ಹೈಕು


ಈಮೋಜಿಗಳ
ಹಾವಳಿಗಳಲಿಂದು
ಭಾವವೇ ಶೂನ್ಯ||

ಅಕ್ಷರ ಕೊಲೆ
ಎಲ್ಲರ ಚಿತ್ತವೀಗ
ಒತ್ತುವುದತ್ತ||

ನಗು ಅಳುವೂ
ಬಿಗುಮಾನದ ಸಂಚೂ
ಬಣ್ಣಗಳಲ್ಲಿ||

ಮಾತು ಮೌನದಿ
ಹೊರಹೊಮ್ಮುವ ಭಾವ
ಉಡುಗಿತಲ್ಲಾ||

ಓದುಗನಾಟ
ಕವಿ ಮೂಕ ಪ್ರೇಕ್ಷಕ
ಒಪ್ಪಿಕೊಳ್ಳೋಣ||

ಏನು ಮಾಡಲಿ
ಬಿಡಲಾದೀತೆ ಎಂದೂ
ಬರಹದ ದಾಹ||

9-11-2020. 6.25pm