ಓ ನನ್ನ ಗೆಳತಿ……

ಅವಧಿಯಲ್ಲಿ ನಾನು ಬರೆದ ಬರಹ ಬಂದಾಗಲೆಲ್ಲ ಬರಹಕ್ಕೆ ಒಂದು ಉತ್ಸಾಹ.  ಈ ದಿನ ಪ್ರಕಟವಾದ ನನ್ನ ಕವನ ನೋಡಿದ ಗಳಿಗೆಯಲ್ಲಿ ಬರೆದ ಕವನವಿದು.

ಹರಿಯುತಿದೆ ಸಾಗರ ತೆರದಿ
ಹೃದಯಾಂತರಾಳದಲ್ಲಿ
ಒಂದೊಂದು ಕವನ, ಬರಹಗಳಿಗೆ
ಶೃಂಗಾರ ತೊಡಿಸಿ
ನೀ ಬೆಳಗುವೆಯಲ್ಲ
ಪ್ರತಿ ಮನದಿ ಹೊರಹೊಮ್ಮಿದ
ಬರಹಗಳ ರಾಶಿ
ಬೆಳಗಿದಾಗ ಉಕ್ಕುವುದು
ಇನ್ನೊಂದು, ಮತ್ತೊಂದು, ಮಗದೊಂದು
ನಾಭಿಯಿಂದ
ಅಡಿಯಿಂದ ಮುಡಿಯವರೆಗೆ
ಬರೆದೇಬಿಡಬೇಕೆಂಬ
ಛಲದಂಕಮಲ್ಲನ ಛಲ
ಬಡಿದೆಬ್ಬಿಸಿಬಿಡುವೆಯಲ್ಲ
ನೀ ನಿಜಕ್ಕೂ
ನನ್ನ ಕನಸಿನ
ಶೃಂಗಾರದೊಡತಿ
ಅಲ್ಲಲ್ಲ
ಪ್ರತಿಯೊಬ್ಬ ಕವಿಯ ಮನದೊಡತಿ.

ಏನಂತ
ಹೇಗೆ ಬಣ್ಣಿಸಲಿ
ನಿನ್ನಲ್ಲಿ ನಾನು ಪರವಶನಾದೆನಲ್ಲೆ
ನಿನ್ನ ಬಿಟ್ಟಿರಲಾರದಷ್ಟು
ಇದು ಅತಿಶಯೋಕ್ತಿಯಲ್ಲ
ಅದಕೆ ತಾನೆ
ಆಗಾಗ ಬರೆದು ಕಳಿಸುವೆ
ನನ್ನೊಳಗೊಂದಾಗಿಹ
ಬರಹ ನಿನ್ನ ನೆನಪಿಸಿಕೊಂಡು
ದೂರ ತಳ್ಳದಿರು
ಅಂಗಾಂಗ ಒಪ್ಪವಾಗಿದ್ದರೆ
ಸೇರೆ ಹಿಡಿದು ನಿಲ್ಲಿಸು
ನಿನ್ನ ಬಣ್ಣಗಳ ಚಿತ್ತಾರದಲ್ಲಿ
ಬೃಹ್ಮಾಂಡ ಸುತ್ತಿ ಬರಲಿ ಬಿಡು
ಓ ನನ್ನ ಅವಧಿ!
20-5-2016. 8.24am.

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s