ಆತ್ಮೀಯ(ಸಣ್ಣ ಕಥೆ)

ನನ್ನೊಳಗಿನ ಭಾವನೆಗಳನ್ನು ಹತ್ತಿಕ್ಕುವ ಕಲೆ ನನಗೆ ಗೊತ್ತಿಲ್ಲ ಕಣೊ. ಎಷ್ಟೂ ಅಂತ ನಿನ್ನ ನಿರೀಕ್ಷೆ ಮಾಡಲಿ ಹೇಳು. ನಾನೇನು ತಪ್ಪು ಮಾಡಿದೆ ಅಂತ ನನಗೀ ಶಿಕ್ಷೆ. ಸುಮ್ಮ ಸುಮ್ಮನೆ ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತೀಯಾ. ಎಷ್ಟು ಬೇಜಾರಾಗುತ್ತಿದೆ ಗೊತ್ತಾ. ನಾ ಹ್ಯಾಗೆ ನಿನಗೆ ಬಿಡಿಸಿ ಹೇಳಲಿ ಹೇಳು. ತುಂಬಾ ಕಷ್ಟ ಕಣೊ ನನಗೆ ನಿನ್ನ ಬಿಟ್ಟಿರೋದು. ಆದರೆ ನೀನು ನನ್ನ ಸಂಕಟ ಅಥ೯ನೇ ಮಾಡಿಕೊಳ್ಳೋದಿಲ್ಲ. ಪದೆ ಪದೆ ನೋವುಂಟು ಮಾಡುತ್ತಿದ್ದೀಯಾ. ನಿಜವಾಗಿಯೂ ನನಗೀಸಾರಿ ತುಂಬಾ ಬೇಜಾರಾಗಿದೆ. ನೀನು ಮಾತಾಡಿರೋದ

ರಾತ್ರಿಯ ನಿರವ ಮೌನದಲ್ಲಿ Terrace ಮೇಲೆ ಕುಳಿತು ಯೋಚಿಸುತ್ತಿದ್ದಾಳೆ. ಭಗವಂತ ಯಾಕೆ ನನ್ನ ಹುಟ್ಟಿಸಿದೆ ನೀನು. ನನಗೆ ನನ್ನವರು ಅಂತ ಯಾರೂ ಇಲ್ಲ ಈಗ. ಅದ್ಯಾವ ಜನ್ಮದ ಋಣಾನು ಬಂದವೊ ಏನೊ ದೀಪು ನನಗೆಸಿಕ್ಕಿದ. ಅವನನ್ನು ಅದೇಗೆ ನಾನು ಅಷ್ಟು ಹಚ್ಚಿಕೊಂಡೆ ಗೊತ್ತಾಗುತ್ತಿಲ್ಲ. ಅವನು ನನಗೆ ಏನಾಗ ಬೇಕು ಅದು ನನಗೆ ಅಥ೯ ಆಗುತ್ತಿಲ್ಲ. ಆದರೆ ತುಂಬಾ ಪ್ರೀತಿ ಇದೆ ನಮ್ಮಿಬ್ಬರ ಮದ್ಯೆ. ಆದರೆ ಅವನು ತುಂಬಾ hard person. ಒಂದಿನನು ಸರಿಯಾಗಿ ತನ್ನ ಮನದೊಳಗಿನ ಮಾತನ್ನು ಹೇಳೋದೆ ಇಲ್ಲ. ಎಲ್ಲ ಬೆಕ್ಕಿನ ತಲೆ ಮೇಲೆ ದೀಪ ಇಟ್ಟವರ ತರ ಮಾತಾಡೋದು.

ಏಯ್ ಯಾಕೊ ನೀ ಹೀಗೆ ಅಂದರೆ. ಹೂ ನಾನಿರೋದೆ ಹೀಗೆ. ಏನೀಗಾ ಅಂತ ನಗಿಸಿಬಿಡುತ್ತಾನೆ‌ ಯಾವಾಗ ನೋಡಿದರು ಕೀಟಲಿ ಬುದ್ದಿ. ಸದಾ ಹರಟತಾನೆ ಸಿಕ್ಕರೆ ಇಡೀ ದಿನ.

ಒಂದಿನ ಅಂತೂ ರಾತ್ರಿ ನಿದ್ದೆ ಮಾಡೋಕು ಬಿಟ್ಟಿಲ್ಲ. ಅದೇನೇನೊ ಸುದ್ದಿ ಸಮಾಚಾರ ಜೋಕು ಅದು ಇದು ಅಂತ ಎರಡು ಗಂಟೆ ಆಗೋಯಿತು. ಅದಕೆ ಒಂಥರಾ ಇಷ್ಟ ಆಗುತ್ತಾನೆ‌.

