೆ ಅತೀ ವಿಶೇಷ‌. ಏಕೇಂದರೆ ಅವಳು ಮೂರು ವರ್ಷ ಇರುವಾಗ ಈ ಸ್ಥಳಕ್ಕೆ ಹೋದ ನೆನಪು. ಆಮೇಲೆ ನಾವು ಹೋಗುವಾಗಲೆಲ್ಲ ಅವಳು ನಮ್ಮೊಟ್ಟಿಗೆ ಬರಲಿಲ್ಲ ಕಾರಣಾಂತರಗಳಿಂದ. ಸರಿ ನವರಂಗದ ಕೆ.ಎಸ್.ಆರ್.ಟಿ.ಸಿ.ನಿಲುಗಡೆಯ ತಾಣದಲ್ಲಿ ಅತ್ತಿತ್ತ ನೋಡುತ್ತ ಕಾಲ ಕಳೆಯಬೇಕಾಯಿತು ಒಂದು ಗಂಟೆ‌.

ಪಕ್ಕದ ರಿಂಗಣಿಸುವ ಮೊಬೈಲಲ್ಲಿ ಹುಬ್ಬಳ್ಳಿ ಮಂದಿ ಮಾತು. “ಇಲ್ರೀ ಈಗಷ್ಟೇ ರಿಕ್ಷಾ ಇಳಿಯಕ್ಕ ಹತ್ತಿವ್ರೀ‌ . ” ಅರೆ, ಇದೇನಿದು ರಿಕ್ಷಾ ಇಳಿದು ಹತ್ತೋದೇನು‌ ? ಕೂತಲ್ಲೇ ಒಂದು ಸಣ್ಣ ನಗು‌.‌ ಹಾಸ್ಯಗಾರ ಪ್ರಾಣೇಶರ ಮಾತು ನೆನಪಾಯಿತು.

ರಾತ್ರಿ 11.25 ನಮ್ಮ ಬಸ್ಸು ಹೊರಟಾಗ. ರಾತ್ರಿಯೆಲ್ಲ ನಿದ್ದೆಯಿಲ್ಲದೆ ಕಳೆಯಬೇಕಾದ ಶಿಕ್ಷೆಗೆ ಮನಸ್ಸು ರೆಡಿಯಾಗುತ್ತಿತ್ತು. ಸ್ಪೀಡಾಗಿ ಚಲಿಸುವ ಆಭ೯ಟಕ್ಕೆ ವಿಚಿತ್ರ ಸೌಂಡಗಳು. ಆಕಡೆ ಈಕಡೆ ಕುಳಿತ ಭಂಗಿ ಬದಲಾಯಿಸುತ್ತ ಹೇಗೊ ಯಾವಾಗಲೋ ಬೇಳಗಿನ ಜಾವ ಸಣ್ಣ ನಿದ್ದೆ. ಎಚ್ಚರಾದಾಗ ಬೆಳಗಿನ ಅರೂ ಇಪ್ಪತ್ತೈದು. ತಲುಪಿದೆವು ದೇವರ ಊರು.

ಮದ್ಯ ರಾತ್ರಿ. ಬಸ್ಸು ಒಂದು ಜಾಗದಲ್ಲಿ ನಿಲ್ಲಿಸಿದರು ಹತ್ತು ನಿಮಿಷ. ಮಗಳು ನಿದ್ದೆಯಲ್ಲಿ. ಇಳಿದು ಹೋಗಿ ವಾಪಸ್ಸು ಬಂದರೆ ನಾ ಬಂದ ಬಸ್ ಕಾಣುತ್ತಿಲ್ಲ. ಎದೆ ಡವ ಡವ. ಎರಡು ಮೂರು ಬಸ್ಸು ಹತ್ತಿ ಇಳಿದೆ. ಕೈಯಲ್ಲಿ ಕಾಸಿಲ್ಲ, ಮೊಬೈಲ್ ಇಲ್ಲ. ನನ್ನ ಪರದಾಟ ನೋಡಿ ಯಾರೋ ಪುಣ್ಯಾತ್ಮ “ರೀ ಧಮ೯ಸ್ಥಳ ಬಸ್ಸು ಇಲ್ಲಿದೆ ನೋಡಿ” thanks ಹೇಳಿ ಬಸ್ಸು ಹತ್ತಿ ನಿಟ್ಟುಸಿರು ಬಿಟ್ಟೆ.

