ರಾಜಕೀಯ

ಬೀಳಲು ಬಿಟ್ಟ
ಆಲದ ಮರದಂತಾಗಿದೆ ಈ ವಿಷವೃಕ್ಷ
ಮೂಲ ಹುಡುಕಲು ಹೊರಟರೆ
ದಿಕ್ಕು ತಪ್ಪಿಸುವವು ಆಳಕ್ಕಿಳಿದ ಬೇರುಗಳು.

ನೆಲ ಹಿಡಿದ ರೆಂಬೆಗಳು
ಅಲ್ಲೆ ಮತ್ತೆ ಮತ್ತೆ ಬೇರು ಬಿಡುತಿವೆಯಲ್ಲ!

ನೀರುಣಿಸಲು ಕೊಬ್ಬಿದ
ಮದಗಜದದ ನಂಟಿದೆ
ಬಿಟ್ಟು ಬಿಡಿ ತಿರುಚುವಾಸೆ
ಸುದ್ದಿಗೆ ಹೋದರೆ ಹೊಸಕಿ ಬಿಟ್ಟಾತು
ಕುರುಹು ಇಲ್ಲದಂತೆ
ಸೊಂಡಿಲಷ್ಟೆ ಸಾಕಲ್ಲವೆ?

ದೇಶದ ಉದ್ದಗಲಕ್ಕೂ
ಚಾಚಿದೆ ಬಾಹು ಬಂಧನ
ಗೆದ್ದೆತ್ತಿನ ಬಾಲ ಹಿಡಿದವನೆ ಜಾಣ.
ಸ್ವಾಭಿಮಾನ ಸುಟ್ಟು
ಸ್ಮಶಾನ ಮೌನದಲ್ಲಿ
ಕಮರುತಿಹುದು ಮಣ್ಣ ವಾಸನೆ.

ಹಿತ ಶತ್ರುಗಳ ಕಾಟ
ಬದುಕಾಗುತಿಹುದು ಡೊಂಬರಾಟ
ಹೇಳುವವರಿಲ್ಲ ಕೇಳುವವರಿಲ್ಲ
ಆಡಿದ್ದೇ ಆಟ
ಜಿದ್ದಾ ಜಿದ್ದಿ ಸಮರ
ರೈತರ ಬವಣೆ ಅಂತ್ಯ ಕಾಣುವುದು
ಆತ್ಮಹತ್ಯೆಯ ಮೆರವಣಿಗೆಯಲ್ಲಿ
ಕಟ್ಟಿಕೊಂಡವರ ಸಂಕಟ
ಬೀದಿ ಬದಿ ಅಲ್ಲಾಡುವ ಬಾಲಕ್ಕೂ ಕಡೆ
ಬೊಗಳು ಭಟ್ಟಂಗಿಗಳ ತಮಟೆಗೆ
ಬದುಕು ಡೋಲಾಯಮಾನ.

ದಿನ ಬೆಳಗಾದರೆ
ಕೇಳುವ ಕಿವಿ
ನೋಡುವ ಕಣ್ಣು
ಆಡುವ ಮಾತುಗಳ ತುಂಬ
ಸಾವು ನೋವಿನ ಪ್ರತಿಧ್ವನಿ
ಇಲ್ಲದ ಅನಾಚಾರಗಳ ಸರಣಿ
ಸುದ್ದಿ ವಾಹಿನಿಗಳಿಗೆ ಪೊಗದಸ್ತು ಆಹಾರ
ಎರಡು ದಿನಗಳಲ್ಲಿ ಮಟಾಮಾಯ
ಮತ್ತೆ ಇನ್ನೊಂದು ಮತ್ತೊಂದು
ಏನು ಪ್ರಯೋಜನ?

ಸತ್ತವರಿಗೆ ಪರಿಹಾರ
ಇದ್ದವರ ಬಾಯಿಗೆ ಆಹಾರ
ದಿನ ನಿತ್ಯ ನಡೆಯುವ ಘಟನಾವಳಿಗೆ ಕೊನೆ ಎಂದು?

ಒಳಗೊಳಗೆ ಕಚ್ಚಾಡುವ ಧ್ವನಿ ಈಗ ಜಗತ್ ಜಾಹೀರು
ಅವರವರ ಬೇಳೆ ಬೇಯಿಸಿಕೊಳ್ಳುವುದರಲ್ಲೆ ತಲ್ಲೀನ
ಕಾಲೆಳೆಯುವ ಕಾಯಕದಲ್ಲಿ
ಮೂಲೆ ಸೇರಿದೆ ಜನ ಸಾಮಾನ್ಯರ ಸಮಸ್ಯೆಗಳ ಫೈಲು
ಪಕ್ಷಗಳ ಬಲಾ ಬಲದ ಹೊಡೆದಾಟ
ಸೌದದ ತುಂಬಾ ಓಡಾಟವೆ ಓಡಾಟ.

ಎಲ್ಲಾ ನೋಡಿ ನೋಡಿ
ಅವಿತ ಮನ ಕೂಗುವುದು ಆಗಾಗ
ಕಾಪಾಡು, ಕಾಪಾಡು,ಕಾಪಾಡು
ಇದು ಇಂದು ಕೈಲಾಗದವರ ಪಾಡು.

174-2017. 6.21pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s