Fb ಯಲ್ಲಿ ಹೀಗೊಂದು ಜುಗಲ್ಬಂಧಿ

Rudra Chougala

ಅಂತರಂಗದ
ರಂಗಸಜ್ಜಿಕೆಯಲಿ
ಗೆಜ್ಜೆಸಪ್ಪಳವಿಲ್ಲದ ನಿನ್ನ
ಹೆಜ್ಜೆಗಳ ಗುರುತು
ಮತ್ತಾರೂ
ಅಳಿಸಲಾರರು
ನಿನ್ನೊಬ್ಬಳ
ಹೊರತು

Geeta G. Hegde

ಅಂತರಂಗದ
ಪ್ರೇಮದಾಲಾಪನೆಯಲಿ
ಪುಟಿದೇಳುತಿರುವೆ ನಲ್ಲಾ
ಅಲ್ಲಿ ಮೌನ ಮಾತುಗಳ ಗುರುತು
ಇನ್ನಾರೂ
ಕೇಳಲಾರರು
ನಿನ್ನೊಬ್ಬನ
ಹೊರತು!

Geeta Yalagi Shridhar

ಮನದಂಗಳದ ತುಂಬಾ
ನಿನ್ನೊಲವಿನ ರಂಗು
ಸಖಿಯರು ಕೇಳುತಿಹರು
ನಿನ್ನ ಕುರಿತು
ಹೇಗೆ ಹೇಳಲವರಿಗೆ
ನಿನ್ಹೆಸರನು
ನಾಚಿಕೆಯ ಮರೆತು?

Daya Subbaiah

ರಂಗಿನೋಕುಳಿಯ
ಕಾಮನ ಬಿಲ್ಲಲಿ
ಕಾಣುತಿರುವೆ
ನಿನ್ನ ಬಿಂಬ
ಕುಳಿತೆ ನೋಡುತಾ
ಕಳೆದೇ ಹೋದೆ
ನನ್ನೇ ನಾ ಮರೆತು!

Rudra Chougala

ಮೌನಿ ನಾನು
ಮೋಹನಾಂಗಿ ನೀನು
ನನ್ನುಸಿರ ಕೊಳಲ ನಾದಕೆ
ಮಿಡಿವ ನಿನ್ನ ಹೃದಯದ
ಸ್ಪಂದನೆ ಎನು?

Geeta G Hegde

ಮಾತಿನ ಮಲ್ಲಿ ನಾನು
ಆಲಿಸಿ ಕೇಳುವೆ ನೀನು
ಮೌನ ಮರೆತು
ಮಾತಿನ ಸಾಂಗತ್ಯದಲಿ ಬೆರೆತು
ಹರಟೆಮಲ್ಲ
ನೀನಾಗುವೆ ಗೊತ್ತೇನು?

Rudra Chougala

ಸಂಗಾತಿ
ಸಂಪ್ರೀತಿ
ನೀ ನುಡಿದ
ಸಾವಿರ ಪದಗಳು
ಮಾಣಿಕ್ಯದ
ಮಣಿಹಾರಗಳು
ಮುಂಗುರುಳ ಮಾನಿನಿ
ನಾ ನಿನ್ನ ಅಭಿಮಾನಿ!
15-5-2018. 9.09am

Advertisements

Fb ಯಲ್ಲಿ ಕವನ ಓದುತ್ತ ಹುಟ್ಟಿದ ಕವನಗಳು

ಕಲ್ಪನೆಯ ಕವಿ

ಸೀರೆಗಿರುವ ಅಂದ ಚುಡಿದಾರಕೆಲ್ಲಿ
ಒಮ್ಮೆ ನೆರಿಗೆ ಸುತ್ತಿದರೆ ನೀ ಬಳುಕುವ ಬಳ್ಳಿ.

ನೊಸಲ ಬಾಗಿಲಲಿ ಕೆಂಪು ಸಿಂಧೂರ
ಮಲ್ಲಿಗೆಯ ದಂಡೆ ಮುಡಿಗದುವೆ ಶೃಂಗಾರ.

ಚಿಮ್ಮುವ ಕಾಲ್ಗೆಜ್ಜೆಯ ನಾದ ನಡೆದಾಗ ಹೆಣ್ಣು
ಸೀರೆಯುಟ್ಟಲ್ಲಂತೂ ನೋಡುಗರ ಕಣ್ಣು ಹುಣ್ಣು.

ಕೈ ಬಳೆಯ ನಾದಕೆ ಬರಸೆಳೆದಪ್ಪುವ ಗಂಡು
ಚೂಡಿಯಲಿ ಕಾಣದವನು ಒನಪು ವೈಯ್ಯಾರದ ದಿಂಡು.

ಸೀರೆಯಲಿ ನಾರಿಯ ನೋಡಲದುವೇ ಬಲೂ ಸೊಗಸು
ಕಂಡವರ ಕಣ್ಣಲ್ಲಿ ಹುಟ್ಟುವುದು ಗೌರವಾನ್ವಿತ ಮನಸು.

ಓ ಹುಡುಗಿ ಚೂಡಿ ಗೀಡಿ ನೀನದನು ಬಿಟ್ಟಾಕು
ಇಂದೇ ಸೀರೆಯಲಿ ನಿನ್ನ ದೇಹವ ಕಟ್ಟಾಕು.

ಮರುಳು ಮಾಡುವ ಹಿಕ್ಮತ್ತು ಸ್ವಲ್ಪ ತಿಳಿ ನೀ ಜಾಣೆ
ಹೊಗಳುವ ಇವನೊಬ್ಬ ಕಲ್ಪನೆಯ ಕವಿ ಬಲು ಜಾಣಾ!

27-1-2018. 11.47am
*******************

ಭೈರಾಗಿ

ಚಿಂತೆಯ ಹೊದ್ದು ಮಲಗಿದೆ
ಸದ್ದಡಗಿದ ಸಂತೆಯೊಳು
ನಟ್ಟ ನಡುರಾತ್ರಿಯ ಪಯಣ.

ಮನದ ಕೊಳವೆಲ್ಲ ಖಾಲಿ ಖಾಲಿ
ಇದ್ದಲ್ಲೆ ಮುಳುಗೇಳುವ ಗತಿ
ದಿಕ್ಕೆಟ್ಟ ಮನ ಭೈರಾಗಿಯ ನೋಟ.

ಧರೆಗುರುಳಿದ ಮರಕಿನ್ನೆಲ್ಲಿ ಬದುಕು
ದಿಗಂತದತ್ತ ಮುಖ ಮಾಡಿದೆ ಕೊರಳು
ಅವನ ಚಿತ್ತದಂತೆ ಹಣ್ಣು ಮಾಗಲು.

ಏಕಿನ್ನೂ ತಡ ಮಾಡುವೆ ಉರುಳೇ
ತಣ್ಣಗಾಗಲು ಬಿಡು ನಿರಾಳತೆಯಲದ್ದು.
ಬದುಕ ಬಾಣಲೆಯಲ್ಲಿ ಬೆಂದೊಡಲು.

20-2-2018. 4.16pm
************************

ಆಹಾ! ಬಲೂ ಶೋಕಿ ರಾಜಾ…??

ಏನು ಈ ಪಾಟಿ ಹೆದರಿದರೆ ಹ್ಯಾಂಗೆ ಹೇಳೋ
ಡೊಳ್ಳೂರ ದೊಡ್ಡ ನನ್ನ ಮಹಾರಾಜಾ
ತಗಿ ತಗಿ ನಿನ್ನ ಮಕಮಲ್ ಟೋಪಿ ಮಾತೂ
ನಮ್ಮೂರ ಮೀಸೆ ಹೊತ್ತ ಗಂಡ್ಸಲ್ಲವೇನು ನೀನು?

ನೀನ್ ತೊಡು ಬೇಕಾರ ಪಟಾ ಪಟಿ ಚಡ್ಡಿ
ನಾನೇರ ಬ್ಯಾಡಾ ಅಂದನೇನ
ಹಂಗ ನಂಗ ಬೇಕೇ ಬೇಕೂ ನೋಡು
ಉಗಾದಿಗ ಚಂದದ ಜರಿಯಂಚಿನ ರೇಸಿಮೆ ಸೀರಿ.

ಒಂದ ಸೀರೀಗ…
ಸುಳ್ಳ ಸುಳ್ಳೆ ಜನರ ಮುಂದ ಹೀಂಗ್ಯಾಕಂತೀ
ಹಂಗಲ್ಲ ಅನ್ನಬ್ಯಾಡಾ ನನ್ನ ರಾಜಾ
ಇನ್ನಾರ ಒಸಿ ತಿಳ್ಕಳೋ ಮಾರಾಯಾ.

ಸಂಸಾರದ ಗುಟ್ಟು ವ್ಯಾದಿ ರಟ್ಟು
ರಗಡ್ ಇರ್ತಾವ ಹೌದಿಲ್ಲೋ…
ಎಲ್ಲಾ ನಮ್ಮನಮ್ಮಲ್ಲೇ ಸೈರಿಸ್ಕೊಂಡು
ಒಂದಾಗಿ ವೈನಾಗಿ ಬಾಳಿ ಸುಃಖ ಕಾಣೂನ ಮತ್!!

