ಹನಿಗವನಗಳು

ಒಲವು

ಒಲವು ಪದೆ ಪದೆ
ಹುಟ್ಟುವುದಲ್ಲ
ಬೇಕೆಂದಾಗ ಬರುವ
ಕನಸೂ ಅಲ್ಲ
ಅದು ಭಾವನೆಗಳ
ಹಿಡಿ ಗಂಟು
ಒಮ್ಮೆ ಬಿಚ್ಚಿತೆಂದರೆ
ಅದರ ಕುರುಹು
ಅಳಿಸುವುದು ಕಷ್ಟ.
25-2-2017 9.30am

ಭರವಸೆ

ಇದೇನು ಗೆಳೆಯಾ
ಇಷ್ಟೊಂದು ಪ್ರಶ್ನೆಗಳು
ಆಗಬದಾದರೆ ಅಗಬಹುದು
ಇಲ್ಲವಾದರೆ ಇಲ್ಲ
ಅದಕ್ಯಾಕೆ ಇಷ್ಟೊಂದು ಚಿಂತೆ?
ಸಂತೆಯಲ್ಲೂ
ಚಿಂತೆ ಮರೆತ
ಅನಾಮಿಕನಂತೆ
ನೀನಿರಬಾರದೆ?
ಹೇಳಿರುವೆನಲ್ಲ
ಆಗಲೆ
ನಾ ನೀನಾಗಿ
ನೀ ನಾನಾಗಿ
ಕಳೆಯುವಾ ಕಾಲವೆಲ್ಲ!
26-2-2017 10.19am

ನೋವು

ಹಣ್ಣು
ಕೈಗೆ ಸಿಕ್ಕಾಗ
ತಿನ್ನಬೇಕೆನ್ನುವ ಆಸೆ
ತಿಂದಾದ ಮೇಲೆ
ಹಣ್ಣಿಲ್ಲವೆಂಬ ಸಮಸ್ಯೆ
ಕೊನೆಗೆ
ಅಂಟಿಕೊಳ್ಳುವುದು
ಬದುಕೆಂಬ
ನಂಟಿನಲ್ಲಿ ನೋವು
ನೋವು ನೋವೆ
ತಿಳಿದುಕೊಂಡೇನು ಫಲ?
ಚಿತ್ತ
ಅಲುಗಾಡಿಸುವ ರೆಂಬೆ!
1-3-2017. 7.35pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

2 thoughts on “ಹನಿಗವನಗಳು”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s