ನನ್ನೊಳಗಿನ ಮಾತುಗಳು

ಕವಿಯ ಮನದಲ್ಲಿ ಏನಾದರು ಬರೆಯಬೇಕೆಂಬ ಹಂಬಲವುಂಟಾದಾಗ ಆ ಒಂದು ಮನಸ್ಸು ಇದೆಯಲ್ಲ ಅದನ್ನು ತಡೆಯುವ ಶಕ್ತಿ ಆ ಕವಿ ಕಳೆದುಕೊಂಡಿರುತ್ತಾನೆ. ಅದೆಷ್ಟು ಕಾತರ ಬರೆಯಲು! ಒಳಗಿನ ಮನಸ್ಸಿನಲ್ಲಿ ಎಲ್ಲಿ ಈ ಬರಹ ಕಳೆದುಹೋಗುತ್ತೊ ಅನ್ನುವ ಆತಂಕ. ಗುಯ್ಯಿಗುಡುವ ವಿಚಾರಕ್ಕೆ ಹಾಗೆ ಅಕ್ಷರಗಳಲ್ಲಿ ಆ ಕ್ಷಣ ಬಟ್ಟಿ ಇಳಿಸಬೇಕು. ಆ ಒಂದು positive time miss ಆದರೆ ಮತ್ತೆ ಆ ಶೈಲಿ, ಹಿಡಿತ ಸಿಗುವುದಿಲ್ಲ, ಮತ್ತೆ ಇನ್ನೊಂದು ಬರಹ ಹುಟ್ಟಿಕೊಳ್ಳಬಹುದೆ ಹೊರತು ಮೊದಲಿನ ಬರಹದ ಛಾಪು ಹಿಡಿಯೋದು ಕಷ್ಟ. ಅದೇನೆ ಘನಂಧಾರಿ ಕೆಲಸವಿರಲಿ ಒಂದು ಕ್ಷಣ ಬಿಟ್ಟು ಹಂಗೆ ಬಟ್ಟಿ ಇಳಿಸಿದ ಬರಹ ಅದಾವುದೇ ಇರಲಿ ಜನ ಮೆಚ್ಚುಗೆ ಪಡೆಯೋದು ನಿಶ್ಚಿತ. ಇದು ನನ್ನ ಅನುಭವದ ಮಾತು.

ಇದಕ್ಕೆ ಉದಾಹರಣೆ ನಾನು ಬರೆದ ಮೊದಲ ಕಥೆ “ಅವಳು.” ಈ ಕಥೆ ಶುರು ಮಾಡಿ ಮುಗಿಸುವವರೆಗೆ ಎದ್ದಿಲ್ಲ. ಕಥೆ ಬರೆಯುತ್ತ ನಾನೇ ಆ ಕಥೆಯ ಪಾತ್ರಧಾರಿ ಆಗಿದ್ದೆ. ಅಳುತ್ತ ಬರೆದಿದ್ದೆ. ಅಷ್ಟೊಂದು excitement ನನ್ನಲ್ಲಿ.. ಇದೇ ರೀತಿ ಅನುಭವ ನಿನ್ನೆ ಮತ್ತೊಮ್ಮೆ ಅನುಭವಿಸಿದೆ. “ಕಂಡೆ ಗುಡ್ಡದ ಗುಹೆಯೊಳಗೆ.” ಈ ಬರಹ ಅದೆಷ್ಟು ಏಕಾಗ್ರತೆ ಆವರಿಸಿತ್ತು ಅಂದರೆ, ಮನದ ಬರವಣಿಗೆ ಹಾಗೆ ಅಚ್ಚಾಗಿತ್ತು. ಎಲ್ಲಿಯೂ ಸರಿಪಡಿಸುವ ಅಗತ್ಯ ಇರಲಿಲ್ಲ. ಕೂಡಲೆ ಅವಧಿಗೆ ಕಳಿಸಿದೆ. ಈ ದಿನ ಪ್ರಕಟವಾಯಿತು. ಅವರಿಗೂ ಇಷ್ಟವಾಗಿದ್ದು ಕೂಡಲೆ ಪ್ರಕಟಿಸಿದಾಗ ತಿಳಿಯಿತು. ತುಂಬಾ ಖುಷಿಯಾಯಿತು.