ಆದರೆ ಬರಿ ಮೊಂಡ. ತನ್ನದೆ ತನಗೆ. ಎಲ್ಲ ಅವನ ಮೂಗಿನ ನೇರಕ್ಕೆ ನಡಿಬೇಕು. ಆದರೆ ನಾನು ಎಷ್ಟು ಬಯ್ದರು ಕೋಪ ಮಾತ್ರ ಮಾಡಿಕೊಳ್ಳೋದಿಲ್ಲ‌. ಎಲ್ಲ ಅವಳಿಂದಲೆ. ಹೇಳ್ತೀನಿ ನೀ ಅವಳ ವಿಷಯ ಮಾತಾಡಬೇಡ ನನ್ನ ಹತ್ತಿರ. ನೋಡು ಹೀಗೆ ಮಾತಾಡುತ್ತ ನನ್ನ ಮೇಲೆ ಕೋಪ ಮಾಡಿಕೊಳ್ಳತೀಯ. Warning ಮಾಡಿದ್ರೂ ಕೇಳದೆ ಏನೇನೊ ಮಾತಾಡೋಕೆ ಬಂದಾ. ನಾನು ಮಾತಾಡಿದೆ. ಕೋಪ ಅದೇನಕ್ಕೊ ಗೊತ್ತಿಲ್ಲ. ಒಂದು ವಾರದಿಂದ ಮಾತಿಲ್ಲ, ಕಥೆಯಿಲ್ಲ.

ಏನು ಕೆಲಸ ಮಾಡೋದಕ್ಕೂ ಬೇಜಾರು. ಬರೆಯೋಕೆ ತಲೆನೆ ಓಡ್ತಿಲ್ಲ. ಓದಿದರೆ ತಲೆಗೆ ಹತ್ತೋಲ್ಲ. ನಾ ಎನು ಮಾಡಲಿ? ಒಮ್ಮೊಮ್ಮೆ ಅನಿಸುತ್ತೆ ಯಾಕಾದರು ಈ science subject ತೆಗೆದುಕೊಂಡೆನೊ. ಎಷ್ಟು portion ಇದೆ‌ ಓದೋಕೆ. Practical class ತಪ್ಪಿಸೊ ಹಾಗಿಲ್ಲ. ಛೆ! ನನ್ನ mind ಹೇಗೆ refresh ಮಾಡಿಕೊಳ್ಳಲಿ. ನಾನು ಹೀಗೆ ಇದ್ದರೆ ಖಂಡಿತ ಪಾಸಾಗೋದು doubt. ನನ್ನ life ನನ್ನ ಕೈಯಲ್ಲಿ ಇದೆ‌. Yes, ನಾನು ನನ್ನ ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು. ಚೆನ್ನಾಗಿ ಓದಬೇಕು. ಓದಿ ಒಂದೊಳ್ಳೆ job ಸೇರಿ ಚೆನ್ನಾಗಿ ಬದುಕ ಬೇಕು.

ಎಲ್ಲರಿಗು ಅವರಪ್ಪ ಅಮ್ಮ ಇರ್ತಾರೆ. ಆದರೆ ನನಗೆ ಈ ಹಾಸ್ಟೇಲೆ ಎಲ್ಲ. ಆ ವಾರ್ಡನ ನನ್ನ ಮೇಲೆ ಹದ್ದಿನ ಕಣ್ಣೆ ಇಟ್ಟಿದ್ದಾಳೆ. ಸರಿಯಾದ ಟೈಮಿಗೆ ಬರಲಿಲ್ಲ ಅಂದರೆ ಕಳಿಸಿಬಿಡ್ತೀನಿ ಮನೆಗೆ ಅಂತಾಳೆ‌. ಹುಂ ನನಗೆಲ್ಲಿದೆ ಮನೆ. ನನಗಿದೇ ಅರಮನೆ. ಇವರಾಕೊ ಅನ್ನವೇ ಮೃಷ್ಟಾನ್ನ. ಇಲ್ಲಿಯ ಹಾಸಿಗೆನೇ ಸುಪ್ಪತ್ತಿಗೆ. ಎಲ್ಲ ಒಗ್ಗಿ ಹೋಗಿದೆ ಎರಡು ವಷ೯ದಿಂದ.

ಊರಲ್ಲಿ ಚಿಕ್ಕಪ್ಪನ ಮನೆ ವಾಸಕ್ಕಿಂತ ಇದೆಷ್ಟೊ ವಾಸಿ. ಅಲ್ಲಿ ನನಗೆ ಬಂದಿರೊ ಕುತ್ತು ನಾ ಯಾರತ್ರನು ಹೇಳಿಕೊಳ್ಳುವ ಹಾಗಿರಲಿಲ್ಲ. ದಿನಾ ಪೀಡಿಸುತ್ತಿದ್ದ ಆ ಕೆಟ್ಟ ಮುಖದ ನೆನಪು ಇಲ್ಲಿಲ್ಲ ಈಗ‌. Mostly ನನ್ನ ಪರಿಸ್ಥಿತಿ ಅವನಿಗೆಲ್ಲ ಆಟ. ಶ್ರೀಮಂತಿಕೆಯ ಅಹಂಕಾರ. ಪಕ್ಕದ ಮನೆ ಹುಡುಗಿ ಅನ್ನೊ ಸಲಿಗೆ ಬೇರೆ. ಸದ್ಯ ಈ ಊರಿಗೆ ಬಂದು ಸೇರಿಕೊಂಡೆ. ಇಲ್ಲಿ ಕಾಲೇಜಲ್ಲಿ ಸೀಟು ಸಿಕ್ಕು ಬಚಾವಾದೆ. ಇನ್ನು ಚಿಕ್ಕಪ್ಪ. ಅವರ್ಯಾವತ್ತು ಅಪ್ಪ ಆಗೋಕೆ ಸಾಧ್ಯ ಇಲ್ಲ. ಯಾವಾಗಲಾದರು phone ಮಾಡಿ ಮಾತಾಡಿಸುತ್ತಾರೆ. ಅವರಿಗೆ ಅವರ ಮಕ್ಕಳದೆ ಚಿಂತೆ.

