ನಾವೆಲ್ಲರೂ ಒಂದೇ..‌.

ಒಂದಿಲ್ಲೊಂದು ಕಾರಣಗಳಿಂದ ನೀನು ಹಿಂದು,ನೀನು ಕ್ರಿಶ್ಚಿಯನ್, ನೀನು ಮುಸ್ಲಿಂ ಹೀಗೆ ಅವರವರ ಧರ್ಮದ ಹೆಸರಲ್ಲಿ ಒಂದಿನಿತೂ ಅವರ ಮನಸ್ಸಿನಲ್ಲಿ ನಾವೆಲ್ಲ ಒಂದೇ ಅನ್ನುವ ಭಾವನೆ ಬೆಳೆಯಲು ಈ ಸಮಾಜ ಯಾಕೆ ಅನುವು ಮಾಡಿಕೊಡುತ್ತಿಲ್ಲ ಇದು ಸದಾ ಕಾಡುವ ನನ್ನೊಳಗಿನ ಪ್ರಶ್ನೆ. ಎಷ್ಟೋ ಸಾರಿ ಜೀವನದ ಅನೇಕ ವೇಳೆಯಲ್ಲಿ ಎದುರಾಗುವ ಮಾನವೀಯ ಜನರು ನಮ್ಮ ಕಷ್ಟ ಸುಃಖಕ್ಕೆ ಸ್ಪಂಧಿಸಿರುತ್ತಾರೆ. ಅವರ ಒಡನಾಟದಲ್ಲಿ ನಾವು ಜಾತಿಯ ಬಗ್ಗೆ ಯೋಚನೆಯನ್ನೆ ಮಾಡುವುದಿಲ್ಲ. ಅಷ್ಟು ನಮ್ಮೊಳಗಿನ ಮನಸ್ಸು ಬೇಧ ಭಾವ ಮರೆತು ಕೇವಲ ಅವರ ಒಳ್ಳೆಯ ನಡೆ ನುಡಿಗಳಲ್ಲಿ ತಲ್ಲೀನವಾಗಿರುತ್ತದೆ. ಆದರೆ ‌ಸಮಾಜದ ಕೆಲವು ವ್ಯಕ್ತಿಗಳು ಇಷ್ಟು ಮುಕ್ತ ಮನಸ್ಸಿನಿಂದ ಬದುಕಲು ಬಿಡುವುದಿಲ್ಲ. ಆಗಾಗ ಅವರ ಚುಚ್ಚು ಮಾತುಗಳನ್ನು ಕೇಳಬೇಕಾಗುತ್ತದೆ. ಅಲ್ಲಿ ನಮ್ಮ ಬದುಕಿನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದನ್ನು ಪ್ರತಿಭಟಿಸುವಷ್ಟು ಶಕ್ತಿ ಎಲ್ಲರಲ್ಲೂ ಇರುವುದಿಲ್ಲ. ಸಮಾಜದ ಕಟ್ಟು ಕಟ್ಟಳೆಗೆ ತಲೆ ಬಾಗಲೇ ಬೇಕಾಗುತ್ತದೆ. ಅಂಥದೊಂದು ಘಟನೆ ಎದುರಿಸಿದ ಸಂದರ್ಭವಿದು.

