ಕೆಲವು ಹಾಸ್ಯ ಬರಹಗಳು

ಕುಡಿತ :

ಹಬ್ಬ ಮಾಡೋಣ
ಸಾಮಾನು ಸೀರೆ ತರ್ತೀನಂತ ಹೋದವನು
ಹೋಗೇ ಬೀಟ್ಟ ಎಲ್ಲಿಗೆ?
ದಿನಾ ಸಂಜೆ ಹೋಗೊ ಬಾರಿಗೆ.

ಬಾರಿ ಬಾರಿ ಬಗ್ಗಿ ನೋಡಿ
ಸುಸ್ತಾಗಿ ಹೆಂಡತಿ ಮಲಗೇಬಿಟ್ಟಳು ಕದವಿಕ್ಕಿ.

ಬೆಳಗ್ಗೆ ಎದ್ದು ಪಕ್ಕದವರಿಗೆ ಹೇಳಿದಳು
ಕರೆತಂದಿದ್ದಕ್ಕೆ ನಾನು ನಿಮಗೆ ತುಂಬಾ ಆಭಾರಿ.

ಕಾರಣ :
ಅವ ಕುಡಿದು ತೂರಾಡಿ ಬಿದ್ದಿದ್ದು ಪಕ್ಕದ ಮೋರಿಲೀರಿ!
***********

ಬುದ್ಧಿವಂತ :

ನಿಂಗೇನು ಬೇರೆ ಕೆಲಸ ಇಲ್ವಾ?
ಮತ್ಯಾಕ್ ಬಂದೆ?

ಅದೇ ನೀವೇ ಹೇಳಿದ್ರಲ್ಲಾ.
ಅದಕೆ ಬಂದೆ.

ಹಾಂಗಂದರೆ ಏನೋ ಅದು?

ಏನಿಲ್ಲಾ ಮತ್ತೆ ಮತ್ತೆ……

ಬೇಗ ಹೇಳೋ. ನುಲಿಬೇಡಾ.

ನನಗೆ ಹೆದರಿಕೆ ಆಗುತ್ತೆ. ಹಿ…ಹಿ…

ಇದು ಬೇರೆ ಆಗುತ್ತಾ? ಭಂಡಾ ನೀನು.

ಹಾಂಗಂದರೆ?

ಥೊ….ಹೋಗೊ. ನಿನ್ನ ಹತ್ತಿರ ಮಾತಾಡೋರಿಗೆ ಬುದ್ಧಿ ಇಲ್ಲ.

ಹಿ….ಹಿ…. ಈಗಲಾದರೂ ಗೊತ್ತಾಯಿತಲ್ಲ. ಬತ್ತಿನಿ.

ಲೋ….ನಿಂತ್ಕೊಳ್ಳೋ. ಅದೇನಂತ ಹೇಳಿಬಿಟ್ಟು ಹೋಗು.

ಅದೇ ನೀವೇ ಹೇಳಿದ್ರಲ್ಲಾ. ನಿಮಗೆ ಬುದ್ಧಿ ಇಲ್ಲ ಅಂತ. ಅದನ್ನೇ ಹೇಳವಾ ಅಂತ ಬಂದಿದ್ದೆ. ಬರ್ಲಾ…..??
******************

ಹುಡುಗಿ :

ನಿನಗೆ ಎಷ್ಟೋ ವಯಸ್ಸು?

ಹೇಳಲ್ಲಾ….

ಹೇಳದೇ ಇದ್ದರೆ ಕತ್ತೆ ಬಾಲಾ. ನಿನಗೆ ಚಾನ್ಸ್ ಇಲ್ಲ ಬಿಡು.

ಏಯ್ ಅದೇನೊ ಹೇಳೊ ಹೇಳೊ ಪ್ಲೀಸ್..

ನಾ ಹೇಳಾಕಿಲ್ಲಾ…

ಹೇಳಲ್ವಾ? ಹೇಳಲ್ವಾ?….

ಊಹೂಂ ಹೇಳಲ್ಲಾ. ಏನೀಗಾ?

ಹಾಗಾದರೆ ನಾನೂ ಹೇಳಲ್ಲಾ.

ಸರಿ ಬಿಡು. ನಾನು ಹೇಳಬೇಕಂತಿದ್ದು ಹುಡುಗಿ ವಿಷಯ. ಇದರ ಮುಂದೆ ನಿನ್ನದೇನು ಮಹಾ ಇರುತ್ತೆ.
ಹೋಗೆಲೋ….