ಅಪ್ಪನ ದುಡ್ಡು ಬ್ಯಾಂಕಲ್ಲಿ ಇರೋದರಿಂದ ಜೀವನಕ್ಕೇನೂ ತೊಂದರೆ ಇಲ್ಲ. ಆದರೆ ಅಪ್ಪ ಅಮ್ಮನೆ ಇಲ್ಲದ ಮೇಲೆ ನಾ ಆ ದುಡ್ಡು ನೋಡಿ ಸಂತೋಷವಾಗಿ ಇರಲು ಸಾಧ್ಯನಾ. ಎಷ್ಟು ನೆನಪಾಗುತ್ತಾರೆ ಅಪ್ಪ. ಅದೆಷ್ಟು ಪ್ರೀತಿ ನನಗೆ ಅಪ್ಪನ ಕಂಡರೆ. ಅಮ್ಮನ ನೋಡಿದ ನೆನಪೇ ಇಲ್ಲ. ನಾನು ಚಿಕ್ಕವಳಿರುವಾಗಲೆ ತೀರಿಕೊಂಡರಂತೆ. ಅಮ್ಮನನ್ನು ನೋಡಿದ ನೆನಪೂ ಇಲ್ಲ. ಆದರೂ ಅಮ್ಮನೂ ಬೇಕು ಅನಿಸುತ್ತೆ. ಈಗ ಅವರಿಬ್ಬರ ನೆನಪಷ್ಟೆ. ಕಣ್ಣು ತುಂಬಿಕೊಳ್ಳುತ್ತದೆ ಅಪ್ಪಾ…..

ದೀಪು ನನ್ನ ಎಷ್ಟು ಸಮಾಧಾನ ಮಾಡುತ್ತಾನೆ; ನನ್ನ ದುಃಖ ಹೇಳಿಕೊಂಡಾಗ. ಮಾತಲ್ಲಿ ಮರೆಸಿಬಿಡುತ್ತಾನೆ.

ಆ ದಿನ ಇನ್ನೂ ನೆನಪಿದೆ. Bus stopಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಿದ್ದೆ. ಅವನು ಅಲ್ಲೆ ಪಕ್ಕದಲ್ಲಿ ನಿಂತ. ಛೆ, ಇವನ್ಯಾರು? ಹೀಗೆ ನಿಲ್ಲೋದಾ? ಆದರೆ ನನ್ನ ಮನಸ್ಸು ಹೇಳಿತು. ನಿನಗ್ಯಾಕೆ ಗಿಲ್ಟಿ. ಅವನೇನು ಮಾಡಿದಾ? ಏನ್ ನಿನ್ನದಾ ಬಸ್ ಸ್ಟಾಪ್. Stupid. ನನ್ನನ್ನೆ ನಾ ಬಯಿದುಕೊಂಡಿದ್ದೆ.

ಆಮೇಲೆ ” please madam ನಾ ನಿಮ್ಮ ಹತ್ತಿರ ಮಾತಾಡಬಹುದಾ. ” ” ಹೊ, ಇದ್ಯಾಕೊ ಪೀಟಿಕೆ ಶುರುವಾಯಿತಲ್ಲ. ಏನು ಹೇಳಿ.”
” ನೀವು Hostel ನಲ್ಲಿ ಇರೋದು ಗೊತ್ತು. ನಾನು ಅಲ್ಲೆ ಹತ್ತಿರದಲ್ಲಿ ಇರೋದು. ನಮ್ಮ officeನಲ್ಲಿ ಒಬ್ಬರು ಹೊಸದಾಗಿ lady transfer ಆಗಿ ಬಂದಿದ್ದಾರೆ. ಅವರಿಗೆ ಎಲ್ಲೂ accommodation ಸಿಕ್ಕಲಿಲ್ಲ. ಯಾರೊ ಹೇಳಿದರು ನೀವು Wardenಗೆ close ಅಂತೆ. ಸ್ವಲ್ಪ ದಿನದ ಮಟ್ಟಿಗೆ Warden ಗೆ ಹೇಳಿ ಉಳಿಯೋದಕ್ಕೆ arrange ಮಾಡೋಕೆ ಆಗುತ್ತಾ? I am Deepak.”

ಪರವಾಗಿಲ್ವೆ. ಪಾಕಡಾ ಇವನು. ಆಗಲೆ ನನ್ನ influence girl ಮಾಡಿದ್ದಾನೆ. ಸಣ್ಣದಾಗಿ ತನ್ನ ಬೆನ್ನು ತಾನೆ ತಟ್ಟಿಕೊಂಡು ” ಆಯ್ತು ಮಾತಾಡಿ ನೋಡುತ್ತೇನೆ. ಆದರೆ ಅವರು working ಏನು ಹೇಳುತ್ತಾರೊ ಗೊತ್ತಿಲ್ಲ. Just I will try. ನಿಮ್ಮ contact number ಕೊಡಿ.”

