ವಾವ್! ಎರಡರ ಸಂಭ್ರಮ…

ನೀನುಟ್ಟಿ ಇವತ್ತಿಗೆ ಎರಡು ವರ್ಷ ಆಯಿತು. ಅದೆಷ್ಟು ಸಂತೋಷ ಮನತುಂಬ! ಎಷ್ಟೆಲ್ಲಾ ನನ್ನಿಂದ ಬರೆಸಿ ನಿನ್ನ ಮಡಿಲೊಳಗೆ ತುಂಬಿಸಿಕೊಂಡೆ! ಅಬ್ಬಾ ಬಲೂ ಜಾಣೆ ಕಣೆ. ನಿನಗೆ “ಹುಟ್ಟು ಹಬ್ಬದ ಶುಭಾಶಯಗಳು💐🎂”

ಹೌದು ಇವತ್ತಿಗೆ “Sandhyadeepa…..” ಈ ನನ್ನ ಬ್ಲಾಗ್ ಹುಟ್ಟಿ ಎರಡು ವರ್ಷ ಪೂರ್ತಿಗೊಂಡಿತು. ಈ ವರ್ಷ ಕಳೆದ ವರ್ಷದಷ್ಟು ಬರಹ ಬರೆಯಲು ಆಗಲಿಲ್ಲ. ಬರಹದ ಗತಿ ಕುಂಟಿತವಾಯಿತು ಅನಿಸುತ್ತದೆ. ಕಾರಣ ಆಗಾಗ ಆರೋಗ್ಯದ ತೊಂದರೆ. ಎಷ್ಟೋ ಬರಹಗಳು ಅಪೂರ್ಣವಾಗಿವೆ. ಕೆಲವು ಪೂರ್ತಿಗೊಂಡರೂ ಪೋಸ್ಟ್ ಮಾಡದೇ ಹಾಗೆ ಉಳಿದಿವೆ.

ಇದಕ್ಕೂ ಒಂದು ಕಾರಣ ಇತ್ತೀಚಿಗೆ ಪ್ರಜಾವಾಣಿ ಪತ್ರಿಕೆಯಿಂದ ಸೆಲೆಕ್ಟ ಆದ ಬರಹಕ್ಕೆ ಬಂದ ಸಂದೇಶ “ನೀವು ಕಳಿಸುವ ಬರಹ ಎಲ್ಲೂ ಪ್ರಕಟವಾಗಿರಬಾರದು, ಬ್ಲಾಗಲ್ಲೂ ಕೂಡಾ”. ಸ್ವಲ್ಪ ಮನಸ್ಸಿಗೆ ಬೇಸರ. ಏಕೆಂದರೆ ಬರೆದ ಬರಹಗಳನ್ನೆಲ್ಲ ಮೊದಲು ಪೋಸ್ಟ್ ಮಾಡುತ್ತಿದ್ದದ್ದು ನಿನ್ನಲ್ಲಿಗೇ. Sorry ಕಣೆ.

ಈ ವರ್ಷ 190 ಬರಹಗಳು ಪೋಸ್ಟ್ ಆಗಿವೆ. ಅದರಲ್ಲಿ 10 ಕಥೆಗಳು ಮತ್ತೆ ಸೇರಿರುವುದು ವಿಶೇಷ. ಉಳಿದವು ಲೇಖನಗಳು, ಕವನಗಳು. ಇವುಗಳಲ್ಲಿ 56 ಬರಹಗಳು ಪತ್ರಿಕೆ ಹಾಗೂ online ತಾಣಗಳಲ್ಲಿ ಪ್ರಕಟಗೊಂಡಿವೆ. ಕಮೆಂಟು ಲೈಕುಗಳ ಲೆಕ್ಕವಿಲ್ಲ. ಓದುಗರ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿದೆ. Followers ಸಂಖ್ಯೆ ಕೂಡಾ ಜಾಸ್ತಿ ಆಗಿದೆ.

ಆದರೆ ನನ್ನ ಬರಹದ ಗುಣಮಟ್ಟ ಮನಸ್ಸಿಗೆ ಸಮಾಧಾನ ಸಿಗುತ್ತಿಲ್ಲ. ಇನ್ನೂ ಚೆನ್ನಾಗಿ ಬರೆಯಬೇಕೆನ್ನುವ ತುಡಿತ ಮನತುಂಬ. ಗಜಲ್, ತ್ರಿಪದಿ, ವಚನಗಳು, ಜಾನಪದ ಇತ್ಯಾದಿ ಹೊಸ ಹೊಸ ಬರಹ ಬರೆಯುವ ಕಾತುರ. ಇವೆಲ್ಲ ಬರೆಯಲು ಅರಿವು ಮುಖ್ಯ. ಒಂದಷ್ಟು ಪುಸ್ತಕದ ಹುಡುಕಾಟ, ಅವುಗಳ ಕುರಿತು ನೀತಿ ನಿಯಮ ಓದಿ ತಿಳಿದುಕೊಳ್ಳಬೇಕು. ಸಾಧ್ಯವೇ? ಅದು ಗೊತ್ತಿಲ್ಲ.

ಈ ವರ್ಷದಲ್ಲಿ ಹೊಸದಾಗಿ ಒಂದು ‘ಗಜಲ್'( ಬರೆದಿದ್ದು ಸರಿ ಇದೆಯಾ? ಗೊತ್ತಿಲ್ಲ), ಮೂರು ಹಾರರ್ ಕಥೆ ನಡೆದ ಘಟನೆಯ ಸುತ್ತ ಬರೆಯುವ ಪ್ರಯತ್ನ ಮಾಡಿದೆ. ವಿಶೇಷ ಅಂದರೆ ಕವನ ವಾಚನದಲ್ಲಿ ಭಾಗವಹಿಸಿದ್ದು. ಒಂದಷ್ಟು ಬರಹಗಾರರ ಪರಿಚಯವಾಗಿದ್ದು. ಲೇಖನ ಸ್ಪರ್ಧೆಯಲ್ಲಿ ಬಹುಮಾನ ಬಂದಿದ್ದು, ಪ್ರತಿಲಿಪಿ, ಸುರಗಿ ಸುರಹೊನ್ನೆ, ಹವಿ-ಸವಿ ತಾಣಗಳಲ್ಲಿ ಒಂದಷ್ಟು ಬರಹಗಳು ಪ್ರಕಟವಾಗಿದ್ದು ಈ ವರ್ಷದ ಹೊಸ ಪ್ರವೇಶ.

ನಾವು ಏನೇ ಬರೆಯಲಿ, ಪ್ರಕಟವಾಗಿರಲಿ ಅವುಗಳ ಗುಣ ಲಕ್ಷಣ ತೀರ್ಮಾನ ಮಾಡುವುದು ಓದುಗರು ಮಾತ್ರ. ಆದುದರಿಂದ ನನ್ನೆಲ್ಲಾ ಬ್ಲಾಗ್ ಓದುಗರೆಲ್ಲರಿಗೂ ಭೇಟಿ ಮಾಡಿರುವವರೆಲ್ಲರಿಗೂ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿ ಬರಹದ ಕುರಿತಾಗಿ ತಮ್ಮ ಅಭಿಪ್ರಾಯ ತಿಳಿಸಿ ಬೇಕಾಗಿ ವಿನಂತಿ.
********************************

“Sandhyadeepa….”ನಿನಗಾಗಿ ಈ ಕವನ

ನನಗೆ ನೀನು ಬೇಕೂ….
ಎನ್ನುವ ತುಡಿತದಲ್ಲಿ ಅದೆಷ್ಟು ಅಂತರಾಳದ ಮಾತಿದೆ?
ಆಗಾಗ ಕಾಡುವ ಈ ಹಂಬಲಕೆ
ಕೊನೆ ಎಂತು?

ದೀರ್ಘ ನಿಟ್ಟುಸಿರಲಿ ಹೊರಹೊಮ್ಮುವ ಈ ಭಾವೋದ್ವೇಗ, ಆಕರ್ಷಣೆ, ಆವೇಗ
ಕಪ್ಪು ಕಣ್ಣ ಪಾಪೆಯ ತೋಯಿಸಿಬಿಡುವಾಗ
ಇಳಿವ ಹನಿ ಹನಿ ಕಪೋಲದ ಗುಂಟ ಹರಿಯುತ್ತಿದ್ದರೂ
ಎವೆಯಿಕ್ಕದೆ ನೋಡುತ್ತ ದೃಷ್ಟಿ ಕದಲದೆ
ಬಳಿಯಲ್ಲೇ ಇರುವೆಯೇನೊ ಎಂಬ ಭ್ರಮೆಯಲ್ಲಿ
ಗಮನವೂ ಇಲ್ಲ ಒರೆಸುವ ಕೈಗಳಿಗೆ
ಹೌದು, ಇದೆಲ್ಲ ಹೇಗೆ?