ಬೆಳಿಗ್ಗೆ ಈ ವಿಷಯ ಹೇಳಿದಾಗ ಮಗಳು ನನ್ನ ಅವಸ್ಥೆ ಕೇಳಿ ನಗುತ್ತಿದ್ದಳು. ಅಬ್ಬಾ ಎಂಥಾ experience!

ಅಯ್ಯೋ, ಬೆಳಗಿನ ನಮ್ಮ ಅವಸ್ಥೆ ರೂಮು ಸಿಗದೆ ಪರದಾಡುವಂತಾಯಿತು‌‌. ಸುಮಾರು ಒಂದೂವರೆ ಕಿಲೋಮೀಟರ ಬೆಳಗಿನ ವಾಂಕಿಂಗ ಮುಗಿಯಿತು. ಯಾವ ಪೂವ೯ ತಯಾರಿಯಿಲ್ಲದೆ ಬಂದಿದ್ದಕ್ಕೆ ಈ ಅವಸ್ಥೆ. ಪರವಾಗಿಲ್ಲ ಇವೆಲ್ಲ good experience.

“ಅನುಭವಗಳು ಮನುಷ್ನನನ್ನಾಗಿ ಮಾಡುತ್ತದೆ.”

ಆಟೋ ಹತ್ತಿ ಸುತ್ತಾಡಿ ಕೊನೆಗೂ ಉತ್ತಮವಾದ ವಸತಿಯನ್ನು ಹುಡುಕುವ ಮುಕ್ಕಾಲು ಗಂಟೆ ಪ್ರಯತ್ನದಲ್ಲಿ ಟೀನೂ ಕುಡಿಯದೆ ತಲೆ ಜ್ಞಾಪಿಸುತ್ತಿತ್ತು ನಾನೊಬ್ಬನಿದ್ದೀನಿ ನೋವಿನಲ್ಲಿ. ಹತ್ತಿರದಲ್ಲೇ ಇತ್ತು ಕ್ಯಾಂಟೀನ್. ಅದರ ಆಸೆ ಪೂರೈಸಿ ನಿತ್ಯ ಕಮ೯ ಮುಗಿಸಿ ಶುಚಿಭೂ೯ತವಾಗಿ ಹೊರಟಿತು ನಮ್ಮ ಸವಾರಿ ಶ್ರೀ ಮಂಜುನಾಥಸ್ವಮಿ ದೇವರ ದಶ೯ನಕ್ಕೆ.

image

ಶ್ರೀ ಕ್ಷೇತ್ರಕ್ಕೆ ಸುಮಾರು 800 ವಷ೯ಗಳ ಇತಿಹಾಸವಿದೆ. ಮೊದಲು ಈ ಕ್ಷೇತ್ತಕ್ಕೆ “ಕುಡುಮೆ” ಎಂಬ ಹೆಸರಿತ್ತು.
ಮಂಗಳೂರಿನ “ಕದ್ರೀ” ಎಂಬಲ್ಲಿಂದ ಶಿವಲಿಂಗ ತಂದು ಪ್ರತಿಷ್ಟಾಪಿಸಿ, ಉಡುಪಿಯಿಂದ ಆಗಮಿಸಿದ ಶ್ರೀ ವಾದಿರಾಜ ಸ್ವಾಮಿಗಳು ಈ ಕ್ಷೇತ್ರಕ್ಕೆ “ಧಮ೯ಸ್ಥಳ” ಎಂದು 16ನೇ ಶತಮಾನದಲ್ಲಿ ನಾಮಕರಣ ಮಾಡಿದರು ಎಂದು ಇತಿಹಾಸ ಹೇಳುತ್ತದೆ‌. ಈಗಿನ ಹೆಗ್ಗಡೆಯವರ ಫ್ಯಾಮಿಲಿ ಇಪ್ಪತ್ತೊಂದನೆಯ ಜನರೇಷನ್. ಧಮ೯ದಶಿ೯ಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ದಿನಾಂಕ 24-10-1968ರಿಂದ ಈ ಕ್ಷೇತವನ್ನು ಅತ್ಯಂತ ಅಭಿವೃದ್ಧಿ ಪತದಲ್ಲಿ ನಡೆಸುತ್ತಿದ್ದಾರೆ.