ಹೀಗೆ ಶುರುವಾದ ಪರಿಚಯ ಅವಳು ಒಂದು ವಾರ ಇದ್ದಿದ್ದು ಆಯಿತು, ಹೋಗಿದ್ದು ಆಯಿತು. ಆದರೆ ನಮ್ಮಿಬ್ಬರ ಪರಿಚಯ ಗೆಳೆತನದೊಂದಿಗೆ ಆತ್ಮೀಯತೆ ಮನೆ ಮಾಡಿತು. ಅವನು ಒಳ್ಳೆಯವನು, ತನ್ನ ಒಂಟಿತನ ಹಂಚಿಕೊಂಡವನು. ತನಗೆ ಬೇಕು. ಅಷ್ಟೆ ಅವಳೊಳಗಿನ ಭಾವನೆ. ಯಾವ ಅಥ೯ವನ್ನು ಹುಡುಕುವ ಗೋಜಿಗೆ ಇಬ್ಬರೂ ಹೋಗಿಲ್ಲ. ಏನಿದ್ದರು ಅವನಿಗೆ ಹೇಳೋದು. ತಿದ್ದಿ ಬುದ್ಧಿ ಹೇಳುವಷ್ಟು ದೊಡ್ಡವನು. ತಿಳುವಳಿಕೆ ಇದೆ. ಚೆನ್ನಾಗಿ ಓದಿದ್ದಾನೆ. ಸಂಪಾದನೆ ಇದೆ. ನಂಬಿಗೆಯ ಮನುಷ್ಯ ಅಷ್ಟೆ ಗೊತ್ತು. ಇದುವರೆ ಒಂದಿನನೂ ಕೆಟ್ಟದಾಗಿ ನಡಕೊಂಡಿಲ್ಲ. ಅವನ ಕಂಡರೆ ಗೌರವ, ಜೊತೆಗೆ ಸ್ವಲ್ಪ ಭಯ. ಇಷ್ಟು ಬಿಟ್ಟು ಅವನ ಬಗ್ಗೆ ನಾ ಯಾವತ್ತೂ ಕೇಳಲಿಲ್ಲ. ಅವನೂ ಹೇಳಿಕೊಳ್ಳಲಿಲ್ಲ. ಅದೆಲ್ಲ ತಿಳಿದುಕೊಂಡು ನನಗೇನಾಗಬೇಕು. ಅವನು ಮುಖ್ಯ. ಅವನ ಒಳ್ಳೆ ತನ ಗೌರವಿಸ್ತೀನಿ.

ಆದರೆ ಅವಳಲ್ಲಿ ಒಂದು ವಿಷಯದ ಬಗ್ಗೆ ಯಾವಾಗಲು ಕೊರಿತಾ ಇದೆ. ದೀಪು ಯಾಕೆ ಸದಾ ಅವಳ ಬಗ್ಗೆ ನನ್ನ ಹತ್ತಿರ ಕೊರಿತಾ ಇರುತ್ತಾನೆ. ಅವಳೊ ನಾನು ಮಾಡಿದ್ದು ಮಾ.. ದೊಡ್ಡ help ಅಂತ ತಿಳಿದು ಕೊಂಡಿದ್ದಾಳೆ‌. ಯಾವಾಗಲಾದರು ಹಾಸ್ಟೆಲ್ ಹತ್ತಿರ ಬರುತ್ತಾಳೆ. ಮಾತಾಡಿಕೊಂಡು ಹೋಗುತ್ತಾಳೆ. ಅವಳೂ ಓದಿದವಳು. ಕೆಲವು ವಿಷಯದ ಬಗ್ಗೆ ಚಚಿ೯ಸ್ಥೀವಿ. ಅವಳು ಒಬ್ಬಳೆ working women’s hostelನಲ್ಲಿ ಇರೋದರಿಂದ ಬೇಜಾರಾದಾಗ ಬರುತ್ತಾಳೆ. ನಾನೂ ಹೋಗುತ್ತೀನಿ. ಮಧ್ಯೆ ಇವನ್ಯಾಕೆ ಮೂಗು ತೂರಿಸುತ್ತಾನೊ ಅಥ೯ನೆ ಆಗುತ್ತಿಲ್ಲ. ಅವಳನ್ನು ಪ್ರೀತಿಸುತ್ತಿರಬಹುದಾ? ಅದೂ ಹೇಳೋದಿಲ್ಲ. ಅದಕೆ ಅವಳ ವಿಷಯ ಬಂದಾಗ ನಾವಿಬ್ಬರೂ ಕಿತ್ತಾಡೋದು. ಮಾತು ಬಿಡ್ತಾನೆ ನಾ information ಕೊಡದೆ ಇದ್ದರೆ. ಅಯ್ಯೋ, ದೇವರೆ; ತಲೆ ಎಲ್ಲ ಗಜಿಬಿಜಿ. ನಾನು ಚಿಕ್ಕವಳು. ಇವನ ಮನಸ್ಸಿನ ಭಾವನೆಗಳನ್ನು ನಾ ಹೇಗೆ ಅಥ೯ ಮಾಡಿಕೊಳ್ಳಲಿ.

