ಧನುರ್ಮಾಸದ ತೀಥ೯ಕ್ಷೇತ್ರ ದರ್ಶನ (ಭಾಗ -1)

ಅಂದು ಡಿಸೆಂಬರ್ 23. ಬೆಳಗಿನ ಚುಮು ಚುಮು ಚಳಿಯಲ್ಲಿ ಹೊರಟಿತ್ತು ನಮ್ಮ ಪ್ರಯಾಣ ಶ್ರೀ ಕ್ಷೇತ್ರ ರಾಮೇಶ್ವರದತ್ತ. ಇದು ನಮ್ಮ ಮನೆಯ ಹಿರಿಯರೆಲ್ಲ ಸೇರಿ ಕೈಗೊಂಡ ಯಾತ್ರೆ.

ಶಾಸ್ತ್ರದಲ್ಲಿ ಹೇಳುತ್ತಾರೆ ಮೊದಲು ಶ್ರೀ ಕ್ಷೇತ್ರ ರಾಮೇಶ್ವರ ದಶ೯ನ ಮಾಡಿ ಅಲ್ಲಿಯ ಮರಳನ್ನು ತೆಗೆದುಕೊಂಡು ಬಂದು ಶ್ರೀ ಕ್ಷೇತ್ರ ಕಾಶಿಯ ಗಂಗಾ ತಟದಲ್ಲಿ ಹಾಕಿ ಕಾಶಿ ವಿಶ್ವನಾಥನ ದಶ೯ನ ಮಾಡಿ ಗಂಗಾ ತೀಥ೯ವನ್ನು ತೆಗೆದುಕೊಂಡು ಬಂದು ಮತ್ತೆ ಶ್ರೀ ಕ್ಷೇತ್ರ ರಾಮೇಶ್ವರದಲ್ಲಿ ಮಹಾಸ್ವಾಮಿಗೆ ಅಭಿಷೇಕ ಮಾಡಿಸಬೇಕೆನ್ನುವ ಉಲ್ಲೇಖವಿದೆ.

ಆದರೆ ಇದು ನನಗೊದಗಿದ ಕಾಕ ತಾಳೀಯವೊ ಅಥವಾ ನನ್ನ ಅದೃಷ್ಟವೊ ಗೊತ್ತಿಲ್ಲ 2016ರ ಆಕ್ಟೋಬರ್ 8 ರಂದು ಮೂರು ತಿಂಗಳ ಮುಂಚೆಯೇ ಮುಂಗಡ ಕಾಯ್ದಿರಿಸಿದ ಟಿಕೆಟ್ ಕ್ಯಾನ್ಸಲ್ ಮಾಡಬೇಕಾಯಿತು. ಕಾರಣ ಆರೋಗ್ಯ ಎಚ್ಚರ ತಪ್ಪಿತ್ತು. ಆಗ ಅದೆಷ್ಟು ದುಃಖ ಬೇಸರವಾಗಿತ್ತು. ಆದರೆ ಈಗನಿಸುತ್ತದೆ; ನಮ್ಮಲ್ಲಿ ಒಂದು ಗಾದೆಯಿದೆ. “ಆಗೋದೆಲ್ಲ ಒಳ್ಳೆಯದಕ್ಕೆ”. ಮನೆಯ ಹಿರಿಯರ ಜೊತೆ ಕಾಶಿಗೆ ಹೋಗಲಾಗದಿದ್ದರೂ ಶ್ರೀ ಕ್ಷೇತ್ರ ರಾಮೇಶ್ವರಕ್ಕೆ ಅವರೊಟ್ಟಿಗೆ ಹೋಗುವ ಅವಕಾಶ ಒದಗಿ ಬಂದಿದೆ. ನಂತರದ ಪ್ರಯಾಣ ಕಾಶಿಗೆ ಹೋಗುವ ಯೋಚನೆ.

