ಶಾಯರಿಗಳು

,ಮನಸು ಮಾತು ಕೇಳುವುದಿಲ್ಲ
ನೆನಪು ಬೆನ್ನು ಬಿಡುವುದಿಲ್ಲ
ಬದುಕಿನ ಕೊನೆವರೆಗೂ
ಅನುಭವಿಸದೆ ಗತಿ ಇಲ್ಲ.
^^^^^^^^^^^^^^^^^^^^^^
ಇರಬೇಕು ಬದುಕಲ್ಲಿ
ಇದ್ದರೂ ಇಲ್ಲದಂತೆ
ಬದುಕಲಾರಡಿಯಿಟ್ಟರೂ
ಆಗ ನೀನಿರುವೆ ವಿರಾಗಿಯಂತೆ
^^^^^^^^^^^^^^^^^^^^^^^^^^^^^
ನಿತ್ಯದ ಜೀವನಕೆ ಸಾಂತ್ವನದ ಮಾತು ಬೇಕು
ಬಳುಕುವ ಬಳ್ಳಿಗೆ ಆಸರೆ ಇರಲೇ ಬೇಕು
ಹೋರಾಟದ ಬದುಕಿಗೆ ತಾಳ್ಮೆ ಇರಬೇಕು
ಬರುವುದೆಲ್ಲ ಎದುರಿಸುವ ಛಲ ಬೆಳೆಸಿಕೊಳ್ಳಬೇಕು
^^^^^^^^^^^^^^^^^^^^^^^^^^^^^^^^^
ಈಜು ಬಾರದಿದ್ದರೂ
ದಡ ಸೇರುವೆನೆಂಬ
ಹುಸಿ ನಂಬಿಕೆಯಲ್ಲಿ
ಸಾಗುವುದು ಜೀವನ
^^^^^^^^^^^^^^^^^^
ಬಂದು ಹೋಗುವವರ ಮಧ್ಯ
ತಾರತಮ್ಯ ಬೇಡ
ನಿಜವಾದ ಬಂದು
ನೀ ಯಾರೆಂದು ನೋಡಾ
ಅವರು ಬರಲಿ ಬಾರದಿರಲಿ
ಹೃದಯದ ಹಾರೈಕೆಯಿರಲಿ
^^^^^^^^^^^^^^^^^^^^^^
ಪ್ರೀತಿ ಭೂದಿ ಮುಚ್ಚಿದ ಕೆಂಡದಂತೆ
ಒಳಗೊಳಗೆ ಹೊಗೆಯಾಡುವ ಕಾವು
ಅರಿಯದೆ ಬಂದೆರಗುವ ಸಾವಂತೆ
^^^^^^^^^^^^^^^^^^^^^^^^
ಹುಟ್ಟು ಹೆತ್ತವರ ಸೊತ್ತು
ಬದುಕು ನಮ್ಮ ಸೊತ್ತು
ಸಾವು ಅವನ ಚಿತ್ತ
ಕರೆದಾಗ ಎಲ್ಲರೂ
ಹೋಗಲೇ ಬೇಕು
^^^^^^^^^^^^^^^^

ಬದುಕಿನ ಅನಿವಾರ್ಯತೆ
ಮನುಷ್ಯನನ್ನು ಬದಲಾಯಿಸುತ್ತದೆ

22-5-2017. 3.30pm

Advertisements

ಕೆಲವು ಶಾಯರಿಗಳು – (7)