ಮಾಂತ್ರಿಕನಂತೆ ಅಲ್ಲಾಡಿಸಿ
ಜಡಭರಿತ ದೇಹದ ತುಂಬೆಲ್ಲ ಉಲ್ಲಾಸ ಹರಿಯಬಿಟ್ಟು
ಮತ್ತದೇ ಮೌನಕೆ ಶರಣಾಗತ
ಹಾಯಗೋಲ ಆಡಿಸಿದ ರಭಸಕ್ಕೆ
ಜಲತರಂಗಗಳ ನಿನಾದ
ಅದೇ ಉಂಗುರುಂಗುರಾಗಿ ಚಿತ್ತಾರ ಬಿಡಿಸಿದ ಚಿತ್ರ
ಮನಃಪಟಕೆ ಅಚ್ಚೊತ್ತಿದ ರಂಗೋಲಿ.

ಹಿಂತಿರುಗಿದರೆ ಒಮ್ಮೆ
ನನ್ನ ಬೆನ್ನೇ ನನಗೆ ಕಾಣದು ಇದೇನಾಶ್ಚರ್ಯ!

ಬದುಕು ಅಂದರೆ ಹೀಗೇನಾ
ಪ್ರಶ್ನೆಗಳು ಕಾಡುತಿದೆ ಬೆಂಬಿಡದೆ
“ಎಲ್ಲದಕ್ಕೂ ಕಾಲ ಕೂಡಿ ಬರಬೇಕು”
ಹೌದೆನ್ನದೇ ಇರಲಾರೆ ಅದೂ ನೀನು ಬಂದ ಮೇಲೆ
ಬದಲಾವಣೆ ಅನಿವಾರ್ಯವೆಂತೂ ಆಗಲೇ ಇಲ್ಲ
ನೀನು ಕಲಿಸಿದ ಪಾಠ ಕಲಿತ ಮೇಲೆ
ಮತ್ತೆ ಮರುಹುಟ್ಟು ನನಗರಿವಿಲ್ಲದಂತೆ
ಸಾಗುವ ಸಾಗರದ ಗುಂಟ ಮೆಲ್ಲನೆ ಅಡಿಯಿಟ್ಟು ಸಾಗುವೆ
ಇದು ನಿರಂತರ ನಿನ್ನನೇ ನೆನಪಿಸಿಕೊಂಡು
ಮೌನದ ಮೆರವಣಿಗೆಯಲ್ಲೀಗ ಸಾಗುವ ಕಲೆ
ನೀನೇ ಕಲಿಸಿಬಿಟ್ಟೆಯಲ್ಲಾ!

ಬರಹವೆ –
ನೀನಿರಲು ಮೈಯ್ಯೆಲ್ಲ ನವ ಯೌವ್ವನದ ಘಮಲು
ಇನ್ನೇನು ಬದುಕೆಂಬುದೀಗ
ಧಿಲ್ದಾರು!!

31-1-2018. 4.00pm

Advertisements

ಗಾಳಿಯಲ್ಲಿ ಹಾರಾಡಿದಷ್ಟು ಲವಲವಿಕೆ…??

ಈಗೊಂದು ವಾರದಿಂದ ದಿನ ಕಳೆದಿದ್ದೆ ಗೊತ್ತಾಗಲಿಲ್ಲ. ತುಂಬಾ ತುಂಬಾ ಸಂತೋಷ , ದುಃಖ ಎರಡೂ ಮನ ತುಂಬ. ಬಹುಶಃ ನನ್ನೇ ನಾ ಮರೆತಿದ್ದೆನೇನೊ ಅನಿಸುತ್ತಿದೆ. ಇದರ ಪರಿಣಾಮ ಕೆಲವೊಂದು ಕೆಲಸಗಳು ಏರು ಪೇರು.

ಮನುಷ್ಯ ಅತಿ ಹೆಚ್ಚು ದುಃಖದಲ್ಲಿರುವಾಗಲೂ ತನ್ನನ್ನೇ ಮರೆತು ಮಾಡುವ ಕೆಲಸದ ಕಡೆಯೂ ಗಮನವಿಲ್ಲದೆ ದಿನ ಕಳೆದು ಬಿಡುತ್ತಾನೆ. ಹಾಗೆ ಅತೀ ಸಂತೋಷವಾದಾಗಲೂ ಎಲ್ಲ ಮರೆತು ಆ ಸಂತೋಷದಲ್ಲೇ ಮುಳುಗಿಬಿಡುತ್ತಾನೆ. ಈ ಅನುಭವ ನನಗೆ ಈ ವರ್ಷದ ಜನ್ಮ ದಿನದಂದೂ ಮತ್ತೆ ಅನುಭವವಾಯಿತು.

ದುಃಖಕ್ಕೆ ಕಾರಣ ಪ್ರಜಾವಾಣಿ ಮುಕ್ತ ಛಂದಕ್ಕೆ ಕಳಿಸಿದ ಕವನ ಸೆಲೆಕ್ಟ ಎಂದು ಬಂದಾಗ ಅತ್ಯಂತ ಖುಷಿ ಪಟ್ಟೆ. ಮತ್ತೆ ಅವರಿಂದ ಬಂದ ದೂರವಾಣಿ ಮನಸ್ಸೆಲ್ಲ ದುಃಮಯವಾಯಿತು. “ಬೇರೆ ಕಡೆ ಪ್ರಕಟವಾಗಿದ್ದರೆ ಪ್ರಕಟ ಮಾಡೋದಿಲ್ಲ,ಎಲ್ಲೂ ಕಳಿಸಬೇಡಿ,ಮೊದಲು ನಮಗೆ ಕಳಿಸಿ,ಚೆನ್ನಾಗಿ ಬರಿತೀರಾ. Even ಬ್ಲಾಗಲ್ಲೂ ಪ್ರಕಟವಾಗಿರಬಾರದು” ಮೊದಲ ಪ್ರವೇಶದಲ್ಲಿಯೇ ಎಡವಿದೆ. ಎಷ್ಟು ಹತಾಷಳಾದೆನೆಂದರೆ ಎರಡು ದಿನ ಪೂರ್ತಿ ಮಂಕಾಗಿಬಿಟ್ಟೆ.

ಖುಷಿಗೆ ಕಾರಣ fb ಸ್ನೇಹಿತರಿಂದ,ಪರಿಚಯದವರಿಂದ 7-12-2017ರಂದು ಬಂದ ನನ್ನ ಜನ್ಮ ದಿನಕ್ಕೆ ಶುಭ ಹಾರೈಕೆಗಳು. ಅರವತ್ತು ವರ್ಷ ಪೂರೈಸಿದ ಸಂಭ್ರಮ ಒಂದು ಕಡೆ, ಸ್ನೇಹಿತರಿಂದ ಶುಭ ಹಾರೈಕೆಯ ದಂಡು. ಸಾವಿರಾರು ಜನರಿಂದ ಬಂದ ಹಾರೈಕೆಗೆ, ಅವರೆಲ್ಲರ ಆತ್ಮೀಯತೆ, ವಿಶ್ವಾಸಕ್ಕೆ ಮನ ಮೂಕವಾಗಿತ್ತು. ಎಲ್ಲರಿಗೂ ಉತ್ತರಿಸುವುದರಲ್ಲೆ ವಾರವೆಲ್ಲ ಕಳೆದು ಬಿಟ್ಟೆ. ಇದೇ ಖುಷಿಯಲ್ಲಿ ಒಂದಷ್ಟು ಕವನ ಗೀಚಿದೆ. ಒಂಥರಾ ಗಾಳಿಯಲ್ಲಿ ಹಾರಾಡಿದಷ್ಟು ಲವಲವಿಕೆ,ಖುಷಿ, ಎಲ್ಲವನ್ನೂ ದಾಖಲಿಸಿಟ್ಟುಕೊಳ್ಳುವ ಹಂಬಲ. ಆದರೆ ಸಾಧ್ಯ ಆಗೋದಿಲ್ಲ. ಕೆಲವನ್ನು ಮಾತ್ರ ಇಲ್ಲಿ ಹಿಡಿದಿಟ್ಟೆ ನೆನಪಿನ ಕ್ಷಣಕ್ಕಾಗಿ.