25-2-2018. 11.03pm

Fbಯಲ್ಲಿಯ ಕವನ ಓದುತ್ತ ಹುಟ್ಟಿಕೊಂಡ ಹನಿಗವನಗಳು

ಚಳಿ ಚಳಿ

ಚುಮು ಚುಮು
ಚಳಿಗಿಂತ
ಕಾಡುವ ನಿನ್ನ ಮಾತೇ
ಬಲು ನಡುಕ.

ಮನಸು ಮೆತ್ತಗಾಗಿ
ಎಲ್ಲಿ ಜಾರಿಬಿಡುವೆನೆಂಬ
ಆತಂಕ
ನನ್ನಲ್ಲಿ ಅನವರತ!
13-12-2017 8.58am
***************

ವಿರಹ

ಆಸೆ ಹೊತ್ತ
ಮನಸ್ಸಿಗೆ ಕಾಡುವುದು
ಈ ವಿರಹ.

ಇರುವುದರಲ್ಲೆ
ಸಂತೃಪ್ತಿ ಕಾಣು
ಕಾಡದು ಮತ್ತೆ
ಈ ವಿರಹ.

ಇದ್ದರೂ ಚಿಂತೆ
ಇಲ್ಲದಿದ್ದರೂ ಚಿಂತೆ
ಇದು ಮನುಜನ
ಹಣೆ ಬರಹ.
14-12-2017. 5.32pm
****************

ಆಸೆ

ಮೃದು ಮಧುರ
ಕಪೋಲದ ತುಂಬ
ನಿನ್ನದೇ ಬಿಂಬ.

ಹಾರು ಹಾರು ಮನವೆ
ಆಕಾಶದ ತುಂಬ
ಬಿಳಿ ರೆಕ್ಕೆ ಬಿಚ್ಚಿ.

ತೂರಾಡಿ ತೇಲಾಡಿ
ಗಗನದಂಚನು ಮುಟ್ಟಿ
ನಶೆಯಿಳಿಸಿಕೊ.

ನಿನ್ನಂತೆ
ನಾ ಹಾರಲಾರೆ
ಯಾಕೆ ಗೊತ್ತಿಲ್ಲ ನನಗೆ.

ಆದರೂ….
ಮನಸು ಹಾರುವುದು
ನಿನ್ನೊಂದಿಗೆ!
7-12-2017

ಗಾಳಿಯಲ್ಲಿ ಹಾರಾಡಿದಷ್ಟು ಲವಲವಿಕೆ…??

ಈಗೊಂದು ವಾರದಿಂದ ದಿನ ಕಳೆದಿದ್ದೆ ಗೊತ್ತಾಗಲಿಲ್ಲ. ತುಂಬಾ ತುಂಬಾ ಸಂತೋಷ , ದುಃಖ ಎರಡೂ ಮನ ತುಂಬ. ಬಹುಶಃ ನನ್ನೇ ನಾ ಮರೆತಿದ್ದೆನೇನೊ ಅನಿಸುತ್ತಿದೆ. ಇದರ ಪರಿಣಾಮ ಕೆಲವೊಂದು ಕೆಲಸಗಳು ಏರು ಪೇರು.

ಮನುಷ್ಯ ಅತಿ ಹೆಚ್ಚು ದುಃಖದಲ್ಲಿರುವಾಗಲೂ ತನ್ನನ್ನೇ ಮರೆತು ಮಾಡುವ ಕೆಲಸದ ಕಡೆಯೂ ಗಮನವಿಲ್ಲದೆ ದಿನ ಕಳೆದು ಬಿಡುತ್ತಾನೆ. ಹಾಗೆ ಅತೀ ಸಂತೋಷವಾದಾಗಲೂ ಎಲ್ಲ ಮರೆತು ಆ ಸಂತೋಷದಲ್ಲೇ ಮುಳುಗಿಬಿಡುತ್ತಾನೆ. ಈ ಅನುಭವ ನನಗೆ ಈ ವರ್ಷದ ಜನ್ಮ ದಿನದಂದೂ ಮತ್ತೆ ಅನುಭವವಾಯಿತು.

ದುಃಖಕ್ಕೆ ಕಾರಣ ಪ್ರಜಾವಾಣಿ ಮುಕ್ತ ಛಂದಕ್ಕೆ ಕಳಿಸಿದ ಕವನ ಸೆಲೆಕ್ಟ ಎಂದು ಬಂದಾಗ ಅತ್ಯಂತ ಖುಷಿ ಪಟ್ಟೆ. ಮತ್ತೆ ಅವರಿಂದ ಬಂದ ದೂರವಾಣಿ ಮನಸ್ಸೆಲ್ಲ ದುಃಮಯವಾಯಿತು. “ಬೇರೆ ಕಡೆ ಪ್ರಕಟವಾಗಿದ್ದರೆ ಪ್ರಕಟ ಮಾಡೋದಿಲ್ಲ,ಎಲ್ಲೂ ಕಳಿಸಬೇಡಿ,ಮೊದಲು ನಮಗೆ ಕಳಿಸಿ,ಚೆನ್ನಾಗಿ ಬರಿತೀರಾ. Even ಬ್ಲಾಗಲ್ಲೂ ಪ್ರಕಟವಾಗಿರಬಾರದು” ಮೊದಲ ಪ್ರವೇಶದಲ್ಲಿಯೇ ಎಡವಿದೆ. ಎಷ್ಟು ಹತಾಷಳಾದೆನೆಂದರೆ ಎರಡು ದಿನ ಪೂರ್ತಿ ಮಂಕಾಗಿಬಿಟ್ಟೆ.

ಖುಷಿಗೆ ಕಾರಣ fb ಸ್ನೇಹಿತರಿಂದ,ಪರಿಚಯದವರಿಂದ 7-12-2017ರಂದು ಬಂದ ನನ್ನ ಜನ್ಮ ದಿನಕ್ಕೆ ಶುಭ ಹಾರೈಕೆಗಳು. ಅರವತ್ತು ವರ್ಷ ಪೂರೈಸಿದ ಸಂಭ್ರಮ ಒಂದು ಕಡೆ, ಸ್ನೇಹಿತರಿಂದ ಶುಭ ಹಾರೈಕೆಯ ದಂಡು. ಸಾವಿರಾರು ಜನರಿಂದ ಬಂದ ಹಾರೈಕೆಗೆ, ಅವರೆಲ್ಲರ ಆತ್ಮೀಯತೆ, ವಿಶ್ವಾಸಕ್ಕೆ ಮನ ಮೂಕವಾಗಿತ್ತು. ಎಲ್ಲರಿಗೂ ಉತ್ತರಿಸುವುದರಲ್ಲೆ ವಾರವೆಲ್ಲ ಕಳೆದು ಬಿಟ್ಟೆ. ಇದೇ ಖುಷಿಯಲ್ಲಿ ಒಂದಷ್ಟು ಕವನ ಗೀಚಿದೆ. ಒಂಥರಾ ಗಾಳಿಯಲ್ಲಿ ಹಾರಾಡಿದಷ್ಟು ಲವಲವಿಕೆ,ಖುಷಿ, ಎಲ್ಲವನ್ನೂ ದಾಖಲಿಸಿಟ್ಟುಕೊಳ್ಳುವ ಹಂಬಲ. ಆದರೆ ಸಾಧ್ಯ ಆಗೋದಿಲ್ಲ. ಕೆಲವನ್ನು ಮಾತ್ರ ಇಲ್ಲಿ ಹಿಡಿದಿಟ್ಟೆ ನೆನಪಿನ ಕ್ಷಣಕ್ಕಾಗಿ.

ನನ್ನೆಲ್ಲಾ ಪ್ರೀತಿಯ,ಆತ್ಮೀಯ ಓದುಗರಿಗೆ ಸ್ನೇಹಿತರಿಗೆಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು.😁

*ಪ್ರಶಾಂತ ಅಂಕಪುರ
ಹುಟ್ಟಿದ ಹಬ್ಬದ ಶುಭಾಶಯಗಳು
ಅಮ್ಮ
ಸಂಭ್ರಮ ಸಡಗರ ನಿಮ್ಮಲ್ಲಿ ಇರಲಿ
ಸಂತಸ ಹೊನಲು ಬೆಳಗುತ್ತಿರಲಿ
ಬಾಳನೌಕೆಯಲ್ಲಿ ಏಳು ಬೀಳಿನ
ನದಿಯಲ್ಲಿ ಜೀವನ ಸಮತೋಕ
ಸಾಗುತ್ತಲೇ ಇರಲಿ ಸತತವಾಗಿ
ಎಲ್ಲರನ್ನೂ ಸಂತೈಸಿ ಪ್ರೋತ್ಸಾಹಿಸುವ
ಗುಣವಿರುವ ನಿಮಗೆ ಹೃತ್ಪೂರ್ವಕ ವಂದನೆಗಳು
ದೇವರು ಆರೋಗ್ಯ ಆಯಸ್ಸು ಯಶಸ್ಸು ನೆಮ್ಮದಿ ಸಿಗಲಿ ಎಂದು ಹಾರೈಸುತ್ತೇನೆ

