ಬದುಕಿಗೊಂದು ಅರಿವು

image

ಮಾತು ಅನ್ನುವುದು ಕೆಲವೊಮ್ಮೆ ನಮ್ಮ ಅತ್ಯಂತ ಹತ್ತಿರ ದವರಿಂದ ಹೃದಯಕ್ಕೆ ನೋವು ಕೊಟ್ಟರೂ ಆ ಕ್ಷಣ ಅದು ಸಹಿಸಲು ಸಾಧ್ಯವಾಗದೆ ಇದ್ದರೂ ಮನಸ್ಸಿನ ಸಂಯಮ ಕಳೆದುಕೊಳ್ಳದೆ ಆ ಒಂದು ಮಾತನ್ನೆ challenge ಆಗಿ ಸ್ವೀಕರಿಸಿ ಮುನ್ನಡೆಯುವ ಗಟ್ಟಿ ಮನಸ್ಸು ಮಾಡಿದಲ್ಲಿ ಖಂಡಿತ ಸಫಲವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದಕ್ಕೆ ಅತ್ಯಂತ ತಾಳ್ಮೆಯೂ ಅಗತ್ಯ.

ಆದರೆ ಯಾರೊ ಆಡಿದ ಮಾತು ಮನಸ್ಸನ್ನು ಸ್ವಲ್ಪ ದಿನ ಕದಡಬಹುದು. ಹಾಗೆ ತನ್ನಷ್ಟಕ್ಕೆ ಇನ್ನಾವುದೊ ಕೆಲಸ, ಯೋಚನೆಯಲ್ಲಿ ಸೇರಿ ಮನಸ್ಸು ಕ್ರಮೇಣ ಮರೆತುಬಿಡುತ್ತದೆ. ಅದರೆ ಆಪ್ತರಿಂದ ಉದುರಿದ ಕೆಲವು ಮಾತು ಯಾವತ್ತೂ ಮರೆಯೋಕೆ ಆಗೋದಿಲ್ಲ. ಜೀವನ ಪಯ೯೦ತ ಮರ ಕುಟುಕ ಹಕ್ಕಿ ಕಾಂಡ ಕುಕ್ಕುತ್ತಿರುತ್ತಲ್ಲ ಹಾಗೆ ಎದೆಯನ್ನು ಕುಕ್ಕುತ್ತಲೇ ಇರುತ್ತದೆ. ಇದೂ ಕೂಡ ಕ್ರಮೇಣ ಮನಸ್ಸಿನಿಂದ ದೂರ ಹೋಗುತ್ತಿದ್ದರು ಪೂತಿ೯ ಮರೆಯೋದಕ್ಕೆ ಸಾಧ್ಯವೇ ಇಲ್ಲ. ಯಾಕೆ ಹೀಗೆ? ಯಾಕೆ ಎಲ್ಲರಂತೆ ಇವರಂಥವರ ಮಾತು ಮರೆಯೋಕೆ ಆಗೋದಿಲ್ಲ? ಯಾಕೆ ಮನಸ್ಸು ಈ ಮಾತಿಗೆ ಇಷ್ಟೊಂದು ಪ್ರಾಶಸ್ಥ ಕೊಡುತ್ತದೆ? ಏ….ಬಿಟ್ಟಾಕು. ನಮ್ಮಲ್ಲೊಂದು ಗಾದೆ ಇದೆ. “ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?” ಆ ರೀತಿ ಕೆಲವರ ಮಾತುಗಳನ್ನು ಮರೆಯೋಕೆ ಯಾಕೆ ಆಗೋದಿಲ್ಲ?

ಇದೊಂದು ಬಿಡಿಸಲಾರದ ಒಗಟಾದರೂ ಇದರಲ್ಲಿ ಒಂದು ಸತ್ಯ ಇದೆ. ಅದೇನೆಂದರೆ; ನಾವು ಆ ವ್ಯಕ್ತಿಯನ್ನು ಮನದಾಳದಿಂದ ಸಂಬಂಧ ಬೆಳೆಸಿರುತ್ತೇವೆ. ಅದು ಯಾವ ರೀತಿಯ ಸಂಬಂಧ ಬೇಕಾದರು ಆಗಿರಬಹುದು. ಉದಾ; ತಂದೆ ತಾಯಿ, ಅಕ್ಕ ತಂಗಿ ಹೀಗೆ ಮುಂತಾದವು.

ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಅದೆಷ್ಟು ಜನರ ಪರಿಚಯ ಒಡನಾಟದಲ್ಲಿ ಬದುಕು ಸಾಗಿಸೋದಿಲ್ಲ? ಎಲ್ಲರು ಪರಿಚಯದವರಾಗಿರೋದಿಲ್ಲ. ಪರಿಚಯ ಈ ಸಂಬಂಧವೇಪ೯ಡುವಂತೆ ಮಾಡುತ್ತದೆ‌. ಆದರೆ ಎಷ್ಟೇ ದಿವಸ ಅವರ ಒಡನಾಟದಲ್ಲಿ ನಾವಿದ್ದರೂ ಎಲ್ಲರು ಸಂಬಂಧದವರಾಗೋದಿಲ್ಲ. ಯಾಕೆ? ಅಪರಿಚತರಂತೆ ಭಾಸವಾಗುತ್ತಾರೆ. ಪ್ರತೀ ಸಾರಿ ಮಾತನಾಡುವಾಗಲೂ ಯಾಕೀಗೆ? ಮನಸ್ಸು ಅವರ ನಡೆ, ನುಡಿ, ಹಾವ, ಭಾವ, ವಿಚಾರ ಯಾವುದೊ ಒಂದು ಸ್ವೀಕರಿಸಲು ಒಪ್ಪೋದಿಲ್ಲ. ಆತ್ಮೀಯತೆ ಬೆಳೆಯೋದಿಲ್ಲ. ವಷಾ೯ನುಗಟ್ಟಲೆ ಒಡನಾಟದಲ್ಲಿದ್ದರು ಮನಸ್ಪೂರಕವಾಗಿ ಮಾತನಾಡಲು ಸಾಧ್ಯವೂ ಆಗೋದಿಲ್ಲ. ಆದರೂ ಅವರ ಒಡನಾಟದಲ್ಲಿ ಇರುತ್ತೇವೆ. ನಿಜವಾಗಿ ಅವರಿಂದ ಯಾವ ಪ್ರಯೋಜನವೂ ಇರೋದಿಲ್ಲ. ಮರೆಯೋಕೂ ಅಗೋದಿಲ್ಲ. ಮನಸ್ಸಿನಿಂದ ಕಿತ್ತಾಕೋಕು ಆಗೋದಿಲ್ಲ. ದೀರ್ಘ ಕಾಲ ಒಡನಾಟದಿಂದ ದೂರ ಆದರು ಮನಸ್ಸಿಗೆ ಯಾವ ಬೇಸರವೂ ಆಗೋದಿಲ್ಲ. ಇಂಥವರು ಒಂದು ತರ ಮನೆಯಲ್ಲಿ ಕೆಲವು ಸಾಮಾನುಗಳಿರುತ್ತವೆ. ಅವುಗಳನ್ನು ವಷ೯ಕ್ಕೆ ಒಂದು ಸಾರಿನೂ ಉಪಯೋಗಿಸುವುದಿಲ್ಲ. ಆದರೆ ಅದನ್ನು ಒಗೆಯೋಕೂ ಮನಸ್ಸು ಬರೋದಿಲ್ಲ. ಮನೆಯ ಅಟ್ಟದಲ್ಲೊ, ಸಜ್ಜಾದಲ್ಲೊ ಪೇರಿಸಿ ಇಟ್ಟಿರುತ್ತೇವೆ. ಹಾಗೆ ಇಂಥವರು. ಉಪಯೋಗಕ್ಕೆ ಬಾರದ ಸಾಮಾನುಗಳಂತೆ.

