ಗೌರಮ್ಮ

ನಲ್ಲೆ
ನಿಲ್ಲೆ ನೀನಲ್ಲೆ
ಸರಿಸದಿರು ಮುಂಗುರುಳ
ಬದಲಾದಾವು
ನನ್ನ ಬೆರಳ ಸೋಕಿ.

ಕಂಡಾವು
ಹಣೆಯಗಲ
ಬಾಗಿದ ಹುಬ್ಬಿನ ಮೊನಚು
ಮಿಟುಕುವ ಕಣ್ಣಿಗೆ
ಮುತ್ತಿಕ್ಕಿಬಿಟ್ಟೇನು.

ಹೀಗಂತ ನೀ ತಿಳಿದು
ಸೆರಗ ಸರಿಸ ಬೇಡ
ಹೆಣ್ಣೆ ಗರತಿ
ಗೌರಮ್ಮನಂತಲ್ಲದಿದ್ದರೂ
ಕಾಣಬಾರದ್ದಲ್ಲಿ ಇರಲಿ ವಸ್ತ್ರ.

ಬರಿ ಶೋಕಿಯಲ್ಲ
ಮಾನವ ಜೀವನ
ಅದರಂತರಾಳಕ್ಕಿಳಿದು ನಡೆ
ಕಾಣುವೆ ಮೊಗಮ್ಮಾಗಿ
ಅನುದಿನದ ಗಳಿಗೆ.

15-1-2017. 3.46pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!