ಸರಿದ ಕಾಲ

ಹಾಕಿದ ಅವ ಪಂಗ ನಾಮ
ಆರಡಿ ಮೂರಡಿ ಭೂಮಿಗೆ
ಕೊನೆಗೆ ಖದೀಮನೆನಿಸಿ
ಬಿದ್ದ ಅದೇ ಭೂಮಿಗೆ.

ಬಿದ್ದ ಭೂಮಿ ಹಾಗೆ ಇತ್ತು
ಕಂಟಿ ಗಿಡಗಳೇ ಬೆಳೆಯಿತು
ಇನ್ನೇನು ಬೆಳೆಯಲು ಸಾಧ್ಯ
ಅವ ಮಾಡಿದ ತಪ್ಪಿಗೆ.

ಕಾಲ ಕ್ರಮೇಣ ಊರು ಬೆಳೀತು
ಕೇರಿ ಬೆಳೀತು ಆತು ಅದೇ ಪಟ್ಟಣ
ಅಂಗುಲಂಗುಲ ಅಳೆದೂ ಅಳೆದು
ಆಯಿತು ಅಲ್ಲಿ ಸೈಟು ಮನೆ.

ಸತ್ತ ಜಾಗ ಸುಟ್ಟ ಜಾಗ
ಗುರುತು ಇಲ್ಲದಾಗಿದೆ
ಇಂಚು ಇಂಚು ಜಾಗಕೀಗ
ಬಂಗಾರದ ಬೆಲೆ ಬಂದಿದೆ.

ಸರಿದ ಕಾಲ ಬಿಡದ ಬದುಕು
ಎಲ್ಲ ನೀತಿ ರೀತಿ ಮರೆತು
ಶಾಸ್ತ್ರ ಸಂಪ್ರದಾಯವೆನ್ನುವವರ ವಾಸ
ಸ್ಮಶಾನದ ಮೌನದಲ್ಲಿ ಕರಗಿದೆ.

7-11-2016. 4.33pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!