ಸಮಪ೯ಣೆ

ಇರುಳ ಕತ್ತಲೆಯ
ಸಾಮ್ರಾಜ್ಯದ ಹೊತ್ತಲ್ಲಿ
ದೀಪದಾರತಿಯ ಹೊಂಗಿರಣದ
ಮಬ್ಬು ಬೆಳಕಲ್ಲಿ
ನಿನ್ನ ಮೊದಲ ಬಾರಿ
ನಾ ಕಾಣಬೇಕು
ಅಲ್ಲಿ ಚುಕ್ಕಿ ಚಂದ್ರಮನ
ಬೆಳದಿಂಗಳ ರಾತ್ರಿಯಲ್ಲಿ
ಕೂತು ನಿನ್ನೊಂದಿಗೆ
ಮನತಣಿಯೆ ಹರಟಬೇಕು
ಬರಿ ನಾನೂ ನೀನು
ಇಬ್ಬರೆ ಇರಬೇಕು
ಜಗತ್ತೆಲ್ಲ ಮಾಯವಾಗಬೇಕು
ಈ ದೂರ ಇನ್ನಿಲ್ಲವಾಗಬೇಕು
ನನ್ನ ಬಳಿಯಲ್ಲೆ ನೀ
ಯಾವಾಗಲೂ ಇರಬೇಕು
ಮುತ್ತಿಕೊಂಡ ಪ್ರೀತಿ
ಗರಿ ಬಿಚ್ಚಿ ಹಾರಾಡಬೇಕು
ಹೆಣ್ಣಿಗೆ ತೌರುಮನೆ
ಹಂಬಲ ಮರೆಯುವಷ್ಟು
ಅತಿರೇಕದ ಮುಕ್ತ ಪ್ರೀತಿಯ
ಬೊಗಸೆ ತುಂಬ ನೀ
ನನಗೆ ಕುಡಿಸಬೇಕು
ಮತ್ತೇರಿದ ಮತ್ತಲ್ಲಿ
ನಾನಿಲ್ಲವಾಗಬೇಕು
ಇದು ಕಾಲ್ಪನಿಕ ನಡೆ
ಹೆಣ್ಣಿಗೆ ಇರಬೇಕಾದ
ಪ್ರೀತಿಯ ಅತಿರೇಕ
ಜೀವನಕ್ಕೆ ಊರುಗೋಲು
ಇದುವೆ ಸಂಸಾರದ
ನಿಜವಾದ ಕೀಲಿ ಕೈ!
5-7-2016. 7.13pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s