ಕಾಲಗಭ೯ ಸೇರಿದ ಎಚ್ ಎಂಟಿ.

image

ಬಾಳೆಂಬ ಪಥದಲ್ಲಿ ಬದುಕಿಗೆ ಆಸರೆಯಾಗಿ ಅವಿತಿರುವ ಆಸೆಗಳ, ಕಂಡ ಕನಸುಗಳ ಸಾಕಾರಗೊಳಿಸಿಕೊಳ್ಳುವ ಹಂಬಲ ಹೊತ್ತು ಸೇರಿಕೊಂಡ ಜೀವನಕ್ಕೆ ಆಧಾರ ಸ್ತಂಭವಾದ ಗಳಿಕೆಯ ದಾರಿ ಮುಚ್ಚಿದಾಗ ಊಹಿಸಲೂ ಅಸಾಧ್ಯ ಅವರ ಪರಿಸ್ಥಿತಿ.

ಹೌದು, ಎಚ್ ಎಂಟಿ ಕೈಗಡಿಯಾರ ಕಾಖಾ೯ನೆಯ ಹೋರಾಟದ ಬದುಕು 30-4-2016ರ ಶನಿವಾರ ಬೀಗ ಜಡಿಯಲಾಯಿತು. ತುಮಕೂರಿನಲ್ಲಿ 120 ಕಾಮಿ೯ಕರಿಗೆ ಬಿಡುಗಡೆ ಪತ್ರ ನೀಡಲಾಗಿದೆ. ಅದೂ ಕಾಮಿ೯ಕರ ದಿನಾಚರಣೆಯ ಮುನ್ನಾಳ ದಿನ. ಎಂಥ ವಿಪರ್ಯಾಸ!
“ಇಷ್ಟು ವಷ೯ ದುಡಿತಕ್ಕೆ ಸಣ್ಣ ಕೃತಜ್ಞತೆಯನ್ನೂ ಆಡಳಿತ ಮಂಡಳಿ ಹೇಳಲಿಲ್ಲ. ನಾಳೆ ಕಾಮಿ೯ಕರ ದಿನಾಚರಣೆ. ಅದರ ನಂತರ ಬಿಡುಗಡೆ ಮಾಡಬಹುದಾಗಿತ್ತು” ಎಂದು ಕೆಲವು ಕಾಮಿ೯ಕರ ಕಣ್ಣೀರು. ಪೇಪರನಲ್ಲಿ ಓದಿ ತುಂಬಾ ದುಃಖವಾಯಿತು.

ಕಾರಣ ನಾನೂ ಒಂದು ಕೋ-ಆಪರೇಟೀವ್ ಬ್ಯಾಂಕಿನಲ್ಲಿ ಇಪ್ಪತ್ತೇಳು ವಷ೯ ದುಡಿದು ಸ್ವ ಇಚ್ಛೆಯಿಂದ ಹೊರಗೆ ಬಂದೆ. ಆದರೆ ನಾವು ದುಡಿದ ಸಂಸ್ಥೆಯ ಮೇಲಿನ ಅಭಿಮಾನ ಯಾವತ್ತೂ ಮನದಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ. ಇಂದು ಈ ಬ್ಯಾಂಕೂ ಮುಚ್ಚುವ ಹಂತ ತಲುಪಿದೆ. ಈ ನೋವು ಅತಿಯಾಗಿ ಕಾಡಿ ಮನಸ್ಸು ಕಾಮಿ೯ಕರ ಸ್ಥಿತಿ ಕಂಡು ಮರುಗುತ್ತಿದೆ. ಪರಿಹಾರ ಕೊಡಬಹುದು. ಆದರೆ ಸಂಸಾರ ಕಟ್ಟಿಕೊಂಡವರ ಬದುಕು ಹೇಗೆ? ಹಿಡಿ ಗಂಟು ಎಷ್ಟು ದಿನ ಸಾಕು? ಬೇರೆ ಕಡೆ ಕೆಲಸವೂ ಸಿಗೋದಿಲ್ಲ. ನೋಡುಗರ ನೋಟ ಎದುರಿಸಬೇಕು. ಕೇಳುವ ಮಾತಿಗೆ ಉತ್ತರ ಕೊಡುತ್ತ ಕಣ್ಣೀರು ಸುರಿಸುವ ಕಾಮಿ೯ಕರ ಮನಸ್ಸಿಗೆ ಸಾಂತ್ವನ ಹೇಳಲು ಈ ಸಣ್ಣ ಬರಹ.

image

1984ರಲ್ಲಿ ಕೆಲಸಕ್ಕೆ ಸೇರಿದ ಹೊಸದರಲ್ಲಿ ರೂ.318/-ಕೊಟ್ಟು ನಾನೂ ಒಂದು ಎಚ್ ಎಂಟಿ ವಾಚ್ ಖರೀದಿಸಿದೆ. ಇದುವರೆಗೂ ಸುಸ್ತಿತಿಯಲ್ಲಿ ನಡೆಯುತ್ತಿದೆ. ಕೀ ಕೊಟ್ಟರೆ ಸಾಕು. ಇಂಥ ಒಳ್ಳೆಯ ವಾಚು ಉತ್ಪಾದನೆ ಮಾಡುತ್ತಿದ್ದ ಸಂಸ್ಥೆ ಮುಚ್ಚಬಾರದಿತ್ತು.

1-5-2016. 7.39am.

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s