ಇನೋವಾ ಬಾಡಿಗೆ ವಾಹನದಲ್ಲಿ ಒಂದು ದಿನದ ಊಟದ ತಯಾರಿಯೊಂದಿಗೆ ಬೆಳಗ್ಗೆ ಆರು ಗಂಟೆಗೆ ಬೆಂಗಳೂರನ್ನು ಬಿಟ್ಟೆವು. ಸಾಗುವ ದಾರಿಗೆ ಕೊನೆಯಿಲ್ಲ, ಕಾಣುವ ಸೊಬಗಿಗೆ ಕಣ್ಣೆರಡೂ ಸಾಲದು. ಕಾಂಕ್ರೀಟ್ ಸಮತಟ್ಟಾದ ರಸ್ತೆ ತಮಿಳುನಾಡು ಪ್ರವೇಶಿಸುತ್ತಿದ್ದಂತೆ ಬದಲಾದ ಸೃಷ್ಟಿಯ ಸೌಂದರ್ಯ, ಫಲವತ್ತಾದ ಗದ್ದೆ, ತೋಟ ಎಲ್ಲೆಲ್ಲೂ ಹಸಿರ ಕುಚ್ಚು ಭೂರಮೆಯನ್ನು ಅಪ್ಪಿ ಹಿಡಿದ ಪೈರು. ಮನತಣಿಯೆ ಆಸ್ವಾಧಿಸುತ್ತ ಸಾಗುತ್ತಿತ್ತು ಪಯಣ. ಮಧ್ಯಾಹ್ನದ ಉರಿಬಿಸಿಲು ಏರುತ್ತಿದ್ದಂತೆ ಹೈವೇ. ಬದಿಯಲ್ಲಿ ಕಂಡ ಉಪಹಾರ ಕೇಂದ್ರದಲ್ಲಿ ಹೊಟ್ಟೆ ತಣಿಸಿ ಸಾಗುವ ದಾರಿಯ ಇಕ್ಕೆಲಗಳಲ್ಲಿ ಹುಲುಸಾದ ಸೀಬೆ ಹಣ್ಣಿನ ರಾಶಿ, ಪರಂಗಿ ಹಣ್ಣಿನ ಸೆಳೆತ ಖರೀದಿಸಿದ ಕೈಗಳು ಮೆಲ್ಲನೆ ನಾಲಿಗೆಗೆ ರುಚಿಯ ರಂಗೇರಿಸಿತ್ತು. ಮುಂದಿನ ಊರು ಮಧುರೈ 425 ಕಿ.ಮೀ.ತಲುಪಿದಾಗ ಮಧ್ಯಾಹ್ನ ಮೂರುಗಂಟೆ.

ಅಲ್ಲಿಂದ ಮುಂದೆ 160 ಕೀ ಮೀ. ದೂರದಲ್ಲಿರುವ ರಾಮೇಶ್ವರದತ್ತ ಹೊರಟ ನಮ್ಮ ಪ್ರಯಾಣ ಕಾಶಿಯಿಂದ ತಂದ ಗಂಗಾ ತೀಥ೯ವನ್ನು ಶಿವನಿಗೆ ಅಭಿಷೇಕ ಮಾಡುವ ಉದ್ಧೇಶ ಹಿರಿಯರದು. ನಾವು ಶ್ರೀ ಕ್ಷೇತ್ರವನ್ನು ತಲುಪಿದಾಗ ರಾತ್ರಿ ಏಳು ಗಂಟೆ ಕಳೆದಿತ್ತು. ವಸತಿಗೆ ರೂಮಿನ ಅನ್ವೇಷಣೆ ಪೂರೈಸಿ ಒಮ್ಮೆ ಶಿವನ ದರ್ಶನ ಮಾಡುವ ಧಾವಂತದಲ್ಲಿ ದೇವಸ್ಥಾನದತ್ತ ನಮ್ಮ ನಡಿಗೆ.

29-12-2016.2.37pm
ಮುಂದುವರಿಯುವುದು ಭಾಗ -2ರಲ್ಲಿ

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s