ಹೆಗ್ಗಣಗಳ ನಾಡು

ಎಲ್ಲಿ ನೋಡಿದರಲ್ಲಿ ಅತೃಪ್ತಿ
ಬಡಿದಾಡುವ ಜನಗಳ
ಮನಸು ಅರಿಯುವ
ಸರಕಾರ ಬರುವುದೆನ್ನುವುದು
ನಾಡಿನ ಜನರ ಕನಸು
ಆದರಿದು ಒಡೆದ ಗಾಜಿನ ಮನೆ.

ಅವ್ಯವಸ್ಥೆಯ ಕೂಪ
ಬಕಪಕ್ಷಿಗಳದೆ ಕಾರುಬಾರು
ಕಂಡಲ್ಲಿ ಗುಂಡಿಕ್ಕಬೇಕು
ಅನಿಸದಿರದು ನಾಡಿನ
ಪ್ರಜೆಯ ಅಸಹಾಯಕತೆ
ಕವಿಯ ಹರಿತ ಬರವಣಿಗೆಯಲ್ಲಿ.

ಪೇಪರ್ ಓದು ಟೀವಿ ನೋಡು
ಪೇಟೆ ಸುತ್ತು ,ಬೀದಿ ತಿರುಗು
ಅಲ್ಲಿ ನೋಡು ಇಲ್ಲಿ ನೋಡು
ಎಲ್ಲೆಂದರಲ್ಲಿ ಅರಾಜಕತೆ
ತಾಂಡವ ನತ೯ನ ಕಂಡು
ತಲೆಯೆಲ್ಲ ಹೋಳು.

ತಿಂದುಂಡು ಹೆಗ್ಗಣಗಳು
ದುಡ್ಡೆಂಬ ತೂಬು ಕೊರೆದು
ರುಚಿಕಂಡ ನಾಯಿ ಕೊಡೆಗಳು
ಎಲ್ಲೆಂದರಲ್ಲಿ ಹೆಡೆಯೆತ್ತಿ ನಿಂತಾಗ
ಬಡ ಪ್ರಜೆಗಳ ಪಾಡು
ಪಾಪಿ ಸಮುದ್ರ ಹೊಕ್ಕಂತೆ.

ವ್ಯವಸ್ಥೆಯ ವಿರುದ್ಧ
ಬಡಿದಾಡುವ ಮನಸ್ಥಿತಿ
ಕೆಲವೇ ಕೆಲವು ಜನರದು
ಬಾಲಂಗೋಚಿಯರದೇ ಖಾರುಬಾರು
ನ್ಯಾಯ ನೀತಿಗೆ ಬೆಲೆಯಿಲ್ಲ
ನಿಜವಾದ ಮನುಷ್ಯನಿಗೆ ಕಾಲವಲ್ಲ.
29-6-2016. 8.40pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s