ವಿಶ್ವ ಪರಿಸರ ದಿನಕ್ಕೊಂದು ಮಾತು

image

ಹೌದು ಈ ದಿನ “ವಿಶ್ವ ಪರಿಸರ ದಿನ.”

ಸೃಷ್ಟಿಯ ಮಡಿಲಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ಮನುಷ್ಯ ಈ ಸೃಷ್ಟಿಯ ಬಗ್ಗೆ ಕಾಳಜಿವಹಿಸ ಬೇಕು. ಅದು ಅವನ ಜೀವನದ ಬಹು ಮುಖ್ಯ ಕತ೯ವ್ಯ ಕೂಡಾ. ಆದರೆ ಈ ಒಂದು ಕಾಳಜಿ ಅದೆಷ್ಟು ಜನರಲ್ಲಿ ಇದೆ. ಬರೀ ಪರಿಸರದಲ್ಲಿ ಸಿಗುವ ಸೌಲಭ್ಯಗಳನ್ನು ಬಾಚಿಕೊಳ್ಳಲು ಹವಣಿಸುತ್ತಾನೆ ಹೊರತು ಅದನ್ನು ಉಳಿಸಿ ಬೆಳೆಸುವ ಮನಸ್ಸು ಕೇವಲ ಕೆಲವೇ ಜನರಲ್ಲಿ ಇದೆ.

ಈ ದಿನದ ನೆನಪಿನಲ್ಲಿ ಅನೇಕ ಸಂಘ ಸಂಸ್ಥೆಗಳು ಪರಿಸರವನ್ನು ಸವಚ್ಛಗೊಳಿಸುವ ಇಲ್ಲ ಗಿಡ ನೆಡುವ ಕಾಯ೯ ಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಸಂತೋಷ. ಆದರೆ ಇದೊಂದೇ ದಿನ ಆಚರಿಸಿ ಮರೆತು ಬಿಡುವ ಚಾಳಿ ಮುಂದುವರಿಯಬಾರದು. ಕಾರಣ ಈ ಸೃಷ್ಟಿ ನಮ್ಮನ್ನು ಮರೆಯುವುದೆ? ಖಂಡಿತಾ ಇಲ್ಲ. ಕಾಲಕಾಲಕ್ಕೆ ಮಳೆ ಬೆಳೆ ಕೊಟ್ಟು ನಮ್ಮನ್ನು ಕಾಪಾಡುವ, ತಣ್ಣನೆಯ ಗಾಳಿ ಬೆಳಕಲ್ಲಿ ನಮ್ಮ ಆರೋಗ್ಯ ಸುಸ್ತಿತಿಯಲ್ಲಿಡಲು ಕಾರಣವಾದ ಈ ಪರಿಸರವನ್ನು ಮರೆಯುವುದು ಎಷ್ಟು ಸರಿ.

ಜನ ಸಂಖ್ಯೆ ಜಾಸ್ತಿಯಾದಂತೆ, ವಾಹನಗಳ ಭರಾಟೆ, ರಸ್ತೆಯ ಅಗಲೀಕರಣ ಮನೆ ಕಟ್ಟುವ ಧಾವಂತ
ದಲ್ಲಿ ಭೂಮಿಯಲ್ಲಿ ಮರಗಿಡಗಳು ಬರಿದಾಗಿ ವಾತಾವರಣ ಕಲುಶಿತವಾಗುತ್ತಿದೆ. ಆಧುನಿಕತೆಗೆ ಮಾರು ಹೋದ ಮನುಷ್ಯ ಉತ್ಪಾದನೆಯ ಹೆಸರಲ್ಲಿ ಪರಿಸರಕ್ಕೆ ಆಗುವ ಅನಾಹುತದ ಮುಂದಾಲಾಚನೆ ಇಲ್ಲದೆ ಮುಂದುವರೆಯುತ್ತಿದ್ದಾನೆ. ಭೂಮಿಯ ತಾಪ ಮಾನ ಜಾಸ್ತಿ ಆಗುತ್ತಿದೆ. ಈಗ ಹೊಸದಾಗಿ ಹುಟ್ಟಿಕೊಂಡಿರುವ “ನೇತ್ರಾವತಿ ಯೋಜನೆ”

ಭಗವಂತ ನಿಮಿ೯ಸಿದ ಈ ಸೃಷ್ಟಿಯಲ್ಲಿ ಪರಿಸರವನ್ನು ಸ್ವಚ್ಛವಾಗಿ ಕಪಾಡಿಕೊಳ್ಳಬೇಕೆ ಹೊರತು ಅದರ ವಿರುದ್ಧವಾಗಿ ಹೋಗುವ ಪ್ರಯತ್ನ ಮಾಡಿದಲ್ಲಿ ವ್ಯತಿರಿಕ್ತ ಪರಿಣಾಮ ಕಟ್ಟಿಟ್ಟ ಬುತ್ತಿ. ಪರಿಸರ ನಮ್ಮ ಮನೆ. ಮನೆಯನ್ನು ಹೇಗೆ ಸ್ವಚ್ಛ ಪರಿಶುದ್ದವಾಗಿ ಇಟ್ಟುಕೊಳ್ಳುತ್ತೇವೊ ಅದೆ ಕಾಳಜಿ ಪರಿಸರದ ಬಗ್ಗೆ ಇರಬೇಕು. ಆದಷ್ಟು ಮನೆಯ ಸುತ್ತ ಮುತ್ತ ಗಿಡ ಮರ ಬೆಳೆಸಿ, ಪ್ಲಾಸ್ಟಿಕ್ ಬಳಕೆ ಬಿಟ್ಟು ತಾನು, ತನ್ನ ಮನೆ, ತನ್ನ ಬೀದಿ, ತನ್ನ ಊರು ಹೀಗೆ ಎಲ್ಲದರ ಕುರಿತು ಮನುಷ್ಯನಲ್ಲಿ ಪರಿಸರದ ಬಗ್ಗೆ ಕಾಳಜಿ ಸ್ವ ಇಚ್ಛೆಯಿಂದ ಹೊರಹೊಮ್ಮಿದಲ್ಲಿ ಮಾತ್ರ ಪರಿಸರವನ್ನು ಕಾಪಾಡಲು ಸಾಧ್ಯ.

ಬನ್ನಿ ಎಲ್ಲರೂ ಒಂದಾಗಿ ಪರಿಸರವನ್ನು ಸ್ವಚ್ಛವಾಗಿ ಇಡೋಣ. ಕೈ ಜೋಡಿಸಿ.
5-6-2016. 9.30am.

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s