ನನ್ನ ಬರವಣಿಗೆ

ಈ ಬರವಣಿಗೆಯಲ್ಲಿ ನನಗೆ ಆಸಕ್ತಿ ಶುರುವಾಗಿರೋದು 1976ರ ಕೊನೆಯಲ್ಲಿ. ಆಗ ಬರವಣಿಗೆ ಬಗ್ಗೆ ಗಂಧಗಾಳ ಗೊತ್ತಿಲ್ಲ. ಹಳಿಯಾಳದ ಇನ್ನೊಂದು ಸೋದರ ಮಾವನ ಮನೆಯಲ್ಲಿ ಸ್ವಲ್ಪ ದಿನ ಇದ್ದೆ. ಮಾವ ಸಾಹಿತಿ. ಅವರ ಮನೆಯಲ್ಲಿ ಸಾಹಿತಿ ಬೀಚಿ ಮತ್ತು ಜಯಂತ ಕಾಯ್ಕಣಿಯವರ ದಶ೯ನ ಭಾಗ್ಯ. ಸಾಹಿತ್ಯ ವಿಚಾರಗಳು ಪುಸ್ತಕದ ನಂಟು ಗೊತ್ತಿಲ್ಲದಂತೆ ಅಂಟಿಕೊಂಡಿತು‌. ಜೀವನದಲ್ಲಿ ಮೊದಲ ಬಾರಿ ಹನಿಗವನ ಬರೆದೆ ಹಾಗೆ ಮುಚ್ಚಿಟ್ಟೆ ಒಂದು ಪುಸ್ತಕದ ಸಂದಿಯಲ್ಲಿ. ಅತ್ತೆಗೆ ಸಿಕ್ಕಿತು. ಅದೆ ಇದು.

ಚಿಂತೆ

ವಿಶಾಲವಾದ ಸಮುದ್ರ
ದಂಡೆಗೆ ಆಗಾಗ
ಬಂದಪ್ಪಳಿಸುವ
ನೊರೆ-ನೊರೆ
ಚಿತ್ರ-ವಿಚಿತ್ರ
ಅಲೆಗಳು.

*************

ಪ್ರೇಮ

ಹಸಿದಾಗ ತಾಯಿ
ಕರೆ ಕರೆದು ಕೊಡುವ
ಕ್ಷಣಿಕ ಹಸಿವನಿಂಗಿಸುವ
ಹಲ್ಲಿಗೆ ಮತ್ತು ಭರಿಸುವ
ಸಿಹಿ ಖಾರ ಬೆರೆತ
ಒಣ ಕುರುಕುಲು ತಿಂಡಿ‌.

(ಪ್ರಕಟ – ಮೈತ್ರಿ ಮಾಸ ಪತ್ರಿಕೆ 1981)

3-2-2016 8.49pm

Advertisements