ಹಾದಿ

ಇದು ಯಾರು ಕ್ಲಿಕ್ಕಿಸಿದ ಪಟವೊ ಗೊತ್ತಿಲ್ಲ.  ಆದರೆ ನಮ್ಮಳ್ಳಿ ಹಾದಿ ಕೂಡಾ ಹೀಗೆ ಇದೆ. ಆ ಮನುಷ್ಯ ನನ್ನಪ್ಪನದೆ ಧಿರಿಸು.  ಎಂಥಾ ಹೊಂದಾಣಿಕೆ. ಸೂಪರ್☺

ನಮ್ಮಳ್ಳಿ ಹಾದಿ
ಬರೀ ಕೆಂಪು ಮಣ್ಣಿನ ಖೋಡಿ
ಮಳೆ ರಾಯನ ಧಾಂಗುಡಿಗೆ
ಆಗುವುದು ಕೆಸರು ಗದ್ದೆ ರಾಡಿ.

ಸುತ್ತಣದ ಕಾಡಿನ ಐಸಿರಿ
ಕಾಲಿಕ್ಕಿದ ಭಾಸ್ಕರನಿಂದ
ರಂಗಾಗುವುದು ಮೈ ಚಳಿ ಬಿಟ್ಟು
ಮೊಗ್ಗು ಹೂವಾಗಿ ಅರಳಿ.

ಅಗೊ ನೋಡು ರಶ್ಮಿಗದೇನು
ಇಳೆಯಲ್ಲಿ ಹುಡುಕಾಟ ಬೆನ್ನಟ್ಟಿ
ದಟ್ಟ ಕಾನನ ಸೀಳಿ ಬರುತಿದೆ
ಅಪ್ಪನ ಹಿಂಬಾಲಕನಂತೆ!

25-1-2017. 10.05am

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!