Fb ಕವನಗಳು

ಮುಖ ಪುಸ್ತಕದಲ್ಲಿ ಪ್ರಕಟವಾದ ಕೆಲವರ ಬರವಣಿಗೆ ಓದುತ್ತಾ ಹುಟ್ಟಿಕೊಂಡ ಕವನಗಳು. ಕವಿತೆಗೆ ತಾರತಮ್ಯ ಇಲ್ಲ. ಎಲ್ಲಂದರಲ್ಲಿ ಆ ಕ್ಷಣದ ಭಾವನೆಗಳನ್ನು ಭಟ್ಟಿ ಇಳಿಸುವ ಚಾಕಚಕ್ಯತೆಯ ಕವಿತೆಗೆ ನಾ ಶರಣು!
^^^^^^^^^^^^^^^^^^^^^^^^^^^^^^^^^^^^^^^^^
ಅವಸ್ಥೆ

ರಾಖೀ ಹಬ್ಬ ಬಂದರೆ
ರಾಖೀ ಸಾವಂತ ನೆನಪಾಗ್ತಾಳೆ
ಪ್ರಕೃತಿ ರಮ್ಯವಾಗಿದೆ ಹೇಳಬೇಕೆಂದರೆ
ರಮ್ಯಾ ನೆನಪಾಗ್ತಾಳೆ
ಯಾರಿಗಾದರೂ ಸನ್ನಿ ಆಯಿತು ಅಂದರೆ
ಸನ್ನಿ ಲಿಯೋನ್ ನೆನಪಾಗ್ತಾಳೆ..
ಥೊ^^^ ಎಂಥಾ ಮಾಡದಪ್ಪಾ
Just ಹುಡುಗರ ಗೋಳು
ಬೇಡ ಕಂಡ್ರೊ ನೆನಪಿಸಿಕೊಳ್ಳಬೇಡಿ ಅಂದ್ರೂ ಕೇಳಲ್ಲ
ಮನಸು ಮುಗಿ ಬಿದ್ದು ಅವರಿಂದಲೇ ಹೋಗುತ್ತೆ ಅಂತಾರೆ
ಆಗ ನಾನು ಹೇಳ್ತೀನಿ
ಎಲ್ಲಾ fb ಮಹಿಮೆ ಕಂಡ್ರೊ
ಎಲ್ಲಿ ನೋಡಿದರೂ ಇವರದ್ದೆ ಬರಹ ಪಿಕ್ಕಿನ ಓಡಾಟ
ಕವಿಗಳ ಪ್ರೇಮ ಕವನ
ಅಯ್ಯೋ ಪಾಪ!!😊
(ಕಲ್ಪನೆ)
8-7-2017. 2.06pm
^^^^^^^^^^^^^^^^^^^^^^^^^^^^^^^^^^^^^^^^^
ದೇವರು

ಯಾವ ಜನಾಂಗ ಯಾವ ದೇವರನು ಪೂಜಿಸಿದರೇನು?
ಸಮಾಜ ಬದಲಾಗುತ್ತಾ?
ಜೀವನ ಬದಲಾಗುತ್ತಾ?
ಕಷ್ಟ ದೂರವಾಗುತ್ತಾ?
ಏನೂ ಇಲ್ಲ.
ಮೊದಲು ಮಾನವನಾಗಿ ಬದುಕುವುದ ಕಲಿ.
ದೇವರು ನನಗೇನು ಕೊಟ್ಟ?
ಸಮಾಜ ನನಗೇನು ಕೊಟ್ಟಿತು?
ಇನ್ನೊಬ್ಬರು ನನಗೇನು ಮಾಡಿದರು?
ಎಂದು ಹಲುಬಭುವ ಬದಲು
ನಾನು ಯಾರಿಗೇನು ಮಾಡಿದೆ?
ಎಂದು ಮೌನವಾಗಿ ಕುಳಿತು
ನಿನ್ನನ್ನೇ ನೀನು ಅವಲೋಕಿಸಿಕೊ
ತಪ್ಪು ಅರಿವಾಗಿ ಉದ್ಧಾರವಾಗುವೆ
ಸಮಾಜವೂ ಉದ್ಧಾರವಾದೀತು.
ದೇವರು ನಿನ್ನಲ್ಲೇ ಇರುವಾ
ಅವನೇ ನಿನ್ನಾತ್ಮ.
12-8-2017. 8.51am

^^^^^^^^^^^^^^^^^^^^^^^^^^^^^^^^^^^^^^^^^^^^^^^
ಏನೆಂದು ಬಣ್ಣಿಸಲಿ…!!

ನಶೆಯೇರುವುದು ಕವನ ಕಟ್ಟಲು
ಮೈ ಬಿಸಿಯಾಗುವುದು ತಮ್ಮೆಲ್ಲರ ಕಮೆಂಟು ಕಂಡು
ಈ ಹೊಗಳಿಕೆಗೆ ನಾನು ಅರ್ಹಳೆ?
ನಗು ಮೂಡುವುದು ನನಗರಿವಿಲ್ಲದಂತೆ
ಮಕ್ಕಳ ಹೊಗಳಿಕೆಯ ಸವಿ ಜೇನು
ಹೃದಯ ತಟ್ಟುವುದು
ಸಾಂಗತ್ಯದ ವೀಣೆಯಂತೆ
ಲಯಬದ್ಧವಾಗಿ ಸ್ವರ ನುಡಿಸುವ ಶಕ್ತಿ
ಆ ಒಂದು ಹುಮ್ಮನಸ್ಸು,
ಪ್ರಾಸಬದ್ಧವಾಗಿ ಶಬ್ದ ಜೋಡಿಸಿ
ಅರೆಗಳಿಗೆ ನಾ ಮಗ್ನವಾಗಿ ನೋಡುವೆ
ನೋಡುತ್ತಲೇ ಇರುವೆ
ತಮ್ಮೆಲ್ಲರ ನೆನೆನೆನೆದು!

ಹೇಳಿ ಕಾವ್ಯಾಸಕ್ತರೆ, ಕವಿಪುಂಗವರೆ
ಮೇಡಂ,ಅಕ್ಕ,,ಅಮ್ಮ,ಸಹೋದರಿ ಎಂದೇಳುವ
ನೀವೆಲ್ಲ ಎಲ್ಲಿದ್ದಿರಿ ಇಷ್ಟು ದಿವಸ
ಸಾಹಿತ್ಯದಲಿ ಗಜಗಮುನೆ ನಡಿಗೆ ನನ್ನದು
ವೇಗದ ನಡಿಗೆ ಕಲಿಸಿದವರು ನೀವು
ಏನು ಬರೆದರೂ ಅಲ್ಲೊಂದು ಹೊಸ ತನ ಹುಡುಕಿ
ಹಲವು ಅರ್ಥವನ್ನು ಪೊಣಿಸುವವರು ನೀವು
ಉತ್ತರಿಸಲು ತಡಕಾಡುವ ಸ್ಥಿತಿ ನನ್ನದು
ಅದೇನೊ ಖುಷಿ ಅದೇನೊ ಸಂಭ್ರಮ
ಹಾಕಿದ ಬರಹ ಆಗಾಗ ಇಣುಕಿ ನೋಡಲು
ಅಂತೂ ನೀವೆಲ್ಲ ಸೇರಿ ಕಟ್ಟಿ ಹಾಕಿಬಿಟ್ಟಿರಿ
ನನ್ನನಿಲ್ಲಿ!!😊

9-8-2017. 3.58pm

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s