ಹಳ್ಳಿ ಗತಿ

ನಾ ಅಪರೂಪಕ್ಕೊಮ್ಮೆ
ಊರಿಗೆ ಹೋದರೆ ಸಾಕು
ನೆರಮನೆ ಪಟೇಲಜ್ಜ
ದೂರದಿಂದಲೆ ಕಂಡು
ಮಾತಾಡಿಸುವ
ಆರಾಮನೆ? ಯಾವಾಗ್ ಬಂಜೆ?
ಯಮ್ಮನಿಗೆ ಬರದೆ ಹಂಗೆ ಹೋಗಡಾ!

ನಾಭಿಯಿಂದ ಹೊರಗೆ ಬಂದ
ಮಮತೆಯ ಸಿಂಚನ.

ಆಗ ನಾ ಹೋಗಿ ಬರುವೆ
ಅವರ ಮನೆ ಅಂಗಳದಲ್ಲಿ
ಕುಂಟೆ ಬಿಲ್ಲೆ ಚೌಕಾ ಬಾರಾ
ಗಿರ್ ಗಿರ್ ಗಿಲ್ಲಿ, ಹೊಡಿ ಗೋಲಿ
ಆಡಿ ಕುಣಿದ ನೆನಪಿನ ಬುತ್ತಿ
ತೆಳ್ಳವು ತಿಂದ ನಾಲಿಗೆ ರುಚಿ
ಗಮ್ಮನೆಯ ನೆನಪಿನೊಂದಿಗೆ.

ಬಾಲ್ಯದ ನೆನಪುಗಳು
ಮೂಖ ಪ್ರೇಕ್ಷಕರು

ನಾಲ್ಕಕ್ಕೆಲ್ಲ ಛಾ ಕುಡಿದು
ತೋಟದ ಕಡೆ ಹೊರಟರೆ ಸಾಕು
ಲಂಗ ಹಾಕಿ ನನ್ಜೊತೆ ಕುಣಿದೋರೆಲ್ಲ
ಊರ ಮುಂದೆ ಆಡೋ ಮಕ್ಕಳ
ತೋರು ಬೆರಳಲಿ ತೋರಿಸಿ
ಅಮ್ಮಂದಿರಾಗಿದ್ದೇವೆ
ನಿಂಗೆಷ್ಟು ಮಕ್ಕಳು?

ವಾಸ್ತವಕ್ಕೆ ಹಿಡಿದ
ಕನ್ನಡಿಯಿವರು.

ಮಾವು, ಬೇವು, ತೆಂಗು, ಅಡಿಕೆ
ತುಂತುರು ಬಿಲ್ಲೆ ಏಲಕ್ಕಿ ಮಡುವು
ಆನೆ ಸೊಂಡಿಲ ಕಾಳು ಮೆಣಸು
ನೇತಾಡ್ಕಂಡಿರೊ ಬಾಳೆ ಗೊನೆ
ಅಲ್ಲಲ್ಲಿ ಕಾಣೊ ಏಡಿ ಡೊಂಬು
ಹುಡುಕಲ್ಲೆ ಹೋದ್ರೆ ಎಂತೂ ಇಲ್ಲೆ
ಎಲ್ಲ ಲೂಟಿ ಹೊಡೆಯೊ
ಹಂದಿ ಮಂಗ ಇಣಚಿಗಳ ಪಾಲು.

ಗತಕಾಲದಲ್ಲಿತ್ತು ಪರಿಸರಕೆ ರಕ್ಷೆ
ಈಗಲ್ಲಿ ರೈತರಿಗೆ ಶಿಕ್ಷೆ.

ಅಪ್ಪ ನೆಟ್ಟಿದ ಆಲದ ಮರ
ನಂಬ್ಕಂಡಿರೊ ಗಂಡ್ಣಕ್ಕಳ ಅವಸ್ಥೆ
ಹಳ್ಳಿ ಗಂಡೀಗೆ ಹೆಣ್ಣಿಲ್ಲೆ
ಒಲೆ ಊದೋದು ಗಂಡಸರ ಪಾಲೆ
ಓದಿದ ಮಕ್ಕಳು ಊರ ಬಿಟ್ಟ ಹೋಜ
ಮನೆ ಮಠ ದಿಕ್ಕಿಲ್ಲದ ಪರದೇಶಿ.

ವೈಭೋಗದ ಹಳ್ಳಿಯೀಗ
ಕಿಮ್ಮತ್ತಿಲ್ಲದ ಬಂಜೆ!
1-11-2016. 1.57pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s