ನಾನು ಆಗಷ್ಟೆ ಬ್ಯಾಂಕಿಗೆ ಸೇರಿದ ಹೊಸತು. ಸಿರ್ಸಿಯಿಂದ ನಮ್ಮ ಹಳ್ಳಿ ಹನ್ನೆರಡು ಕಿ.ಮೀ. 1981ನೇ ಇಸವಿ. ಈಗಿನಂತೆ ಬಸ್ ಪಾಸ್, ಬಸ್ಸಿನ ಅನುಕೂಲವಿಲ್ಲ. ಹಳ್ಳಿಯಿಂದ ಬಸ್ಸ್ ಸ್ಟಾಪ್ ಗೆ ಬರಲು ಒಂದೂವರೆ ಕಿ.ಮೀ.ನಡೆಯಬೇಕು. ಹತ್ತೂವರೆಗೆಲ್ಲ ಬ್ಯಾಂಕಿಗೆ ಹಾಜರಾದರೆ ಸಾಯಂಕಾಲ ಐದೂವರೆಗೆ ಮತ್ತೆ ಇದೆ ರಿಪೀಟ್. ಕತ್ತಲಾದಗುವ ವೇಳೆ ನನ್ನನ್ನು ಕರೆದೊಯ್ಯಲು ಮನೆಯಿಂದ ಅಪ್ಪನೊ,ಅಣ್ಣನೊ ಬಸ್ ಸ್ಟಾಪಲ್ಲಿ ಕಾಯುತ್ತ ಕುಳಿತುಕೊಳ್ಳ ಬೇಕು. ಬಸ್ಸ್ ಬರುವುದಕ್ಕೆ ನಿಯಮಿತ ವೇಳೆ ಇಲ್ಲ. ಹೀಗೆ ಒಂದು ತಿಂಗಳು ನಡೆಯುತ್ತಲೆ ಇತ್ತು. ಸಿರ್ಸಿಯಲ್ಲಿ ಉಳಿಯುವ ವ್ಯವಸ್ಥೆಗೆ ಪರದಾಟ. ನನ್ನ ಕಷ್ಟ ತಿಳಿದ ಟೈಪಿಂಗ್ ಕಲಿಯುವಾಗಿನ ನನ್ನ ಕ್ರಿಶ್ಚಿಯನ್ ಗೆಳತಿ ಮೇರಿ, “ಬಾರೆ ನಮ್ಮನೆ ಮೇಲ್ಗಡೆ ದೊಡ್ಡದಾಗಿ ಖಾಲಿ ಜಾಗ ಇದೆ;ಅಲ್ಲಿರು ಬಾ” ಅಂತ ಆತ್ಮೀಯವಾಗಿ ಅಂದಾಗ ನನಗೆ ನಿಜಕ್ಕೂ ಆಶ್ಚರ್ಯ ಆಗಿತ್ತು. ಕಾರಣ ಎಷ್ಟೆಲ್ಲಾ ಆತ್ಮೀಯರು,ಬಂಧುಗಳು ಇದ್ದರೂ ಯಾರೂ ಈ ಮಾತು ಹೇಳಿರಲಿಲ್ಲ,ಎಲ್ಲಿ ತಮ್ಮನೆಯಲ್ಲಿ ವಕ್ಕರಿಸಿಕೊಂಡರೆ ಅನ್ನುವ ಭಾವನೆಗಳನ್ನೆ ಕಂಡಿದ್ದೆ. ನಿಜಕ್ಕೂ ಅವಳು ಮಾಡಿದ ಉಪಕಾರ ಇಂದಿಗೂ ಮರೆತಿಲ್ಲ. ಒಂದೂವರೆ ತಿಂಗಳು ಅವರ ಮನೆಯಲ್ಲಿ ಅವರ ಮನೆ ಮಗಳಂತೆ ಕಂಡರು. ಒಬ್ಬಳೇ ರಾತ್ರಿ ಅಷ್ಟು ದೊಡ್ಡ ಜಾಗದಲ್ಲಿ ಮಲಗಲು ಭಯವೆಂದು ಅವಳೊಟ್ಟಿಗೆ ನನ್ನ ನಿದ್ದೆ. ಕ್ರಿಸ್ಮಸ್ ಹಬ್ಬದ ಪ್ರತಿ ಕ್ಷಣ ಅವಳೊಂದಿಗೆ ಕಳೆದು ಚಂದದ ಹಬ್ಬ ಅನುಭವಿಸಿದೆ. ಶುದ್ಧ ಶಾಖಾಹಾರಿಯಾದ ನನಗೆ ಜೂಸು,ಹಣ್ಣು ಕೊಟ್ಟು ಹಬ್ಬದಲ್ಲಿ ಪಾಲ್ಗಳ್ಳುವಂತೆ ಮಾಡಿದ್ದರು. ಅತ್ಯಂತ ಭಕ್ತಿಯಿಂದ ಮಾಡುವ ಅವರ ಪ್ರಾರ್ಥನೆ ನನಗೆ ಇಷ್ಟವಾಗಿತ್ತು.