*Suresh Korkoppa
ಏನು ಹೇಳುವುದು..ಅದೆಷ್ಟೊಂದು ಚಚಿ೯ಸಿದ್ದೇವೆ..ಸ್ವವಿಮಶೆ೯ಗೆ ಒಳಪಡಿಸಿಕೊಂಡಿದ್ದೇವೆ ಒಬ್ಬರಿಗೊಬ್ಬರು
ಒಳ ಹೊರ ಪುಟಗಳಲ್ಲೆಲ್ಲ..!
ಅದೆಷ್ಟೊಂದು ಸಮಾನ ಮನಸ್ಸು ಸಹೃದಯವಂತಿಕೆ..ಬಹರದ ಓರೆಕೋರೆಗಳು..
ಸಾಮಾಜಿಕ ಚಿಂತನೆ..ಕಾವ್ಯದ ನೆಲೆಗಟ್ಟು..
ಮೀಮಾಂಸೆಯ ಮೂಲತತ್ವ..
ಒಂದೇ ಎರಡೇ..!?
ಅವರ ಬರಹಗಳಿಗೆ ನಾನೊಮ್ಮೆ ಪ್ರತಿಕ್ರಿಯಿಸಿದರೆ ಸಾಕು ಮನೆ ಮಗನಂತೆ ಒಡಹುಟ್ಟಿದ ಸಹೋದರನಂತೆ ಸಂತಸಪಡುವ ಹಿರಿಯ ಜೀವ..!
ನನ್ನ ಬರಹಗಳನ್ನು ಆತ್ಮೀಯತೆಯಿಂದ ಅಪ್ಪಿಕೊಂಡು ಹಾರೈಸುವ ತಾಯ ಮಮತೆ..!
ಪ್ರಾಸಬದ್ಧ ನನ್ನ ಕವನಗಳ ಬಗ್ಗೆ ಅಪಾರ ಹೆಮ್ಮೆ ಇವರಿಗೆ, “ಪದಬ್ರಹ್ಮ” ಎಂದು ನನಗೆ ಬಿರುದು ನೀಡಿ ಹರಸಿದ ಮಹಾ ಮನಸು..ಹೇಗೆ ಮರೆಯಲಿ..!?
ಅವರ ಬರಹಗಳ ಕುರಿತು ಮಾತನಾಡುವಷ್ಟು ಸಮಥ೯ ನಾನಲ್ಲವೆಂಬುದೇ ನಾನು ಒಪ್ಪಿಕೊಳ್ಳುವ ನಿತ್ಯಸತ್ಯ!
ಸಹೋದರಿ Geeta G. Hegde ಯವರೇ..
ನಿಮ್ಮ ಆಶೀರ್ವಾದ ಹರಕೆ ನಮ್ಮೆಲ್ಲರ ಮೇಲೆ ಸದಾ ಹೀಗೆಯೇ ಇರಲಿ,ನಿಮ್ಮ ಬರಹಗಳು ಕನ್ನಡಾಗಸದಲ್ಲಿ ಅಚಂದ್ರಾಕ೯ವಾಗಿರಲಿ, ಸುಖ ಸಂತೋಷ ಸಮೃದ್ಧಿ ನಿಮ್ಮ ಬಾಳಿನಲ್ಲಿರಲಿ
ಎಂಬ ಸದಾಶಯದೊಂದಿಗೆ..ನಿಮಗೆ

💐 ಜನುಮ ದಿನದ ಹಾದಿ೯ಕ ಶುಭಾಶಯಗಳು💐
🎂🎂🎂🎂🎂🎂🎂🎂🎂🎂🎂🎂🎂🎂

*ಕಲಿರಾಜ್ ಹುಣಸೂರು
ಲೇಖಕಿ ಕಥೆಗಾರ್ಥಿ ,ಕವಯತ್ರಿ ಸರಸ್ವತಿಪುತ್ರಿ … ಗೀತಾ ಅಮ್ಮನಿಗೆ
ಹುಟ್ಟು ಹಬ್ಬದ ಶುಭಾಶಯಗಳು … ಆ ಭಗವಂತ ನಿಮಗೆ ಆಯಸ್ಸು ಆರೋಗ್ಯ ನೀಡಿ ಕಾಪಾಡಲಿ ……
ಚಿರಕಾಲ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುತ್ತ
ಯುವ ಸಾಹಿತ್ಯ ಬರಹಗಾರರಿಗೆ .. ಪ್ರೋತ್ಸಾಹ ನೀಡುತ್ತ . ಮನದಾಳದಿಂದಲೇ ನಗುವನ್ನ ಬೀರಿ ಪ್ರೋತ್ಸಾಹ ನೀಡುವ ನಿಮ್ಮ‌ ನಿರ್ಮಲ‌ ಗುಣಕೆ ನಮನಗಳು
ಮುಖಪುಟದಲಿ ಗೀತಾಮ್ಮ‌ ಎಂದೇ ಸಂಭೋಧಿಸುವ
ಅಭಿಮಾನಿಗಳು ಸಾವಿರಾರು .. God bless uu amma

*ನಾಗವೇಣಿ ಹೆಗಡೆ,ಶಿರಸಿ
ನೋವೆಲ್ಲ ನಲಿವಾಗಿ
ಕಷ್ಟವೆಲ್ಲ ಮಂಜಿನಂತೆ ಕರಗಿ ನೀರಾಗಿ
ಬಾಳು ಬೆಳದಿಂಗಳಾಗಿ
ಸದಾ ನಗುನಗುತ ಬಾಳುವ ಸೌಭಾಗ್ಯ ನಮ್ಮಕ್ಕನದಾಗಲಿ.

*ಗಿರಿಸೂರ್ಯ ರಾಮ
ಜನ್ಮ ದಿನದ ಶುಭಾಶಯಗಳು

*Savitha Hegde
Wish you happy Birthday akka💐🎂
ನಿಮಗಾಗಿ ಸ್ಪೆಷಲ್ ಕೇಕ್

.

*Peersab Nadaf
ಜನ್ಮದಿನದ ಹಾರ್ದಿಕ ಶುಭಾಷಯಗಳು ಅಕ್ಕಾ..
ಅಕ್ಕಾ ಜನುಮ ದಿನದ ಶುಭಾಶಯಗಳು ‌,ಆ ಭಗವಂತನ ಅಭಯ ಹಸ್ತ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ ,ಸುಖಿಯಾಗಿರಿ .

*Shashi Purohith

ಸಹೋದರಿಗೆ…ಜನುಮ ದಿನದ ಶುಭಾಶವು….ಆ ಭಗವಂತನು….ಆಯುರಾರೋಗ್ಯ…ಧನ ಧಾನ್ಯ ಸುಖ ಶಾಂತಿ ನೆಮ್ಮದಿಯನು…ನಿರಂತರ ಚಿರಕಾಲ…ಕರುಣಿಸಲಿ… ಎನ್ನುತಾ…ವಾತ್ಸಲ್ಯದಲಿ ಹಾರೈಸುವೆ….

*Gangadhar Honnalli
“ಹುಟ್ಟು ಹಬ್ಬದ ಶುಭಾಶಯಗಳು”..ನಿಮ್ಮ ಜನ್ಮದಿನದಂದು ಒಂದು ಗಿಡ ನೆಡಿ ಅದು ಬೆಳೆದರೆ ನಮ್ಮ ಪರಿಸರ.ಪ್ರಕೃತಿ.ಆರೋಗ್ಯ ಉಳಿಯುತ್ತೆ. “ಮಾನವನ ಜನ್ಮದಿನ. ಮರಗಳ ಜನನವಾಗಲೀ””””‘”Happy Birthday_____

_

*Padma Shrinivas Huilgol
Belated birthday wishes mamji. ಸದಾ ಖುಶಿಯಾಗಿರಿ. ಭಗವಂತನ ಶ್ರೀರಕ್ಷೆ ನಿಮಗಿರಲಿ🌼🌹😍🙏🙏

*Uday Bhat
Wish you many happy returns of the day May Lord and H H Swamiji shower you with their choicest blessings on this day and for all times to come

*Shashikantha Rao
Wish you many more happy returns of the day sister. May god shower all the happiness on you & always stay blessed. Happy Birthday.

*CrSundararjan Rao
ಜನ್ಮದಿನದಮಿದುಂ ಅಯಿ ಪ್ರಿಯ ಮಿತ್ರೆ !
ಶಂ ತನೋತು ತೇ ಸರ್ವದಾ ಮುದಂ !!
ಪ್ರರ್ಥಯಾಮಹೇ ಭವ ಶತಾಯುಷಿ !
ಶ್ರೀಹರಿಸ್ಸದಾ ತ್ವಾಂ ಚ ರಕ್ಷತು !!
ಪುಣ್ಯಕರ್ಮಣಾ ಕೀರ್ತಿಮರ್ಜಯ !
ಜೀವನಂ ತವ ಭವತು ಸಾರ್ಥಕಂ !!
ಜೀವನಂ ತವ ಭವತು ಸಾರ್ಥಕಂ !!
( ಗುರುಸಾರ್ವಭೌಮ ಶ್ರೀ ರಾಘವೇಂದ್ರ ಯಥಿವರ್ಯರು ನಿಮಗೆ ಆಯಸ್ಸು ,ಆರೋಗ್ಯ ,ಐಶ್ವರ್ಯ, ನೆಮ್ಮದಿ ಹಾಗು ಸಕಲ ಸುಖ-ಸಂಪತ್ತನ್ನು ನೀಡಿ ಸದಾ ನಿಮ್ಮನ್ನು ರಕ್ಷಿಸಿ ಕಾಪಾಡಲಿ. )

*Shantha Kumar
Many more happy returns of the day. May god bring you peace, happiness, health, wealth and prosperity on this occasion. Enjoy at the fullest.