ನನ್ನೆಲ್ಲಾ ಪ್ರೀತಿಯ,ಆತ್ಮೀಯ ಓದುಗರಿಗೆ ಸ್ನೇಹಿತರಿಗೆಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು.😁

*ಪ್ರಶಾಂತ ಅಂಕಪುರ
ಹುಟ್ಟಿದ ಹಬ್ಬದ ಶುಭಾಶಯಗಳು
ಅಮ್ಮ
ಸಂಭ್ರಮ ಸಡಗರ ನಿಮ್ಮಲ್ಲಿ ಇರಲಿ
ಸಂತಸ ಹೊನಲು ಬೆಳಗುತ್ತಿರಲಿ
ಬಾಳನೌಕೆಯಲ್ಲಿ ಏಳು ಬೀಳಿನ
ನದಿಯಲ್ಲಿ ಜೀವನ ಸಮತೋಕ
ಸಾಗುತ್ತಲೇ ಇರಲಿ ಸತತವಾಗಿ
ಎಲ್ಲರನ್ನೂ ಸಂತೈಸಿ ಪ್ರೋತ್ಸಾಹಿಸುವ
ಗುಣವಿರುವ ನಿಮಗೆ ಹೃತ್ಪೂರ್ವಕ ವಂದನೆಗಳು
ದೇವರು ಆರೋಗ್ಯ ಆಯಸ್ಸು ಯಶಸ್ಸು ನೆಮ್ಮದಿ ಸಿಗಲಿ ಎಂದು ಹಾರೈಸುತ್ತೇನೆ

*Suresh Korkoppa
ಏನು ಹೇಳುವುದು..ಅದೆಷ್ಟೊಂದು ಚಚಿ೯ಸಿದ್ದೇವೆ..ಸ್ವವಿಮಶೆ೯ಗೆ ಒಳಪಡಿಸಿಕೊಂಡಿದ್ದೇವೆ ಒಬ್ಬರಿಗೊಬ್ಬರು
ಒಳ ಹೊರ ಪುಟಗಳಲ್ಲೆಲ್ಲ..!
ಅದೆಷ್ಟೊಂದು ಸಮಾನ ಮನಸ್ಸು ಸಹೃದಯವಂತಿಕೆ..ಬಹರದ ಓರೆಕೋರೆಗಳು..
ಸಾಮಾಜಿಕ ಚಿಂತನೆ..ಕಾವ್ಯದ ನೆಲೆಗಟ್ಟು..
ಮೀಮಾಂಸೆಯ ಮೂಲತತ್ವ..
ಒಂದೇ ಎರಡೇ..!?
ಅವರ ಬರಹಗಳಿಗೆ ನಾನೊಮ್ಮೆ ಪ್ರತಿಕ್ರಿಯಿಸಿದರೆ ಸಾಕು ಮನೆ ಮಗನಂತೆ ಒಡಹುಟ್ಟಿದ ಸಹೋದರನಂತೆ ಸಂತಸಪಡುವ ಹಿರಿಯ ಜೀವ..!
ನನ್ನ ಬರಹಗಳನ್ನು ಆತ್ಮೀಯತೆಯಿಂದ ಅಪ್ಪಿಕೊಂಡು ಹಾರೈಸುವ ತಾಯ ಮಮತೆ..!
ಪ್ರಾಸಬದ್ಧ ನನ್ನ ಕವನಗಳ ಬಗ್ಗೆ ಅಪಾರ ಹೆಮ್ಮೆ ಇವರಿಗೆ, “ಪದಬ್ರಹ್ಮ” ಎಂದು ನನಗೆ ಬಿರುದು ನೀಡಿ ಹರಸಿದ ಮಹಾ ಮನಸು..ಹೇಗೆ ಮರೆಯಲಿ..!?
ಅವರ ಬರಹಗಳ ಕುರಿತು ಮಾತನಾಡುವಷ್ಟು ಸಮಥ೯ ನಾನಲ್ಲವೆಂಬುದೇ ನಾನು ಒಪ್ಪಿಕೊಳ್ಳುವ ನಿತ್ಯಸತ್ಯ!
ಸಹೋದರಿ Geeta G. Hegde ಯವರೇ..
ನಿಮ್ಮ ಆಶೀರ್ವಾದ ಹರಕೆ ನಮ್ಮೆಲ್ಲರ ಮೇಲೆ ಸದಾ ಹೀಗೆಯೇ ಇರಲಿ,ನಿಮ್ಮ ಬರಹಗಳು ಕನ್ನಡಾಗಸದಲ್ಲಿ ಅಚಂದ್ರಾಕ೯ವಾಗಿರಲಿ, ಸುಖ ಸಂತೋಷ ಸಮೃದ್ಧಿ ನಿಮ್ಮ ಬಾಳಿನಲ್ಲಿರಲಿ
ಎಂಬ ಸದಾಶಯದೊಂದಿಗೆ..ನಿಮಗೆ

💐 ಜನುಮ ದಿನದ ಹಾದಿ೯ಕ ಶುಭಾಶಯಗಳು💐
🎂🎂🎂🎂🎂🎂🎂🎂🎂🎂🎂🎂🎂🎂

*ಕಲಿರಾಜ್ ಹುಣಸೂರು
ಲೇಖಕಿ ಕಥೆಗಾರ್ಥಿ ,ಕವಯತ್ರಿ ಸರಸ್ವತಿಪುತ್ರಿ … ಗೀತಾ ಅಮ್ಮನಿಗೆ
ಹುಟ್ಟು ಹಬ್ಬದ ಶುಭಾಶಯಗಳು … ಆ ಭಗವಂತ ನಿಮಗೆ ಆಯಸ್ಸು ಆರೋಗ್ಯ ನೀಡಿ ಕಾಪಾಡಲಿ ……
ಚಿರಕಾಲ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುತ್ತ
ಯುವ ಸಾಹಿತ್ಯ ಬರಹಗಾರರಿಗೆ .. ಪ್ರೋತ್ಸಾಹ ನೀಡುತ್ತ . ಮನದಾಳದಿಂದಲೇ ನಗುವನ್ನ ಬೀರಿ ಪ್ರೋತ್ಸಾಹ ನೀಡುವ ನಿಮ್ಮ‌ ನಿರ್ಮಲ‌ ಗುಣಕೆ ನಮನಗಳು
ಮುಖಪುಟದಲಿ ಗೀತಾಮ್ಮ‌ ಎಂದೇ ಸಂಭೋಧಿಸುವ
ಅಭಿಮಾನಿಗಳು ಸಾವಿರಾರು .. God bless uu amma

*ನಾಗವೇಣಿ ಹೆಗಡೆ,ಶಿರಸಿ
ನೋವೆಲ್ಲ ನಲಿವಾಗಿ
ಕಷ್ಟವೆಲ್ಲ ಮಂಜಿನಂತೆ ಕರಗಿ ನೀರಾಗಿ
ಬಾಳು ಬೆಳದಿಂಗಳಾಗಿ
ಸದಾ ನಗುನಗುತ ಬಾಳುವ ಸೌಭಾಗ್ಯ ನಮ್ಮಕ್ಕನದಾಗಲಿ.

*ಗಿರಿಸೂರ್ಯ ರಾಮ
ಜನ್ಮ ದಿನದ ಶುಭಾಶಯಗಳು

*Savitha Hegde
Wish you happy Birthday akka💐🎂
ನಿಮಗಾಗಿ ಸ್ಪೆಷಲ್ ಕೇಕ್

.

*Peersab Nadaf
ಜನ್ಮದಿನದ ಹಾರ್ದಿಕ ಶುಭಾಷಯಗಳು ಅಕ್ಕಾ..
ಅಕ್ಕಾ ಜನುಮ ದಿನದ ಶುಭಾಶಯಗಳು ‌,ಆ ಭಗವಂತನ ಅಭಯ ಹಸ್ತ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ ,ಸುಖಿಯಾಗಿರಿ .

*Shashi Purohith

ಸಹೋದರಿಗೆ…ಜನುಮ ದಿನದ ಶುಭಾಶವು….ಆ ಭಗವಂತನು….ಆಯುರಾರೋಗ್ಯ…ಧನ ಧಾನ್ಯ ಸುಖ ಶಾಂತಿ ನೆಮ್ಮದಿಯನು…ನಿರಂತರ ಚಿರಕಾಲ…ಕರುಣಿಸಲಿ… ಎನ್ನುತಾ…ವಾತ್ಸಲ್ಯದಲಿ ಹಾರೈಸುವೆ….

