ತೀಥ೯ ಕ್ಷೇತ್ರ ದಶ೯ನ(ಭಾಗ-3)

ಪುನಃ ಧಮ೯ಸ್ಥಳದ ಮೂಲಕವೇ ಸಾಗಬೇಕು ಬಲಿಯಡ್ಕದ ಬಯಲು ಗಣೇಶನ ಮಂದಿರಕೆ. ಸುಮಾರು ಹದಿನೇಳು ಕಿ.ಮೀ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿ. ಮಧ್ಯಾಹ್ನ ಹನ್ನೊಂದು ಮುಕ್ಕಾಲು ತಲುಪಿದಾಗ.

image

ಸರಿಯಾಗಿ ಅಭಿಷೇಕದ ವೇಳೆ. ಜನ ಸಾಗರ. ಎತ್ತ ಕಡೆ ಗೋಣು ತಿರುಗಿಸಿದರೂ ಗಂಟಾ ನಾದ. ಸಾಲು ಸಾಲು ಗಂಟೆಗಳು ಸಾವಿರಾರು. ಹರಕೆ ಹೊತ್ತವರು ಕಟ್ಟಿರುವುದು. ನಾಭಿಯಿಂದ ಉಜ್ವಲಿಸುವುದು ಭಕ್ತಿ. ಪೂಜೆ ಪೂಜೆ ಪೂಜೆ ಮುಗಿಯದು. ಭಕ್ತರ ಕೈಯ್ಯಲ್ಲಿ ಅವಲಕ್ಕಿ ಬೆಲ್ಲದ ಪ್ರಸಾದ ಇಲ್ಲಿಯ ವಿಶೇಷ.

ಬಯಲೇ ಆಲಯವೋ ಅಥವಾ ಆಲಯವೇ ಬಯಲೋ ಅನ್ನುವಂತಿದೆ ಗಣೇಶ ಕುಳಿತ ವನ. ಗಂಭೀರವಾಗಿ ಎಡಮುರಿ ಗಣೇಶ ಮರದ ಕೆಳಗೆ ಕುಳಿತಿದ್ದಾನೆ. ಸುತ್ತ ವನ ರಾಶಿ. ಕಾನನ ಪ್ರಿಯ ಗಣೇಶ; ನಿರಾಭರಣ ಸುಂದರನಾಗಿ. ಸಂತೃಪ್ತಿಯಿಂದ ಪೂಜೆ ಮುಗಿಸಿ ನಮಸ್ಕರಿಸಿ ಸಾಗಿದೆವು ಊಟದ ಸಾಲಿಗೆ‌.

ದೇವರ ಹೆಸರಲ್ಲಿ ಪುಷ್ಕಳ ಭೋಜನ. ಅವಲಕ್ಕಿ ಬೆಲ್ಲ, ಸುಟ್ಟೇವು(ಸಿಹಿ ಖ್ಯಾಧ್ಯ),ಅಕ್ಕಿ ಕೇಸರಿಬಾತು (ತುಪ್ಪದಲ್ಲೇ ಮಾಡಿದ್ದು), ಪಾಯಸ, ಅನ್ನ, ಸಾರು, ಸಾಂಬಾರು, ಪಲ್ಯ ಮತ್ತು ಮಜ್ಜಿಗೆ.

ಊಟ ಮುಗಿಸಿ ಧಮ೯ಸ್ಥಳದಲ್ಲೇ ಬಸ್ಸು ಹತ್ತಿದರೆ ಒಳಿತು ಅನ್ನುವ ಡ್ರೈವರ ಹೇಳಿಕೆ ಸರಿ ಅನ್ನಿಸಿತು. ಕಾರಣ ಭಾನುವಾರ. ಬರುವಷ್ಟರಲ್ಲಿ ಬಸ್ಸು ರೆಡಿ ಇತ್ತು.(ಧನ್ಯವಾದ ಹೇಳಿ 700 ರೂ.ಕೊಟ್ಟು ಆಟೊ ಬೀಳ್ಕೊಟ್ಟೆವು ) ನಾವು ತಲುಪ ಬೇಕಾದ ಮುಂದಿನ ಕ್ಷೇತ್ರ ಕುಕ್ಕೆ ಸುಭ್ರಮ್ಮಣ್ಯ.

ಧಮ೯ಸ್ಥಳದಿಂದ 54 ಕೀ.ಮೀ. ಬಸ ಚಾಜ೯ ಒಬ್ಬರಿಗೆ ರೂ.60/- ಕೊಟ್ಟು ಸುಬ್ರಹ್ಮಣ್ಯ ಸೇರಿದಾಗ ಗಂಟೆ ನಾಲ್ಕು.

image

ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನಲ್ಲಿದೆ. ತುಂಬಾ ಹಳೆಯ ದೇವಸ್ಥಾನ. “ಸಪ೯ದೋಷ” ನಿವಾರಣೆಗೆ ಹೆಸರುವಾಸಿಯಾದ ಈ ಕ್ಷೇತ್ರ ಸದಾ ಹರಕೆ, ಪರಿಹಾರ ನಡೆಯುತ್ತಲೆ ಇರುತ್ತದೆ. ಬಸ್ ಸ್ಟಾಂಡಿನಿಂದ ಹತ್ತು ನಿಮಿಷದ ಹಾದಿ ದೇವಸ್ಥಾನಕ್ಕೆ.

