ಹೆತ್ತವ್ವನ ಅಳಲು

ಬತ್ತಿದೆದೆಯ ಭಾವದೊಳಗೆ ಹುಟ್ಟಿತೊಂದು ಆಸೆ
ಚಿಗುರಿನಲ್ಲಿ ಇಂಪಾಗಿ ಕೇಳಿತೊಂದು ರಿಂಗಣ
ಕೂಡಿಟ್ಟ ಕಾಜಾಣದ ಅಹಂಮ್ಮಿನ ಅಮಲಿನಲ್ಲಿ
ದಿಟ್ಟೆಯಾಗಿ ಗೆದ್ದುಬಿಡಬಹುದೆಂಬ ಅಹಂಕಾರದಲ್ಲಿ.

ಹೊಚ್ಚ ಹೊಸದರಲ್ಲಿ ಎಣೆಯಿಲ್ಲದ ಹೊಗಳಿಕೆ
ಕಟ್ಟಿಕೊಂಡ ಸಂಬಂಧಗಳ ಮೆರವಣಿಗೆ
ತಿಂಗಳೊಳಗೆ ಬಿರುಕು ಬಿಟ್ಟು ಬೆಳೆಯಿತಲ್ಲಿ
ನಾನು ನನದೆಂಬ ಸಂಕೀಣ೯ದ ಜಿಜ್ಞಾಸೆ.

ತುಳಿದ ಹಾದಿ ಸುಗಮವೆಂದು ಎಣಿಸಿತಲ್ಲಿ ಜೀವ
ನೊಗವೇರಿದ ಕುದುರೆಯಂತೆ ಕತ೯ವ್ಯದ ಬೆನ್ನು ಹತ್ತಿ
ಆಸೆ ಹೊತ್ತು ಉರಿಯಿತಲ್ಲಿ ಕಣ್ಣು ಕುರುಡಾಗಿ
ಸಂಪ್ರದಾಯದ ಕುತ್ತಿಗೆಗೆ ನೇತು ಬಿದ್ದು.

ಗಟ್ಟಿಯಾಗಿ ಚೀರಿದೆ ಮನ ಬಹು ದಿನಗಳ ಕನಸಿಗೆ
ಇಷ್ಟವಾದಂತಿಲ್ಲವಲ್ಲ ಹೊಸತು ಬೆಂಡೋಲೆ
ಗರಿ ಬಿಚ್ಚಿ ತಾ ಹಾರಲಿಲ್ಲ ಅಷ್ಟ ದಿಕ್ಕಿನೆಡೆಗೆ
ಕರುಳು ಮಮ್ಮಲ ಮರುಗಿ ಜೀವ ಕುಗ್ಗಿತಲ್ಲಿ.

ಹೆತ್ತ ಮಕ್ಕಳ ಮುದ್ದುಗರೆದ ಕೈಯಿಗೀಗ
ಹಠಾತ್ತನೆ ಕೀಲು ಮುರಿದಂತಾಯಿತಲ್ಲ
ಹೆತ್ತ ಕರುಳನೆ ಹಗೆವ ಮಕ್ಕಳ ಕೊಟ್ಟೆ ಯಾಕೆ
ಹಡೆದವ್ವನ ಸಲಹದ ಮಕ್ಕಳಿದ್ದರೇನು ಫಲ.

ಹೆತ್ತವರಿಗದೊಂದು ಉರುಳಾಗುವುದು
ಕರುಳ ಸಂಬಂಧ ಕಡಿದು ಹೊರ ನಡೆದ ಗಳಿಗೆ
ಪ್ರೀತಿಯಲಿ ಇರಲಿ ಮಕ್ಕಳು ಮನ ಮನೆತುಂಬ
ಅದಿಲ್ಲವಾದರೆ ಮನೆ ತೊರೆವ ಮಕ್ಕಳೇಕೆ ಬೇಕು.
9-8-2016. 10.43am

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s