ಇಂತವರು ಆಗಾಗ ನಮ್ಮ ಒಡನಾಟಕ್ಕೆ ಬರುತ್ತಾರೆ. ಯಾಕಾಗಿ ಗೊತ್ತಾ? ನಮ್ಮ ಕಷ್ಟ ಸುಃಖ ವಿಚಾರಿಸೋಕೆ ಅಲ್ಲ. ಅಥವಾ ಕಷ್ಟದಲ್ಲಿ ಇದ್ದರೆ ಸಹಾಯ ಮಾಡೋಕೂ ಅಲ್ಲ. ಹೇಗಿದ್ದೀವಿ ಅಂತ ತಿಳಿದುಕೊಳ್ಳಲು ಅಲ್ಲ. ಅವರಿಗೆ ಮುಖ್ಯವಾಗಿ ನಮ್ಮ ವಯಕ್ತಿಕ ಜೀವನದ ಬಗ್ಗೆ ತಿಳಿಯುವ ಆಸಕ್ತಿ. ಹೇಗಿದ್ದರು ಪರಿಚಯಸ್ಥರಲ್ಲವೆ? ಹೀಗೆ ಮಾತಾಡಿಸಿಕೊಂಡು ಹೋಗೋಣ ಅಂತ ಬಂದೆ ಅನ್ನೋ topic ಶುರುವಾಗಿ ವಯಕ್ತಿಕ ಜೀವನದ ವಿಷಯಕ್ಕೆ ಬಂದು ನಿಲ್ಲುತ್ತಾರೆ.

ಇಂಥವರ ಸಹವಾಸ ಬೇಕಾ? ಒಂದೇ ಒಂದು ಸಾರಿ ನಿಮಗೆ ನೀವು ಪ್ರಶ್ನೆ ಹಾಕಿಕೊಳ್ಳಿ. ನಿಜಕ್ಕೂ ಇಂಥವರಿಂದ ನಮ್ಮ ಸಮಯ ಹಾಳು. ನೆಮ್ಮದಿ ಹಾಳು‌. ಕೆಲವೊಂದು ಬಾರಿ ಈ ಪ್ರಯೋಜನವಿಲ್ಲದ ವ್ಯಕ್ತಿಯ ಸಂಪಕ೯ಕ್ಕೆ ಬರುವ ಮನಸ್ಸು ಒಮ್ಮೊಮ್ಮೆ ಮೂಡೋದೂ ಇದೆ. ಅದು ನಮ್ಮ ಒಂಟಿ ತನ ಕಾಡಿದಾಗ. ಇದೆ ಮೂಡಲ್ಲಿ ಫೋನ ನಂಬರಿದ್ದರೆ ಫೋನು ಮಾಡೋದೂ ಇದೆ. ಆಮೇಲೆ ಮನಸ್ಸು ಸಮಾಧಾನಗೊಂಡ ಮೇಲೆ ಛೆ…‌ನಾ ಯಾಕೆ ಫೋನ್ ಮಾಡಿದೆ. ಯಾಕೆ ಮಾತಾಡಿದೆ. ಫೋನ ಮಾಡಬಾರದಿತ್ತು. ಹೀಗೆ ಮನಸ್ಸು ವ್ಯಥೆ ಪಡುತ್ತದೆ. ಮನಸ್ಸು ಚುಚ್ಚುತ್ತದೆ. ನಿನಗೆ ಬುದ್ದಿ ಇದೆಯಾ?ತೆಪ್ಪಗಿರೋಕೇನಾಗಿತ್ತು?

ಇಂಥವರ ಸಂಪರ್ಕದಿಂದ ದೂರವಿರಲು ಒಂದೇ ಒಂದು ಉಪಾಯ ಅವರ ಸಂಪಕ೯ದ ಕೊಂಡಿ ಮೊದಲು ಕಿತ್ತಾಕಬೇಕು. ಇದರಥ೯ ಅವರೊಂದಿಗೆ ಮಾತು ಬಿಡೋದು ಅಂತ ಅಲ್ಲ. ನಮ್ಮ ಹತ್ತಿರ ಇರುವ ಅವರ ವಿಳಾಸ, ಫೋನ ನಂಬರ ಇತ್ಯಾದಿ ನಾಶ ಮಾಡೋದು. ಆಗ ಎಲ್ಲಾದರೂ ಒಂದು ದಿನ ನಮ್ಮ ಮನಸ್ಸು ದುಬ೯ಲವಾದಾಗ ನಮಗೇ ನಾವು ಬೇಲಿ ಹಾಕಿಕೊಳ್ಳಲು ಸುಲಭ ಮಾಗ೯.

