ತೀಥ೯ಕ್ಷೇತ್ರ ದಶ೯ನ(ಭಾಗ-2)

ಬೆಳಗಿನ ಜಾವ ನಿದ್ದೆಯ ಮಂಪರು. ಧಡ ಧಡ ಬಾಗಿಲು ಗುದ್ದುವ ಸದ್ದು. ಭಯದಲ್ಲಿ ಎಚ್ಚರವಾಗಿ ನೋಡಲು ಐದು ಗಂಟೆ. ಇದು ಇಲ್ಲಿಯ ಎಬ್ಬಿಸುವ ರೂಢಿ.

ಏಳೂ ನಲವತ್ತಕ್ಕೆಲ್ಲ ರೂಮು ಖಾಲಿ ಮಾಡಿ ಕೀ ಕೊಟ್ಟಾಗ ನೂರು ರೂ. ವಾಪಸ್. ಬೇಗ ಖಾಲಿ ಮಾಡಿದ್ರಿ ಅದಕ್ಕೆ. ಆಶ್ಚಯ೯, ಎಂಥ promptness. ಬರಿ ಇನ್ನೂರು ರೂ.ಗೆ ಎಷ್ಟೊಳ್ಳೆ ರೂಮು. ಧನ್ಯವಾದ ಹೇಳಿ ಮೊದಲೇ ನಿಧ೯ರಿಸಿಕೊಂಡ ಆಟೋದಲ್ಲಿ ಹತ್ತಿರದಲ್ಲಿ ಇರುವ ಸುತ್ತಮುತ್ತಲ ಕ್ಷೇತ್ರ ವೀಕ್ಷಣೆಗೆ ಹೊರಟೆವು ಬೆಳಗಿನ ಉಪಹಾರ ಮುಗಿಸಿ.

ನೇತ್ರಾವತಿಯಲ್ಲಿ ಪ್ರೋಕ್ಷಣೆ. ಜನ ತುಂಬಾ ಗಲೀಜು ಮಾಡುತ್ತಿದ್ದಾರೆ ಅಲ್ಲಿ. ಮೋದಿ ವಾಖ್ಯ ಮರೆತಿದ್ದಾರೆ.

ಸೂಯ೯ ನಗರ, ಬೆಳ್ತಂಗಡಿ ತಾಲ್ಲೂಕಿನಲ್ಲಿದೆ. ಹದಿನೈದು ಕಿ.ಮೀ. ಬೆಳಗಿನ ತಂಪಾದ ಗಾಳಿ, ಮುಖ್ಯ ರಸ್ತೆಯಿಂದ ಒಳ ಸೇರಿದಾಗ ಹಾಳಾದ ರಸ್ತೆ ಕೆಲವು ಕಡೆ ಗುಂಡಿ ತಪ್ಪಿಸಲು ಹರ ಸಾಹಸ. ಅಕ್ಕಪಕ್ಕ ತರಾವರಿ ಗಿಡಗಳ ಹಿಂಡು ಕೆಂಪು, ಹಳದಿ, ಬಿಳಿ, ನೀಲಿ ಹೂಗಳು ಪೃಕೃತಿಯ ಸೌಂದರ್ಯಕ್ಕೆ ದೇವರು ಕೊಟ್ಟ ಕೊಡುಗೆ. ಕೆಲವು ಕಡೆ ಗಿಡಮರಗಳ ಎಲೆಗಳ ಮೇಲೆ ಕೆಂಪು ಧೂಳಿನ ಲೇಪನ ಮರೆಯಾಗಿವೆ ಹಸಿರು. ಮಾನವನ ನಿಲ೯ಕ್ಷದ ಕೊಡುಗೆ. ಅನಿಸಿತು “ಯಾವುದಾದರೂ ಮಿನಿಷ್ಟರ್ ಬರೋದಾದರೆ ರಾತ್ರಿ ಬೆಳಗಾಗೋದರಲ್ಲಿ ರಸ್ತೆ ತಳ ತಳ.” ಹೇಳಿಕೊಂಡ ಡ್ರೈವರ ತಮ್ಮ ಗೋಳು.