ಹೋಗೆಲೋನಾ?
ನಾನು ಹೇಳಬೇಕಂತಿದ್ದು ನನಗೆ ಹುಡುಗಿ ಸಿಕ್ಕ ವಿಷಯ. ಇನ್ನು ಆ ಹುಡುಗಿ ನೀನೆ ಇಟ್ಕೊ. ಬರ್ಲಾ….ಬಾಯ್ ಕಣೋ…ನನ್ನ ಹುಡುಗಿ ಕಾಯ್ತಿದ್ದಾಳೆ.
***************

ಕೊರೋನಾ:

ಆಂಟಿ : ಏನಮ್ಮಾ ಊರಿಗೆ ಹೋಗಿದ್ಯಾ? ಏನ್ ಸಮಾಚಾರಾ ಊರಿನ ಕಡೆ?

ಅವಳು : ಹೂಂ ಆಂಟಿ ಹೋಗಿದ್ದೆ.  ಸಮಾಚಾರಾ ಏನಿರುತ್ತದೆ, ಎಲ್ಲೂ ಹೋಗಾಂಗಿಲ್ಲ ಬರಾಂಗಿಲ್ಲ.  ಇರು ಇರು ಅಂದ್ರೂ ಎದ್ದೋಡಿ ಬಂದ್ಬುಟ್ಟೆ.

ಆಂಟಿ : ಅಯ್ಯೋ ಶಿವನೇ…! ಅಪ್ಪ ಅಮ್ಮ ಏನಂದುಕೊಳಾಕಿಲ್ಲ ಹೇಳು ನೀ ಹೀಂಗೆ ಮಾಡಿದ್ರೆ? ಇನ್ನೂ ನಾಲ್ಕು ದಿನ ಇರಾಕಿಲ್ವಾ?

ಅವಳು : ಇಲ್ಲ ಆಂಟಿ… ವರ್ಕ್ ಫ್ರಮ್ ಹೋಮ್ ಅಂತ
ಸಿಟಿಯಲ್ಲಿ ಇರುವವರೆಲ್ಲ ಹಳ್ಳಿ ಸೇರ್ಕಂಡವರೆ. ಧ ಕೆಲಸ ಜಾಸ್ತಿ.  ಅದ್ಕೇ ಬಂದ್ಬುಟ್ಟೆ.
*****************

ಬರಹ :

ಮೊದಲೆಲ್ಲಾ ಮನೆಯಲ್ಲಿ ಅಕಸ್ಮಾತ್
ಹಾಲು ಉಕ್ಕಿದರೆ
ಶುಭ ಸಂಕೇತ ಎನ್ನುತ್ತಿದ್ದರು
ಈಗ ದಿನಾ ಮರೆತು
ಉಕ್ಕಿಸೊ ಹಾಲು ನೋಡಿ
“ನಿನಗೆಂತಾ ಮರೆವು? ನೋಡಲ್ಲಿ,
ಹಾಲೆಲ್ಲಾ ಉಕ್ಕಿ ಹಾಳಾಗೋಯ್ತು
ಗಮನ ಬೇಡ್ವಾ?
ಬರೀ ಉಗಿಸ್ಕೊಳೋದೇ ಆಗೋಯ್ತು.

“ದಿನಾ ಸಾಯೋನಿಗೆ ಅಳೋರ್ಯಾರು?”
ಗಾದೆ.
****************

ಆಗಂತುಕ :

ಕುಡಿಯಲೇನಾದರೂ ಕೊಡಲೇ
ಸದ್ಯಕ್ಕೆ ಟೀ, ಕಾಫಿ ಬೇಡ
ಹೀಗೆಂದರೆ ಹೇಗೆ ಹಾಲಾದರೂ..
ಛೆ ಛೆ ಅದೇನೂ ಬೇಡಾ
ಕೊಡಿ ಒಂದು ಗ್ಲಾಸು ನೀ(ಬೀ)ರು.
************

3-3-2020. 12.07pm

ಹನಿಗವನಗಳು “ಹಾಸ್ಯ”

ನೀನೇ ನನ್ನ ಬರಹಕ್ಕೆ ಸ್ಪೂರ್ತಿ
ಹೀಗೆ ಹೇಳಿದ್ದೇನೆ ಎಷ್ಟೋ ಸರ್ತಿ
ಆದರೂ ನೀ ನಂಬಲಿಲ್ಲ ಪೂರ್ತಿ
ಈಗ ಗೊತ್ತಾಯಿತೇ
ನನಗೆ ಬಂದ ಮೇಲೆ ಕೀರ್ತಿ
ಹೋಗೋ…ನೀಇಇಇಇಇ
ಬಲೂ ದಡ್ಡಾ
ಈಗಾಲಾದರೂ ಒಪ್ಪಿಕೋ…
ಪೆದ್ದಾ…!
*************

