ಪರಿವಿಡಿ (BLOG)

image

ಅಲ್ಲಿ ನೋವಿದೆ, ನಲಿವಿದೆ
ಸಂಭ್ರಮದ ಕ್ಷಣವಿದೆ
ಸುತ್ತಾಟದ ಕಾವಿಗೆ
ಮುದ ನೀಡುವ
ಒಂದು ಲೋಕವೇ ಇದೆ.

ಸೃಷ್ಟಿಯ ಸೌಂದರ್ಯ
ಹೀರಿಕೊಳ್ಳುವ ಕೊನೆಯಿಲ್ಲದ
ದಾಹದ ಆಳವಿದೆ
ತೀಕ್ಷಣತೆ ಇದೆ.

ವಿಷಯ ಹಲವು ಹದಿನೆಂಟು
ನಂಟು ಗಂಟು
ಬಿಚ್ಚಿಡುವ ಪರಿ, ನೈಪುಣ್ಯತೆ,
ಸೂಕ್ಷ್ಮತೆ ಎಲ್ಲ
ಸಂಕ್ಷಿಪ್ತ ಪರಿವಿಡಿ!

ಮನಸ್ಸನ್ನೇ ಕದ್ದು ತರುವ
ತಿದ್ದಿ ತೀಡಿಕೊಳ್ಳುವ
ಒರೆ ಹಚ್ಚಿ ನೋಡಿಕೊಳ್ಳುವ
ಹುಚ್ಚಿದೆ, ವಿಚಾರವಿದೆ,
ಆಚಾರವಿದೆ.

ಹುಡುಗಾಟದ ನೆನಪಿದೆ
ಗುರುವಿಗೆ ಕಾಣಿಕೆಯಿದೆ
ಮಾತೆಗೆ ಋಣವಿದೆ
ಸೃಷ್ಟಿಕತ೯ನಿಗೆ ನಮನವಿದೆ.

ದೂರದ ದಾರಿಯ
ಕೊನೆ ಮುಟ್ಟುವ ಮುನ್ನ
ಕಣ್ಮುಚ್ಚಿ ಕಳೆದು ಹೋಗುವ
ಸವಿಗಾನವಿದೆ, ಅವಣ೯ನೀಯ
ಅಮಿತ ಆನಂದವಿದೆ
ಅನನ್ಯ ಸುಃಖವಿದೆ.

ಅನುಸರಣನೀಯ
ಅದೃಶ್ಯ ಖನಿ ನೀವು!
ಏನಿದೆ, ಏನಿಲ್ಲ ಹೇಳಿ?
ನಾ ಹೇಗೆ ಬಣ್ಣಿಸಲಿ!

ಮಂಗಳನ ಮುಂಬೆಳಕು
ಸದಾ ನಿಮ್ಮೊಂದಿಗಿರಲಿ
ಅಭಿಮಾನಿಗಳ ದಂಡೇ
ನಿಮ್ಮ ಹಿಂದೆ ಬರಲಿ! 👍

6-10-2015 2.40pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s