ಸ್ವಲ್ಪ ದಿನ ಮಾತಾಡೋದೆ ಬೇಡ. ಮೌನವಾಗಿರಲಿ. ನಾನು ಓದಿನ ಕಡೆ ಗಮನ ಹರಿಸಬೇಕು. Examination ಹತ್ತಿರ ಬರುತ್ತಿದೆ. ಆದರು ಅವನು ಸಿಟ್ಟು ಮಾಡಿಕೊಂಡನಲ್ಲ; ಅದು ಬೇಜಾರಾಗುತ್ತಿದೆ‌. Phone ಮಾಡಿದರೆ ಅದೂ ತಗೋತಿಲ್ಲ. ಸಿಟ್ಟು ಬರುತ್ತಿದೆ‌ ಹೋಗೊ ಏನಾದರು ಮಾಡಿಕೊ. ನಿನಗೆ ಕೊಬ್ಬು ಕಣೊ. ಅದಕೆ ಹೀಗೆ ಆಡ್ತೀಯಾ. ಮಾಡ್ತೀನಿ ಇರು. ಹೇಗಿದ್ದರು ಒಂದಿನ ಮಾತಾಡಿಸಿಕೊಂಡು ಬರ್ತೀಯಾ. “ಏನಕ್ಕಾ, ಹೇಗಿದ್ದಿಯಾ?” ಆಕ್ಕ ಅಂತೆ ಇವನಜ್ಜಿ: ರೇಗಿಸೋದು ಬೇರೆ ಮಾತು ಬಿಟ್ಟುಕೊಂಡು. ಸುಮ್ ಸುಮ್ಮನೆ ಸಿಟ್ಟು ಮಾಡ್ತೀಯ ಅಲ್ಲ, ಬಾ ಈ ಸಾರಿ ಮಾತಾಡಿಸಿಕೊಂಡು. ಹೇಂಗೆ ಆಟ ಆಡಿಸ್ತೀನಿ ನೋಡ್ತೀರು.

ಮನದಲ್ಲಿ ಮಾತಾಡಿಕೊಂಡು ಮಲಗಲು ಹೋಗುತ್ತಾಳೆ ತನ್ನ Hostel ಅರಮನೆಯೊಳಗೆ. Warden ಎದುರಿಗೆ ಸಿಗುತ್ತಾಳೆ.

“ಯಾಕಮ್ಮ. ಇನ್ನು Terrace ಮೇಲೆ ಅದೇನು ಯೋಚನೆ ಮಾಡುತ್ತ ಕುಳಿತಿದ್ದೆ‌. ರಾತ್ರಿ ಹನ್ನೊಂದು ಗಂಟೆ ಆಯಿತು. ಹೋಗಿ ಮಲಗು. ಸುಮ್ಮನೆ ಚಿಂತೆ ಮಾಡಬೇಡ ಈ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಚೆನ್ನಾಗಿ ನಿದ್ದೆ ಊಟ ಮಾಡಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬೇಕು. ಇನ್ನೇನು ನಾನೆ ಮೇಲೆ ಬರೋಣ ಅಂದುಕೊಂಡಿದ್ದೆ. ಅಷ್ಟರಲ್ಲಿ ನೀನೆ ಬಂದೆ.” ಅವಳನ್ನು ತಬ್ಬಿ ಮುತ್ತು ಕೊಡುತ್ತಾಳೆ. ಮಲಗು ನಾ ಗೇಟಿಗೆ ಬೀಗ ಹಾಕಿ ಬರುತ್ತೇನೆ.

ಅಳು ಉಕ್ಕಿ ಬರುತ್ತಿದೆ. ಅಮ್ಮ ಅಂತ ಅವಳ ಕಾಲ ಮೇಲೆ ತಲೆ ಇಟ್ಟು ಜೋರಾಗಿ ಅತ್ತು ಬಿಡಬೇಕು ಅನಿಸುತ್ತಿದೆ. ಅವಳು ತನ್ನ ಮಗಳ ತರ ಪ್ರೀತಿಯಿಂದ ಕಾಣುತ್ತಾಳೆ. ನನ್ನ ವಿಷಯ ಗೊತ್ತಾದ ಮೇಲೆ ಎಲ್ಲರಿಗಿಂತ ನನ್ನ ಕಂಡರೆ ಇಷ್ಟ. ನನ್ನ ಬಗ್ಗೆ ಕಾಳಜಿ ಜಾಸ್ತಿ. ಅದು ಹಾಗೆ; ಯಾರು ನಮ್ಮನ್ನು ಪ್ರೀತಿಯಿಂದ ಕಾಣುತ್ತಾರೊ ಅವರಲ್ಲಿ ಎಲ್ಲ ಹೇಳಿಕೊಂಡು ಅತ್ತು ಸಮಾಧಾನ ಮೌಡಿಕೊಳ್ಳಬೇಕು ಅನಿಸುತ್ತದೆ. ಎಷ್ಟು ದಿನ ನಾನು ಅವಳ ಜೊತೆ ಹೀಗೆ ವತಿ೯ಸಿಲ್ಲ. ಆಗೆಲ್ಲ ಮಗು ಸಮಾಧಾನ ಮಾಡಿಕೊ. ಅಳಬೇಡ. ನೋಡು ನನಗೆ ಯಾರಿದ್ದಾರೆ. ಗಂಡ ಇಲ್ಲ, ಮಕ್ಕಳಿಲ್ಲ. ಈ Hostel ನನ್ನ ಮನೆ. ನಿಮ್ಮನ್ನೆಲ್ಲ ನನ್ನ ಮಕ್ಕಳು ಅಂತ ತಿಳಿದುಕೊಂಡಿದ್ದೇನೆ. ನಿನಗೆ ಮುಂದೆ ಭವಿಷ್ಯ ಇದೆ. ಓದಿ ಸಂಪಾದನೆ ಮಾಡು. ಒಳ್ಳೆ ಹುಡುಗನನ್ನು ನೋಡಿ ಮದುವೆ ಮಾಡಿಕೊ. “ಹುಟ್ಟಿಸಿದ ದೇವರು ಹುಲ್ಲು ಮೇಯಿಸೋದಿಲ್ಲ,” ಏನೆಲ್ಲ ಹೇಳಿ ನನ್ನಲ್ಲಿ ಧೈರ್ಯ ತುಂಬುತ್ತಾಳೆ‌.

