ಮಾನಸ ಪೂಜೆ

ಓದುಗರೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಹಬ್ಬಕ್ಕೆ ಹಣತೆ ಬೆಳಗುತ್ತೇನೆ ನಾನು
ಎಲ್ಲರೂ ಹಚ್ಚುತ್ತಾರೆಂಬ ಇರಾದೆಯಿಂದಲ್ಲ.

ಭಗವಂತನಿಗೆ ನಮಿಸುತ್ತೇನೆ ನಾನು
ಎಲ್ಲರೂ ಪೂಜಿಸುತ್ತಾರೆಂಬ ತೋರಿಕೆಗಲ್ಲ.

ತರತರದ ಹೂವ ಏರಿಸುತ್ತೇನೆ ನಾನು
ಎಲ್ಲರೂ ಅದೆಷ್ಟು ಹೂವ ಮುಡಿಸುವರೆಂಬ ಪಂಥಕ್ಕಲ್ಲ.

ಹಬ್ಬದ ಭಕ್ಷ ಮಾಡಿ ನೈವೇದ್ಯಿಸುತ್ತೇನೆ ನಾನು
ಎಲ್ಲರೂ ಏನೇನು ಮಾಡಿಡುವರೆಂಬ ಈರ್ಶೆಯಿಂದಲ್ಲ.

ನೂರೆಂಟು ಮಂತ್ರಗಳ ಜಪಿಸುತ್ತೇನೆ ನಾನು
ಎಲ್ಲರೂ ಹೇಳುತ್ತಾರೆಂಬ ಒಪ್ಪಿಸುವ ಗಿಳಿಪಾಠದಂತಲ್ಲ.

ಕಲಿತ ಹಾಡುಗಳ ಭಜಿಸುತ್ತೇನೆ ನಾನು
ಎಲ್ಲರೂ ಕಿವಿಗೊಟ್ಟು ಆಲಿಸಬೇಕೆಂಬ ಹಂಬಲದಿಂದಲ್ಲ.

ಮನದಲ್ಲಡಗಿದ ಕಲ್ಮಷಗಳ ಹೊರ ಹಾಕಿ ಚಿತ್ತ ಶಾಂತಿಗಾಗಿ
ನಿರ್ಮಲ ಮನಸ್ಸಿನ ಮಾನಸ ಪೂಜೆ ದಿನ ನಿತ್ಯ ನನ್ನದು.

ಅಲ್ಲಿ ಯಾರೆಂದರೆ ಯಾರೂ ಇಲ್ಲವೆ ಇಲ್ಲ
ಆವ ಮೂರ್ತಿಯ ನಾ ಕಾಣೆ, ನಿರ್ಮಲ ನಿರಾಕಾರವಿದುವೆ ಆ ಶಕ್ತಿ.

ಒಮ್ಮನಸಿನ ಪೂಜೆಗೆ ಕಲ್ಪನೆಯ ಬತ್ತಿಯ ಹೃದಯದಲ್ಲಿ ಅದ್ದಿ
ಪ್ರೀತಿಯ ಹೂವನೇರಿಸಿ ಭಕ್ತಿಯ ನೈವೇದ್ಯ ಹರಿ ಸದಾ ಸೇವಿಸುವ.

ನಂಬಿಕೆಯ ಬದುಕಿನ ಸಾಂಗತ್ಯದಲ್ಲಿ ಸದಾ ಪೊರೆವ ಅವ ನಮ್ಮ
ಉಸಿರ ಕೊನೆಯ ಬತ್ತಿ ಆರುವುದು ಅವನ ಪಾದದಡಿಯಲ್ಲಿ.

ಭಗವಂತನೆಂಬ ಕಲ್ಪನೆಯ ನಂಬಿಕೆ ಜಗದಗಲ ಜನರಲ್ಲಿ
ನಂಬಿದವರ ಸದಾ ಪೊರೆವ ಅವನಲ್ಲವೆ ಜಗದೊಡೆಯ?