*Gangadhar Honnalli
“ಹುಟ್ಟು ಹಬ್ಬದ ಶುಭಾಶಯಗಳು”..ನಿಮ್ಮ ಜನ್ಮದಿನದಂದು ಒಂದು ಗಿಡ ನೆಡಿ ಅದು ಬೆಳೆದರೆ ನಮ್ಮ ಪರಿಸರ.ಪ್ರಕೃತಿ.ಆರೋಗ್ಯ ಉಳಿಯುತ್ತೆ. “ಮಾನವನ ಜನ್ಮದಿನ. ಮರಗಳ ಜನನವಾಗಲೀ””””‘”Happy Birthday_____

_

*Padma Shrinivas Huilgol
Belated birthday wishes mamji. ಸದಾ ಖುಶಿಯಾಗಿರಿ. ಭಗವಂತನ ಶ್ರೀರಕ್ಷೆ ನಿಮಗಿರಲಿ🌼🌹😍🙏🙏

*Uday Bhat
Wish you many happy returns of the day May Lord and H H Swamiji shower you with their choicest blessings on this day and for all times to come

*Shashikantha Rao
Wish you many more happy returns of the day sister. May god shower all the happiness on you & always stay blessed. Happy Birthday.

*CrSundararjan Rao
ಜನ್ಮದಿನದಮಿದುಂ ಅಯಿ ಪ್ರಿಯ ಮಿತ್ರೆ !
ಶಂ ತನೋತು ತೇ ಸರ್ವದಾ ಮುದಂ !!
ಪ್ರರ್ಥಯಾಮಹೇ ಭವ ಶತಾಯುಷಿ !
ಶ್ರೀಹರಿಸ್ಸದಾ ತ್ವಾಂ ಚ ರಕ್ಷತು !!
ಪುಣ್ಯಕರ್ಮಣಾ ಕೀರ್ತಿಮರ್ಜಯ !
ಜೀವನಂ ತವ ಭವತು ಸಾರ್ಥಕಂ !!
ಜೀವನಂ ತವ ಭವತು ಸಾರ್ಥಕಂ !!
( ಗುರುಸಾರ್ವಭೌಮ ಶ್ರೀ ರಾಘವೇಂದ್ರ ಯಥಿವರ್ಯರು ನಿಮಗೆ ಆಯಸ್ಸು ,ಆರೋಗ್ಯ ,ಐಶ್ವರ್ಯ, ನೆಮ್ಮದಿ ಹಾಗು ಸಕಲ ಸುಖ-ಸಂಪತ್ತನ್ನು ನೀಡಿ ಸದಾ ನಿಮ್ಮನ್ನು ರಕ್ಷಿಸಿ ಕಾಪಾಡಲಿ. )

*Shantha Kumar
Many more happy returns of the day. May god bring you peace, happiness, health, wealth and prosperity on this occasion. Enjoy at the fullest.

*ರೇಣುಕಾ ವೈಕುಂಠಯ್ಯ
#ಜೈಕರ್ನಾಟಕ
#ಗೀ ಜಗದ ಗೂಡಿನ ರಚನೆಯಲ್ಲಿನ ಸ್ಪಷ್ಟತೆ
#ತ ಳಿರ ಮಾವಿನೆಯ ಹಸಿರ ನಾವೀನ್ಯತೆ

ನಿಮ್ಮ ಬದುಕಿನಲ್ಲಿ ಸದಾ ಇರಲಿ

ಹುಟ್ಟು ಹಬ್ಬದ ನಲ್ಮೆಯಾರೈಕೆಗಳು..

#ಜೈಕರ್ನಾಟಕ

#ಗೀಚಿ..

*ಮುದ್ದು ಮನಸೆ
ಇವತು ನಮ್ಮೆಲಾರ ಗೆಳತಿ ಗೀತ ಹೆಗ್ಡೆ ಯವರ ಹುಟ್ಟು ಹಬ್ಬ ನನ್ನ ಹಾಗು ಫೇಸ್ ಬುಕ್ ಫ್ರೆಂಡ್ಸ್
ಕಡೆಯಿಂದ ಗೀತ ಹೆಗ್ಡೆಯವರಿಗೆ
ಹುಟ್ಟು ಹಬ್ಬದ ಶುಭಾಶಯಗಳು

ಚೈತನ್ಯ ವಾಗಿ ಅರಳುತ್ತಿರಲಿ ಮಲ್ಲಿಗೆಯಂತೆ
ನಿನ್ನ ಸುಂದರ ಬಾಳು
ತ್ರಪತ್ತೆ ಎಷ್ಟೆ ಇದ್ದರು ನಿಮ್ಮ ಜೀವನದ ಎಲ್ಲ
ಸುಂದರ ಕನಸುಗಳು ನೆರವೆರಲಿ

ನಿನ್ನ ಸುಂದರವಾದ ನಗು
ಬಾಡದಿರಲಿ ಎಂದು
ನೆಮ್ಮದಿಯ ಬದುಕು ಯಾವಾಗಲು
ನಿನ್ನದಾಗಲಿ ಎಂದೆಂದೂ

ಮನತುಂಬಿ ಹೇಳುವೆ ನೀನು ಈ ಅಚ್ಚುನ
ನೆಚ್ಚಿನ ಗೆಳತಿ ಎಂದೆಂದೂ
ಇರುವೆನು ನಾನು ನಿನ್ನ ಮೆಚ್ಚಿನ ಗೆಳಯನಾಗಿ
ಇಂದು , ಮುಂದು ,ಎಂದೆಂದೂ

ಪ್ರೀತಿಯ ಮಳೆ ಹುಡುಗ
ಅಚ್ಚು ……

*Umesh RM
ಜನುಮದಿನದ ಶುಭಾಶಯಗಳು ಮಾ.
ಹೀಗೆ ಖುಷಿ ಖುಷಿಯಾಗಿರಿ ಬಾಳೆಲ್ಲ.
ಶುಭಮಸ್ತು.

*************
*Richi
Hello sir nivu daily kavite baredu post haktira ivattu nimma ammana huttida dina avara bagge ondu kavite baredu post hakilwala yake?

*Somashekar Mysore
ಅಮ್ಮರ ಬಗ್ಗೆ ಎಷ್ಟು ಬರೆದರೂ ಮುಗಿಯದ ಸಾಲುಗಳು ವಿಶ್ವದಷ್ಟು ಅದಕ್ಕೆ “ಅಮ್ಮ” ಅಂದುಬಿಟ್ಟಿರುವೆನು ಗೆಳೆಯ. ಶುಭದಿನ
************

*ನಾನಿರುವುದೆ ಹೀಗೆ

Happy Birthday

*Leel Leela

Many many happy returns of the day ma💐🎂

*Kapila Shridhar

Happy birthday💐🎂

*Dhananjaya N Acharya

Happy birthday Medam🎂

*Nirmala Hegde

Happy birthday Geethakka💐🎂

*Ananda Joshi
ಹುಟ್ಟು ಹಬ್ಬದ ಶುಭಾಶಯಗಳು.. Happy Birthday!!! I hope this is the beginning of your greatest, most wonderful year ever

*Ravi Choutgi
ಕಷ್ಟ ಅಂತ ಬಂದ್ವರಿಗೆ ನಿಮ್ಮ ಹಿತನುಡಿಗಳೆ ಸಾಂತ್ವಾನದ ಚಿರಾಪುಂಜಿ …ನೂರ್ಕಾಲ ನೆಮ್ಮದಿ ನಿಮ್ಮೊಳು ನೆಲೆನಿಂತು ..ಸದಾ ಕಾಪಾಡಲಿ ಅಮ್ಮಾ

*Lakkappa Pujari
Many more happy returns of the day have a very colourful day great full day with you in this year yours all dreams come true may God bless you more keep smile always and enjoy the day with full of yours blossom have a very joyful day keep rocks 🎲🎲🎲🍫🍫🍫🎁🎁🎁🎁🎈🎈🎈🎈🔥💥💥⚡☀☀🍰🍰🍩🍪🍪🍧🍧🍨🍧🍡🍢🍮🎂🎂🎂🎂………. Stay belssed day with you….
Most welcome ji God bless you more keep smile always enjoy yours day with smile happy birthday again take care of yourself ji
My big pleasure 🎉🎉🎁🎁🎁🎁🎁🎊🍫🍫🍫🍰🍰🍰🍰🎂🎂🎂🍫🍫🍮🍮🍧🍧🍮🍮🙏🙏🙏🙏🙏🙏🙏🙏🙏
11-12-2017. 1.00pm

ವಾವ್! ಈ ದಿನ ನೆನಪಾಗುತಿದೆ ಆ ದಿನಾ…

ಹೌದು. ಇವತ್ತು ನನ್ನ ಬ್ಲಾಗ್ ಹುಟ್ಟಿದ ದಿನ. ಎಷ್ಟು ಬೇಗ ಒಂದು ವರ್ಷ ಕಳೆಯಿತು! ಗೊತ್ತಾಗಲೆ ಇಲ್ಲ. ಮನವೆಲ್ಲ ಸಂಭ್ರಮ. ತುಂಬಾ ಖುಷಿ ಆಗುತ್ತಿದೆ. ಸಾಮಾನ್ಯವಾಗಿ ಒಂದು ಕಾರ್ಯ ಶುರು ಮಾಡುವಾಗ ಮೂಹೂರ್ತ,ಗಳಿಗೆ ಎಲ್ಲ ನೋಡಿ ಶುರು ಮಾಡುತ್ತಾರೆ. ಆದರೆ ಈ ಬ್ಲಾಗ್ ಓಪನ್ ಮಾಡುವಾಗ ಇದ್ಯಾವುದನ್ನೂ ನೋಡಲೆ ಇಲ್ಲ. 31-1-2016 ಆ ದಿನ ಭಾನುವಾರ. ಸಾಯಂಕಾಲದ ಗೋಧೂಳಿ ಮುಹೂರ್ತದಲ್ಲಿ ಮನದ ದೇವನಿಗೆ ದೀಪ ಹಚ್ಚಿ ಬ್ಲಾಗ್ ಬರೆಯೋದು ಶುರು ಮಾಡಿದೆ.