*ರೇಣುಕಾ ವೈಕುಂಠಯ್ಯ
#ಜೈಕರ್ನಾಟಕ
#ಗೀ ಜಗದ ಗೂಡಿನ ರಚನೆಯಲ್ಲಿನ ಸ್ಪಷ್ಟತೆ
#ತ ಳಿರ ಮಾವಿನೆಯ ಹಸಿರ ನಾವೀನ್ಯತೆ

ನಿಮ್ಮ ಬದುಕಿನಲ್ಲಿ ಸದಾ ಇರಲಿ

ಹುಟ್ಟು ಹಬ್ಬದ ನಲ್ಮೆಯಾರೈಕೆಗಳು..

#ಜೈಕರ್ನಾಟಕ

#ಗೀಚಿ..

*ಮುದ್ದು ಮನಸೆ
ಇವತು ನಮ್ಮೆಲಾರ ಗೆಳತಿ ಗೀತ ಹೆಗ್ಡೆ ಯವರ ಹುಟ್ಟು ಹಬ್ಬ ನನ್ನ ಹಾಗು ಫೇಸ್ ಬುಕ್ ಫ್ರೆಂಡ್ಸ್
ಕಡೆಯಿಂದ ಗೀತ ಹೆಗ್ಡೆಯವರಿಗೆ
ಹುಟ್ಟು ಹಬ್ಬದ ಶುಭಾಶಯಗಳು

ಚೈತನ್ಯ ವಾಗಿ ಅರಳುತ್ತಿರಲಿ ಮಲ್ಲಿಗೆಯಂತೆ
ನಿನ್ನ ಸುಂದರ ಬಾಳು
ತ್ರಪತ್ತೆ ಎಷ್ಟೆ ಇದ್ದರು ನಿಮ್ಮ ಜೀವನದ ಎಲ್ಲ
ಸುಂದರ ಕನಸುಗಳು ನೆರವೆರಲಿ

ನಿನ್ನ ಸುಂದರವಾದ ನಗು
ಬಾಡದಿರಲಿ ಎಂದು
ನೆಮ್ಮದಿಯ ಬದುಕು ಯಾವಾಗಲು
ನಿನ್ನದಾಗಲಿ ಎಂದೆಂದೂ

ಮನತುಂಬಿ ಹೇಳುವೆ ನೀನು ಈ ಅಚ್ಚುನ
ನೆಚ್ಚಿನ ಗೆಳತಿ ಎಂದೆಂದೂ
ಇರುವೆನು ನಾನು ನಿನ್ನ ಮೆಚ್ಚಿನ ಗೆಳಯನಾಗಿ
ಇಂದು , ಮುಂದು ,ಎಂದೆಂದೂ

ಪ್ರೀತಿಯ ಮಳೆ ಹುಡುಗ
ಅಚ್ಚು ……

*Umesh RM
ಜನುಮದಿನದ ಶುಭಾಶಯಗಳು ಮಾ.
ಹೀಗೆ ಖುಷಿ ಖುಷಿಯಾಗಿರಿ ಬಾಳೆಲ್ಲ.
ಶುಭಮಸ್ತು.

*************
*Richi
Hello sir nivu daily kavite baredu post haktira ivattu nimma ammana huttida dina avara bagge ondu kavite baredu post hakilwala yake?

*Somashekar Mysore
ಅಮ್ಮರ ಬಗ್ಗೆ ಎಷ್ಟು ಬರೆದರೂ ಮುಗಿಯದ ಸಾಲುಗಳು ವಿಶ್ವದಷ್ಟು ಅದಕ್ಕೆ “ಅಮ್ಮ” ಅಂದುಬಿಟ್ಟಿರುವೆನು ಗೆಳೆಯ. ಶುಭದಿನ
************

*ನಾನಿರುವುದೆ ಹೀಗೆ

Happy Birthday

*Leel Leela

Many many happy returns of the day ma💐🎂

*Kapila Shridhar

Happy birthday💐🎂

*Dhananjaya N Acharya

Happy birthday Medam🎂

*Nirmala Hegde

Happy birthday Geethakka💐🎂

*Ananda Joshi
ಹುಟ್ಟು ಹಬ್ಬದ ಶುಭಾಶಯಗಳು.. Happy Birthday!!! I hope this is the beginning of your greatest, most wonderful year ever

*Ravi Choutgi
ಕಷ್ಟ ಅಂತ ಬಂದ್ವರಿಗೆ ನಿಮ್ಮ ಹಿತನುಡಿಗಳೆ ಸಾಂತ್ವಾನದ ಚಿರಾಪುಂಜಿ …ನೂರ್ಕಾಲ ನೆಮ್ಮದಿ ನಿಮ್ಮೊಳು ನೆಲೆನಿಂತು ..ಸದಾ ಕಾಪಾಡಲಿ ಅಮ್ಮಾ

*Lakkappa Pujari
Many more happy returns of the day have a very colourful day great full day with you in this year yours all dreams come true may God bless you more keep smile always and enjoy the day with full of yours blossom have a very joyful day keep rocks 🎲🎲🎲🍫🍫🍫🎁🎁🎁🎁🎈🎈🎈🎈🔥💥💥⚡☀☀🍰🍰🍩🍪🍪🍧🍧🍨🍧🍡🍢🍮🎂🎂🎂🎂………. Stay belssed day with you….
Most welcome ji God bless you more keep smile always enjoy yours day with smile happy birthday again take care of yourself ji
My big pleasure 🎉🎉🎁🎁🎁🎁🎁🎊🍫🍫🍫🍰🍰🍰🍰🎂🎂🎂🍫🍫🍮🍮🍧🍧🍮🍮🙏🙏🙏🙏🙏🙏🙏🙏🙏
11-12-2017. 1.00pm

ಮಖ ಪುಸ್ತಕದಲ್ಲಿ ಬರಹಕ್ಕೆ ಬಂದ ಪ್ರತಿಕ್ರಿಯೆ(3)

Mouni M ( ವಿಧ್ಯಾಧರ ಪ್ರತಿಷ್ಠಾನದ ಅಧ್ಯಕ್ಷರಾದ
ವಿಧ್ಯಾಧರ ಮುತಾಲಿಕ್ ಸರ್ )

ಗೀತಾ ಹೆಗ್ಡೆ ಏನೇ ಬರೆದರೂ ಅದರಲ್ಲಿ ಒಂದು ನಿರ್ದುಷ್ಟತೆ ಇರುತ್ತದೆ. 5 ಕಂತುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ದೀಪಾವಳಿ ಆಚರಣೆ ಒಂದು ವೈಚಾರಿಕ ಬರಹ ಅಪರೂಪದ ( ಉತ್ತರ ಕನ್ನಡ ಜಿಲ್ಲೆ ಹೊರತಾದ..ಪ್ರದೇಶ ದವರಿಗೆ) ವಿವವರ ಗಳಿದ್ದು ಹವ್ಯಕ ಪದಗಳೂ ಸಹ ಅರ್ಥಕ್ಕೆ ಒಗ್ಗುತ್ತವೆ.

ಜಲ ತ್ರಯೋದಶಿ* ಆಯಾ ಪ್ರದೇಶ. .ಸಮುದಾಯ ಗಳಲ್ಲಿ ಆಚರಿಸುತ್ತಿದ್ದರೂ ಹೆಸರು ಬೇರೆ ಇರಬಹುದು.ಆದರೆ ತಾತ್ವಿಕ ಹಿನ್ನೆಲೆ ಒಂದೇ ನೆಲೆಯಲ್ಲಿ ಬರುತ್ತದೆ. ಮಹಾರಾಷ್ಟ್ರ. ಕರ್ನಾಟಕ ದ ಒಳ.ಪ್ರದೇಶಗಳಲ್ಲಿ ಮುಂಬಯಿಯಂತಹ ಮಹಾನಗರಗಳಲ್ಲಿ ನೀರಿನ
ಭರವಸೆ ಇಲ್ಲದಿದ್ದರೂ ಕನ್ನಡ. ಮರಾಠಿ. ಮತ್ತಿತರ ಭಾಷಿಕರೂ ಈ ಜಲ ತ್ರಯೋದಶಿ ಅಥವಾ ಧನತ್ರಯೋದಶಿ.ಕುಬೇರ ಪೂಜೆ ಇತ್ಯಾದಿ ಹೆಸರಿದ್ದರೂ ಉದ್ದೇಶ ಒಂದೇ ಅದನ್ನು ಪರೋಕ್ಷವಾಗಿ ಗೀತಾ ಮೆಡಮ್ ಅವರು ವೈವಿಧ್ಯ ಶೈಲಿಯಲ್ಲಿ ವಿವರಣೆ ನೀಡಿದ್ದಾರೆ.

