ಪಾರಾಯಣದಲ್ಲೊಂದು ಅರಿವು.

ಈ ಕವನ ಒಂದು ವಿಚಿತ್ರ ಸನ್ನಿವೇಶದಲ್ಲಿ ಬರೆದಿದ್ದು. ಇದು ಓದಲು ಸ್ವಲ್ಪ ಕಷ್ಟವಾದರು ಸತ್ಯ ಅಡಗಿದೆ‌.

ಒಮ್ಮೆ ಶ್ರೀ ಗುರು ದತ್ತಾತ್ರೇಯ “ಗುರು ಚರಿತ್ರೆ” ಸಪ್ತಾಹ ಮಾಡುವಾಗ ಅಂದರೆ ಅಋಂಡ ಗುರುಚರಿತ್ರೆ ಏಳು ದಿನಗಳಲ್ಲಿ ಒಂದೆ ವೇಳೆಯಲ್ಲಿ, ಒಂದೆ ರಾಗದಲ್ಲಿ ತಪ್ಪಾಗದಂತೆ, ಕುಳಿತಲ್ಲಿಂದ ಏಳದಂತೆ ಯಾರೊಂದಿಗೂ ಮಾತನಾಡದೆ ಪಾರಾಯಣ ಮಾಡಬೇಕು. ಹೀಗೆ ಹತ್ತು ನಿಯಮವಿದೆ. ಒಂದೊಂದು ದಿನಕ್ಕೆ ಇಷ್ಟೇ ಅಧ್ಯಾಯ ಪಠನ ಮಾಡುವ ಕ್ರಮ. ಶನಿವಾರ ಶುರುಮಾಡಿ ಶುಕ್ರವಾರ ಮುಗಿಸುವ ಕ್ರಮ. ( ಪುಸ್ತಕದಲ್ಲಿ ವಿವರಗಳಿವೆ).

ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಕ್ರಮವಾಗಿ ಯಾವ ಅಡೆತಡೆಯಿಲ್ಲದೆ ಓದಿ ಮುಗಿಸಿದೆ.

ಅಲ್ಲಿ ಒಂದು ಅಧ್ಯಾಯದಲ್ಲಿ ಸಂಸಾರದ ಬಗ್ಗೆ ಸಾರಾಂಶ. ಅದೆಷ್ಟು ಜನ ಪಾಲಿಸಲು ಸಾಧ್ಯ? ಹೀಗೆ ಹಲವಾರು ವಿಚಾರಗಳು ತಲೆ ಕೊರೆಯಲು ಶುರುವಾಗಿ ಅನೇಕ ಕವನ ಬರೆದೆ. ಅದರಲ್ಲಿ ಇದೂ ಒಂದು.

ನಿಜವಾಗಿ ವಿಚಾರ ಮಾಡಿದರೆ ನಮ್ಮ ಮಕ್ಕಳ ಮೇಲೆ ನಮಗೆ ಯಾವ ಹಕ್ಕೂ ಇಲ್ಲ‌. ಎಲ್ಲ ಅವರವರ ತೃಷೆಗೆ ಹುಟ್ಟಿ ಆಮೇಲೆ ಅಯ್ಯೋ ನನ್ನ ಮಕ್ಕಳು ಅನ್ನುವ ಮಮಕಾರ. ಹೀಗೆ ಯೋಚಿಸುತ್ತಿರುವುದು ತಪ್ಪೊ ಸರಿಯೋ ಗೊತ್ತಿಲ್ಲ. ನಿಮ್ಮ ಅನಿಸಿಕೆ ತಿಳಿಸಿ.

******************

ಕಿಮ್ಮತ್ತೆಲ್ಲಿದೆ ಜೀವಕೆ?

ಯೌವ್ವನದ ದಾಹ ಹೆಣೆಯುವುದು
ತೊಗಲು ಬೊಂಬೆಯ ಆಟ
ಸದರ ಸಿಕ್ಕಲ್ಲೆಲ್ಲ ತಕಧಿಮಿ ತಕಧಿಮಿ
ಕುಣಿಯುವವು ಕಾಲುಗಳು
ತಾಳಮೇಳವ ಮರೆತು ಇಷ್ಟಬಂದಂತೆ.