ಆದರೆ ಅಕ್ಕ ಪಕ್ಕದ ಕಂಡ ಜನ ಬೀದಿಯಲ್ಲಿ ನಡೆದಾಡುವಾಗ ತಮ್ಮ ಮನಸಿನ ಒಂದೊಂದೇ ಮಾತು ಉದುರಿಸುತ್ತಿದ್ದರು. “ಪುಕ್ಕಟೆ ಊಟ, ಕೈ ತುಂಬಾ ಸಂಬಳ” “ಒಂದಿನ ಆ ಧರ್ಮಕ್ಕೆ ಸೇರಿಕೊಳ್ತಿಯಾ ಬಿಡು.” ಇತ್ಯಾದಿ.

ಈ ಮಾತುಗಳನ್ನು ಮನೆಯಲ್ಲಿ ಹೇಳಿದಾಗ ಬೇರೆ ಕಡೆ ರೂಮು ಹುಡುಕಿ ಉಳಿಯುವ ವ್ಯವಸ್ಥೆ ಮಾಡಿದರು. ಇದು ವಾಸ್ತವ. ನನಗೆ ಪ್ರತಿಭಟಿಸುವ ಶಕ್ತಿ ಕೂಡಾ ಇರಲಿಲ್ಲ. ಯಾಕೆಂದರೆ ನೀನು ಹೆಣ್ಣು, ನೀನು ತಗ್ಗಿ ಬಗ್ಗಿ ನಡೆಯಬೇಕು. ಎದುರುತ್ತರ ಕೊಟ್ಟು ಅವಮಾನಿಸಿಕೊಂಡು ಜನರ ಬಾಯಿಗೆ ತುತ್ತಾಗ ಬೇಡಾ. ಸುಮ್ಮನಿರು ಇದು ಪಾಲಕರ,ಹಿತೈಷಿಗಳ ಕಿವಿ ಮಾತು. ಪಾಲಿಸಿದೆ.

ಇನ್ನು ಮುಸ್ಲಿಂ ಗೆಳತಿ ಕನ್ನಡ ಶಾಲೆ ನಿಲೇಕಣಿ ಸರಕಾರಿ ಶಾಲೆಯಲ್ಲಿ. ಆಗಲೂ ಅಷ್ಟೆ ಅವಳ ಮನೆ ಶಾಲೆಯ ಪಕ್ಕದಲ್ಲೆ ಇತ್ತು. ನಾವೆಲ್ಲ ಗೆಳತಿಯರು ದಿನಾ ಅವರ ಮನೆಗೆ ಹೋಗಿ ಸ್ವಲ್ಪ ಹೊತ್ತು ಇದ್ದು ಬರುತ್ತಿದ್ದೆವು. ಅವರಮ್ಮ ಮಕ್ಕಳು ಬಂದಿದಾರೆ ಅಂತ ಅದೇನೇನೊ ತಿನ್ನಲು ಕೊಟ್ಟರೆ ಯಾವತ್ತೂ ಬೇಡಾ ಹೇಳುತ್ತಿರಲಿಲ್ಲ. ಯಾವತ್ತೂ ನಮಗೆ ಜಾತಿ ಧರ್ಮದ ಬಗ್ಗೆ ಯೋಚನೆಯೆ ಬರುತ್ತಿರಲಿಲ್ಲ. ಇಂದಿಗೂ ನನ್ನ ಮನಸ್ಸು ಹಾಗೆಯೆ ಇದೆ. ಈಗ ಹತ್ತು ವರ್ಷದ ಹಿಂದಿನ ನನ್ನ ಮೊಬೈಲ್ ಸಿಮ್ ಕೊನೆಯ ನಂ.786. ಬರುತ್ತದೆ ಯಾವಾಗಾದರೊಮ್ಮೆ call ಮುಸ್ಲಿಂ ರಿಂದ ರಾಂಗ್ ನಂಬರ್ ಅಂದು ಕಟ್ ಮಾಡುತ್ತೇನೆ ನಗುತ್ತ ಹೆಮ್ಮೆಯಿಂದ.