ಈ ತ್ರಯೋದಶಿ ನಂತರದ ದಿನ ಮಹತ್ವದುದ್ದು ನರಕಾಸುರ ವಧೆಯ.ಪರಿಕಲ್ಪನೆ,ನರಕ ಚತುರ್ಥಿ
ಹೊಸ ದಂಪತಿಗಳಿಗೆ ಮಹತ್ವ. ಮಹಿಳೆಯರ ಅಭ್ಯಂಗ.ಆರತಿ ಇವೇ ಆಚರಣೆ ಗಳ ವಿವರಣೆಗಳ ಜತೆಗೇ ಕೃಷಿ ಜಗತ್ತನ್ನು ಅನ್ನದಾತರನ್ನೂ ಲೇಖಕಿ ತನ್ನ ಲೇಖನಿಯ ತೆಕ್ಕೆಯಲಿ. ತೆಗೆದು ಕೊಂಡದ್ದು ಗಮನಾರ್ಹ. ಉತ್ತರ ಕನ್ನಡ ಪ್ರದೇಶದ ಆಚರಣೆಗೂ
ನಮ್ಮ ನಮ್ಮ ಪ್ರದೇಶದ ಆಚರಣೆಗೂ ಇರುವ ವ್ಯತ್ಯಾಸ. ಕಾರಣಗಳು.ಸಂಸ್ಕೃತಿ. ಸಂಪ್ರದಾಯ.ಸಂಸ್ಕಾರಗಳ ವಿಭಿನ್ನತೆಗಳ
ತೌಲನಿಕ ಅಧ್ಯಯನಕ್ಕೆ ಗೀತಾ ಅವರ ಲೇಖನ ಪರಿಕರ ವಾಗುವಂತಿದೆ.

ಈ ಬರಹಕ್ಕೆ ವಿಮರ್ಶೆಯು ಮಾನದಂಡ ಬೇಕಿಲ್ಲ ಕೇವಲ ಊಟ ತಿಂಡಿಗಳಿಗೆ ,ಮಹಿಳೆಯರ ಅಲಂಕಾರಾದಿಗಳಿಗೆ,,ಬ್ರಾಹ್ಮಣರ ಪದ್ಧತಿ ಇವುಗಳ ಆಚೆ ಈ ಲೇಖನ ಹರವು ಗೊಂಡಿದೆ ನಿರೂಪಣೆ ತೀರ ಸರಳ. ಅಲಂಕಾರ ರಹಿತ ಭಾಷೆ ವಿವಿಧ ಸಂಧರ್ಭಕ್ಕೆ ತಕ್ಕಂತೆ ಬಳಸುವ ವನಸ್ಪತಿ.ಪೈರು. (ಶಿಂಡಲೇ ಬಳ್ಳಿ..ಕಾಯಿ) ಸಾಂಸ್ಕೃತಿಕ ಮೆರುಗು ಜಾನಪದ ಜಗತ್ತಿನ ಜೀವಂತಿಕೆಯ ಸಂಭ್ರಮ.ಗೋ ಪೂಜೆ.ಲಕ್ಷ್ಮೀ ಪೂಜೆ.ಕದಿಯುವ ಆಟ .ಬಿಂಗೀ ಕುಣಿತ. ಭೂತಪ್ಪನ ಕಟ್ಟೆ .ಬಲೀಂದ್ರನನ್ನು ಕಳಿಸುವುದು.
ಮುಂತಾದವುಗಳು ನಮ್ಮನ್ನು ನೇರ ವಾಗಿ ಓದುಗನನ್ನು ಉತ್ತರ ಕನ್ನಡ ಜಿಲ್ಲೆಗೇ ಕರೆದು ಕೊಂಡು ಹೊಗುತ್ತವೆ. ಈ ಲೇಖನ ಉತ್ಥಾನ ದ್ಶಾದಶಿ. ತುಳಸಿ ಮದುವೆ ವರೆಗೆ ಸಹೃದಯನನ್ನೂ ಸಹಪಯಣಿಗನನ್ನಾಗಿ ಮಾಡಿಕೊಳ್ಳತ್ತದೆ
ಬಹಳಷ್ಟು ಮಾಹಿತಿ.ಸಾಹಿತ್ಯಸೃಷ್ಟಿಗೆ ಪೂರಕ ವಾಗ ಬಹುದಾದ ಪದಗಳು. ಸಂಶೋಧಕರಿಗೆ ಕಿಂಚಿತ್ತಾದರೂ ಹೊಸ ಹೊಳಹುಗಳು. ಖಂಡಿತ ಸಿಗಬಹುದಾದ ಸಾಧ್ಯತೆಗಳಿಂದ ಈ ಬರಹ ಉಪಯುಕ್ತ ವಾಗಿದೆ.

ಒಂದು ಉಪಯುಕ್ತ, ಆಸಕ್ತಿ ಹೆಚ್ಚಿಸುವ.ಬರಹ ನೀಡಿದ ಗೀತಾ ಮೆಡಮ್ ನಿಮಗೆ ನಮಸ್ಕಾರಗಳು
****************
.
Mudal Vijay (ಸಾಹಿತಿ,ವಿಮರ್ಶಕರು)

ಅದ್ಭುತವಾದ ರಚನೆ. ಇಳಿವಯಸ್ಸಿನಲ್ಲಿ ಆಗುವ ಆಲೋಚನೆಗಳಿಗೆ ಕವಿತೆ ರೂಪ ಕೊಟ್ಟು ಸುಂದರವಾಗಿ ಹೆಣೆದಿದ್ದೀರಿ. ಬರೆದರೆ ಪುಟದಷ್ಟು ಬರೆಯಬಹುದು. ಅತ್ಯುತ್ತಮ ಒಂದೇ ಪದ ಸಾಕು ನಿಮ್ಮ ಕವಿತೆಯ ಅಂತರಾಳವನ್ನು ಇಲ್ಲಿ ಬಿಚ್ಚಿಡಲು. ಏಕೆಂದರೆ ಪದಗಳೇ ಸಿಗುತ್ತಿಲ್ಕ ಬಣ್ಣಿಸಲು.
*******************
Peersab Nadaf

ಕವಿತೆ ಎಂಬ ಮೂರಕ್ಷರದಲಿ ಕವಿಗೆ ಅದೇನು ಪ್ರೀತಿ ,ಮಗುವಾಗವ, ,
ತಾಯಿಯಾಗುವ ಜೀವನದ ಎಲ್ಲ ಘಟ್ಟಗಳ ಧಾಟಿ ಅದರಾಚೆಗೂ ಅಡಿ ಇಡುವ ,ಕವನ ಸುಂದರ ಬರೆದ ನನ್ನಕ್ಕನಿಗೆ ಬಂಗಾರದಂತ ನಮಸ್ಕಾರ , ಶುಭರಾತ್ರಿ
***************
Krishna Jakkappanavar

ಮೆಡಮ್, ನಾನು ನಿಮಗಿಂತಲೂ ಚಿಕ್ಕವನು
ನೀವು ನನಗೆ ಆಶೀರ್ವದಿಸಿ, ನಿಮ್ಮ ಬರವಣಿಗೆ ಶೈಲಿ ಬಹಳ ಅದ್ಬುತ, ಅದಕ್ಕೆ ನಾನು ತಮ್ಮ ಸಾಹಿತ್ಯದ ಎಲ್ಲಾ ವಿಷಯಗಳ ಕುರಿತು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸುವುದು. ತಾವು ಕನ್ನಡ ಸಾಹಿತ್ಯ ಲೇೂಕದಲ್ಲಿ ಇನ್ನೂ ಹೆಚ್ಚಿನ ಕಥೆ,ಕಾದಂಬರಿ, ಕಾವ್ಯ, ಮುಂತಾದ ಸಾಹಿತ್ಯದ ಕೃಷಿಯಲ್ಲಿ ಮಹಾನ್ ಮಹಿಳಾ ಪರ ಸಾಹಿತಿ,ಕವಿಯತ್ರಿಯಾಗಿ ಉನ್ನತ ಮಟ್ಟದ ಗೌರವವನ್ನು ಪಡೆಯಿರಿ ಎಂದು ಶುಭ ಹಾರೈಸುವೆ.‌…ನನ್ನ ಪ್ರತಿಕ್ರಿಯೆ… ಪ್ರಶಂಸೆ, ಪ್ರೇೂತ್ಸಾಹ…ಮೆಚ್ಚುಗೆ… ಒಪ್ಪಿಗೆ… ಸದಾ ನಿಮ್ಮೊಂದಿಗೆ ಯಾವತ್ತೂ ಶಾಶ್ವತವಾಗಿ ಇರುತ್ತದೆ. ಇದರಲ್ಲಿ ಎರಡು ಮಾತಿಲ್ಲ… ನೀವು ನಿಮ್ಮ ಸಾಹಿತ್ಯದ ಮಾರ್ಗದಲ್ಲಿ ಮುನ್ನಡೆ ಸಾಧಿಸಿರಿ.ನಾನು ನಿಮ್ಮ ಬೆನ್ನು ಹಿಂದೆ ಬೆನ್ನೆಲುಬಾಗಿ ಇರಲು ಬಯಸುತ್ತೇನೆ.
*********************
Geetha Hegadekar(Mumbai)

This name itself has complimented you in many ways Mam, your intellectual ability, great skill of imagination, the dedication has contributed in your NAMED & the result is your poems. HAT’S OFF MAM.
***************

ಮೆಚ್ಚುಗೆಗೆ ಧನ್ಯವಾದಗಳು.
21-10-2017. 6.31pm

ಮುಖ ಪುಟದಲ್ಲಿ ನನ್ನ ಬರಹಕ್ಕೆ ಸಂದ ಮೆಚ್ಚುಗೆಗಳು(2)

ಮಾಹಶ್ರೀ ಮಾಹಶ್ರೀ

ಕಾವ್ಯ ಮೇರು ಪರ್ವತದಲ್ಲಿ
ನೀವೊಂದು ನಿಲುಕದ ನಕ್ಷತ್ರ!
ಕತ್ತಲು ಬಗೆದಷ್ಟು ಬೆಳಕು
ಚಿಮ್ಮುವ ತೇಜಸ್ವಿನಿ.