ಇದೆ ಯೋಚಿನೆಯಲ್ಲಿ ನಿದ್ದೆಗೆ ಜಾರಿತ್ತು ಬಸವಳಿದ ದೇಹ.

ಕಾಲೇಜಿನ ಮೆಟ್ಟಿಲು ಏರುತ್ತಿರುವಾಗ ರಿಂಗಣಿಸುತ್ತಿದೆ ಮೊಬೈಲು.
“Hi, how r u” ಅದೇ ದೀಪು.

ಮನಸಲ್ಲಿರೊ ಕೋಪ ಜರ್ರನೆ ಇಳಿದೋಯಿತು. “ಏಯ್ ಏಲ್ಲಿ ಹೋಗಿದ್ಯೊ ಇಷ್ಟು ದಿನ. ಮಾತಾಡದೆ ಯಾಕೊ ಸತಾಯಿಸ್ತೀಯಾ? ಕೊಬ್ಬು ನಿನಗೆ.”

“ಆಯ್ತಾ, ಇನ್ನೇನಾದ್ರೂ ಇದೆಯಾ?”

“ಇಲ್ಲ ಹೇಳು ಏನಾಗಿತ್ತು? ಹುಷಾರಿರಲಿಲ್ವಾ.”

“ಏ, ಮಣ್ಣಂಗಟ್ಟಿನೂ ಇಲ್ಲ. Friends ಜೊತೆ ಊರು ಸುತ್ತೋಕೆ ಹೋಗಿದ್ದೆ.”

“ಏಯ್ ಕೋತಿ ಹೇಳಿ ಹೋಗಬಾರದಾ? ನನಗೆ ಹೇಗೆ ಗೊತ್ತಾಗುತ್ತೆ.”

“ಗೊತ್ತಾಗೋದು ಬೇಡ‌. ಅದಕೆ ಹೇಳಲಿಲ್ಲ. ಏನೀಗಾ?”

“ಅಯ್ಯೋ ಹೋಗೊ. ನನ್ನ ಜೊತೆಗೆ secret. ಹಾ, ಮಾತಾಡೋಲ್ಲ ಹೋಗು.”

“ಮಾತಾಡದೇ ಇದ್ದರೆ ಕತ್ತೆ ಬಾಲ, ಕುದುರೆ ಜುಟ್ಟು.”

ಅಬ್ಬಾ, ನಾನೆ ಸೋಲಬೇಕು ಯಾವಾಗಲೂ ಅವನ ತಪ್ಪಿದ್ದರೂ. “ಇಲ್ಲ ಕಣೊ ಮಾತಾಡುತ್ತೀನಿ.”

“ಹಾ ಹಾಂಗ ಬಾ ದಾರಿಗೆ. ಸರಿ ಹೇಗಿದ್ದೀಯಾ? Sorry ಕಣೆ. ನಿಂಗೆ ಬೇಜಾರ ಮಾಡಿದೆ.”

“OK OK.” ಇಬ್ಬರಲ್ಲು compromise mind.

” College ಬಿಟ್ಟ ಮೇಲೆ ಸಿಗು ಮಾತಾಡೋದಿದೆ.”

ಸಾಯಂಕಾಲ ಆರು ಗಂಟೆ. Warden ಬಾಗಿಲಲ್ಲೇ ಖುಚಿ೯ ಮೇಲೆ ಕೂತಿದ್ದಾಳೆ. ಇವಳು college ಮುಗಿಸಿ ಬಂದವಳೆ ready ಆಗಿ ಹೊರಟಿದ್ದಾಳೆ ಲಗುಬಗೆಯಿಂದ.

“ಏನಮ್ಮ ಯಾವ ಕಡೆ ಹೊರಟೆ?”

“ಅದೆ ಅಮ್ಮ ದೀಪು ಸಾಯಂಕಾಲ ಸಿಗು ಮಾತಾಡೋದಿದೆ ಅಂತ call ಮಾಡಿದ್ದ ಬೆಳಿಗ್ಗೆ. ಅದಕೆ ಹೊರಟಿದಿನಿ. ”

“ಹೂ. ಆಯಿತು. ಎಂಟು ಗಂಟೆ ಒಳಗಡೆ ಇಲ್ಲಿರಬೇಕು. ಹುಷಾರು.”