ಈ ರೀತಿಯ ಏಕಾಗ್ರತೆ ಇರುವಾಗ ಮಾತ್ರ ಬರೆಯುವ ಪ್ರಯತ್ನ ನನ್ನದು. ನಾನು ಬರೆಯುವ ಪ್ರತಿಯೊಂದು ಬರಹ ಓದುಗನ ಮನ ತಟ್ಟಬೇಕೆನ್ನುವ ಹಂಬಲ ನನ್ನಲ್ಲಿ ಇತ್ತೀಚೆಗೆ ತುಂಬಾ ಕಾಡುತ್ತಿದೆ. ಅದಕ್ಕೆ ನಾನೇ ಕಂಡುಕೊಂಡ ದಾರಿ ಆದಷ್ಟು ಬರೆಯುವುದನ್ನು ಕಡಿಮೆ ಮಾಡಿ ಓದಿನ ಕಡೆ ಹೆಚ್ಚಿನ ಗಮನಹರಿಸುವ ಪ್ರಯತ್ನ. ಏಕೆಂದರೆ ನನಗೆ ಜ್ಞಾನದ ಕೊರತೆ ತುಂಬಾ ಇದೆ. ಅದು ಇತ್ತೀಚೆಗೆ ಬರೆಯುವಾಗ ಕಾಡುತ್ತಿದೆ. ಇಷ್ಟು ವಷ೯ವಾದರೂ ಹೆಚ್ಚಿನ ಪುಸ್ತಕ ಓದಿಲ್ಲ. ಎಷ್ಟು ಸಮಯ ವ್ಯಥ೯ ಕಾಲಹರಣ ಮಾಡಿಬಿಟ್ಟೆ ಅಂತ ತುಂಬಾ ದುಃಖ ಆಗುತ್ತಿದೆ. ಆದರೆ ಮಿಂಚಿಹೋದ ಕಾಲ ಮತ್ತೆ ಸಿಗೋದಿಲ್ಲ.

ಆಗಾಗ ಆರೋಗ್ಯ ಕೈ ಕೊಡುತ್ತಿದೆ. ಹೆಚ್ಚು ಕುಳಿತಿರಲಾರೆ. ಇರುವ ಜವಾಬ್ದಾರಿ ನಿಭಾಯಿಸುವ ಕತ೯ವ್ಯ ಮುಗಿಸುವ ಗುರಿ ನನ್ನಲ್ಲಿ ಹೆಪ್ಪುಗಟ್ಟಿದೆ ಆಳವಾಗಿ. ಓದುವುದಕ್ಕೆ ಏಕಾಗ್ರತೆ, ಗಮನ, ಮನಸ್ಸು, ದೃಡ ಸಂಕಲ್ಪ, ಮನನ ಮಾಡಿಕೊಳ್ಳುವ ತಾಕತ್ತು ನನಗೆ ಇದೆಯೊ ಇಲ್ಲವೊ ಗೊತ್ತಿಲ್ಲ. ಆದರೆ ಓದಿನ ಕಡೆ ಮನಸ್ಸು ವಾಲುತ್ತಿರುವುದು ದಿಟ. ಮಧ್ಯ ಇದ್ದಕ್ಕಿದ್ದಂತೆ ನುಸುಳುವ ಬರೀಬೇಕು ಅನ್ನುವ ತುಡಿತ ಹಿಡಿದಿಡುವುದು ಕಷ್ಟವೂ ಆಗುತ್ತಿದೆ. ಏಕೆಂದರೆ ನನ್ನ ದೊಡ್ಡ ಸಮಸ್ಯೆ ಇದಾಗಿದೆ. ಸ್ವಲ್ಪ ಹೊತ್ತೂ ಕೂಡ ಕಳಿತು ಓದುವುದಕ್ಕೆ ಆಗುತ್ತಿಲ್ಲ.. ಅಷ್ಟೊಂದು ಕಾಟ ಕೊಡುತ್ತಿದೆ ಈ ಬರವಣಿಗೆ. ಬೇರೆ ಯಾವುದರ ಕಡೆಯೂ ಗಮನಹರಿಸಲು ಆಗುತ್ತಿಲ್ಲ. ಸುಮಾರು ಸೆಪ್ಟೆಂಬರ 2015ರಿಂದ ಈ ಬರೆಯುವ ತುಡಿತ ಇದುವರೆಗೆ ಅದೆಷ್ಟು ಬರೆದೆ ಲೆಕ್ಕವಿಲ್ಲ. ಇಷ್ಟು ವಷ೯ ಈ ಬರಹ ಎಲ್ಲಿತ್ತು ಅಂತ ನನಗೇ ನಾನು ಅದೆಷ್ಟು ಸಾರಿ ಮಾತಾಡಿಕೊಂಡಿದ್ದಿದೆ.

