ಪ್ರಜಾಮುಖಿಯಲ್ಲಿ…

ಆಕ್ಟೋಬರ್ 2019ರ ಪ್ರಜಾಮುಖಿ ಪತ್ರಿಕೆಯಲ್ಲಿ ನನ್ನ ಕವನ ಪ್ರಕಟವಾಗಿದೆ. ಧನ್ಯವಾದಗಳು ಪತ್ರಿಕಾ ಬಳಗಕ್ಕೆ🙏

ಪ್ರಜಾಮುಖಿ ಕನ್ನಡ ಪ್ರಾಕ್ಷಿಕ ಪತ್ರಿಕೆಯಲ್ಲಿ ನನ್ನದೊಂದು ಲೇಖನ

ಮಾರ್ಚ್ 2019ರ ಪ್ರಜಾಮುಖಿ ಪತ್ರಿಕೆಯಲ್ಲಿ ನನ್ನದೊಂದು ಲೇಖನ ಪ್ರಕಟವಾಗಿದ್ದು ಮರೆತೇ ಬಿಟ್ಟಿದ್ದೆ. ನಾಲ್ಕು ದಿನಗಳ ಹಿಂದೆ ಈ ಪತ್ರಿಕೆಯ ಸಂಪಾದಕರಾದ ಶ್ರೀ ಕೆ.ಕರುಣೇಶ್ ಕಡತನಾಳು ಇವರು ನಮ್ಮ ಪ್ರತ್ರಿಕೆಯಲ್ಲಿ ಪ್ರಕಟವಾದ ನಿಮ್ಮೆರಡೂ ಲೇಖನಕ್ಕೆ ಕಿರು ಕಾಣಿಕೆ ಕೊಡಬೇಕು, ನಿಮ್ಮ ಅಕೌಂಟ್ ಡಿಟೇಲ್ಸ ಕಳಿಸಿ ಅಂದಾಗಲೇ ಗಮನಕ್ಕೆ ಬಂದಿದ್ದು.

ಡಿಸೆಂಬರ್ 2018ರಿಂದ ಪ್ರತೀ ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುತ್ತಿರುವ ಈ ಹೊಸ ಕನ್ನಡ ಪ್ರಾಕ್ಷಿಕ ಪತ್ರಿಕೆ ವೈವಿಧ್ಯಮಯ ವಿಷಯಗಳನ್ನೊಳಗೊಂಡಿದ್ದು ಎಲ್ಲ ವಯೋಮಾನದವರೂ ಓದಬಹುದಾದ ಹಾಗೂ ಸಂಗ್ರಹಿಸಿಡಬಹುದಾದ ಅನೇಕ ಬರಹಗಳನ್ನು ಈ ಪತ್ರಿಕೆಯಲ್ಲಿ ಕಾಣಬಹುದು. ಪತ್ರಿಕೆಗೆ ಉತ್ತಮವಾದ ಪೇಪರ್ ಬಳಸುತ್ತಿದ್ದು ಬರಹಕ್ಕೆ ತಕ್ಕಂತೆ ನುರಿತ ಚಿತ್ರಕಾರರಿಂದ ಬರೆಸುವ ಚಿತ್ರ ಬರಹಕ್ಕೆ ಹೆಚ್ಚಿನ ಮೆರುಗು ತಂದು ಓದುಗರಿಗೆ ಓದುವತ್ತ ಗಮನ ಸೆಳೆಯುತ್ತದೆ.

ಈ ಪತ್ರಿಕೆ ಎಲ್ಲರ ಮನೆ ಮಾತಾಗಿ ಹೆಚ್ಚಿನ ಶ್ರೇಯೋಭಿವೃದ್ಧಿ ಕಾಣಲಿ ಎಂಬುದು ನನ್ನ ಆಶಯ,ಹಾರೈಕೆ.🌷

31-5-2019. 6.40pm