ಇತ್ತೀಚೆಗಂತೂ ಈ WhatsApp, Facebook ನಿಂದಾಗಿ ಇಂಥವರ ಸಹವಾಸ ಬೇಕಾದಷ್ಟು ಆಗುತ್ತದೆ. ಮೊದ ಮೊದಲು Hi, Hallo,Good morning, Good night ಶುರುವಾದ ಮಾತು ಎಲ್ಲೆಲ್ಲಿಗೊ ತಂದು ನಿಲ್ಲಿಸುತ್ತದೆ. ಬರಿ ಒಂದಷ್ಟು ಸಮಯ ಹಾಳು. ಬರ್ ಬರುತ್ತಾ ನಮ್ಮ ತನವನ್ನು ಕಳೆದುಕೊಂಡು ಈ ತಾಣ ಒಂದು ಚಟವಾಗಿ ಪರಿಣಮಿಸುತ್ತದೆ.

ಎಲ್ಲದಕ್ಕೂ ಒಂದೆ ಉಪಾಯ delete ಮಾಡಿಬಿಡೋದು. ಯಾಕೆಂದರೆ ಈ ಮನಸ್ಸು ಮಕ೯ಟ.
ಕೇವಲ ಕೆಲವೆ ಕೆಲವು ಅತ್ಯಂತ ಆಪ್ತರ ಸಂಪರ್ಕ ಮನಸ್ಸಿಗೂ ನೆಮ್ಮದಿ ಸಿಗುತ್ತದೆ, ಸಮಯವೂ ಉಳಿಯುತ್ತದೆ. ಬೇರೆ ಯಾವುದಾದರು ಕೆಲಸದಲ್ಲಿ ಮಗ್ನವಾಗಿ ಮನಸ್ಸಿಗೆ ಶಾಂತಿ ತಂದುಕೊಳ್ಳಬಹುದು.

ಬದುಕುವ ಕಲೆ ಅರಿಯುವ ವಯಸ್ಸು ಹತ್ತಿರವಾದಂತೆಲ್ಲ ಕಾಲನ ಕರೆಯೂ ಹತ್ತಿರವಾಗುವ ಸಮಯ. ಬದುಕು ಸವೆದಂತೆಲ್ಲ ಜೀವನದ ಅಥ೯ ಹೆಚ್ಚಾಗುತ್ತದೆ. ನಾವು ಎಲ್ಲಿ ಎಡವಿದ್ದೇವೆ. ಎಲ್ಲಿ ಹ್ಯಾಗಿರಬೇಕಿತ್ತು. ಯಾಕೆ ಹೀಗಾಯಿತು. ಹೀಗೆ ಹಲವಾರು ಯೋಚನೆಗಳ ಸಂಘಷ೯ ಪ್ರತಿಯೊಬ್ಬರ ಮನಸ್ಸನ್ನು ಮುತ್ತಿಕೊಳ್ಳೋದಂತೂ ದಿಟ. ಇದೇ ಅರಿವು.

ಒಂದು ಗಾದೆ ಇದೆ. “ಆಗಿ ಹೋಗಿದ್ದಕ್ಕೆ ಚಿಂತಿಸಿ ಫಲವಿಲ್ಲ” ಆದುದರಿಂದ ಈ ಯುಗಾದಿಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರುತ್ತ ಇರುವಷ್ಟು ಕಾಲ ಅರಿತು ಸುಃಖವಾಗಿ ಬಾಳೋಣ.
7-4-2016 7.00pm.
(Published in Sampada net.)
(ಸಂಪದದಲ್ಲಿ ಆಯ್ಕೆ ಆದ ಬರಹ)

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

One thought on “ಬದುಕಿಗೊಂದು ಅರಿವು”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s