18-10-2017. 7.11am

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

4 thoughts on “ಮಾನಸ ಪೂಜೆ”

 1. ಹಿಂದಿಯಲ್ಲಿ ದೀಪಾವಳಿಗೆ ದಿವಾಲಿ ಅನ್ನುವುದು. ಅದೆ ಕನ್ನಡದಲ್ಲಿ ಅವ ದಿವಾಳಿ😊👌 ಈ ಮುದ್ರಣದ ಶುಭಾಶಯಗಳಿಗಿಂತ ನಾವು ಬರೆಯುವುದೆ ಮೇಲು. ಖಂಡಿತಾ ಬದಲಾಯಸುವೆ. ತಮ್ಮಭಿಪ್ರಾಯಕ್ಕೆ ನನ್ನ ಗೌರವವಿದೆ.

  ಇನ್ನು ಮನಸ್ಸಿನ ಪೂಜೆ. ಇದಕ್ಕೆ ಸಾಧಿಸುವ ಛಲ ಬೇಕು. ಏಕಾಗ್ರತೆ ಬೇಕು. ಮನಸ್ಸು ಲೌಕಿಕದ ಆಡಂಬರದಿಂದ ಮುಕ್ತಗೊಳ್ಳುತ್ತ ನಡೆಯಬೇಕು. ಪ್ರಯತ್ನಿಸಿ.

  ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ.😊

  Like

  1. ನಿಜ. ಆ ನಿಸ್ಸೂರನ್ನು ಸಾಧಿಸಬಹುದು. ಆದರೆ, ನನ್ನ ಪ್ರತಿಕ್ರಿಯೆಯ ಹಿನ್ನುಡಿ ಬೇರೆಯೇ ಆಗಿತ್ತು. “ಕಲಿತ ಹಾಡುಗಳ ಭಜಿಸುತ್ತೇನೆ ನಾನು, ಎಲ್ಲರೂ ಕಿವಿಗೊಟ್ಟು ಆಲಿಸಬೇಕೆಂಬ ಹಂಬಲದಿಂದಲ್ಲ”, ಆದರೆ, ಅನೇಕ ಸಲ ಬೇರೆಯವರು ಹಾಡಿದ ಹಾಡುಗಳನ್ನು ಕೇಳಿ ನಿಮ್ಮ ಗುನುಗುನಿಕೆ ಆರಂಭವಾಗುವುದಲ್ಲವೇ? ಒಬ್ಬ ಒಳ್ಳೆಯ ಕವಿ ತನ್ನ ಸುತ್ತಲಿನ ಪ್ರಪಂಚಕ್ಕೆ ಸ್ಪಂದಿಸುವಂತೆ ಕೆಟ್ಟ ಕವಿಗಳು ಸ್ಪಂದಿಸುವುದಿಲ್ಲ. ಕವಿಸ್ಪಂದನೆ ಇತರರ ಅನುಕರಣೆಯಲ್ಲ. ನೀವೂ ಸಹ ಅನುಕರಣೆ ಬೇಡವೆಂದೇ ಹೇಳುತ್ತಿರುವುದು. ಪ್ರತಿಕ್ರಿಯೆ ಒಳ್ಳೆಯದೇ. ಆದರೆ, ಪ್ರಭಾವದಿಂದ ಕಳಚಿಕೊಂಡು ಮನಸ್ಸಿನಲ್ಲಿ ದೀಪ ಹಚ್ಚಿದರೆ ಆ ದೀಪವು ಹೆಚ್ಚು ಕಾಲ ಉರಿಯಲಾರದು. ಆಮ್ಲಜನಕದ ಕೊರತೆ ಉಂಟಾಗುತ್ತದೆ. ಬೇರೆಯವರ ಬರವಣಿಗೆ, ಬೇರೆಯವರ ಎಲ್ಲ ನಡೆ-ನುಡಿಗಳ ಪ್ರಭಾವಕ್ಕೂ ಒಳಗಾಗುವ ನಿಮ್ಮೊಳಗಿನ ಕವಯಿತ್ರಿಯು ಆ ಪ್ರಭಾವವನ್ನು ಮನಗಂಡೇ ಈ ಕವನ ಬರೆದಿರಬಹುದು. ಇತರರು ಒಡ್ಡುವ ಪಂಥ, ಸವಾಲುಗಳಿಗೆ ಉತ್ತರ ಕೊಡುವುದು ನಿಮಗೆ ಬೇಡವಾದರೂ ಮನಸ್ಸು ಸೋಲುವುದನ್ನು ತಪ್ಪಿಸಲು ಆಗುತ್ತಿಲ್ಲ ಅಲ್ಲವೇ?

