“ಅವಧಿ” ಯಿಂದ ಬಂದ ವಿಡೀಯೊ ಲಿಂಕ

ದಿನಾಂಕ 20-5-2016ರಂದು ನಾನು ಬರೆದ ಕವನ “ಹೌದು ನನಗೂ ಕೋಪ ಬರುತ್ತದೆ” (ಈಗಾಗಲೆ ಬ್ಲಾಗನಲ್ಲಿ ಲಿಂಕ ಇದೆ) ಕವನ ಪ್ರಕಟವಾದಾಗ ತುಂಬಾ ಆಶ್ಚರ್ಯ ಸಂತೋಷ. ಕಾರಣ just comment reply ಬರೆದಿದ್ದೆ ಅಷ್ಟೆ.

ಇದೇ ಖುಷಿ ಯಲ್ಲಿ “ಓ ನನ್ನ ಗೆಳತಿ” (ಬ್ಲಾಗ್ ನಲ್ಲಿ ಇದೆ) ಅವಧಿ ಕುರಿತು ಬರೆದೆ ಒಂದು ಕವನ. ಕಳಿಸಿದೆ ಅದೇ ದಿನ.

ಇದನ್ನು ಓದಿದ ಅವಧಿಯವರಿಂದ “ನೀವು ತುಂಬಾ ಚೆನ್ನಾಗಿ ಬರೀತಿರಂತೆ, ಫೇಸಬುಕ್ನಲ್ಲಿ ಬರೆದಿದ್ದಾರೆ” ಎಂಬ ಸಂದೇಶದೊಂದಿಗೆ ಚೈತ್ರಿಕಾ ಹೆಗಡೆ, ಕಂಚೀಮನೆ ಇವರು ಬರೆದು ಸುಶ್ರಾವ್ಯವಾಗಿ ಹಾಡಿದ ವಿಡಿಯೋ ಲಿಂಕ ಕಳಸಿದ್ದರು.

ಇದರಲ್ಲಿ ಹಳ್ಳಿ ಕಡೆ ಇರುವ ಹವ್ಯಕ ಗಂಡುಗಳಿಗೆ ಹುಡುಗಿ ಸಿಗದೆ ಮದುವೆ ಆಗದೆ ಹೆತ್ತವರ ತೊಳಲಾಟದ ಚಿತ್ರಣವಿದೆ. Facebook ನಲ್ಲಿ ವಿಕ್ಷಿಸಬಹುದು. ಈ ಹಾಡಿನಿಂದ ಪ್ರೇರಣೆಗೊಂಡು ಬರೆದ ಕವನವಿದು. ಕಳಿಸಿದೆ. “Good one, will publish” ಅಲ್ಲಿಂದ ಮೇಲ್.

ವಾವ್,ಸೂಪರ್ ಖುಷಿ.
23-5-2016. 8.38pm.
—————————–
ಬಾ ಮನ ತಂಪಾಗಿಸು……

ಕೊತ ಕೊತನೆ ಕುದಿಯುವ
ಬೆಂಕಿಯ ಒಡಲೊಳಗೆ
ತಣ್ಣನೆಯ ನೀರು
ನೀ ಸುರಿಯುವುದು
ಯಾವಾಗ?

ಕಣ್ಣಿಗೆ ಕಾಣದೆ
ದೃಷ್ಟಿ ಮಂಜಾಗುವ
ಹೊತ್ತಲ್ಲದ ಹೊತ್ತಲ್ಲಿ
ಅದರದ ತುಂಬಾ
ಕಣ್ಣೀರ ಬಿಂದು.

ಗರುಡನ ರೆಕ್ಕೆ
ಬಡಿ ಬಡಿದು ಸುಸ್ತಾಗಿ
ಹಠ ಹಿಡಿದು ಕುಳಿತು ಬಿಟ್ಟಿದೆ
ಮೂಲೆ ಸೇರಿ.

ಕನಸಿನ ಕೊನೆಯಿಲ್ಲದ
ಕನಸುಗಳ ರಾಶಿ ರಾಶಿ
ನವ ಮಣಿಗಳ ಮಾಲೆ ಹೊತ್ತು
ಕಾಯುತ್ತಲೆ ಇದೆ.

ಬಾ ಬಿತ್ತು ನನ್ನ ಮನ
ಮನೆ ತುಂಬಾ ಬರಿ
ಮೌನ ಶೋಕ ಗೀತೆ ಅಳಿಸಿ
ಕಾಲಿಕ್ಕು ನಡುಮನೆಯಲ್ಲಿ.

ಹೆ! ನಲಿವೆ ಹಾಗೆ ಬಾರದೆ
ಕರಗಿಯೇ ಹೋಗದಿರು
ಕರಕುಶಲ ಕೈಗಾರಿಕೆಯಲ್ಲಿ
ಮೈ ತಳೆದು ನಿಂತ ಜೀವ ಚಿವುಟಿ.

ಕಾದಿರುವೆವಿಲ್ಲಿ ಹೆಬ್ಬಾಲಿಗೊಂದು
ಚಂದದ ರಂಗೋಲಿ ಇಕ್ಕಿ
ಮದುವಣಗಿತ್ತಿಯ ಕಾಲ್ಗೆಜ್ಜೆಯ
ಜಲ್ಲ ಜಲ್ಲ್ ನಾದ ಹರಿದಾಡಲೆಂದು.
22-5-2016. 9.05pm
(Avadhi accepted this poem)

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s