ಮಗಳು ಹೇಳಿದಳು “ಅಮ್ಮಾ ನೋಡು ಹೀಗಿರಲಾ? ಹಾಗಿರಲಾ? ” “ನೋಡು ನನಗದೆಲ್ಲ ಗೊತ್ತಿಲ್ಲ ಛಂದ ಇರಬೇಕು.” ಯಾಕೆಂದರೆ ಆಗಲೆ ಸುಮಾರು ಬ್ಲಾಗ್ ಎಲ್ಲ ನೋಡಿ,ಓದಿ ಬ್ಲಾಗ್ ಹುಚ್ಚು ತಲೆಗೆ ಹತ್ತಿತ್ತು. ಅದೆನೇನೊ ಕಲ್ಪನೆ. ನನ್ನಿಂದ ಬರೆಯೋದು ಬಿಟ್ಟರೆ ಏನು ಮಾಡೋಕೆ ಆಗದೆ ಇದ್ದರೂ ಯೋಚನೆ ಮಾತ್ರ ಮನತುಂಬ ಬರ್ಪೂರವಾಗಿತ್ತು. “ಸರಿ ಹೆಸರೇನಿಡೋಣ? ನೀನೆ ಹೇಳ್ತೀಯಾ ಇಲ್ಲ ನಾನೆ ಹೇಳಲಾ?” “ಇಲ್ಲ ಇಲ್ಲ. ಇದು ನನ್ನ ಬ್ಲಾಗ್ .ನಾನೆ ಹೆಸರಿಡಬೇಕು.” ಸರಿ ಮತ್ತೆ ಬೇಗ ಹೇಳು. ನನಗೆ ಬೇರೆ ಕೆಲಸ ಇದೆ.” “ಅಯ್ಯೋ! ತಡಿಯೆ. ಒಂದೊಳ್ಳೆ ಸಖತ್ತಾಗಿರೊ ಹೆಸರಿಡಬೇಕು.” ಇಲ್ಲೂ ಹುಡುಕಾಡಿ ಬ್ಲಾಗ್ ಹೆಸರು ನನ್ನದೆ ಯೋಚನೆಯಂತಿರಬೇಕು. ಅದು ಒಂದು ನೆನಪಾಗಿ ಉಳಿಯಬೇಕು. ಅದನ್ನು ಹೇಳಿದರೆ ಕೂಗಿ ಕರೆದಂತಿರಬೇಕು. ಯಾರೂ ಇಟ್ಟಿರಬಾರದು. ಅಪರೂಪದ ಹೆಸರಾಗಿರಬೇಕು. ಕಂಡವರು ಯಾಕೆ ಇದೇ ಹೆಸರಿಟ್ಟೆ ಎಂದು ಕೇಳುವಂತಿರಬೇಕು. ಓದುಗರ ಮನ ತಟ್ಟ ಬೇಕು. ಹೀಗೆಲ್ಲ ಮನಸ್ಸಿನಲ್ಲೆ ಮಂಡಿಗೆ ತಿನ್ನುತ್ತಿದ್ದದ್ದು ನನ್ನ ಮಗಳಿಗೆ ಖಂಡಿತಾ ಗೊತ್ತಿರಲಿಲ್ಲ.. ಮಾಡುವ ಕೆಲಸದಲ್ಲಿ ಏನಾದರೂ ಹೊಸತನ ಇರಬೇಕು ಅನ್ನುವ ಜಾಯಮಾನ ನನ್ನದು. ಸರಿ ನೋಡು ” ಸಂಧ್ಯಾದೀಪ ಈ ಹೆಸರಿಡು. ಸೂರ್ಯ ಮುಳುಗುವ ಹೊತ್ತು ದೀಪ ಹಚ್ಚಿದಂತಿರುವ ಒಂದು ಸೊಗಸಾದ ಚಿತ್ರ ಕೆಳಗಡೆ ಈ ಸಾಲುಗಳು ರಾರಾಜಿಸುತ್ತಿರಬೇಕು.” ಇದನ್ನೂ ಬೇರೆಯವರ ಬ್ಲಾಗ್ ನೋಡಿ ನನ್ನದೆ ಒಂದು ಸಾಲುಗಳ ಅಚ್ಚಾಕಿಸಿದೆ. ಅಂತೂ ನನ್ನ ಬೇಡಿಕೆಯಂತೆ ಹುಟ್ಟಿಕೊಂಡ ಈ ಬ್ಲಾಗ್ ಬರಹಗಳು ಇವತ್ತು 450ಕ್ಕೂ ಹೆಚ್ಚು ಬರಹಗಳನ್ನು ಒಳಗೊಂಡಿದೆ. ಅನೇಕ ಬರಹಗಳು ಪ್ರಕಟಣೆಗೊಂಡಿವೆ. ಒದುಗರ ಲೆಕ್ಕ ಸಾವಿರ ದಾಟಿದೆ. ವಿಶೇಷ ಅಂದರೆ ಇತ್ತೀಚೆಗೆ ಕನ್ನಡ ಬ್ಲಾಗ್ ಲೀಸ್ಟಲ್ಲಿ ಸೇರಿದೆ. ಇನ್ನಿತರೆ ಪ್ರಗತಿಯ ವಿವರಗಳನ್ನು ಈ ಬ್ಲಾಗ್ ನಲ್ಲಿ ಕಾಣಬಹುದು.

ಇಲ್ಲಿರುವ ಬರಹಗಳು ಅದೆಷ್ಟು ಗಟ್ಟಿಯೊ, ಅದೆಷ್ಟು ಜೊಳ್ಳೊ ಗೊತ್ತಿಲ್ಲ. ನೆನಪು ಭಾವನೆಗಳ ಸಂಘರ್ಷ ಇಷ್ಟೆಲ್ಲಾ ಬರಹ ಬರೆಯಲು ಕಾರಣವಾಯಿತು. ತಿಳುವಳಿಕೆಯಿಲ್ಲದ ನಾನು ಮನಸಿಗೆ ಅನಿಸಿದ್ದನ್ನು ಬರೆಯುತ್ತ ಪೋಸ್ಟ್ ಮಾಡುತ್ತಿದ್ದೇನೆ. ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ. ಸದಾ ತಮ್ಮ ಪ್ರೋತ್ಸಾಹ, ಬೆಂಬಲ ಬಯಸುತ್ತೇನೆ.

ಈ ಬ್ಲಾಗ್ ತೆರೆದು ಕೊಟ್ಟ ನನ್ನ ಮಗಳಿಗೆ, ಬ್ಲಾಗ್ ನೋಡಿ ಒಂದೊಳ್ಳೆ ಒಕ್ಕಣೆ ಬರೆದ ಶ್ರೀ ಹುಸೇನಿಯವರಿಗೆ, ಹಾಗೂ ಇದುವರೆಗೆ ಬರಹ ಓದಿ ಲೈಕು, ಕಮೆಂಟ ಮೂಲಕ ತಮ್ಮ ಪ್ರೋತ್ಸಾಹ ವ್ಯಕ್ತಪಡಿಸುತ್ತಿರುವ ನನ್ನೆಲ್ಲ ಓದುಗರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಇತ್ತೀಚೆಗೆ ಆತ್ಮೀಯರೊಬ್ಬರು ಉತ್ತಮ ಸಲಹೆ ನೀಡಿ ಬ್ಲಾಗ್ ಇನ್ನಷ್ಟು ಅಂದಗೊಳಿಸಿ ಬರಹಗಳಿಗೆ ಮೆರುಗು ನೀಡಿ ಸಹಾಯ ಮಾಡಿರುತ್ತಾರೆ. ಅವರಿಗೆ ನನ್ನ ಕೃತಜ್ಞತೆಗಳು.