ಹತ್ತಿರದಲ್ಲಿ ದೇವಸ್ಥಾನಕ್ಕೆ ಸಂಬಂಧ ಪಟ್ಟ ದೊಡ್ಡ ಪಡಸಾಲೆ ವಿಶ್ರಮಿಸಿಕೊಳ್ಳಲು. ಎಲ್ಲ ವ್ಯವಸ್ಥಿತವಾಗಿ ರೂಪುಗೊಂಡಿದೆ.

ಓ! ಹತ್ತಿರದಲ್ಲೆ ಲೈಬ್ರರಿ. ಇನ್ನೇನು ಬೇಕು ಓದುವ ಚಟಕ್ಕೆ. ಸಿಕ್ಕ ಮ್ಯಾಗಜಿನ್ ತಡಕಾಡಿ ಕಳೆದೆವು ಒಂದು ಗಂಟೆ.

ಐದು ಮೂವತ್ತಕ್ಕೆ ಸಾಯಂಕಾಲ ನಡೆಯುವ “ಶೇಷ ಪೂಜೆಯ “ಚೀಟಿ ಪಡೆದು ಪುರೋಹಿತರ ಸಮಕ್ಷಮದಲ್ಲಿ ಪೂಜೆ ಮೂಗಿಸಿ” ಹತ್ತಿರದಲ್ಲೇ ಇರುವ. “ಆದಿ ಸುಬ್ರಹ್ಮಣ್ಯ”ಕ್ಕೆ ಹೋದೆವು. ಅಲ್ಲೂ ಕೆರೆಯ ನೀರು ಕಲುಶಿತವಾಗಿದೆ‌. ಪೂಜೆ ಮುಗಿಸಿ ಹತ್ತಿರಲ್ಲಿ ಇರುವ ಉದ್ಯಾನವನದಲ್ಲಿ ಸುತ್ತಾಡಿ ವಾಪಸ್ಸು ಬಂದಾಗ ದೇವಸ್ಥಾನದ ಆವರಣದಲ್ಲಿ ಮರಿ ಆನೆಯ ದಶ೯ನ.

image

ಅದಕ್ಕೂ ಕಮಷಿ೯ಯಲ್ ಮೈಂಡ. ಮಾವುತ ಪಳಗಿಸಿದ್ದಾನೆ‌. ದುಡ್ಡು ಕೊಟ್ಟರೆ ಮಾತ್ರ ಆಶಿವಾ೯ದ ಮಾಡುತ್ತದೆ‌. ತೆಂಗಿನ ಕಾಯಿ ಕೊಟ್ಟರೆ ಒಡೆದು ಒಂದು ಹೋಳು ಮಾತ್ರ ನಮಗೆ ಕೊಡುತ್ತದೆ ; ಇನ್ನೊಂದು ಮಾವುತನಿಗೆ. ಅಬ್ಬಾ ಅನಿಸಿತು‌. ಕಲಿಯುಗದ ಬುದ್ದಿ ಅದಕ್ಕೂ!

7-30ಕ್ಕೆ ಮಹಾ ಮಂಗಳಾರತಿ, ಹೂವಿನ ಪಲ್ಲಕ್ಕಿ ತೇರು, ಪರಮಾತ್ಮನಲ್ಲಿ ಪ್ರಾಥಿ೯ಸಿ ಹೊರ ಬಂದು ಊಟದ ಸರತಿಯಲ್ಲಿ ಸೇರಿಕೊಂಡೆವು.

ಪೇಟೆಯ ಬೀದಿ ಸುತ್ತಾಡಿ ಮೊದಲೆ ನಿಗದಿಪಡಿಸಿಕೊಂಡ ಕೆ.ಎಸ್. ಆರ್. ಟಿ.ಸಿ.ಯ 9-45ರ ಬಸ್ಸಿಗೆ (ಇಲ್ಲಿಂದ 7kmದೂರದಲ್ಲಿರುವ ರೈಲ್ವೆ ಮೂಲಕವೂ ಪ್ರಯಾಣಿಸಬಹುದು) 280km ದೂರದಲ್ಲಿರುವ ಬೆಂಗಳೂರು ತಲುಪಿ ಮನೆ ಸೇರಿದಾಗ ಬೆಳಗಿನ ನಾಲ್ಕು ಗಂಟೆ. ಮುದ್ದಾಗಿ ಸಾಕಿದ ನಾಲ್ಕು ಕಾಲಿನ ಮರಿ ಕಾಯುತ್ತ ಕೂತಿತ್ತು.

ಖಾಸಗಿ ವಾಹನದಲ್ಲಿ ಹೋಗಿದ್ದರೆ ಇಷ್ಟೊಂದು ಅನುಭವ ಸಿಗುತ್ತಿತ್ತೆ? ಪ್ರಯಾಣದ ಆಯಾಸದಲ್ಲೂ ನೆನಪುಗಳ ಮೆಲುಕು ಹಾಕುತ್ತ ಪ್ರಶಾಂತವಾದ ಮನಸ್ಸು ನಿದ್ದೆಗೆ ಜಾರಿದ್ದು ಗೊತ್ತಾಗಲಿಲ್ಲ.

ಮುಗಿಯಿತು.

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s