************************

Chaitanya Sham Goutham

ನಿಜಕ್ಕೂ..ನಿಮ್ಮ ಭಾವನೆಗಳು ನನ್ನ ಮನದ ಪುಟ ಹೊಕ್ಕಿ ಎಳೆ ಎಳೆಯಾಗಿ ಹೊರಹಾಕಿದಂತಿತ್ತು.. ಎಲ್ಲೋ ಮನದಲ್ಲಿ ಬಡಿಯುವ ಗಂಟೆ ಸದ್ದು ತಪ್ಪಾದರೆ ಅನ್ನುವ ಅಳುಕು ನಿಮ್ಮ ಬರಹಗಳಿಗೆ ಪ್ರತಿಕ್ರಿಸಲು ..

ನಿಮ್ಮ ಕವನ ಲೇಖನ ಓದುತ್ತಿದ್ದರೆ ಆ ದಿನ ಪುಸ್ತಕದಲ್ಲಿ ಒಂದು ಕವನದ ಸೃಷ್ಟಿ ಆಗುವುದಂತು ನಿಜ.. ಅಮ್ಮ..

ಕವಿಭಾವನೆಗಳನ್ನು
ಹೊತ್ತು ಹುಡುಕಿ
ಚಿಂತಿಸಿ ಶೋಧಿಸುತ್ತಾ
ಜ್ಞಾನಸಾಗರಕ್ಕಿಳಿದು
ಹೋದಾಗ ಸೃಷ್ಟಿ

ಆಗಿ ಕೈಗೆ ಸಿಕ್ಕವು ಕಥೆ,ಕವನ ಚುಟುಕಗಳೆಂಬ ಅತ್ಯಮೂಲ್ಯವಾದ ಮುತ್ತು ರತ್ನಗಳು..
ನಿಮ್ಮಬರಹದಲ್ಲಿ ಆ ರತ್ನಗಳು ನನಿಗೆ ಸಿಗುವುದಂತು ನಿಜ ಅಮ್ಮ .. ನಿಮ್ಮ ಸ್ನೇಹಕ್ಕೆ ನಿಮ್ಮ ಮಾತೃ ಹೃದಯಕ್ಕೆ ನನ್ನ ನಮನ ಅಮ್ಮ…

************************

ಕಲಿರಾಜ್ ಹುಣಸೂರು

ನಿಮ್ಮ ಬರವಣಿಗೆಯಲ್ಲಿ ಒಂದು ಗಟ್ಟಿತನವಿದೆ ಆಪ್ತವಾಗಿಸೊ ಸರಳತೆಯ ಸೂತ್ರವಿದೆ ಅದಕ್ಕೆ ಓದುಗರು ಮೆಚ್ಚುತ್ತಾರೆ ನಾವು ಸಾಹಿತ್ಯ ಪ್ರೇಮಿಗಳೆ ನಾವು ಕವನವನ್ನು ಬರಿತಿವಿ ಹಾಗಂತ ಅದೆ ಲೆಕ್ಕದಲ್ಲಿ ಲೇಖನ ಬರೆಯಲು ಬರುವದಿಲ್ಲ ಆ ವಿಭಾಗವೆ ಬೇರೆ ಒಂದು ಪ್ರಸಿದ್ಧ ಮಾತಿದೆ ನಿಮ್ಮ ಬರವಣಿಗೆ ಶೈಲಿ ನೋಡಿ ನೆನಪಾಯ್ತು .. ಒಬ್ಬ ದಾರ್ಶನಿಕ ಹೇಳತಾನೆ ” ನೀನು ಜಗತ್ತಿನಲ್ಲಿ ಬರೆದಿರೋದನ್ನಾದರೂ ಓದು ಇಲ್ಲವೆ ಓದುವಂತಾದರೂ ಬರಿ ” ಓದುವಂತೆ ಬರೆಯುವ ಶಕ್ತಿ ನಿಮ್ಮಲ್ಲಿದೆ ಬರೆದಿರೊದನು ಓದುವ ಹಂಬಲ ನಮ್ಮಲ್ಲಿದೆ .. ಇನ್ನಷ್ಟು ಅರ್ಥಪೂರ್ಣಗೊಳಿಸಿಕೊಂಡು ಓದಿ ತಿಳಿದು ನಮ್ಮೊಂದಿಗೆ ಹಂಚಿಕೊಳ್ಳಿ .. ನಿಮ್ಮಲಡಗಿದ ವಿಶಿಷ್ಟ ಪ್ರತಿಭೆ ಅದು .. ಧನ್ಯವಾದಗಳು ಶುಭವಾಗಲಿ ಮೇಡಂ
^^^^^^^^^^^^^^^^^^^^^^^^^^
ಆಡಿದರೆ ಮಾತು
ಹಾಡಿದರೆ ಕವಿತೆ

ಕಲಿರಾಜ್ ಪ್ರತಿಕ್ರಿಯೆ

ಈ ನಿಮ್ಮ ಎರಡು ಸಾಲಿನಲ್ಲಿ ಒಳಾಂಗಣದ ಅರ್ಥ ಬಹಳ ವಿಸ್ತಾರವಿದೆ , ಆಡಿದರೆ ಮಾತು ….
ತುಟಿಯ ಮೇಲಿಂದ ಝಳ ಝಳ ಎಂದು ಹೊರಬರುವ
ಶಬ್ದಗಳೇ ಮಾತು…

ಕೆಂದುಟಿಯು ನಗೆಚೆಲ್ಲಿದಾಗಲು
ಸೃಷ್ಟಿ ಯಾಗುವುದೇ ಈ ಮಾತು !
ಮಾತು ಬರಿ ಮಾತು ಅಷ್ಟೆ …! ಆಡಿದರೆ ಒಲವ ಗೀತೆಯಂತು ಆಗಲ್ಲ , ಆಡಿದರೆ ಸತ್ಯದ ಕೊಂಡಿಯಂತು ಆಗಲ್ಲ
ಆಡಿದರೆ ಮನದಾಳಕ್ಕೆ ಹೋದರು ಶಾಶ್ವತವಾಗಿ ನೆಲೆಸಲ್ಲ !
ಆಡಿದರೆ ಅದೊಂದು ನಿಶ್ಚಲ ಸ್ಥಿತಿ ಅಷ್ಟೆ !
ಆಡಿದರೆ ಕೇವಲ ಕಾಲ್ಪನಿಕ !
ಆಡಿದರೆ ಸುಳ್ಳು !

ಆದರೆ …

ಹಾಡಿದರೆ ಕವಿತೆ
…..ಎಲ್ಲಿಂದ ?
ಅಂತರಾಳದಲ್ಲಿ ಹಾಡಿದ ಗೀತೆ ಅಮರ !
ಅಂತರಾಳದ ಪಿಸುಮಾತು ಅಮರ !
ಅಂತರಾಳದ ಒಲವಿನ ಗೀತೆ ಹಾಡಿದಾಗ ಮಾತ್ರ ಮಿಡಿತದೊಳಗೆ
ಹೊಕ್ಕಿ ಅಮರವಾಗುವುದು .
ಹಾಡಿದರೆ ಜಗತ್ತೆಲ್ಲ ಬೆಳಕು
ಹಾಡಿದರೆ ಪ್ರೀತಿ ,
ಹಾಡಿದರೆ ವಾತ್ಸಲ್ಯ ಮಮತೆ ಕರುಣೆ ,
ಹಾಡಿದರೆ ಚೈತ್ರದ ಚಿಗುರು
ಹೂವಾಗಿ ಬಾಳ ನಂದನ ಗೋಕುಲವಾಗುವುದು

ಆಡು…ಹಾಡು …ಒಳಾಂಗಣದ ಅರ್ಥ ಬಹುತೇಕ ಇದೆ …ವಿವರಣೆ ನೀಡುತ್ತ , ಹೋದರೆ ಬಹುಶಃ ಮುಗಿಯುವುದೇ ಇಲ್ಲ …

ನಿಮ್ಮ‌ಚಿಂತನ ಬರಹ ಮೆಚ್ಚಿ ಅದ್ಬುತ ಎಂದು ಹೇಳದೆ ಇನ್ನೇನು ಹೇಳಬೇಕು ಅಮ್ಮ ?

ಅತ್ಯದ್ಭುತವೇ ಸರಿ …ಶುಭವಾಗಲಿ …ನಿಮ್ಮ ಲೇಖನಿಯಿಂದ ಹೀಗೆ ಹೊಸ ಹೊಸ ಚಿಂತನ ಬರಹಗಳು ಹೊರಬರುತ್ತಿರಲಿ ನಾವು ಸವಿಯಲು ಚಿರಕಾಲ ಸಿದ್ದ …ಶುಭರಾತ್ರಿ.