HAPPY BIRTHDAY
“SANDHYADEEPABLOG”💐🎂
31-1-2017. 3.01pm☺☺

(ಬ್ಲಾಗ್ ಪ್ರಗತಿಯ ಚಿತ್ರ 2016 & 2017)

ಈ ಹೊಗಳಿಕೆಯ ಏನೆಂದು ಬಣ್ಣಿಸಲಿ..?

ಅನಿರೀಕ್ಷತವಾದ ಅಕ್ಕರೆಯ ಶುಭಾಶಯ ಅನುಭವಿಸಿದ ಸಂತೋಷಕ್ಕೆ ಪಾರವೆ ಇಲ್ಲ , ನೀ ಕೊಟ್ಟ ಬಿರುದಿಗೆ, ಅಭಿಮಾನದ ನುಡಿಗೆ, ಆತ್ಮೀಯ ಹಾರೈಕೆಗೆ ಇಗೊ ನನ್ನ ಧನ್ಯವಾದ.

Happy birthday champion

December 7 happens to be the birthday of a very special person. I forgot to write a post on that day, I have no excuses.

Some people are meant to stand out from others, in terms of what they have achieved, hence the word champion, I guess one life is way too small to be thankful for their good work what they have done.

The more I type the more, I end up with teary eyes, happy birthday

13-12.2016. 11.23pm

ಮುಖ ಪುಸ್ತಕದ ಸ್ನೇಹಿತರ ಹಾರೈಕೆಯಲಿ ಹುಟ್ಟಿದ ಕವಿತೆ

ನಿನ್ನೆಯ ನನ್ನ ಜನ್ಮ ದಿನಕ್ಕೆ ಸ್ನೇಹಿತರಿಂದ ಶುಭಾಶಯಗಳ ಸುರಿಮಳೆ. ಅಬ್ಬಾ! ನನ್ನ ಜನ್ಮದಲ್ಲೆ ಇಷ್ಟೊಂದು ಶುಭಾಶಯಗಳ ಹಾರೈಕೆ ಸ್ವೀಕರಿಸಿರಲಿಲ್ಲ. ಹೆತ್ತ ಕಂದಮ್ಮನಿಂದ ಹಿಡಿದು ಆತ್ಮೀಯ ಸ್ನೇಹಿತರೆಲ್ಲರ ಮಮತೆ ಕಂಡು ಮನಸ್ಸು ನಿಜಕ್ಕೂ ಮೂಖವಾಗಿತ್ತು. ನನ್ನ ಬರಹ ಓದಿದ ಸ್ನೇಹಿತರಿಂದ ಸಿಕ್ಕ ಬಿರುದುಗಳು ; ಕವಯಿತ್ರಿ, ಲೇಖಕಿ, ಆಶು ಕವಯಿತ್ರಿ. ಈ ಖುಷಿಯಲ್ಲಿ ಬರೆದ ಕವನವಿದು.

</a

Malli Yadav – Happy birthday mdm
Many many happy returns of the day..!!
Nivobba dodda ashu kaviyatri

Aarti Gatikar – ಮುದವಾದ ಕವಿತೆಗಳನ್ನು.ಅರ್ಥಪೂರ್ಣ ಬರಹಗಳನ್ನು ಕಟ್ಟಿ ಕೊಡುವ ಸಹೃದಯ ಗೆಳತಿ ಗೀತಾ ಅವರಿಗೆ ಜನ್ಮದಿನದ ಶುಭ ಹಾರೈಕೆಗಳು.ನಿಮ್ಮೆಲ್ಲಾ ಮನೋಭಿಲಾಷೆಯನ್ನು ಭಗವಂತ ಈಡೇರಿಸಿ ನೂರುಕಾಲ ಚೆನ್ನಾಗಿಟ್ಟಿರಲಿ 🙂

Punch Pramod – ಜನ್ಮ ದಿನದ ಹಾರ್ದಿಕ ಶುಭಾಶಯಗಳು ಮೇಡಂ.ನೂರಾರು ಕಾಲ ನಗುನಗ್ತಾ ಬಾಳಬೇಕು ನೀವು…

ಲೋಹಿತ್ ಅಮಚೂರ್ – ಅವಿರತ ಅರ್ಥಪೂರ್ಣ ಬರಹಗಳ ಮೂಲಕ ಅರಿವನುರಿಸುವ ಅಕ್ಕರೆಯ ಅಕ್ಕ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🙂 33 friends

Amit Patil Algur – ಹುಟ್ಟು ಹಬ್ಬದ ಹಾರ್ದೀಕ ಶುಭಾಶಯಗಳು ಮೆಡಮ್ 🙂 ನೂರ್ಕಾಲ ಸುಖ ಶಾಂತಿಯಿಂದ ಬಾಳಿ ಅಂತ ದೇವರಲ್ಲಿ ಕೇಳಿಕೊಳ್ಳುವೆ. ನೀವು ನಮ್ಮ ಅಮ್ಮನ ವಯಸ್ಸಿನವರಾದರೂ ಮನಸ್ಸು ಮಾತ್ರ ಮಗುವಿನ ಥರ ಬೆಳ್ಳಗೆ. ನಿಮ್ಮ ಬರಹಗಳು ಬೆಣ್ಣೆ ಥರ ಮೃದು. ದೇವರು ನಿಮಗೆ ಒಳ್ಳೆಯದು ಮಾಡಲಿ 🙂
ಮುತ್ತು ರಾಜ – ಜನ್ಮ ದಿನದ ಹಾರ್ಧಿಕ ಶುಭಾಶಯಗಳು…. ಬರಲಿ ನಿಮ್ಮ ಬಾಳಿನಲ್ಲಿ ಲೆಕ್ಕತಪ್ಪಿಹೋಗುವಷ್ಟು ಹುಟ್ಟುಹಬ್ಬಗಳು…:)

Shreedhar Bhat – namaste jii 🙂 januma dinada haardika haardika shubhaashayagaLu 🙂 khushi nagu nemmadi preeti, jeevana poorti tamm jotegirli 🙂 mandahaasa maasadirli 🙂 🙂 🙂

Ashok Kiccha – ನನ್ನ ಫ಼್ರೆಂಡ್ ಲೀಸ್ಟ್ನಲ್ಲಿ ಸುಮಾರ್ ಜನ ಹೆಣ್ ಮಕ್ಳಿದಾರೆ…..ಕೆಲವರನ್ನ ಹೊರತುಪಡಿಸಿ ಮಿಕ್ಕಿದವರೆಲ್ಲಾ ನನ್ನ ವಿಲನ್ ತರ ನೋಡ್ತಾರೆ……ಅದ್ಕೆ ಅವ್ರ್ಯಾರು ನನ್ ಪೋಸ್ಟ್ಗಳಿಗೆ ಇರ್ಲಿ ನನ್ ಪೋಟೋಸ್ ಕೂಡ ಲೈಕ್ ಮಾಡಲ್ಲ….ಆದ್ರೆ ನೀವು ನನ್ನ ಚೈಲ್ಡೀಷ್ ಬರಹಗಳಿಗೂ ಕಮೆಂಟ್ ಹಾಕಿ ಹೀಗೆ ಬರಿತಿರು #ಮಗ ಅಂತ ಉತ್ತೇಜನ ನೀಡಿದ್ರಿ….ತುಂಬಾ ಧನ್ಯವಾದಗಳು #ಅಮ್ಮ….. ನಿಮ್ ಬಗ್ಗೆ ಇನ್ನೂ ಬರಿಬಹುದು ಆದ್ರೆ ಅಷ್ಟು ಪದಗಳ ಪೊಣಿಸುವ ತಾಕತ್ತು ನಂಗಿಲ್ಲಾ…..ಸದಾ ನಗ್ ನಗ್ತಾ ಖುಷಿಯಾಗಿರಿ…..ನಿಮ್ಮ ಬರವಣಿಗೆಯೆಂಬ ಕೂಸಿಗೆ ವಯಸ್ಸಾಗದಿರಲಿ……#ಹ್ಯಾಪಿ_ಹುಟ್ದಬ್ಬ_ಅಮ್ಮ…💜

Krishna Jakkappanavar – ತಮಗೆ ಜನುಮ ದಿನದ ಹಾದಿ೯ಕ ಶುಭಾಶಯಗಳು..ದೇವರು ,ಸಕಲ ಸಂಪತ್ತು,ಆಯುರಾರೇೂಗೈ ಆಯುಷ್ಯ ಕರುಣಿಸಲಿ. ಎಂದು ಸುಪ್ರಭಾತದೊಂದಿಗೆ ಶುಭ ಕೇೂರುವೆ..!!!ಮಂಗಳವಾಗಲಿ..!!!