image

ಶ್ರೀ ಸದಾಶಿವರುದ್ರ ದೇವಸ್ಥಾನ. ಶತಮಾನಗಳಿಂದ ನೆಲೆನಿಂತ ಮಣ್ಣಿನ ಹರಕೆಯ ಕ್ಷೇತ್ರ. ದೇವಸ್ಥಾನದ ನೂರು ಕಿ.ಮೀ.ದೂರದಲ್ಲಿ “ಹರಕೆ ಬನ” ವಿದೆ. ಹಿಂದೆ ಭೃಗು ಮಹಷಿ೯ಗಳ ಶಿಷ್ಶರೊಬ್ಬರ ತಪಸ್ಸಿಗೆ ಮೆಚ್ಚಿ ಶಿವಪಾವ೯ತಿಯರು ಪ್ರತ್ಯಕ್ಷವಾಗಿ ಲಿಂಗ ರೂಪದಲ್ಲಿ ನೆಲೆಯಾದ ಕುರುಹಾಗಿ ಲಿಂಗರೂಪಿ ಶಿಲೆ ಮತ್ತು ಶಿಲಾಪಾದಗಳಿವೆ. ಇಲ್ಲಿ ಹರಕೆ ಹೊತ್ತು ಅದು ಇಡೇರಿದ ಮೇಲೆ ಆಯಾ ಹರಕೆಗೆ ಸಂಬಂಧಪಟ್ಟ ಮಣ್ಣಿನ ಗೊಂಬೆಯನ್ನು ಅಕ್ಕಿ ಕಾಯಿಯೊಡನೆ ಇಟ್ಟು ದೇವರಿಗೆ ಹರಕೆ ಸಲ್ಲಿಸುವ ಪದ್ದತಿ ಇದೆ. ಎಲ್ಲವೂ ದೇವಸ್ಥಾನ ದಲ್ಲೇ ದೊರೆಯುತ್ತದೆ. ಸುಂದರವಾದ ಚಿಕ್ಕ ದೇವಸ್ಥಾನ. ಪೂಜೆ ಮುಗಿಸಿ ಹೊರಟೆವು.

image

ಉಜಿರೆಯಲ್ಲಿರುವ ಶ್ರೀ ಜನಾಧ೯ನ ಸ್ವಾಮಿ ದೇವಸ್ಥಾನ. ಸುಮಾರು ಸಾವಿರ ವಷ೯ದ ಇತಿಹಾಸವಿದೆ. ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಯು.ವಿಜಯರಾಘವ ಪಡ್ವೆಟ್ನಾಯ ಇವರು ಈಗ ಈ ದೇವಸ್ಥಾನ ನಡೆಸಿಕೊಂಡು ಹೋಗುತ್ತಿದ್ದಾರೆ.

image

ಇಲ್ಲಿಯೂ ಒಂದು ಇತಿಹಾಸವಿದೆ. ಹಿಂದೆ ಮದ್ವಾಚಾಯ೯ರು ಈ ಕ್ಷೇತ್ರದಲ್ಲಿ ಕುಳಿತು “ಕಾಲ ನಿಣ೯ಯ” ಗ್ರಂಥ ಬರೆದರಂತೆ. ಅವರು ಕುಳಿತಿರುವ ಸ್ಥಳ ದೇವಸ್ಥಾನದ ಬಲಭಾಗದಲ್ಲಿ ಚಿಕ್ಕ ಮೂತಿ೯ ಇರುವ ಗುಡಿ ಇದೆ.

ಸುಂದರವಾದ ದೇವಸ್ಥಾನ. ಸುತ್ತ ಪ್ರಾಂಗಣ. ಆತ್ಮೀಯ ವಾತಾವರಣ ಅಲ್ಲಿರುವ ಭಕ್ತರು, ಸಿಬ್ಬಂದಿ ವಗ೯. ಮನಸ್ಸಿಗೆ ತುಂಬಾ ಸಂತೋಷವಾಯಿತು.

image

ಮುಂದಿನ ಭೇಟಿ ದಕ್ಷಿಣದ ಅಯೋಧ್ಯೆ ಶ್ರೀ ರಾಮ ಕ್ಷೇತ್ರ. ಶ್ರೀ ರಾಮ ತಾರಕ ಮಂತ್ರ ಶಿವನಿಂದಲೆ ಪೂಜಿಸಲ್ಪಟ್ಟ ಶ್ರೀ ರಾಮ ಕ್ಷೇತ್ರ ನಿತ್ಯಾನಂದ ನಗರದಲ್ಲಿದೆ.
ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮಿಗಳು ಕಟ್ಟಿ ಬೆಳೆಸಿದ ಕ್ಷೇತ್ರವಿದು‌. ಮೂರು ಅಂತಸ್ಥಿನ ಕಟ್ಟಡವಿದು. 1989ರಲ್ಲಿ ಪ್ರಾರಂಭವಾಗಿ 2006ರಲ್ಲಿ ಮುಕ್ತಾಯಗೊಂಡಿದೆ. ಇಲ್ಲಿ ಎಲ್ಲಾ ದೇವತಾ ಮೂತಿ೯ಗಳೂ ಅಮೃತ ಶಿಲೆಯಲ್ಲಿ ನಿಮಾ೯ಣಗೊಂಡಿದೆ. ಇದು ಶಿಲೆಯಲ್ಲ ಕಲೆಯ ಬೀಡು!
ನೂರು ದೇವಾಲಯಗಳ ಮಹೋನ್ನತಿ ಒಂದೇ ದೇವಾಲಯದಲ್ಲಿ ಇಳಿದು ಬಂದಂತಿದೆ.

ಮುಂದುವರಿಯುವುದು.

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s