*************************

ಮೆಚ್ಚುಗೆಗೆ ಧನ್ಯವಾದಗಳು

19.9.2017 12.29pm

ಮುಖ ಪುಸ್ತಕದ ಓದುಗರೊಬ್ಬರಿಂದ ನನ್ನ ಕವಿತೆಯ ವಿಮರ್ಶೆ(1)

ಚಿಂತಕಿ Geeta G. Hegde ರವರ

#ನಗುವಹಿಂದೆ … ಕವಿತೆಗೆ ನನ್ನ ಪುಟ್ಟ ಅನಿಸಿಕೆ .

ಮಗಳೆಂದರೆ ಮನೆಯ ಬೆಳಕು . ದಿನನಿತ್ಯ ದೀಪ ಹೊತ್ತಿಸಿ ನೊಂದ ಜೀವಗಳಿಗೆಲ್ಲ ನಗುವಿನ ಕೇಕೇ..‌ನೀಡುವ ಏಕೈಕ ಷಡೋಷಿ ಸುಂದರಿ , ಎಲ್ಲರ ಮನಗೆದ್ದ ರಾಣಿಜೇನೆ ಸರಿ . ಇವಳ ಕಾಲ್ಗೆಜ್ಜೆ ಸದ್ದಿನಲ್ಲೆ ಕುಟುಂಬದ ಸದಸ್ಯರಿಗೆ ಒಲವಿನ ಸವಿಜೇನು ಸಿಕ್ಕಷ್ಟೆ ಸಂತೋಷ !!!!

ದಂಪತಿಗಳಿಗೆ ಮಗಳು ಜನ್ಮ ತಾಳಿದಾಗ ಆಗುವ ಖುಷಿಗೆ ಪಾರವೇ ಇಲ್ಲ . ಒಬ್ಬಳು ಮಹಾಲಕ್ಷ್ಮಿ ನಮ್ಮಯ ಗುಡಿಯ ದೀಪ ಹಚ್ಚಿ ಬೆಳಗಿಸಲು ಬಂದಿರುವಳೆಂದು ಮಕ್ಕಳನ್ನೆ ಕಾಣದ ದಂಪತಿಗಳಿಗೆ ಆನಂದ ಬಾಸ್ಪದ ಕಣ್ಣೀರು ಜಿನುಗುತಿದೆ.

ಕವಯಿತ್ರಿರವರು ಈ ಕವಿತೆಯನ್ನ ಅದೆಷ್ಟು ಭಾವನೆಗಳನ್ನ ನೆನಪುಗಳನ್ನ ಹೊತ್ತು ತಂದು ಈ ಕವಿತೆ ಹೆಣೆದಿದ್ದಾರೊ ನಾ ತಿಳಿಹನು .

ಮುಂಜಾನೆಯಲ್ಲಿ ಪ್ರಕೃತಿಯ ಪ್ರಾಣಿ , ಪಕ್ಷಿಗಳು ನರ್ತಿಸುವಾಗ, ಅಮ್ಮನ ಮಡಿಲಿನಿಂದ ಮುಗ್ದ ಶಿಶು ಚೀರುತ್ತ ನಗೆ ಹನಿ ಹೊರ ಸೂಸುವ ಸಂಧರ್ಭದಲ್ಲೆ ನೀನು ಕೂಡ ಕೋಗಿಲೆಯಂತೆ ಇಂಪಾಗಿ ಹಾಡುತ , ತುಟಿ ಮೇಲಿನ ನಗುವಿನ ಘಮಲಿನಿಂದ ಮನೆ ಮಂದಿಗೆಲ್ಲ ಆಶ್ಚರ್ಯ ದಿಂದಲೇ , ದೃಷ್ಟಿ ಬೀರುತಿದ್ದ ದೃಶ್ಯ ಇನ್ನು ನನ್ನ ಕಣ್ಣಲಿ , ಮನದಲಿ , ಅಮರವಾಗಿ ನೆಲೆಸಿದೆ ಮಗಳೇ ಎನ್ನುವ ತಾಯಿಯ ನುಡಿ ಎಷ್ಟು ಚಂದ ಅಲ್ವ ,
ಇಲ್ಲಿ ಕವಯಿತ್ರಿರವರು , ತನ್ನ ಮಗಳ ಬಾಲ್ಯದ ದಿನಗಳ ಬಗ್ಗೆ ಮೊದಲ ಪದ್ಯದಲಿ ಬಹಳ ಅರ್ಥ ಗರ್ಭಿತವಾಗಿ ಪದಗಳನ್ನ ಕಟ್ಟಿ ಓದುಗರ ಮನ ಗೆದ್ದಿದದಾರೆ.

ಒಂದು ಮನೆಯ ಮಗಳು ಬಾಲ್ಯವಸ್ಥೆಯಿಂದ ಪ್ರೌಡವ್ಯಸ್ಥೆಗೆ ತಲುಪಿದ ನಂತರ ತಂದೆ ತಾಯಿಗಳಲ್ಲಿ ಮಗಳ ಬಗ್ಗೆಯೆ ಅತಿ ಚಿಂತೆ , ಈ ವಿಷಯವೇ ದಿನನಿತ್ಯ ಕಾಡುತ್ತಿರುತ್ತದೆ.
ಈ ಜೀವನಚಕ್ರದಲಿ ದುಷ್ಟರ ಬಲೆಗೆ ಬಿದ್ದು ಎಲ್ಲಿ ತನ್ನ ಮಗಳ ಸುಂದರ ಬದುಕು ಕ್ಷಣ ಮಾತ್ರದಲ್ಲೆ ಛಿದ್ರವಾಗುವುದೆಂಬ ಭಯ ಪ್ರತಿಯೊಬ್ಬ ತಾಯಿಯ ಮನದಲಿ ಕ್ಷಣ ಕ್ಷಣ ಕಾಡುತ್ತಿರುತ್ತಲೆ ಇರುತ್ತದೆ . ಒಮ್ಮೊಮ್ಮೆ ಮಗಳಿಗೆ ರಕ್ಷಕವಚವಾಗಿ ಪ್ರತಿ ಕ್ಷಣ ಇವಳ ಹಿಂದೆಯೇ ಇರಬೇಕೆನ್ನುವ ಮನದ ತುಡಿತ ಹೆತ್ತ ತಾಯಿಯಲ್ಲಿ ಬರುವುದಂತು ದಿಟ.

ಬದುಕ ಸಾಗಿಸುವ ದಾರಿಯಲಿ ಬರಿ ಮೋಸ ವಂಚನೆ ಮಾಡುವ ಜನರೇ ತುಂಬಿರುವಾಗ ತನ್ನ ಮಗಳ ಭವಿಷ್ಯ ಎತ್ತ ಸಾಗುವುದೋ ಎಂಬ ಆತಂಕ ಮನದಲಿ ಮನೆ ಮಾಡುತ್ತದೆ . ಈ ರೀತಿಯ ನಾನಾ ಆಲೋಚನೆಗಳು ಜನ್ಮ ಕೊಟ್ಟ ಕರುಳಿಗೆ ಚುರುಕ್ ಎಂದೆ ಬರೆ ಎಳೆದಂತೆ ಕ್ಷಣ ಕ್ಷಣ ಮಗಳ ಬಗ್ಗೆ ಹಲವು ರೀತಿಯ ಆಲೋಚನೆಗಳು ಬರುವುದುಂಟು . ಆದರು ನಾ ಜನ್ಮ ನೀಡಿದ ಕರುಳಿನ ಕೂಸು ನನ್ನ ಬಯಕೆಯನ್ನೆಲ್ಲ ಹೀಡೇರಿಸುವಳು ಎಂಬ ಅಚಲವಾದ ನಿರ್ಧಾರಕ್ಕೆ ಬರುವುದುಂಟು . ತದ ನಂತರ ತನ್ನ ಮಗಳ ಭವಿಷ್ಯ ನಕ್ಷತ್ರದಂತೆ ಮಿನುಗುತಿರಬೇಕೆಂಬ ಹೆಬ್ಬಯಕೆಯಿಂದ ಹೆತ್ತ ತಾಯಿ ಈ ಕಾಲಚಕ್ರದೊಳಗೆ ತನ್ನ ಬದುಕಿನ ದಿನಗಳನ್ನೆಲ್ಲ ತ್ಯಾಗ ಮಾಡುವಳು . ನಿಜಕ್ಕೂ ಅಮ್ಮನಿಗೆ ಸರಿಸಾಟಿ ಯಾರಿಲ್ಲ ಈ ಜಗದೋಳ್ ,

ಮೂರನೇ ಪದ್ಯದಲಿ ಕವಯಿತ್ರಿಯವರು …ಬಹಳ ವಿಶಾಲವಾದ ಚಿಂತನೆಗಳಿಂದ ಬಹಳ ಹೆಮ್ಮೆಯಿಂದ ಭಕ್ತಿಯಿಂದ ತನ್ನ ಮಗಳನ್ನ ಕುರಿತು ಮನದಾಳದಿಂದ ಬಿಚ್ಚಿಟ್ಟಿರುವ ಹಲವು ಮಜಲುಗಳು ಇಲ್ಲಿ ಪ್ರಕಾಶಿಸುತ್ತಿವೆ.