   Like

 2. “happy diwali” ಅಲ್ಲ. happy deepaavali (ದೀಪಾವಳಿ). ಎಂದರೆ ಚೆನ್ನ. ಕನ್ನಡದಲ್ಲಿ ದಿವಾಳಿ ಎಂದರೆ ಬೇರೆ ಅರ್ಥ ಇದೆ ಎಂಬುದು ಕೋ-ಆಪರೆಟಿವ್ ಬ್ಯಾಂಕ್ ನಲ್ಲಿ ಕೆಲಸ ಮಾಡಿರುವ ನಿಮಗೆ ಗೊತ್ತು. ಇನ್ನು ಕವನದ ವಿಚಾರ. ನೀವೇ ಒಮ್ಮೆ ಎಲ್ಲೋ ಬರೆದ ಹಾಗೆ ನೆನಪು. “ಬೇರೆ ಯಾರಾದರೂ ಏನಾದರೂ ಬರೆದದ್ದನ್ನು ಓದಿದಾಗ ಅದಕ್ಕೆ ಪ್ರತಿಕ್ರಿಯಿಸಿ ನಿಮ್ಮ ಧಾಟಿಯಲ್ಲಿ ಅದೇ ವಿಷಯವಾಗಿ ಬರೆಯುವ ಹಾತೊರೆತ ನಿಮ್ಮನ್ನು ಕಾಡುತ್ತದೆ” ಅಂತ… ಹೌದಾದರೆ, ಈ ಮನಸ್ಸಿನ ಪೂಜೆಯನ್ನು ಯಾರ ಹಂಗೂ ಇಲ್ಲದೆ ನಿರ್ವಹಿಸಿವುದು ಹೇಗೆ?

  Like

 3. ಬೇರೆ ಯಾವುದೇ ವಿಷಯದಲ್ಲಿ ಕವಿ ಪ್ರಭಾವಕ್ಕೆ ಒಳಗಾಗಿ ಬರೆಯಬಹುದು. ಆದರೆ ಹಬ್ಬ ಆಚರಿಸುವ ಅಥವಾ ಪೂಜೆ ಮಾಡುವ ವಿಷಯದಲ್ಲಿ ಮಾತ್ರ ನಿಜಕ್ಕೂ ಯಾರ ಅನುಕರಣೆಗೆಗೂ ಒಳಗಾಗುವ ಪ್ರಶ್ನಯೆ
  ಇಲ್ಲ. ಮಾಡುವ ಪೂಜೆಗೆ ಯಾರ ಪ್ರಭಾವ ಯಾಕೆ ಬೇಕು? ಹಾಡುವುದು ದೇವರ ನಾಮ,ಮಂತ್ರ ಜಪ. ಎಲ್ಲ ಮನಸ್ಸಿನ ಅನಿಸಿಕೆಯಿಂದಾಗಿ ಹೇಳುವುದು. ಮನಸ್ಸಿಗೆ ಅಪರಿಮಿತ ಸಂತೃಪ್ತಿ ಶಾಂತಿ ಲಭಿಸುತ್ತದೆ ಅಷ್ಟೆ.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s