ಕಾಲ ಕಳೆಯುತ್ತಿದ್ದಂತೆ ಎಲ್ಲಾ ಪಂಗಡದವರ ಸಹವಾಸ ಒಂದಲ್ಲಾ ಒಂದು ಸಮಯದಲ್ಲಿ ಒದಗಿ ಬಂದೇ ಬರುತ್ತದೆ. ಅವರೊಂದಿಗೆ ನಾವು ಪ್ರೀತಿ ವಿಶ್ವಾಸದಿಂದ ನಡೆದುಕೊಂಡರೆ ಅಲ್ಲಿ ಆತ್ಮೀಯ ಸಂಬಂಧ ಏರ್ಪಡುತ್ತದೆ ; ಹೊರತೂ ಜಾತಿ ಭಾವನೆ ಬರೋದಿಲ್ಲ. ನಾವೆಲ್ಲರೂ ಒಂದೆ ಅನ್ನುವ ಭಾವನೆ ಏರ್ಪಡುತ್ತದೆ.

ಕಷ್ಟಕ್ಕಾಗುವವನು ನಿಜವಾದ ಬಂದು. ಇದು ಬಿಟ್ಟು ಜಾತಿಯ ಭಾವನೆ ಎಲ್ಲಿವರೆಗೆ ಜನರ ತಲೆಯಲ್ಲಿ ತುಂಬಿರುತ್ತದೆ ಅಲ್ಲಿಯವರೆಗೂ ಈ ಕೋಮು ಭಾವನೆ ಅಳಿಯೋದಿಲ್ಲ. Atleast ಯಾರು ಈ ನಿಟ್ಟಿನಲ್ಲಿ ಬದುಕು ನಡೆಸುತ್ತಾರೊ ಅವರಿಗೆ ಅಡ್ಡಿ ಪಡಿಸದೆ ಇರುವಷ್ಟು ಸ್ವಲ್ಪ ತಿಳುವಳಿಕೆ ಜನರಲ್ಲಿ ಬಂದರೆ ಸಾಕಪ್ಪಾ ಅನಿಸುತ್ತದೆ.

ಇನ್ನು ಅವರುಗಳು ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಲಿ ಬೆನ್ನು ತಟ್ಟಿ ಹುರಿದುಂಬಿಸಬೇಕು. ಹರಿವುದೊಂದೆ ರಕ್ತ, ಇರುವುದೊಂದೆ ಜೀವ,ಇರುವಷ್ಟು ಕಾಲ.ಯಾವುದೆ ಜಾತಿ ಭೇದ ಭಾವವಿಲ್ಲದೆ ಒಬ್ಬರನ್ನೊಬ್ಬರು ಅವಲಂಬಿಸಿ ಪ್ರೀತಿ ಸೌಹಾರ್ದತೆಯಿಂದ ಬಾಳೋಣ. ಅವರಲ್ಲಿರೊ ಕಲೆ ಕಂಡು ಗೌರವಿಸೋಣ. ಜಾತಿಯ ಹಣೆ ಪಟ್ಟಿ ನೋಡಿ ಹೊಗಳುವುದರಲ್ಲಿ ಅರ್ಥ ಇಲ್ಲ. ಅವರುಗಳು ನಮ್ಮ ದೇಶದ ಪ್ರತಿಭಾವಂತರೆಂದು ಪರಿಗಣಿಸುವುದು ಸೂಕ್ತ.

9-3-2017. 1.19pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s