ಸಿಗುವವರೆಗೆ ಆತುರ
ಸಿಕ್ಕ ಮೇಲೆ ಅನಾದರ
ಒಲವು ಪದೆ ಪದೆ ಹುಟ್ಟುವುದಲ್ಲ
ಬೇಕೆಂದಾಗ ಬರುವುದೂ ಇಲ್ಲ
ಅದು ಭಾವನೆಗಳ ಹಿಡಿ ಗಂಟು
ಒಮ್ಮೆ ಹುಟ್ಟಿತೆಂದರೆ ಅದರ ಕುರುಹು
ಕೊನೆವರೆಗೂ ಅಳಿಸುವುದು ಕಷ್ಟ.
^^^^^^^^^^^^^^^^^^^^^^
ಎಂದೂ ನೋಡದೆಯೆ
ಬರಿ ಮಾತಲೆ ಪ್ರೀತಿಸುವ
ಕಲ್ಪನೆಯಲ್ಲೆ ಮುದ್ದಿಸುವ
ಸಂತೈಕೆಯಲ್ಲೆ ಸಮಾಧಾನಿಸುವ
ಅದೊಂದು ಪ್ರೀತಿಯ ಜೀವ
ಜೀವಕ್ಕೆ ಜೀವದ ಬೆಸುಗೆ
ಇದೇ ಅಲ್ಲವೆ ಪ್ರೀತಿ
^^^^^^^^^^^^^^^^^^^^^^^
ನಾನು ಎಲ್ಲಿ?
ಅಹಂಕಾರಕೆ ಈ ಹೆಸರೆ ಬೇಕೆ?
ತರಿದು ಬಿಟ್ಟರಲ್ಲ ನಾನೆಂಬ ಈ ನುಡಿ
ನೆಲೆಯಿಲ್ಲದೆ ಅಂತರ್ಪಿಶಾಚಿ ಆದೆನಲ್ಲಾ
” ನಾನು ”
ಇದ ನೆಚ್ಚಿದ ಮನುಷ್ಯನ ಗತಿ ಕೂಡಾ
ನಾನಂತೆ!!
^^^^^^^^^^^^^^^^^^^^^^^
ಆಗದಿರುವುದಕ್ಕೆ ಆಸೆ ಬೇಡ
ಆಗುವುದರ ಕಡೆ ಗಮನ ಕೊಡು
ಮುಟ್ಟಿ ಹಾಳು ಮಾಡ ಬೇಡ
ಮುಟ್ಟಿದರೆ ಬಿಡಬೇಡ
ಹೂವು ಗಿಡದಲ್ಲಿ ನಳನಳಿಸಿದರೆ ಚೆಂದ
ಬಿದ್ದ ಹೂಗಳು ಭೂರಮೆಗೆ ಚಿತ್ತಾರ
ಅಂದವ ನೋಡಿ ಸುಮ್ಮನಿರು ಸಾಕು.
^^^^^^^^^^^^^^^^^^^^^^^^
ತಣ್ಣಗಿನ ಮನ ಕಾಣಲು
ಮೌನಕ್ಕೆ ಶರಣಾಗು
ಹೃದಯದುರಿಯ ಸಂತೈಸಲು
ಭಗವಂತನ ಮೊರೆ ಹೋಗು.
^^^^^^^^^^^^^^^^^^^^^^^^
ಕಾಲ ಎಂದೂ ಕಾಯೋಲ್ಲ
ನೀನದರೊಂದಿಗೆ ಹೆಜ್ಜೆ ಹಾಕು
ಹಣೆ ಬರಹದಂತೆ ಎಲ್ಲ ನಡೆಯುವುದು
ಹಿಡಿದಿಡುವ ಸಾಹಸ ವ್ಯರ್ಥ.
^^^^^^^^^^^^^^^^^^^^^^^^
ಆಸೆ ಹಿಡಿದು ನಿಲ್ಲಿಸು
ಇರುವುದರಲ್ಲೆ ತೃಪ್ತಿ ಕಾಣು
ಎಷ್ಟಿದ್ದರೇನು ಫಲ
ಎಲ್ಲ ಬಿಟ್ಟು ಸಾಗಬೇಕು.