ನನ್ನ ಕನಸಿನ ಅರಮನೆಯ ಸುತ್ತಲೂ
ಕಾವಲಿಗೆ ನಿನ್ನೇ
ನೇಮಿಸಬೇಕೆಂದಿರುವೆ ಗೆಳೆಯಾ
ಏಕೆಂದರೆ ನಿನಗಿಂತಲೂ
ನಂಬಿಕೆಯ ವ್ಯಕ್ತಿ ಬೇರೊಬ್ಬರಿಲ್ಲ…
ಒಪ್ಪಿಕೊಂಡುಬಿಡು
ದೂಸ್ರಾ ಮಾತಾಡದೇ…
ಕಾರಣ ನೀ ಸಿಕ್ಕ ಮೇಲೆ
ಹುಡುಕುವ ಕಾರ್ಯಕ್ಕೆ
ಅಡ್ಡಿಯಾಗಿದೆ ಈ ಕೊರೋನಾ….
ಸಿಕ್ಕಿದ್ದೇ ಸೀರುಂಡೆ ಎಂಬಂತಾಯಿತಲ್ಲಾ
ನನ್ನ ಸ್ಥಿತಿ…ಏನ್ಮಾಡ್ಲಿ….??
ಒಟ್ಟಿನಲ್ಲಿ ನಿನ್ನ ಅದೃಷ್ಟ
ಖುಲಾಯಿಸಿತು ಬಿಡು….
ಹೊಡೆದೆ ಚಾನ್ಸ್….!
***************

ಗಡದ್ದಾಗಿ ನಿದ್ದೆ ಬರಬೇಕಿಂದು
ಬಿದ್ದರೆ ಕನಸೊಂದು
ನೆನಪಾಗುಳಿಯಬೇಕೆಂದೆಂದೂ
ಆದರೆ ಬಡ್ಡೀ ಮಗಂದು….
ಕನಸು ಬೆಳಗಾಗುವಷ್ಟರಲ್ಲಿ
ಮರೆತೇ ಹೋಗುವುದು
ಇದಕ್ಕೇನು ಮಾಡುವುದು??
****************

ಕಟ್ಟುವರು
ಒಡಹುಟ್ಟಿದವನೆಂದು
ತಿಳಿದು ರಾಖಿ
ಇನ್ನು ಕೆಲವರು
ಕಟ್ಟುವುದವರ ಶೋಕಿ
ಕ್ರಮೇಣ ಹೇಳುವರು
ಅದು ಬಿಟ್ಟಾಕಿ
ಪ್ರೀತಿ ಮಾಡೋಣ
ಆಗುವೆ ನಾ ನಿನ್ನ ಸಾಕಿ.
*************

ಎನ್ನ ಭಾವನೆಗಳನೆಲ್ಲ
ಸುರಿಯುತ್ತಿರುವೆ
ನಿನ್ನ ಪಾದ ತಳದಲ್ಲಿ
ಒಮ್ಮೆ ನೋಡಲಾರೆಯಾ
ಬಗ್ಗಿ ಬಾಚಿ ತಬ್ಬಿ
ಮನದಿಂಗಿತವ ಅರಿಯಲಾರೆಯಾ
ಕನಸ ಬಿಂದಿಗೆಯ ತುಂಬ
ಸಂತಸವ ತುಂಬಿ
ನಾಳಿನ ಬದುಕಿಗೆ
ನಾಂದಿ ಹಾಡಲಾರೆಯಾ
ನೀ ಹೀಗೆ ಮೌನವಾದರೆ
ಹುಡುಕಲೇ …..
ನಾನಿನ್ನೊಂದು ಪಾದಾ….!
**************

ನಿನ್ನ ಮೇಲೆ
ಸಿಕ್ಕಾಪಟ್ಟೆ ಪ್ರೀತಿಯಾಗಿದೆ
ಆದರೆ ಹೇಳಿಕೊಳ್ಳಲು ನಾಚಿಕೆಯಾಗಿದೆ
ಇದು ತಾನಾಗೇ ಗೊತ್ತಾಗುವವರೆಗೂ
ಕಾಯುವ ಸರದಿ ನನ್ನದಾಗಿದೆ
ಕಾದೂ ಕಾದೂ
ಈಗ ಮನಸು ಹೇಳುತಿದೆ
ಬಲೂ ಪೆದ್ದಾ ನೀನು
ಅದೆಲ್ಲಿಂದ ಗಂಟ್ಬಿದ್ದೆ ಹೇಳು ….!
************

ಪ್ರತಿ ಸಲವೂ
ನಾನೇ ಸೋಲಬೇಕೆ…?
ಹಾಗಂತ ನಾನೇನ್ ಹೇಳಿಲ್ವಲ್ಲಾ…
ಸೋಲು ಗೆಲುವು ಇದ್ದಿದ್ದೇ
ನಾನು ನೀನೆಂಬುದ ಬಿಟ್ಟು
ನಾವು ಎಂಬ ಭಾವನೆ
ಬೇರು ಬಿಟ್ಟರೆ ಸಾಕಲ್ವಾ?
ಯೋಚಿಸೊ ಮಾರಾಯಾ…!
************

23-8-2020. 9.15am