ಶನಿವಾರ. ಅಷ್ಟೇನು ಜನಜಂಗುಳಿ ಇರಲಿಲ್ಲ. ಪ್ರಸಾದದ ಚೀಟಿ ಪಡೆದು ಸರದಿ ಸಾಲಿನಲ್ಲಿ ನಡೆದು ಕಾಣಿಕೆ ಹಾಕಿ ಮೊದಲು ಅಮ್ಮನವರ ದಶ೯ನ. ನಂತರ ಶ್ರೀ ಶ್ರೀ ಶ್ರೀ ಮಂಜುನಾಥ ಸ್ವಾಮಿ, ಗಣಪತಿ ದಶ೯ನ ಪೂಜೆ, ನಮಸ್ಕಾರ, ಅಲ್ಲೆ ಪಕ್ಕದಲ್ಲಿ ಕುಳಿತು ಧ್ಯಾನ ಎಲ್ಲ ಮುಗಿ‌ಸಿ ಭಗವಂತ ಕಾಪಾಡಪ್ಪ ತಂದೆ ಎಂದು ಹೊರ ಬಂದಾಗ ಹತ್ತು ಗಂಟೆ‌.

ಊಟ ಹನ್ನೊಂದು ಗಂಟೆಗೆ‌. ಒಂದು ಗಂಟೆ ಸಮಯ ಇದೆ. ಸರಿ ಎದುರುಗಡೆ ಇರುವ ಸುಂದರ ಉಧ್ಯಾನವನ ಸುತ್ತಾಡಿ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಬೇಕಾದ್ದು ಬೇಡಾಗಿದ್ದು ಎಲ್ಲ ವಿಚಾರಿಸಿ ಒಂದೆರಡು ಸಾಮಾನು ತೆಗೆದುಕೊಂಡು ಬರುವಾಗ ಒಂದು ಮಲೆಯಾಳಿ ಹೆಂಗಸರ ಗುಂಪು ಎದುರಾಯಿತು.

ಅವರಿಗೆಲ್ಲ ಅವಸರ ಸಾವ೯ಜನಿಕ ಬಾತರೂಮಿಗೆ ಲಗ್ಗೆಯಿಟ್ಟರು. ನಾನೂ ಅತ್ತ ಕಡೆಯೇ ಹೊರಟಿದ್ದೆ. ಅವರಲ್ಲಿ ಒಬ್ಬ ಗಂಡಸು ಅವರದೆ ಭಾಷೆಯಲ್ಲಿ ಹೋಗಿ ಪರವಾಗಿಲ್ಲ. ಎಲ್ಲರೂ ಗಂಡಸರ ಬಾತರೂಮಿಗೇ ನುಗ್ಗಬೇಕೆ‌! ಕ್ಲಿನೀಂಗ ಲೇಡಿ ಬಯ್ಯಕೊಳ್ತಾ ಇದ್ಲು. ನಾನೂ ಕಾಯುವ ಬದಲು ಅವರಲ್ಲಿ ಒಬ್ಬಳಾದೆ.

ಊಟದ ಸರದಿ. ಎಲ್ಲಿ ಹೋದರೂ ಒಂದು ತಮಾಷೆ ಕಾಳಜಿ ನನಗೇ ಸಿಗಬೇಕೆ! ಗುತಿ೯ಲ್ಲ ಪರಿಚಯವಿಲ್ಲ ಗುಂಡು ಹೊಡೆಸಿಕೊಂಡ ಮಕ್ಕಳ ತಲೆ ನೆವರಿಸುತ್ತ ಮುದ್ದು ಮಾಡುತ್ತ ಮಗಳೊಂದಿಗೆ ಹಳೆ ವಿಷಯ ಮೆಲುಕು ಹಾಕುತ್ತ ಕುಳಿತಿರುವಾಗ ಸಾಲು ಮುಂದುವರಿಯಲು ಶುರುವಾಯಿತು. ಇದ್ದಕ್ಕಿದ್ದಂತೆ ಒಬ್ಬಳು ಹೆಂಗಸು “ಬನ್ನಿ ಬನ್ನಿ ಹೋಗೋಣ ಮಧ್ಯೆ ಜನ ಸೇರಿಕೊಂಡು ಬಿಡ್ತಾರೆ‌ ” ಸರಿ ನಾವೂ ಮುಗುಳು ನಗೆ ಬೀರಿದ್ದಕ್ಕೆ “ನಾವೂ ಬೆಂಗಳೂರಿನವರೆ. ” ಅಂದರೆ ನಮ್ಮ ಮಾತು ಆಲಿಸಿಕೊಂಡು ತನ್ನಷ್ಟಕ್ಕೆ ಪರಿಚಯಿಸಿಕೊಂಡ ಹೆಂಗಸು. ಇದೇ ಅಲ್ಲವೆ ಪರಸ್ಥಳದಲ್ಲಿ ನಮ್ಮೂರವರೆಂಬ ಅಭಿಮಾನ ಉಕ್ಕೋದು.