ನನ್ನ ಬ್ಲಾಗ್ followers ಬ್ಲಾಗ್ ಕೂಡ ನನಗೆ ಸರಿಯಾಗಿ ಓದಲು ಆಗುತ್ತಿಲ್ಲ. ಕ್ಷಮಿಸಿ. ಪ್ರತಿಯೊಬ್ಬರ ಪ್ರತಿಯೊಂದು ಬರಹ ಓದುವ ಹಂಬಲ. ಆಗಾಗ ಓದಲು ಪ್ರಯತ್ನಿಸುತ್ತೇನೆ. ಸಮಸ್ಯೆಗಳು ನಾನೊಬ್ಬಳೆ ನಿಭಾಯಿಸುವ ಸರದಿ ನನಗಿದೆ. Free mindಗಾಗಿ ಕಾಯುತ್ತಿದ್ದೇನೆ.
29-5-2016. 11.16pm.

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

2 thoughts on “ನನ್ನೊಳಗಿನ ಮಾತುಗಳು”

  1. ತುಸು ನಿರಾಳವಾದ ಮೇಲೆ ನಿಮ್ಮ ತುಮುಲಕ್ಕೆ ಉತ್ತರವನ್ನು ನಿಮ್ಮ ಮನವೇ ಕಂಡುಕೊಳ್ಳುವುದೆನ್ನುವುದರಲ್ಲಿ ಸಂಶಯವಿಲ್ಲ.. ಆದರೆ ಅಲ್ಲಿಯತನಕ ಬರೆಯಲೇಬೇಕು ಅಥವಾ ಓದಲೇಬೇಕು ಎನ್ನುವ ಒತ್ತಾಯದ ಕಟ್ಟಿಗೆ ಓಗೊಡದೆ ಆ ಗಳಿಗೆಯಲ್ಲಿ ಅನಿಸಿದ್ದು ಮಾಡಿ, ಒತ್ತಡರಹಿತ ಸ್ಥಿತಿಯಲ್ಲಿ. ಹಾಗೆಯೇ ‘ರೈಟರ್ಸ್ ಬ್ಲಾಕ್’ (writer’s block) ಕುರಿತು ಮಾಹಿತಿ ಓದಿ. ಇದೊಂದು ಬರೆವವರು ಎದುರಿಸುವ ಸಾಮಾನ್ಯ ಗೊಂದಲ ಎಂದರಿವಾದಾಗ ನಿರಾಳತೆ ತಾನೆ ಮರಳುತ್ತದೆ – ತುಸು ಕಾಲಾವಧಿಯ ನಂತರ.

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s