4-2-2017. 10.01am

ಕೆಲವು ಶಾಯರಿಗಳು (6)

ಮದುವೆಯೆ ಜೀವನವಲ್ಲ
ಅದರಾಚೆಗಿರುವ ಜಗವ ಕಾಣು
ದೇಶ ಸುತ್ತು, ಕೋಶ ಓದು
ದಿಲ್ದಾರಾಗಿರು.☺
^^^^^^^^^^^^^^^^^^^^
ನಿನ್ನೆಯ ನೆನಪು
ನಾಳೆಯ ಯೋಚನೆಯಲ್ಲಿ
ಇಂದಿನ ಸುಃಖ ಮರೆತು
ಜೀವಿಸುವವರೆ ಜಾಸ್ತಿ.
^^^^^^^^^^^^^^^^^^^^
ಈ ಬ್ರಹ್ಮಾಂಡದ ತುಂಬ
ಬರೀ ಸಂತೋಷವೇ ತುಂಬಿರಬೇಕಿತ್ತು
ದ್ವೇಷ, ಮತ್ಸರ, ಮೋಸ ಇರಲೇ ಬಾರದಿತ್ತು.
ಆಗ ಜನ ಜೀವನ ಹೇಗಿರುತ್ತಿತ್ತು?
^^^^^^^^^^^^^^^^^^^^^^^^^
ಮನಸ್ಸಿನ ಸಂತೋಷ
ಏಕಾಂಗಿತನವನ್ನು ದೂರ ಮಾಡುತ್ತದೆ.
ದೇಹದ ಅನಾರೋಗ್ಯ
ಗುಂಪಿನಲ್ಲಿದ್ದರೂ ಏಕಾಂಗಿಯಾಗಿ ಮಾಡುತ್ತದೆ.
^^^^^^^^^^^^^^^^^^^^^^^^^^
ಅಳು ದುಃಖ ಶಮನ ಮಾಡುವ ದಿವ್ಯ ಔಷಧಿ
ಏಕಾಂಗಿಯ ಬದುಕಿಗದು ಅನಿವಾರ್ಯ
ದುಃಖ ತಪ್ತ ಮನದ ಸಂಗಾತಿ
^^^^^^^^^^^^^^^^^^^^^^^^^
4-1-2017. 4.32pm

ಕೆಲವು ಶಾಯರಿಗಳು. (5)

ಬರೆದಾಗ ಸಿಗುವ ತೃಪ್ತಿ
ಓದುಗ ನೀಡಿದ ಪ್ರತಿಕ್ರಿಯೆ
ಒಂದಕ್ಕೊಂದು ಸೇರಿ
ಇನ್ನೊಂದು ಬರಹಕ್ಕೆ ನಾಂದಿ
ಇದೇ ಕವಿಗೆ ಖುಷಿಯ ಬುನಾದಿ.
^^^^^^^^^^^^^^^^^^^^^
ಬರೆಯುವ ಬರಹಗಳು
ಕವಿಯ ಮನಸ್ಸಿನ ಕನ್ನಡಿ.
^^^^^^^^^^^^^^^^^^^^^
ಬರಹಕ್ಕೆ ಬಡತನದ ಹಂಗಿಲ್ಲ
ಮಾಡುವ ಉಧ್ಯೋಗ ಲೆಕ್ಕಕ್ಕಿಲ್ಲ.
^^^^^^^^^^^^^^^^^^^^^
ಬರವಣಿಗೆಯೆಂಬುದು
ತೀರದ ದಾಹ
ಬರೆದಷ್ಟೂ ಮುಗಿಯುವುದಿಲ್ಲ
ಅದರ ಪ್ರವಾಹ
^^^^^^^^^^^^^^^^^^^^^^
ಸೊಗಸಾದ ಕವಿತೆ ತಡಕಾಡುತ್ತಿದೆ
ಅನೂಹ್ಯ ಶಬ್ದ ಭಂಡಾರಕ್ಕೆ
ಒಮ್ಮೆ ಓದಿದರೆ ಮತ್ತೆ ಮತ್ತೆ
ಓದಬೇಕಂತೆ ತನ್ನ ಕವಿತೆ
ಕವಿ ಮನದಾಸೆ.

8-12-2016. 1.22pm.