ದೇವರ ಪ್ರಸಾದ ಎರಡೊಟ್ಟೆ ಉಂಡು ಹೊರಬಂದಾಗ ಕಣ್ಣು ಎಳೆಯಲು ಶುರುವಾಯಿತು. ರೂಮು ಸೇರಿಕೊಂಡು ನಿದ್ದೆಯಿಂದ ಎದ್ದಾಗ ನಾಲ್ಕೂ ಮೂವತ್ತೈದು.

ಧಮ೯ಸ್ಥಳದಲ್ಲಿ ಆಟೋ, ಟ್ಯಾಕ್ಸಿಗೇನೂ ಕಡಿಮೆ ಇಲ್ಲ. ನಾವಿರೊ ಲಾಡ್ಜ “ಸಹ್ಯಾದ್ರಿ”. ಕೇವಲ ಐದು ತಿಂಗಳ ಹಿಂದೆ ಕಟ್ಟಿರೋದು. ಉತ್ತಮವಾದ ವ್ಯವಸ್ಥೆ. ಸ್ವಲ್ಪ ದೂರ. ಆಟೋದಲ್ಲಿ ಪಯಣಿಸಬೇಕು.

image

ಮತ್ತೆ ಐದು ಗಂಟೆಗೆ ಹೊರಟೆವು ಆಟೋದಲ್ಲಿ “ಚಂದ್ರನಾಥ ಬಸದಿ” ನೋಡಲು. ಇದು ಶ್ರೀ ಚಂದ್ರನಾಥ ಸ್ವಾಮಿಗಳ ಬಸದಿ. ಸುಮಾರು ಎಂಟುನೂರು ವಷ೯ದ ಇತಿಹಾಸವಿದೆ. ಪ್ರಶಾಂತ ವಾತಾವರಣ. ಧ್ಯಾನಕ್ಕೆ ಪ್ರಶಸ್ತವಾದ ಸ್ಥಳ.

image

ಪಕ್ಕದಲ್ಲೇ ಇರುವ ಮಂಜೂಶಾ ಕಾರು ಮ್ಯೂಸಿಯಮ್ ಕೈಬೀಸಿ ಕರೆಯುತ್ತಿತ್ತು ಇತ್ತ ಕಡೆ ಬನ್ನಿ ತಗಲಾಕಿರೋ ಬೋಡ೯. ಹೋಗಿ ನೋಡಿದರೆ ಪ್ರಪಂಚದ ಸುಮಾರು ಎಲ್ಲ ಬಗೆಯ ಕಾರುಗಳು! ಅದೂ ಸುಸ್ತಿತಿಯಲ್ಲಿ ಇವೆಯಂತೆ. ಪ್ರತಿ ಹದಿನೈದು ದಿನಗಳಿಗೆ ಎರಡು ಕಿಲೋಮೀಟರ ಓಡಿಸೋದಂತೆ. ಐದು ಜನ ಡ್ರೈವರಗಳು ಇದ್ದಾರಂತೆ. ಎಲ್ಲವೂ ಪಳ ಪಳ ಹೊಳಿತಿದೆ. ಟಾಂಗಾಗಳ ಸಂಗ್ರಹವೂ ಇಲ್ಲಿವೆ.