“ಆಯ್ತಮ್ಮ. ಬೇಗ ಬರ್ತೀನಿ.”

Hotel ಮೂಲೆಯ ಆಸನದಲ್ಲಿ ಅವನು ಕಾಯುತ್ತ ಕುಳಿತಿದ್ದಾನೆ‌. ಬೆರಳುಗಳು ನೀರಿನ glass ಮೇಲೆ ಆಡುತ್ತಿದೆ. ತಲೆ ತುಂಬ ಯೋಚನೆ. ಹೇಳಿದರೆ ಇವಳ reaction ಹೇಗಿರುತ್ತೊ ಏನೊ. ಹೇಳದೆ ಇರೊ ಹಾಗಿಲ್ಲ. ಹಾಗಿದೆ ಸಂದಭ೯. Let’s see.

“ಏನೊ ಬಹಳ ಹೊತ್ತಾಯಿತಾ ಬಂದು? ”

“ಇಲ್ಲ. 10 minutes ಆಯಿತು. ಏನ್ ತಗೋತಿಯಾ? ಇವತ್ತು ನಾನು ನಿನಗೆ sweet ಕೊಡಿಸಬೇಕು. ಬೇಡ ಹೇಳಬೇಡಾ.”

“ಅಯ್ಯೋ, ಯಾಕೊ ಬೇಡ ಹೇಳಲಿ. ನನಗೆ sweet ಇಷ್ಟ ಗೊತ್ತಿಲ್ವಾ. ಇವತ್ತು ಹೊಟ್ಟೆ ತುಂಬಾ ತಿಂದೇ ಹೋಗೋದು. ಆ hostel ಊಟ ತಿಂದು ಬಾಯೆಲ್ಲ ಮರಗೆಟ್ಟು ಹೋಗಿದೆ.”

“ಪರವಾಗಿಲ್ವೆ. ನಾ ಏನೊ ಟೀ ಸಾಕು ಹೇಳ್ತೀಯ ಅಂದರೆ; ನನ್ನ ಜೇಬು ಖಾಲಿ ಮಾಡೊ plan ಮಾಡಿಕೊಂಡೇ ಬಂದಿದಿಯಾ ಅಂತಾಯಿತು.”

“ಏಯ್ ಹೋಗೊ. ನೀ ಇಷ್ಟು ದಿನ ಸತಾಯಿಸಿದಕ್ಕೆ punishment. ಅದೇನೊ ಮಾತಾಡಬೇಕು ಅಂದ್ಯಲ್ಲ. ಏನು.”

“First ಖಾನಾ. ಆಮೇಲೆ ಮಾತು. ಅದೇನು ಅಂತ ನೀನೆ order ಮಾಡು.”

ಸ್ವಲ್ಪ ದೂರದಲ್ಲಿ ದೇವಸ್ಥಾನದ ಗಂಟಾ ನಾದ ಮೊಳಗುತ್ತಿತ್ತು. ಇಬ್ಬರೂ ದೇವರ ದಶ೯ನ ಪಡೆದು ಅಲ್ಲೆ ಮೆಟ್ಟಿಲ ಮೇಲೆ ಕುಳಿತುಕೊಳ್ಳುತ್ತಾರೆ.

“ಸವಿತಾ, ನನಗೆ office through USA ಗೆ ಹೋಗೊ chance ಸಿಕ್ಕಿದೆ. ನಾ ಹೋಗಬೇಕು ಅಂತ ತೀಮಾ೯ನಿಸಿದ್ದೇನೆ. ನೀ ಏನು ಹೇಳುತ್ತೀಯಾ?”

“Wow super. ಹೋಗು ಮತ್ತೆ. ಅದಕ್ಯಾಕೆ ನನ್ನ ಅಭಿಪ್ರಾಯ. ನಿನ್ನ career ನೀನು ನೋಡಿಕೊಳ್ಳೋದರಲ್ಲಿ ಮೀನ ಮೇಷ ಯಾಕೆ. Go head.”

” ಏಯ್, ಹಾಗಾದರೆ ನಾ ಹೋಗೋದು ಬೇಜಾರಿಲ್ವಾ? Thanks God. ಎಲ್ಲಿ ಬೇಡಾ ಅಂತ ಕೊರಿತಿಯೊ ಅಂದುಕೊಂಡಿದ್ದೆ. ಪರವಾಗಿಲ್ವೆ. ನೀನು ಗಟ್ಟಿಗಿತ್ತಿ.”

“ಹೊಯ್, hello ಹಾಂಗಂತ ನಾವಿಬ್ಬರೂ ದೂರ ಆಗಬೇಕಂತಲ್ಲ. ನೀನು ನನ್ನಿಂದ ದೂರ ಆಗೋಲ್ಲ ಅನ್ನೊ ಬರವಸೆ. ಅದಕೆ ಹೋಗು ಅಂದೆ ಅಷ್ಟೆ. ಆದರೆ ಅವಳ ಬಗ್ಗೆ ಯಾವಾಗಲೂ ವಿಚಾರಿಸ್ತಾ ಇರ್ತೀಯಲ್ಲ ಯಾಕೆ. ಏನಾದರೂ ವಿಷಯ…‌.”