ಕೆಲವು ಶಾಯರಿಗಳು (4)

ಇದ್ದರೂ ಇಲ್ಲದಂತೆ
ಬದುಕುವುದು ಕಷ್ಟ
^^^^^^^^^^^^^^^^^^^^^^^^^^^^^^^^

ಬದುಕಿನಲ್ಲಿ ಕಷ್ಟಗಳು ಎದುರಾದಾಗ
ಯಾರು ನಮಗೆ ಸ್ಪಂಧಿಸುತ್ತಾರೊ
ಅವರೇ ನಿಜವಾದ ಬಂಧುಗಳು.
^^^^^^^^^^^^^^^^^^^^^^^^^^^^^^^^

ಸುಃಖವಾಗಿರುವಾಗ ನಾವೆಲ್ಲರಿಗೂ ಇಷ್ಟ
ಕಷ್ಟದಲ್ಲಿರುವಾಗ ನಮ್ಮ ನೋಡಲೂ ಕಷ್ಟ.
^^^^^^^^^^^^^^^^^^^^^^^^^^^^^^^^^^^

ಸ್ನೇಹಕ್ಕೂ ಸಂಬಂಧಕ್ಕೂ ಇರುವ ವ್ಯತ್ಯಾಸ
ಸ್ನೇಹಕ್ಕೆ ಜಾತಿ, ಮತ ಭೇದವಿಲ್ಲ ಪ್ರೀತಿಗೆ ಮಾತ್ರ ಸ್ಥಾನ
ಸಂಬಧಕ್ಕೆ ಜಾತಿ ಅಂತಸ್ತು ಮುಖ್ಯ ಮಿಕ್ಕಿದ್ದೆಲ್ಲ ಗೌಣ.
^^^^^^^^^^^^^^^^^^^^^^^^^^^^^^^^^^^

ಕತ್ತಲ ಪ್ರಪಂಚದಲ್ಲಿ ಕೂತಿರಬೇಡಿ
ಬೆಳಕಿನೆಡೆಗೆ ಅಂಬೆಗಾಲಿಕ್ಕುತ್ತ ಸಾಗಿ
ಕತ್ತಲು ನಾವಂದುಕೊಂಡಷ್ಟು ಕ್ರೂರಿಯಲ್ಲ
ಕತ್ತಲಿಂದಲೆ ಬಂದವರು ಬೆಳಕಿನೆಡೆಗೆ ಸಾಗಬೇಕಷ್ಟೆ
ಪ್ರಯತ್ನ ನಮ್ಮದು, ಮಿಕ್ಕಿದ್ದು ದೈವೇಶ್ಚೆ.
^^^^^^^^^^^^^^^^^^^^^^^^^^^^^^^^^

ಹೊಗಳೋದು ತೆಗಳೋದರಿಂದ
ಸಮಸ್ಯೆ ಪರಿಹಾರ ಆಗುವುದಿಲ್ಲ
ಪರಿಹಾರದ ಮಾಗ೯ ಹುಡುಕಿ
ಮೊದಲು ಕಾಯ೯ಗತ ಗೊಳಿಸಬೇಕು.
^^^^^^^^^^^^^^^^^^^^^^^^^^^^^^^^^

ದ್ವೇಷದಿಂದ ಮನಸ್ಸು ಕೆಡುತ್ತದೆ
ಜಗಳಕ್ಕೆ ನಾಂದಿ
ಪ್ರೀತಿಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ
ಶಾಂತಿಯ ಬುನಾದಿ.
^^^^^^^^^^^^^^^^^^^^^^^^^^^^^^^^^

ಹುಟ್ಟು ಹೆತ್ತವರ ಸೊತ್ತು
ಬದುಕು ನಮ್ಮ ಸೊತ್ತು
ಸಾವು ದೇವನ ಚಿತ್ತ
ಕರೆ ಬಂದಾಗ ಹೋಗಲೇಬೇಕತ್ತ.
^^^^^^^^^^^^^^^^^^^^^^^^^^^^^^^^^

ಸತ್ಯ ಹೇಳುವವನು
ನಿಧಾನವಾಗಿ ಹತ್ತುತ್ತಾನೆ ಚಟ್ಟ
ಸುಳ್ಳು ಹೇಳುವವನು
ಕೂಡಲೆ ಹತ್ತುತ್ತಾನೆ ಘಟ್ಟ
ಪರಿಣಾಮ
ಸತ್ಯಕ್ಕೆ ಸಾವಿಲ್ಲ, ಸುಳ್ಳೀಗೆ ಸುಃಖವಿಲ್ಲ.
^^^^^^^^^^^^^^^^^^^^^^^^^^^^^^^^^