Darshan Kumar – Janma dinamidam ayi priya sakhe santanotu te sarvada mudam ||prarthayamahe bhava satayusiisvarassda tvam ca raksatu||punya karmana kirtimarajayajivanam tava bhavatu sarthakam||
Meaning: may this birthday of yoursBring in auspiciousness and happiness.We pray that you enjoy hundred beautiful years of life, andMay the Lord always protect you. By your virtuous act, earn fame and May your life be fulfilling.

Guru Swamy Prince – ಹೃದಯಪೂವ೯ಕ 💘 ನಮಸ್ಕಾರ ನನ್ನ ಪ್ರೀತಿಯ 😍 ಗೀತಾ ಮೇಡಮ್ 🙏ಹುಟ್ಟು ಹಬ್ಬದ ಹಾಧಿ೯ಕ ಶುಭಾಶಯಗಳು 🎂🎁🎉🎊ನೂರಾರು ಕಾಲ ಸುಖವಾಗಿ, ಸಂತೋಷದಿಂದ ಯಾವಾಗಲೂ ನಗು ನಗುತ ಚೆನ್ನಾಗಿ ಇರಿ :)ದೇವರು ನಿಮಗೆ ಆರೋಗ್ಯ, ಯಶಸ್ಸು, ಐಶ್ವಯ೯, ಆಯಸ್ಸು ಕೊಟ್ಟು ಕಾಪಾಡಲಿ 👍 ನಿಮ್ಮ ಹಿತ ಬಯಸುವ ಕನ್ನಡಿಗ 💛 ಜಿ ಎಸ್ ಪಿ ❤

Shivakumar V. Kallur- ಜನುದಿನದ ಶುಭಾಶಯಗಳು ಅಮ್ಮ..😍😍😍ನಿಮ್ಮ ಸವಿ ಸವಿ ಬರವಣಿಗೆ ಗಳು ಇದೇ ಮೂಡಿ ಬರ್ತಾ ಇರಲಿ.. ಕಾಯ್ತಾ ಇರ್ತೀವಿ ಅಮ್ಮ

ಸಾಗರ್ ಸಿದ್ಧು – ಜನ್ಮ ದಿನದ ಶುಭಾಶಯಗಳು ಅಮ್ಮ 🙂 ಆ ಭಗವಂತ ನಿಮಗೆ ಆಯಸ್ಸು ಆರೋಗ್ಯ ನೆಮ್ಮದಿಯ ಜೀವನ ಕೊಡಲಿ. 🙂

ರಾ.ಸೋಮನಾಥ್ಹು -ಹುಟ್ಟು ಹಬ್ಬದ ಶುಭಾಶಯಗಳು ಮೇಡಂ. ಕರುಣೆ ಹಣತೆ ಆರದಿರಲಿ ದಯಾಭಾವ ಬೆಳಗುತಿರಲಿ

Ayyappa Appu – ನೀಲಿ ಬಾನಿಂದ ನಿನ್ನೆಡೆಗೆ ಬರುವ ಪ್ರತಿಯೊಂದು ಸೂರ್ಯ ರಶ್ಮಿಯೂ ನಿನ್ನ ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.

ನನ್ನವರ ನಾನು – ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮಾ .ದೀರ್ಘಾಯುಷ್ಯವನ್ನು ಅವನು ಕರುಣಿಸಲಿ ..😍 😍 😍 😍 😍 ಹ್ಯಾಪಿ ಹುಟ್ದಬ್ಬ …May God bless u wid lot of hppnss ..Mny mny reruns of d dy …Srry fr d late wish …ಮೊಬೈಲ್ ಇಲ್ಲ. …

Shashank Rao – ಕೆಲವು ಸಂಬಧಗಳೇ ಹಾಗೆ..ಹತ್ತಿರವಾಗಲು ಯಾವುದೇ ಸಂಬಂಧದ ವರಸೆ ಬೇಕಾಗಿರಲ್ಲ… ಬರಿಯ ನುಡಿ ಸಾಕು‌..ಇವತ್ತಿನ ನನ್ನ ಅನುಭವ… ಬೆಳಿಗ್ಗೆ ಇದೇ ಮುಖಪುಸ್ತಕದಲ್ಲಿ ಒಬ್ರನ್ನ ಭೇಟಿಯಾದೆ…ಅವ್ರ ಜೊತೆ ಮಾತೂ ಕೂಡಾ ಆಡಿಲ್ಲಾ ಇನ್ನೂ…ಆದ್ರೂ ಅವರ ಬರಹಗಳು, ಧನಾತ್ಮಕ ಕಾಮೆಂಟ್‌ಗಳನ್ನ ನೋಡಿ ಫುಲ್ ಫಿದಾ….ಅವರ ವಾಲ್ ಪೂರ್ತೀ ಓದೋ ಪ್ರಯತ್ನದಲ್ಲೇ ಇದ್ದೇನೆ ಇನ್ನೂ… ಮಧ್ಯ ಅವರ ಹುಟ್ಟುಹಬ್ಬ ಇಂದು.. ಅದಕ್ಕೊಂದು ಶುಭ ಹಾರೈಸೋಣಾ ಅಂತ ಬಂದೆ….ಅಕ್ಕಾ, ಅಮ್ಮ ಏನಂತ ಕರೀಬೇಕು ಅಂತ ಕೂಡ ತಿಳೀತಾ ಇಲ್ಲಾ..
Geeta G. Hegde ಅಕ್ಕಾ ನಿಮಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು…

Bhaskar Gowda – ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಬರಹಗಳು ಇನ್ನಷ್ಟು ಒದುವ ಭಾಗ್ಯ ನಮಗೆ ಸಿಗಲಿ

ಪ್ರೀತಿಯ ಹುಡುಗ – ಒಂದು ಮುದ್ದಾದ ಹುಟ್ಟು
ಹಬ್ಬದ ಶುಭಾಶಯ…
ಯಾ..ಪಿ.. ಬ-ಡೇ

Arkere Suresh Babu – ಬರೆಯುವ ಬರಹ ಮನಸ್ಸಿನ ಕನ್ನಡಿ,ಮನುಷ್ಯನ ಮನಸ್ಸಿನ ಭಾವನೆಗಳ ಏರಿಳಿತವನ್ನು ಸೂಕ್ಷ್ಮವಾಗಿ ತಮ್ಮ ಬರವಣಿಗೆಯ ಮೂಲಕ ವ್ಯಕ್ತಪಡಿಸುವ ಗೀತಾಜಿಗೆ ಜನುಮದಿನದ ಶುಭಾಶಯಗಳು. ಭಾವನೆಗಳ ಸಂವೇದನೆ ಸುಲಲಿತವಾಗಿ ಸದಾ ಹೀಗೆ ಹೊರಹೊಮ್ಮುತ್ತಿರಲಿ ಎಂದು ಶುಭ ಕೋರುವೆ

212 friends posted on your Timeline for your birthday.

ಎಲ್ಲ ಸ್ನೇಹಿತರ ಶುಭಾಶಯಗಳು ಒಕ್ಕಣೆ ಓದಿ ಮನ ಮೂಖವಾಗಿದ್ದಂತೂ ನಿಜ. ಇವೆಲ್ಲ ನನ್ನ ನೆನಪಿನ ಬುತ್ತಿಗಳು. ಸ್ನೇಹಿತರ ಹಿತೈಷಿಗಳ ಪ್ರೀತಿಯ ಹಾರೈಕೆಗಳೇ ನನಗೆ ಅತೀವ ಸಂತೋಷ ತರುವ ಕ್ಷಣಗಳು. ಭಗವಂತ ಇವರನ್ನು ನನ್ನಿಂದ ಯಾವತ್ತೂ ದೂರ ಮಾಡಬೇಡಾ.

8-12-2016…5.32pm

××××××××××××××××××××

ಇಳಿಬಿಟ್ಟ ಎಲೆಗಳಿಗೆ
ಮಮತೆಯ ರಂಗೇರಿದೆ
ತೂಗಾಡುವ ಬಳ್ಳಿಗೆ
ಕರುಳಿನ ಕರೆ ಕೇಳಿದೆ
ನೀವೆಲ್ಲ ನುಡಿದ ಶುಭಾಶಯಕೆ
ಮನ ಮುದಗೊಂಡಿದೆ
ಅನುದಿನದ ಸಂತೋಷ
ನಿಮ್ಮೆಲ್ಲರಿಂದ ಸಿಕ್ಕಿದೆ
ಕೊನೆ ಕಾಣದ ಬದುಕಿಗೆ
ಹಿಮ್ಮೇಳವು ದೊರೆತಿದೆ
ಖುಷಿಯಿಂದ ಮನ
ಕುಣಿದಾಡಿದೆ
ಧನ್ಯೆ ಧನ್ಯೆ
ನಾ ಧನ್ಯೆ!

