ಶ್ರಾವಣ ಆಗ – ಈಗ

ಬಾನಂಗಳದ ತುಂಬ ಹಕ್ಕಿಗಳ ಕಲರವ
ಮೋಡಗಳ ಬೆಚ್ಚನೆಯ ಬಿಳಿ ಹೊದಿಕೆ ಕಪ್ಪಾಗಿ
ಕರಗಿ ನೀರಾಗಿ ತುಂತುರು ಮಳೆಯ ಹನಿ ಬಿದ್ದಾಗ
ಭುವಿಯ ಒಡಲಲ್ಲಿ ಘಮ್ಮನೆ ಮಣ್ಣಿನ ವಾಸನೆ
ರೈತಾಪಿ ಸಲಕರಣೆ ಹೊತ್ತು ನಡೆವ ರೈತನ ಸಡಗರ
ಬಂತು ಶ್ರಾವಣ ಬಂತು ಶ್ರಾವಣ ಕವಿಯ ಹಾಡು
ಗುಣಗುಣಿಸುತ್ತ ಅಣಿಯಾದರಂದು ಶ್ರಾವಣದ ಸಂಭ್ರಮಕೆ.

ಜಗಮಗಿಸುವ ಬಟ್ಟೆ ಅಂಗಡಿಯ ಮುಂದೆ ಜನ ಜಾತ್ರೆ
ಮಿರಿ ಮಿರಿ ಮಿಂಚುವ ರೆಡಿಮೇಡ್ ರಂಗೋಲಿ
ಪೂಜಾ ಕೈಂಕಯ೯ಕ್ಕೆ ಪ್ಯಾಕೇಜ್ ಸವಲತ್ತು
ಪೂಜಾರಿಯ ಮಂತ್ರಕ್ಕೂ ಸೀಡಿಗಳ ಹಾವಳಿ
ನೈವೇಧ್ಯ ಗಿವ್ಯೇಧ್ಯಕ್ಕೆಲ್ಲ ರೆಡಿ ಫುಡ್ ತಂದರಾಯಿತು
ಕೂತಲ್ಲೆ ನೆಟ್ನಲ್ಲಿ ಮೊಬೈಲ್ನಲ್ಲಿ ಪುಗಸಟ್ಟೆ ಶುಭಾಷಯ
ನಾನು ನನ್ನೆಡ್ತಿ ಮಕ್ಕಳೊಟ್ಟಿಗಿದ್ದರಷ್ಟೆ ಸಾಕೆನಗೆ
ನೋಡಿರಿದೇ ಈಗಿನ ಹಬ್ಬದ ಇನ್ನಿಲ್ಲದ ಸಡಗರದ ವೈಖರಿ.

ಕಾಲ ಗಭ೯ದಲ್ಲಿ ತಲೆ ತಲಾಂತರದಿಂದ
ನಡೆದುಕೊಂಡು ಬಂದ ಅನುಕರಣೆಯ ರೀತಿ ನೀತಿ
ಕೂಡು ಬಾಳ್ವೆ ಸಂಸಾರದಲ್ಲಿ ಅಣತಿಗೊಬ್ಬ ಯಜಮಾನ
ಶ್ರಾವಣದ ಬಂತೆಂದರೆ ಸ್ವಚ್ಛತೆ, ಸಡಗರ,ಸಂಭ್ರಮ, ಹಸೆ ಹಾಡು
ನೆನಪಿಸಿಕೊಂಡು ಅಜ್ಜಿ ಕೂತಿಹಳು ಮೂಲೆಯಲ್ಲಿ
ಅವುಡು ಗಚ್ಚಿ ಎಲೆ ಅಡಿಕೆ ಕುಟ್ಟಾಣಿ ಗಟ್ಟಿಯಾಗಿ ಕುಟ್ಟಿ
ಮೊಮ್ಮಕ್ಕಳ ಆಧುನಿಕತೆಯ ಶ್ರಾಣದ ವೈಭೋಗ ಕಂಡು

ಕೊಂಕು ನುಡಿಯೊಂದು ಉದುರಿಸುತಿಹಳು
ಬುದ್ದಿಗೇಡಿ ಮಕ್ಕಳಿರಾ ಹಳೆಯ ಸಂಪ್ರದಾಯ ಲೇಸು
ಹೊಸ ನಾಗರಿಕತೆಯ ಥಳಕು ಬಳುಕಿಗಿಂತ
ಸುಳ್ಳು ಸುಳ್ಳೆ ಹಬ್ಬ ಮಾಡ್ತೀನೆನ್ನುವ ಸೋಗಲಾಡಿ ಬುದ್ಧಿ ಬಿಟ್ಟು
ಒಮ್ಮೆ ತಡೆದು ನಿಲ್ಲಿಸಿ ಹುಚ್ಚು ಕುದುರೆಯ ಮನವ
ಭಕ್ತಿಯಲಿ ಮಂತ್ರ ಪುಷ್ಪವ ಹಾಕಿ ತಲೆ ಬಾಗಿ ನಮಿಸಿ
ಮನೆ ಮಂದಿಯರೊಡಗೂಡಿ ನಕ್ಕು ನಲಿದು
ಎಲ್ಲರೊಳಗೊಂದಾಗಿ ಆಚರಿಸಿ ಹಬ್ಬದಡುಗೆಯ ಮಾಡಿ.
10-8-2016. 4.01pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s