ಆರೋಗ್ಯ ಚೆನ್ನಾಗಿರುವಾಗ
ಬದುಕು ಎಷ್ಟು ಹತ್ತಿರ ಅನಿಸುತ್ತದೆ
ಅದೇ ಆರೋಗ್ಯ ಕೆಟ್ಟಾಗ
ಸಾವು ಎಷ್ಟು ದೂರ ಅನಿಸುತ್ತದೆ.
^^^^^^^^^^^^^^^^^^^^^^^^^^^^^^^^^^
ಸ್ನೇಹವೆಂಬ ಅಮೂಲ್ಯ ರತ್ನ
ಸಿಕ್ಕಾಗ ಅಮಿತ ಸಂತೋಷ
ಕಳೆದುಕೊಂಡಾಗ ತಡೆಯಲಾಗದ ದುಃಖ
ಕಾಪಿಟ್ಟು ಕಾಪಾಡಿಕೊಳ್ಳುವುದು
ನಮಗೆ ದೇವರು ಕೊಟ್ಟ ಅವಕಾಶ.
^^^^^^^^^^^^^^^^^^^^^^^^^^^^^^^^^^
ಕಂಡವರ ಸಂಪತ್ತಿನ ಮೇಲೆ ಸೌಧ ಕಟ್ಟಿದರೇನು ಫಲ.
ಇನ್ನೊಬ್ಬರಿಗೆ ಹೊಟ್ಟೆ ಉರಿಸಿ ಬದುಕಿದರೇನು ಫಲ
ಬದುಕಿನ ಪೂತಿ೯ ಚಿತ್ರಣ ಸಾವಿನಲ್ಲಿ ಪ್ರದಶ೯ನ
ಇದೇ ಮಾನವನಿಗೆ ದೇವ ಕೊಟ್ಟ ಪ್ರತಿಫಲ
ಶರಣನ ಗುಣ ಮರಣದಲ್ಲಿ ನೋಡು.

8-12-2016. 12.40pm

ಕೆಲವು ಶಾಯರಿಗಳು (3)

ಪ್ರತ್ಯಕ್ಷವಾದರೂ
ಪ್ರಮಾಣಿಸಿ ನೋಡು
ಸಂಶಯದ ಭೂತ ಹೊಕ್ಕರೆ
ಹೊಡೆದೋಡಿಸಿ ನೋಡು
^^^^^^^^^^^^^^^^^^^^^^^^

ನಿಷ್ಟೆಯಲಿ ನಡೆದರೂ
ಜನ ತಪ್ಪಾಗಿ ಕಾಣುವದೇಕೆ?
ಭರವಸೆಯಿಲ್ಲದ ಬದುಕಿಗೆ
ಅಷ್ಟೊಂದು ಆಸೆ ಏಕೆ?
^^^^^^^^^^^^^^^^^^^^^^^^^

ಮೊದಲು ನಮ್ಮ ಕಾಲು ಬುಡ
ನಾವು ನೋಡಿಕೊಳ್ಳಬೇಕು
ಆಮೇಲೆ ಇನ್ನೊಬ್ಬರ ಕಡೆ
ಬೊಟ್ಟು ಮಾಡಬೇಕು
ಬೇರೆಯವರ ತಪ್ಪು ಏನೆಂದು
ಹೀಗಳೆಯುವ ಬದಲು
ನಿನ್ನ ತಪ್ಪೇನೆಂದು ವಿಮಶಿ೯ಸು
^^^^^^^^^^^^^^^^^^^^^^^^^^^