ಜಗವನು ನಡೆಸುವಾತ ,!

ಭಗವಂತನ ಕೈ ಗೊಂಬೆಗಳು ನಾವೆಲ್ಲ , ಅವನು ಆಡಿಸಿದಂತೆ , ಅವನು ನುಡಿಸಿದಂತೆ ನಾವು ನರ್ತಿಸಬೇಕು , ಈ ಕಾಲಚಕ್ರದ ಕಟು ಸತ್ಯ ಇದೆ ಅಲ್ಲವೆ ? ಎಂಬುದನ್ನ ಓದುಗರ ಮುಂದಿಟ್ಟಿದ್ದಾರೆ.
ಬದುಕಿನ ಕೀಲಿ ಕೈ ಯಾರ ಬಳಿ ಇರುವುದೊ ಅವರೇ ಇಲ್ಲಿ ಶ್ರೇಷ್ಠರು ಎನ್ನುವ ಮತ್ತೊಂದು ಅದ್ಬುತ ನುಡಿಯನ್ನ ಕವಿತೆಯ ಒಳಾಂಗಣದಲಿ ತಿಳಿಸಿದ್ದಾರೆ.

ಕೊನೆಯ ನಾಲ್ಕು ಸಾಲುಗಳು ಈ ಕವಿತೆಗೆ ಮೆರಗು ತಂದು ಕೊಟ್ಟಿರುವುದು ದಿಟ.
ಕನಸುಗಳ ಸಾಗರವನ್ನ ತನ್ನೆದೆಯ ಮೇಲಿರಿಸಿ ಕ್ಷಣ ಕ್ಷಣವು ಪ್ರೀತಿಯ ಮಗಳ ಮೇಲೆ ದೇವರು ದಿಂಡಿರ ಬಳಿ ಹೋಗಿ ಬೇಡಿಕೊಳ್ಳುವ ಜೀವ ಈ ಅಮ್ಮ ಮಾತ್ರ .
ಬದುಕಿನ ಪುಟದಲಿ ನೋವು ವೇದನೆ ರೋಧನೆ , ದುಃಖ ದಮ್ಮಾನಗಳನ್ನೆಲ್ಲ ಮೆಟ್ಟಿ ನಿಂತು , ನಿನ್ನ ಕನಸಿಗೆ ನಾ ಸಾಕ್ಷಿಯಾದೆ ಮಗಳೆ ಎಂಬ ಮನದಾಳದ ನುಡಿ ಎಂತವರನ್ನು ಕಣ್ಣಲಿ ನೀರು ತರಿಸಿ ಬಿಡುತ್ತದೆ.

ಕೊನೆಗೆ ಮಗಳ ವೈಭೋಗ,ಕಂಡು ಹೆತ್ತ ತಾಯಿ ನಿಟ್ಟುಸಿರು ಬಿಟ್ಟು ಮತ್ತೆ ಮಗಳ ರಕ್ಷೆಯನ್ನ ಆ ಭಗವಂತನಿಗೆ ಅರ್ಪಿಸುತ್ತಾಳೆ . ಮುಂದೊಂದು ದಿನ ಬದುಕಿನಲಿ ಇನ್ನು ಹೆಚ್ಚಿನ ಸಂತೋಷ ಸುಖ ನೆಮ್ಮದಿ ನಿನಗೆ ದೊರಕಲಿ ಮುದ್ದು ಮಗಳೇ ಎಂಬ ಆಶಯದಿಂದ ಕವಯಿತ್ರಿ ಕೊನೆಯ ಸಾಲುಗಳಿಗೆ ಬಿಂದು ಇಟ್ಟು ದೇವರ ಮೊರೆ ಹೋಗಿರುವುದು ಈ ಕವಿತೆಯಲ್ಲಿನ ವಿಶೇಷತೆ.

ಅಮ್ಮ ಇಂತಹ ಕವಿತೆಗಳನ್ನ ಹೆಣೆಯ ಬೇಕಾದರೆ ನೀವು ನಿಮ್ಮ ಮಗಳ ಮೇಲಿಟ್ಟಿರುವ ಪ್ರೀತಿಯೇ ಸಾಕ್ಷಿ . ಇಷ್ಟೊಂದು ಭಾವನಾತ್ಮಕವಾಗಿ ಈ ಮೇರು ಕವಿತೆ ಹೆಣೆದು ಸಮಾಜಕ್ಕೆ ಒಂದು ಉತ್ತಮ ಸಂದೇಶ ಸಾರಿದ್ದಿರ . ಅಮ್ಮ ಮಗಳಿನ ಪ್ರೀತಿ ಚಿರಕಾಲ ಹೀಗೆ ಮುಗಿಲೆತ್ತರದಲ್ಲೆ ಇರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ .
ಈ ಕವಿತೆ ನನ್ನಲ್ಲಿ ಅಮರ.

ಈ ಓದುಗ ಮಂಡಿಸಿರುವ ಅಭಿಪ್ರಾಯದಲಿ ತಪ್ಪುಗಳಿದ್ದರೆ ಕ್ಷಮಿಸಿ .
ಅಮ್ಮ ಮಗಳ ಪ್ರೀತಿ ಕವಿತೆಯ ಸುತ್ತ ಪ್ರಾಕಾಶಿಸುತ್ತಿದೆ. ನಿಮ್ಮ ಲೇಖನಿ, ನಿಮ್ಮ ಚಿಂತನೆಗೆ ನನ್ನ ನಮನಗಳು .

ಕಲಿರಾಜ್ ಹುಣಸೂರು

ನಗುವ ಹಿಂದೆ……???

ಮಗಳೆ
ಮುಂಜಾನೆ ಹಕ್ಕಿಗಳ
ಕಲರವದೊಂದಿಗೆ ನೀ
ಗೆಜ್ಜೆ ಕಾಲನೆತ್ತಿ ಬಾಯಿಗಿಟ್ಟು
ಮಗ್ಗುಲಲ್ಲೆ ಎಲ್ಲ ಮುಗಿಸಿ
ಬೊಚ್ಚು ಬಾಯಲ್ಲಿ
ಆ^^^^^ಓ^^^^
ಎಂದು ಕೇ ಕೇ ಹಾಕಿ
ಮಲಗಿರುವ ಮನೆಮಂದಿಯನೆಲ್ಲ
ಎಚ್ಚರಿಸಿ ನಿನ್ನ ರಾಗಾಲಾಪದಲ್ಲಿ
ತಲ್ಲೀನಗೊಳಿಸಿರುವುದೇ
ನಾ ಎಂದೂ ಮರೆಯಾಲಾಗದ
ಮನಃ ಸಂತೃಪ್ತಿಯ ನಗು.

ನೀ ಬೆಳೆದಂತೆಲ್ಲ
ಕಾಲನ ಚಕ್ರದಡಿ ಸಿಲುಕಿ
ಎಲ್ಲಿ ನಲುಗಿ ಹೋಗುವೆಯೊ!
ಅನ್ನುವ ಆತಂಕದ ಸಂಕೋಲೆ
ನನ್ನನಾವರಿಸುತಿದೆ ಕಂದಾ
ಬಿಡದೆ ಕಾಡುವ ಚಿಂತೆ
ಸಾಗುವ ದಾರಿಯುದ್ದಕ್ಕೂ
ಬೆಂಗಾವಲಾಗಿ ನಿನ್ನೊಂದಿಗೆ
ಬರುತ್ತಿರಬೇಕೆನ್ನುವ ಕರುಳ ತುಡಿತ
ಸಾವಿಗಾರು ಇಡುವರು ತಡೆಗೋಡೆ?
ನೆನೆನೆನೆದು ಮರುಗುವುದು ಜೀವ
ಒಂದು ವಿಶಾದದ ನಗೆಯಲ್ಲಿ.

ಜಗದ ನಿಯಾಮಕನು
ಆಡಿಸುವ ಬೊಂಬೆ ಆಟದಲ್ಲಿ
ಗಿರಗಿಟ್ಟಿಗೆ ಕೀ ಕೊಟ್ಟಾಗ ಕುಣಿಯುವ
ನಿನ್ನಾಟಿಕೆ ಬೊಂಬೆಯಂತೆ
ನಾನೊಂದು ಕನಸು ಹೊತ್ತ ಜೀವ
ಎಲ್ಲಿಯ ಕನಸು ಎಲ್ಲಿಯ ಬದುಕು
ನಿಸ್ಸಹಾಯಕತೆಯ ನಿಟ್ಟುಸಿರು
ಸಾವರಿಸಿಕೊಂಡು ಎದ್ದು
“ಬಂದದ್ದೆಲ್ಲ ಬರಲಿ
ಗೋವಿಂದನ ದಯವಿರಲಿ”
ಎಂದೆನ್ನುತ್ತ ದಿನವೂ ಬರುವುದು
ತುಟಿ ಮುಂದಿನ ವಾಸ್ತವದ ನಗು.
16-8-2016. 8.09am

ಧನ್ಯವಾದಗಳು

ಶ್ರೀ ಕಲಿರಾಜ್ ಹುಣಸೂರ್