“ಆಯಿತು. ನಾನೂ ಅದೆ ಹೇಳಬೇಕು ಅಂದುಕೊಂಡಿದ್ದೆ. ನೋಡು ಸವಿತಾ ನಮಗೆ ಜೀವನದಲ್ಲಿ ಸಾಕಷ್ಟು ಜನ ಒಂದಲ್ಲಾ ಒಂದು ರೀತಿಯಲ್ಲಿ ಪರಿಚಯ ಆಗುತ್ತಾರೆ. ಆದರೆ ಎಲ್ಲರೂ ಪರಿಚಯದವರಲ್ಲ. ನಮ್ಮ ಹೃದಯಕ್ಕೆ ಯಾರು ಹತ್ತಿರವಾಗಿ ಇರುತ್ತಾರೆ, ಯಾರು ನಮಗೆ ಇಷ್ಟ ಆಗುತ್ತಾರೆ. ಅವರನ್ನು ಮಾತ್ರ ನಾನು ಪರಿಚಯದವರು ಅಂತ ಹೇಳೋದು. She is stranger to me. ಅಷ್ಟೆ. ನಾನು ಯಾಕೆ ಯಾವಾಗಲೂ ಅವಳ ವಿಷಯ ಕೇಳುತ್ತಿದ್ದೆ ಅಂದರೆ ನಿನ್ನ ಮನಸ್ಸು ತಿಳಿದುಕೊಳ್ಳಬೇಕಿತ್ತು. ಅದು ಅಥ೯ ಆಯಿತು. ಇನ್ಯಾವತ್ತು ಅವಳ ಬಗ್ಗೆ ಮಾತಾಡೋದಿಲ್ಲ. Promise. ನಿನ್ನೊಂದಿಗೆ ಮಾತಾಡಲು ಹೇಗಿದ್ರೂ mobile, WhatsApp ಇದ್ದೇ ಇದೆ. ಮಾತಾಡುತ್ತಿರಬಹುದು. ಬಂದಾಗ ಭೇಟಿ ಆಗುತ್ತೇನೆ.”

“OK. Done. ನೋಡು ದೀಪು ನಾನು ಚೆನ್ನಾಗಿ ಓದಿ ನಿನ್ನ ಹಾಗೆ ಒಳ್ಳೆ job ಗೆ ಸೇರಬೇಕು. ಅದೆ ನನ್ನ ಗುರಿ. ನಿನ್ನ ಸಪೋರ್ಟ ಯಾವಾಗಲು ಬೇಕು. ಹೀಗೆ ಮಾತಾಡದೆ ಇರಬೇಡ ಕಣೊ. ಬೇಜಾರಾಗುತ್ತೆ. ಇನ್ನೇನು ನಿನ್ನಿಂದ ಬಯಸೋಲ್ಲ ನಾನು. ಯಾವಾಗಲು ನಿನಗೆ ಒಳ್ಳೆದನ್ನೆ ಬಯಸುತ್ತೇನೆ. ನೀನು ನನ್ನ ಆತ್ಮೀಯ ಗೆಳೆಯ. ನಾನು ಒಂಟಿ ಅನ್ನೋದನ್ನು ಮರೆಸಿದವನು ನೀನು. Life ನಲ್ಲಿ ಯಾವತ್ತೂ ನಿನ್ನ ಕಳೆದುಕೊಳ್ಳಲು ಇಷ್ಟ ಪಡೋದಿಲ್ಲ. ನೀನು ನನ್ನ ಬಗ್ಗೆ ಯೋಚನೆ ಮಾಡಬೇಡ. ನಾನು ಆರಾಮಾಗಿ ಇರುತ್ತೇನೆ ಇಲ್ಲಿ. ಬಾ ಹೋಗೋಣ. Late ಆದರೆ ಅಮ್ಮ ಬಯ್ಯುತ್ತಾಳೆ.”

ಇವನು ಮೂಕ ವಿಸ್ಮಿತನಾಗಿ ಅವಳನ್ನೆ ನೋಡುತ್ತಿದ್ದಾನೆ. ಖುಷಿ ಆಗುತ್ತದೆ. ಅವಳ ಯೋಚನಾ ಲಹರಿಗೆ. ಇವಳೆದುರಿಗೆ ನಾನು ಚಿಕ್ಕವನಾಗಿ ಬಿಟ್ಟೆ. ಇನ್ನೆಷ್ಟು ಗಲಾಟೆ ಮಾಡುತ್ತಾಳೊ ಅಂದುಕೊಂಡಿದ್ದೆ. ನಿಷ್ಕಲ್ಮಶ ಮನಸ್ಸಿನವಳು. Good.

ರಾತ್ರಿಯ ನಿರವತೆಯಲ್ಲಿ ಇಬ್ಬರ ಮನಸ್ಸು ಹಗುರಾಗಿದೆ ಬರುವ ಕಾಲನ ನಿರೀಕ್ಷೆಯಲ್ಲಿ ಗುರಿ ತಲುಪುವ ಛಲದಲ್ಲಿ!
20-3-2016. 4.18pm
(Published in Sampada net.)

,

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s