ಕೊಂದು ಬಿಡಿ…

ನಾವು ಹಿಂದೂಗಳು
ಅದರಲ್ಲೂ ನಾವು ಬ್ರಾಹ್ಮಣರು
ನಮ್ಮನ್ನು ಕಂಡರೆ ಏಕೀ ಹಠ ಸಾಧನೆ
ಸದಾ ಒಂದಿಲ್ಲೊಂದು ಕೊಂಕು ತಗೆದು
ಮೂದಲಿಸುವುದು ಬಿಟ್ಟರೆ
ನಿಮಗೆ ಬೇರಿನ್ಯಾವ ಕಸುಬಿಲ್ಲವೆ?

ಹೌದು ಗೋವು ನಮ್ಮ ದೇವತೆ
ಋಷಿ ಮುನಿಗಳ ಕಾಲದಿಂದಲೂ
ನಾವು ಪೂಜಿಸುತ್ತ ಬಂದಿದ್ದೇವೆ
ದೇವಾನು ದೇವತೆಗಳ
ಅವಳ ಮೈಯ್ಯುದ್ದಕ್ಕೂ ಕಾಣುತ್ತ ಬಂದಿದ್ದೇವೆ
ದೇವರ ಅಭಿಶೇಕಕ್ಕೂ ಅವಳ ಹಾಲೇ ಶ್ರೇಷ್ಠ
ತನು ಮನದ ಮೈಲಿಗೆ ತೊಳೆಯಲು ಅವಳ ಮೂತ್ರವೇ ಮೂಲ
ಹಣೆಗೆ ಹಚ್ಚಲು ವಿಭೂತಿಗೂ ಅವಳ ಸಗಣಿಯೇ ಬೇಕು
ಅವಳ ಹಾಲು ನಮಗೆ ಅಮೃತಕ್ಕೆ ಸಮಾನ.

ಹಾಗಂತ ಅವಳ ಒಂದು ರೋಮಕ್ಕೂ
ನವೆ ಆಗದಷ್ಟು ಜೋಪಾನವಾಗಿ ಸಾಕುವ ನಮಗೆ
ಜೀವಂತ ಹಸುವನ್ನು ಚುಚ್ಚಿ ಚುಚ್ಚಿ ಸಾಯಿಸುವ
ಕೇಕೇ ಹಾಕಿ ಮಜಾ ತೆಗೆದುಕೊಳ್ಳುವ
ಜನ ಕಂಡರೆ ನಮಗೆ ಸಿಟ್ಟು ಬರುವುದಿಲ್ಲ
ಹೊಟ್ಟೆಯಲ್ಲಿ ಸಂಕಕವಾಗುತ್ತದೆ
ಹತಾಷೆಯ ಕಣ್ಣೀರು ಜಿನುಗುತ್ತದೆ.

ಬೇಡ ನಮಗೂ ನಿಮಗೂ ಧರ್ಮ ಯುದ್ಧ
ಸಾಕು ಬದುಕಿನುದ್ದಕ್ಕೂ ಬರೀ ಇದೇ ಕೇಳಿ ಕೇಳಿ
ಮನ ಬೇಸತ್ತು ಹೋಗಿದೆ ನಾವು ಕ್ರೂರಿಗಳಲ್ಲ
ತಿಂದು ತೇಗುವ ಹಂಬಲ ನಿಮಗಿರಲಿ
ಒಮ್ಮೆ ಈ ಇಡೀ ಹಿಂದೂ ಸಮಾಜವನ್ನೇ
ದಯವಿಟ್ಟು ಕೊಂದು ಬಿಡಿ
ಬ್ರಾಹ್ಮಣ ಎಂಬ ಹೆಸರಿಲ್ಲದಂತೆ ಮಾಡಿಬಿಡಿ
ಮನುಷ್ಯನ ಹಸಿ ಮಾಂಸದ ರುಚಿನೂ ಒಮ್ಮೆ ನೋಡಿಬಿಡಿ.

28-5-2017. 4.31pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

2 thoughts on “ಕೊಂದು ಬಿಡಿ…”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s