ನಾವೆಷ್ಟು ಸೋಂಬೇರಿಗಳು; ಮನೆಯಲ್ಲಿರೊ ಒಂದು ವೆಹಿಕಲ್ಲೇ ಧೂಳು ಒರೆಸೋದಿಲ್ಲ. ತಲೆ ಬಾಗಬೇಕು ಹೆಗಡೆಯವರ ಅಚ್ಚುಕಟ್ಟುತನಕ್ಕೆ.

ಇಲ್ಲಿ ಗಮನ ಸೆಳೆದಿದ್ದು STUDEBACKER 1929 Model. Mahathma Gandhi ಕನಾ೯ಟಕ ಮತ್ತು ತಮಿಳುನಾಡು ಸುತ್ತಾಡಿರುವ ಬಿಳಿ ಕಾರು. ಮತ್ತು ಸಾಹಸ ಸಿಂಹ ವಿಷ್ಣುವಧ೯ನ ಉಪಯೋಗಿಸುತ್ತಿದ್ದ DATSUN 1983 Model ಕಾರು.

image

ಸೂರ್ಯಾಸ್ತಮಾನದ ಅಂದ ನೋಡಲು “ರತ್ನಗಿರಿ” ಬೆಟ್ಟಕ್ಕೆ ಪ್ರವೇಶ. ಅಜಾನುಭಾಹು ಬಾಹುಬಲಿಯ ದಶ೯ನ. ಸಾಯಂಕಾಲದ ಮಂಗಳಾರತಿಯ ಪೂಜೆ, ನಮಸ್ಕಾರ ಪಡೆದು ತಂಪಾದ ತಂಗಾಳಿಯ ಸೇವನೆಗೆ ಅಲ್ಲೇ ಸ್ವಲ್ಪ ಹೊತ್ತು ಕುಳಿತು ಹೊರಟೆವು ರತ್ನಗಿರಿಯ ಮೆಟ್ಟಿಲು ಇಳಿಯುತ್ತ ದೂರದಿಂದ ಕಾಣುವ ಪೇಟೆಯ ಸೌಂದರ್ಯ ನೋಡುತ್ತ.

ಹೌದು ಈ ಪೇಟೆಯಲ್ಲಿ ಅದೆಷ್ಟು ಸ್ವಚ್ಛತೆ. ಜನಸಂದಣಿ ಯಾವಾಗಲೂ ಇರುವ ಈ ಊರನ್ನು ಅದೆಷ್ಟು ಅಚ್ಚುಕಟ್ಟಾಗಿ ಇರವಂತೆ ನೋಡಿಕೊಳ್ಳುತ್ತಿದ್ದಾರೆ ಧರ್ಮದಶಿ೯ಗಳು! ಖುಷಿ ಆಗುತ್ತದೆ.

ಮುಂದೆ ಕಾಣುವ ಮಂಜೂಶಾ ಮ್ಯೂಸಿಯಂ ಒಳ ಹೊಕ್ಕಾಗ ಪುರಾತನ ಕಾಲದ ವಸ್ತುಗಳ ಸಂಗ್ರಹ, ಅಚ್ಚುಕಟ್ಟಾಗಿ ಜೋಡಿಸಿಟ್ಟ ಪರಿ. ವಾಃ! ಸುಮಾರು ಒಂದು ಗಂಟೆ ಬೇಕು ವೀಕ್ಷಿಸಲು.

ಮಾರನೇ ದಿನದ ತಯಾರಿಯ ಮಾತು ಕಥೆಯೊಂದಿಗೆ ವಾಸ ಸ್ಥಳಕ್ಕೆ ಮರಳಿದಾಗ ಗಂಟೆ ಒಂಬತ್ತು ಇಪ್ಪತ್ತು‌.

ಮುಂದುವರಿಯುವುದು…

(ಈ ಪ್ರವಾಸ ಕಥನದ ಎಲ್ಲ ಭಾಗಗಳು ವಿ.ಕ. ಬೋಧಿವೃಕ್ಷದಲ್ಲಿ ಪ್ರಕಟವಾಗಿದೆ)

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

2 thoughts on “ತೀಥ೯ಕ್ಷೇತ್ರಗಳ ದಶ೯ನ(ಭಾಗ-1)”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s