ತಪ್ಪು ಮಾಡುವುದು ಸಹಜ ಗುಣ
ತಪ್ಪನ್ನು ತಪ್ಪೂ ಎಂದು ಒಪ್ಪಿಕೊಳ್ಳುವುದು
ದೊಡ್ಡ ಗುಣ
ತಪ್ಪೂ ಎಂದು ತಿಳಿದೂ
ಪದೆ ಪದೆ ತಪ್ಪು ಮಾಡುವುದು
ಮುಖ೯ತನ
ತಪ್ಪನ್ನು ಒಪ್ಪಿಕೊಳ್ಳದೆ ಇರುವುದು
ಷಂಢತನ.
^^^^^^^^^^^^^^^^^^^^^^^^^
ಬಾಲ್ಯದ ನೆನಪು
ಜೋಳಿಗೆಯ ತುಂಬ
ಸವಿಯುವ ಬಯಕೆ
ಗರಿ ಗೆದರುವುದು.
ತನು ಮನದ ತುಂಬ
ಆಗಾಗ ಸುತ್ತಿ ಬರುವುದು
ದೊಡ್ಡವರಾದ
ಎಲ್ಲರೆದೆ ತುಂಬ.
^^^^^^^^^^^^^^^^^^^^^^^^^
ಬದುಕಿನ ಸತ್ಯ ಜೀವನಕೆ ಮಿತ್ಯ
ಆಗು ಹೋಗುಗಳ ಅಳಿವು ಉಳಿವು
ಆ ಪರಮಾತ್ಮನ ಕೃಪಾಕಟಾಕ್ಷದಲಿ
ಎಲ್ಲ ನಡೆಯುತಿರುವಾಗ
ಮಾರಲಾಗದ ಜೀವನ ಅದವನಿಗಷ್ಟೆ ಸೀಮಿತ
ಋಣದ ನೇಣಿಗೆ ಆಗುವನು ಪ್ರತೀ ಕ್ಷಣ
ಬಿಡಿಸಿಕೊಳ್ಳಲಾಗದು ಇದುವೆ ಜೀವನ.

30-11-2016 2.05pm

ಕೆಲವು ಶಾಯರಿಗಳು (2)

ಮದುವೆಯಲ್ಲಿ
ಸೌಂದರ್ಯ ನೋಡ್ತಾರೆ
ಆಮೇಲೆ ಸಂಸಾರ
ಹೇಗಿದೆ ಕೇಳ್ತಾರೆ
^^^^^^^^^^^^^^^^^^^^^^^^

ಸ್ಟೇಟಸ್ ಬರೆದೆ
ಅಂತ ಬೀಗೋದಲ್ಲ
ಮನ ತಟ್ಟುವಂತೆ
ಬರಿಬೇಕಲ್ಲ.!!
^^^^^^^^^^^^^^^^^^^^^^^^

ಚಿನ್ನ ತಿನ್ನೋಕಾಗಲ್ಲ
ಅನ್ನ ಧರಿಸೋಕಾಗಲ್ಲ
ಯಾವುದು ಹೇಗಿರಬೇಕೊ
ಹಾಗಿದ್ದರೇ ಚೆನ್ನ
^^^^^^^^^^^^^^^^^^^^^^^^^^

ಬದುಕನ್ನ ಪ್ರೀತಿಸಿದಷ್ಟೂ
ಅದು ನಮ್ಮಿಂದ ದೂರವಾಗುತ್ತದೆ
ವಿಮುಖವಾಗಿ ನಡೆದರೆ
ನಮ್ಮಿಂದೆ ಬರುತ್ತದೆ.
^^^^^^^^^^^^^^^^^^^^^^^^^^^^

ನೀ ಹೇಗೆ ಇರು
ಎಷ್ಟೇ ಒಳ್ಳೆಯವನಾಗಿರು
ಕೆಲವು ಜನ ಮೊಸರಲ್ಲೂ
ಕಲ್ಲು ಹುಡುಕೋದು ಬಿಡಲ್ಲ.
^^^^^^^^^^^^^^^^^^^^^^^^^^^^^

ಎಲ್ಲವೂ ಎಲ್ಲರೂ
ನಾವಂದುಕೊಂಡಂತೆ ಇರೋಲ್ಲ
ಯಾವಾಗಲೂ ಎಲ್ಲವೂ
ನಾವಂದುಕೊಂಡಂತೆ ನಡೆಯೋಲ್ಲ
ಅದೃಷ್ಟ ಬೇಕು…!!
^^^^^^^^^^^^^^^^^^^^^^^^^^^^^^^
27-11-2016 7.43am