ವಿಪರ್ಯಾಸ…??

ಮದುವೆ ಎಂಬ
ಮೂರಕ್ಷರಕೆ ಪಂಚಾಂಗ
ಬಹು ದೊಡ್ಡ ಸಾಕ್ಷಿ!

ಪುರೋಹಿತರ ಸನ್ನಿಧಿಯಲ್ಲಿ
ನೂರೆಂಟು ಬಾರಿ ಪರಿಶೀಲಿಸಿ
ಜಾತಕದ ಹೊಂದಾಣಿಕೆ
ತಾಳ ಮೇಳಗಳ ಲೆಕ್ಕಾಚಾರ
ಸೈ, ಮಾಡಿ ಲಗ್ನ
ಅದ್ಭುತವಾಗಿದೆ ಜೋಡಿ.

ಏರು ಗಮ್ಮತ್ತಿನ ಒಡ್ಡೋಲಗದಲ್ಲಿ
ಇಟ್ಟ ಮುಹೂರ್ತಕ್ಕೆ
ಕಿಂಚಿತ್ತೂ ಚ್ಯುತಿ ಬಾರದಂತೆ
ಉಲಿಯಿತು ನೂರೆಂಟು
ಮಂತ್ರ ಘೋಷ
ಹಿರಿಯರ ಸಮ್ಮುಖದಲ್ಲಿ
ಮಂತ್ರಾಕ್ಷತೆಯ ಹಾರೈಕೆ
ಕಟ್ಟು ನೀ ತಾಳಿ
ಆಯಿತು ಮದುವೆ!

ವಿಪರ್ಯಾಸ ….

ಅವನೋಡಿ ಹೋದ
ಎತ್ತ?
ಇದ್ದಾನೋ ಇಲ್ಲವೋ
ಗೊತ್ತಿಲ್ಲದ ಸಮಸ್ಯೆಗಳ ಸುತ್ತ
ಕಥೆ ಕಟ್ಟುವ ಜನರ ಮಧ್ಯೆ
ಅವನಿಲ್ಲದ ತಾಳಿ ನೇತಾಡುತ್ತದೆ
ನೇಣು ಬಿಗಿದಂತೆ!

ಇತ್ತ ಇಟ್ಟುಕೊಳ್ಳಲಾಗದೆ
ಅತ್ತ ತೆಗೆಯಲೂ ಆಗದೆ
ಸಂಪ್ರದಾಯಕ್ಕೆ ಶರಣಾಗಿ
ಕರಗದ ಬದುಕಿಗೆ
ನಿತ್ಯ ಅಣುಕಿಸುವ ಹಣೆ ಬರಹ ಹೇಳುತ್ತದೆ
“ನೀ ಗಂಡನಿಲ್ಲದ ಮುತ್ತೈದೆ”

ಕೇಳುತ್ತಾಳವಳು ಧಿಕ್ಕರಿಸಿ
ತಾಳಿ ತಾಳಿ ತಾಳಿ
ಇದು ಹೆಣ್ಣಿಗೆ
ತಾಳುತಾಳುತ ನೀ ಬಾಳು
ಎಲ್ಲಿಯವರೆಗೆ?
ಗೊತ್ತಿದ್ದರೂ ಗೊತ್ತಿಲ್ಲದಂತೆ
ನೀ ಬದುಕೆಂದುಸುರುವ ಪರಿಯೆ?

ಅತಂತ್ರ ಬದುಕಿಗೊಂದು
ಬಿಗಿದ ಮೂಗುದಾರ
ತೆವಳುತ್ತಾಳವಳು ನಿತ್ಯ
ಹನಿಗಣ್ಣ ಸವರುತ್ತ
ಸಾಕು
ನೀನೆ ನನ್ನ ಜೊತೆಗಾರ.
5-3-2017. 3.01pm

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

4 thoughts on “ವಿಪರ್ಯಾಸ…??”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s