7-12-2016 3.53pm

ಮಂಗಳದ ಮುಂದಿನ ದಿನಕೆ
ಹಾಡುವೆನು ನಾನೊಂದು ಕವಿತೆ
ಬರೆಯಿಸುವ ಕೈಗಳು ನೂರಾರು
ಸೇರಿರಲು ನನಗಿಲ್ಲ ಚಿಂತೆ
ಬಿಚ್ಚು ಮನದೊಳಗೆಲ್ಲ
ಹೊಚ್ಚ ಹೊಸ ಹಾರೈಕೆಯಲಿ
ಇನಿತು ಮಿಡಿಯುವ ಹೃದಯದ
ಪ್ರೀತಿರತಿರೇಕ ನಾ ಕಂಡೆನಿಂದು.

ಅಮ್ಮಾ ಎಂದು ಕೂಗುವ
ಹಸುಳೆಗಳು ಮಡಿಲಲ್ಲಿ
ಅಕ್ಕ ತಂಗಿಯಂತೆ ಕಾಣುವ
ಸಹೋದರಿ ನಾನಾಗಿರಲು
ಸ್ನೇಹದ ಸಂಕೋಲೆ
ತೆರೆದ ಬಾಹುಗಳಡಗಿರಲು
ಶುಭಾಶಯದ ಅಮಲಿನಲಿ
ನಾನಾಗಿ ಹೋದೆನಿಂದು
ಉತ್ತುಂಗದ ಕನ್ಯೆ.

ಮುಚ್ಚಂಜೆ ಹೊತ್ತಲ್ಲಿ
ದೀಪದಾರತಿ ಎತ್ತಿ
ಕೈ ಮುಗಿದು ನಮಿಸುವೆ
ಹೆತ್ತೊಡಲು ತಂಪಾಗಿರಲಿ
ನಿಮ್ಮ ಹೆತ್ತವ್ವನ ಹೆಸರು
ನಿಮ್ಮ ನಡೆಯಲಿ ಬರಲಿ
ತಮ್ಮೆಲ್ಲರ ಬದುಕು
ದೇದಿಪ್ಯಮಾನವಾಗಿರಲಿ!!

ಎಲ್ಲರಿಗೂ ನನ್ನ ಧನ್ಯವಾದಗಳು.

7-12-2016. 4.49pm

ಜನ್ಮ ದಿನ

ಅಂಬರಕೆ ಚಪ್ಪರ ಹಾಕಿ
ಬಂಗಾರದ ತೊಟ್ಟಿಲು ಕಟ್ಟಿ
ಮೋಡಗಳ ಮೆತ್ತನೆಯ ಹಾಸಿಗೆ ಹಾಸಿ
ಕೋಟಿ ಕೋಟಿ ಮಿನುಗುವ ನಕ್ಷತ್ರಗಳ
ಮಾಲೆಗಳಿಂದ ಶೃಂಗರಿಸಿ
ಜಗಮಗಿಸುವ ಬೆಳಕಲ್ಲಿ ಇಣುಕಿ ಹಾಕುವ
ದುಂಡನೆಯ ಚಂದ್ರಮನನ್ನೇ
ಕಂದನಾಟಿಗೆಯ ಮಾಡಿ
ಕೆಚ್ಚಲೆದೆಯ ಹಾಲ ಕುಡಿಸಿ
ಬೊಚ್ಚು ಬಾಯಲ್ಲಿ ಕಿಲ ಕಿಲ
ನಗುವ ಅಧರಕ್ಕೆ ಮುತ್ತಿಕ್ಕಿ,
ಬೀಸುವ ತಂಪಾದ ಗಾಳಿಯ ನಾದದಲಿ
ಜೀಕುತ್ತ ಜೋಗುಳ ಹಾಡಿ
ನೂರು ವರುಷ ಸುಃಖವಾಗಿ ಬಾಳು
ಎಂದಾರೈಸಿ ತಾಯೊಡಲು ತಂಪಾಗಿಸಿ
ಇಳೆಯ ಸ್ಪಶಿ೯ಸಿದ ಮೊದಲ ದಿನ
ಇದುವೆ ಜನ್ಮ ದಿನ.

ಪ್ರತಿಯೊಬ್ಬರ ಜೀವನದಲ್ಲೂ ಇದು ಮರೆಯಲಾಗದ ದಿನ. ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಎಲ್ಲ ಓದುಗರಿಗೆ ಈ ಕವನ ಅಪ೯ಣೆ.

30-10-2015. 7.32pm

ಹುಟ್ಟು ಹಬ್ಬದ ಶುಭಾಶಯಗಳು

image

ಹಾಯ್, ಎಷ್ಟು ಬೇಗ ಆರು ವಷ೯ ಆಗೋಯಿತಲ್ಲ! ನಮ್ಮನೆಗೆ ಬಂದು. ಯಾಕೊ ಇಷ್ಟೊಂದು ಕುಣಿತಿದ್ದೀಯಾ? OK OK Birthday ಅಂತನಾ. ಇರು ಸ್ನಾನ ಮಾಡಿಸ್ತೀನಿ. ಬೇಡ್ವಾ? ಗೊತ್ತು ನನಗೆ ಕೊಳಕಪ್ಪ. ಬರಿ ತಿಂಡಿ ಪೋತಾ. ಆಯ್ತು ಸರಿ ಕೇಕ ಕಟ್ಟ್ ಮಾಡ್ತೀಯಾ. ನಿನಗೋಸ್ಕರ shugarless ಮಾಡಿದೀನಿ. ಭೌ ಭೌ. ಗೊತ್ತಾಯಿತು ನಿನ್ನ friendsಗೂ ಕೊಡಬೇಕಾ? ಸರಿ ಮಾರಾಯಾ. ಇಗೆಲ್ಲಿ ನನ್ನ ಮಾತು ಕೇಳ್ತೀಯಾ. ದೊಡ್ಡವನಾಗಿದಿಯಾ. ನಿನ್ನದೇ ನಡೀಬೇಕೀಗ. ನೋಡು ನಾ ಒಂದು ಕವನ ಬರೆದಿದ್ದೀನಿ. ನಿನ್ನ birthday ಗೆ dedicate ಮಾಡ್ತಿದ್ದೀನಿ

image

‌.ಬಾಲಂಗೋಚಿ

ಬಡ್ಡಿ ಮಗ ಕಣೋ ನೀನು
ನಿನಗೆ ಮಲಗಲು ನಿನ್ನಾಸಿಗೆ ಬೇಡ
ಸೋಫಾ ಬೇಕು, ಚೇರು ಬೇಕು
ನಾ ಮಲಗುವ ಹಾಸಿಗೆ ಬೇಕು
ಅಕ್ಕನ ತಲೆ ದಿಂಬು ಬೇಕು
ಬಿಟ್ಟರೆ ರತ್ನದ ಸಿಂಹಾಸನವೆ
ತಂದಿಡು ಅಂತಿಯೇನೊ!

ಎಷ್ಟು ಸೊಕ್ಕು ಮಾಡ್ತೀಯಾ
ಬಾ ಅಂದರೆ ಬರೋಲ್ಲ
ಸಂಶಯ ಪಿಶಾಚಿ ಕಣೊ
ನಿನ್ನಿಷ್ಟದ ತಿಂಡಿ ಕೊಟ್ಟರೆ
ಕೇಳುವ ಮೊದಲೆ
ಶೇಕ ಹ್ಯಾಂಡ ಕೊಡ್ತೀಯಾ.

ಭೌ ಭೌ ಬೊಗಳಿ ಕಿರುಚಾಡಿ
ನಿನ್ನ ಕೆಲಸ ಮಾಡಿಸ್ಕೋತಿಯಾ
ಬರಿ ಹಠಮಾರಿ ಮುದ್ದು ಮರಿ ನೀನು
ಮನೆ ನೋಡಿಕೊಳ್ಳಲು ನಿನ್ನ ಸಾಕಿದರೆ
ನಾನು ಎಲ್ಲ ಬಿಟ್ಟು
ನಿನ್ನ ನೋಡಿಕೊಳ್ಳುವ ಹಾಗಾಯಿತಲ್ಲ
ನೆನಪಾಗುವುದೀಗ ನನಗೆ
‘ಸನ್ಯಾಸಿ ಸಂಸಾರ’ದ ಕಥೆ.
3-11-2015. 10.05pm

image

Happy birthday SHOUNU
ಇರುವಷ್ಟು ಕಾಲ ಆರೋಗ್ಯದಿಂದ ಸುಃಖವಾಗಿ ಬಾಳು.
God bless you.
25-3-2016

image