ಪುಟಾಣಿ

ನಮ್ಮ ಮನೆಯಲೊಂದು
ಪುಟ್ಟ ಬೆಕ್ಕು ಇರುವುದು
ಬಿಟ್ಟು ಹೋದರದಕೆ
ತುಂಬ ಕೋಪ ಬರುವುದು.

ಮ್ಯಾವ್ ಮ್ಯಾವ್ ಎಂದು
ಕಾಲು ಸುತ್ತಿ ಬರುವುದು
ಕಚ್ಚಿ ಕಚ್ಚಿ ತನ್ನ ವ್ಯಥೆಯ
ಹೊರಗೆ ತೋರಿಕೊಳ್ವುದು.

ಮೂಕ ಜೀವ ಮರುಳು ಮಾಡಿತೆನ್ನ
ಹೇಗೆ ದೂರ ಮಾಡಲಿ
ಇನಿತು ಬಿಟ್ಟು ಹೋಗಲೆನಗೆ
ಮನಸೇ ಬಾರದು.

ಪಾಪ ಬೆಕ್ಕು ಮನೆಯಲ್ಲಿದ್ದು
ಒಬ್ಬಳೇ ಏನು ಮಾಡ್ವುದು
ಅದಕೂ ಮೊಬೈಲ್  ಇದ್ದರೆ
ಎಷ್ಟು ಚೆನ್ನ ಮನ ಅಂದುಕೊಳ್ವುದು.

ಮೂಕ ಜೀವ ಬೆನ್ನು ಬಿಡದು
ಇರಲಿ ಮನೆಯೆಲ್ಲ ಝಣ ಝಣ
ಒಂದರಗಳಿಗೆ ಇರದರೀಗ
ಅನಿಸುವುದು ಮನೆಯೆಲ್ಲ ಭಣ ಭಣ.

24-2-2021. 5.02pm