ಪರಿಣಾಮ ಹಿಡಿಂಬಿಯ ಅವತಾರ
ಬೀಬತ್ಸ ನರಕಯಾತನೆ ಕಿರುಚಾಟ
ತೊಗಲಿನ ತೃಷೆಗೆ ಹುಟ್ಟುವವು
ಮರಿ ಪಿಳ್ಳೆಗಳು ಸೇರುವವು ಕಸದ ತೊಟ್ಟಿ
ಬದುಕುಳಿಯುವವು ಬೀದಿ ನಾಯಿ ಬಿಟ್ಟಲ್ಲಿ.

ಹುಟ್ಟಿಸಿದ ಭಗವಂತ ಕೊಡಬೇಡ
ಅನ್ನುವ ಮಾತೇ ಇಲ್ಲ ಕುಣಿತಕೆ
ಗೂಳಿಡುವ ಹೂಂಕಾರದ ಉಸಿರಾಟಕೆ
ಮೈಯ್ಯ ನಜ್ಜು ಗುಜ್ಜು ಝೇಂಕರಿಸಿ
ಹದಗೆಡುವ ಧಮನಿಗಳ ಹೊಯ್ದಾಟ
ಲಗ್ಗೆ ಇಕ್ಕುವವು ಹೋಮ ಕುಂಡದಲ್ಲಿ.

ಬಪ್ಪರೆ ಬಲಿರೆ ನವಜಾತ ಶಿಶುವಿನ
ಆಕ್ರಂದನಕೆ ಖುಷಿಯ ಮೋಜು
ತಳ ಸೇರಿದ ಜ್ವಾಲೆ ಉಕ್ಕಿ ಹರಿಯುವುದು
ತಾ ಉಟ್ಟುಂಡು ಮುಗಿಸಿಕೊಂಡತೀಟೆಗೆ
ಮರೆಗುಳಿಯ ಚಿಲಕ ಜಡಿದು
ಬರಿ ಮೈಯ್ಯ ತಿಕ್ಕಿ ಹದಗೊಳಿಸಲು
ಮುಂದಾಗುವುದು ಹಡೆದವ್ವನ ಕೈ‌.

ಇದ್ದ ಗಭ೯ ಹಿಚುಕಲಾರದಾಗ ಅನಿವಾರ್ಯ
ತಿರಸ್ಕಾರದಲ್ಲಿ ಇರಲಿ ಬಿಡು
ಒದ್ದು ದೂಡಲಾದರೆ ಸೇರುವವು
ನೂರೆಂಟು ಮೋರಿಯ ಬಾಯಿ
ಅದರಲ್ಲಿ ಕಳಕೊಳ್ಳುವುದೇನು?

ಮತ್ತದೆ ತೊಗಲು ಬೊಂಬೆಗಳ ಕುಣಿತ
ಹೊತ್ತಲ್ಲದ ಹೊತ್ತಲ್ಲಿ ತಕಧಿಮಿ ತಕಧಿಮಿ
ಚಿಂತೆಯ ಕಂತೆ ಬಿಸಾಕು ಊರಾಚೆ
ಇದು ಮುಂದುವರಿದ ವಿಜ್ಞಾನದಲ್ಲಿನ ಸಮಾಜ
ನಿಭೀ೯ಡೆಯ ವೈಖರಿಗಳ ಮರುಹುಟ್ಟಿನ ಗುಟ್ಟು.

ಮರುಗುವುದು ಮನ ಜೀವದ ಗತಿ ಕಂಡು
ಎಲ್ಲುಂಟು ಪಾಪ ಪುಣ್ಯದ ಇರುವು?
ಪಿಂಡಗಳ ಕಳಚುವ ಕಲೆ ಕೈಚಾಚಿ ಕರೆಯುವುದು
ಕದ್ದು ಬಸಿರಾದ, ದಂಪತಿಗಳಿಗೆ ಬೇಡಾದ ಪಿಂಡ
ಕಾಂಚಾಣ ಮಾಡುವವರ ರುದ್ರ ನತ೯ನ
ಎಲ್ಲೆ ಮೀರಿದೆ ಎಲ್ಲೆಂದರಲ್ಲಿ ಗುಪ್ತವಾಗಿ.

24-2-2016 11.47pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s